logo
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: A+a=2, A+b=3 ಆದ್ರೆ A+b+c*4= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ 30 ಸೆಕೆಂಡ್ ಒಳಗೆ ಉತ್ತರ ಹೇಳಿ

Brain Teaser: A+A=2, A+b=3 ಆದ್ರೆ A+B+C*4= ಎಷ್ಟು? ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ 30 ಸೆಕೆಂಡ್ ಒಳಗೆ ಉತ್ತರ ಹೇಳಿ

Reshma HT Kannada

Dec 16, 2024 11:06 AM IST

google News

ಬ್ರೈನ್ ಟೀಸರ್

    • ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್‌ ಆದ ಬ್ರೈನ್ ಟೀಸರ್‌ವೊಂದು ಮೆದುಳಿಗೆ ಹುಳ ಬಿಡೋದು ಸುಳ್ಳಲ್ಲ. ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಸಾಧ್ಯವಾಗುತ್ತದೆ. A+B+C*4= ಎಷ್ಟು? 30 ಸೆಕೆಂಡ್‌ ಒಳಗೆ ನೀವು ಉತ್ತರ ಹೇಳಬೇಕು.
ಬ್ರೈನ್ ಟೀಸರ್
ಬ್ರೈನ್ ಟೀಸರ್

ಬ್ರೈನ್ ಟೀಸರ್‌ಗಳು ಮೆದುಳು ಹುಳ ಬಿಡುವಂತಿರುವುದು ಮಾತ್ರವಲ್ಲ, ಇದರಿಂದ ನಮ್ಮಲ್ಲಿ ಸಮಸ್ಯೆ ಪರಿಹರಿಸುವ ಗುಣವೂ ವೃದ್ಧಿಯಾಗುತ್ತದೆ. ಬ್ರೈನ್ ಟೀಸರ್‌ನಲ್ಲಿರುವ ಗಣಿತದ ಸೂತ್ರಗಳಿಗೆ ಉತ್ತರ ಹೇಳುವುದು ಮನಸ್ಸಿಗೆ ಖುಷಿ ನೀಡುತ್ತದೆ. ಆ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬ್ರೈನ್ ಟೀಸರ್‌ಗಳು ಸಾಕಷ್ಟು ವೈರಲ್ ಆಗುತ್ತವೆ. ನಿಮ್ಮ ಬಿಡುವಿನ ಸಮಯದಲ್ಲಿ ಟೈಮ್ ಪಾಸ್ ಮಾಡಲು ಇದಕ್ಕಿಂತ ಉತ್ತಮ ಇನ್ನೊಂದಿಲ್ಲ.

Maths/Technology & Other Facts ಎನ್ನುವ ಎಕ್ಸ್‌ ಪುಟದಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಚಿತ್ರವೊಂದು ಈ ವೈರಲ್ ಆಗಿದೆ. "A + A = 2, A + B = 3, A + B + C = 6, A + B + C x 4 = ಎಷ್ಟು ಎಂದು ಪ್ರಶ್ನೆ ಕೇಳಲಾಗಿದೆ. ಮೇಲ್ನೋಟಕ್ಕೆ ಈ ಬ್ರೈನ್ ಟೀಸರ್ ಪ್ರಶ್ನೆ ಸುಲಭವಾಗಿ ಕಂಡರೂ ನಂತರ ನಿಮ್ಮ ಮೆದುಳಿಗೆ ಹುಳ ಬಿಟ್ಟಂತಾಗುವುದು ಸುಳ್ಳಲ್ಲ. ಕೇವಲ 30 ಸೆಕೆಂಡ್‌ ಒಳಗೆ ಈ ಪ್ರಶ್ನೆಗೆ ನೀವು ಉತ್ತರ ಹೇಳಬೇಕು.

ಡಿಸೆಂಬರ್ 13 ರಂದು ಪೋಸ್ಟ್ ಮಾಡಲಾದ ಈ ಬ್ರೈನ್ ಟೀಸರ್ ಅನ್ನು ಈಗಾಗಲೇ 12 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವು ಗಣಿತ ಪ್ರೇಮಿಗಳು ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯುವ ಪ್ರಯತ್ನ ಮಾಡಿದ್ದಾರೆ.

‘ಇದಕ್ಕೆ ಉತ್ತರ 24, A + B + C= 6 ಮತ್ತು ಅದನ್ನು 4 ರಿಂದ ಗುಣಿಸಿದರೆ 24, ಇದು ತುಂಬಾ ಸರಳ‘ ಎಂದು ಎಕ್ಸ್ ಬಳಕೆದಾರೊಬ್ಬರು ಕಾಮೆಂಟ್ ಮಾಡಿದ್ದಾರೆ. ‘ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳುವ ಸವಾಲನ್ನು ನಾನು ಖಂಡಿತ ಸ್ವೀಕರಿಸುವುದಿಲ್ಲ. ಯಾಕೆಂದರೆ ಶಾಲಾ ದಿನಗಳಲ್ಲಿ ಗಣಿತ ಎಂದಿಗೂ ನನ್ನ ಫೇವರಿಟ್ ಸಬ್ಜೆಕ್ಟ್ ಆಗಿರಲಿಲ್ಲ‘ ಎಂದು ವ್ಯಕ್ತಿಯೊಬ್ಬರು ತಮಾಷೆಯಾಗಿ ಉತ್ತರ ಹೇಳಿದ್ದಾರೆ. ಹಾಗಾದರೆ ಈ ಬ್ರೈನ್ ಟೀಸರ್‌ಗೆ ನಿಜಕ್ಕೂ 24 ಉತ್ತರವೇ, ನಿಮಗೆ ಬೇರೆ ಉತ್ತರ ತಿಳಿದಿದ್ಯಾ ಕಾಮೆಂಟ್ ಮಾಡುವ ಮೂಲಕ ನಿಮ್ಮ ಜಾಣತನ ಪರೀಕ್ಷೆ ಮಾಡಿಸಿ.

ಇಂತಹ ಬ್ರೈನ್ ಟೀಸರ್‌ಗಳಿಗೆ ಉತ್ತರ ಹೇಳುವುದರಿಂದ ಮೆದುಳು ಚುರುಕಾಗುತ್ತದೆ. ಗಣಿತದ ಪಜಲ್‌ಗಳು ನಮ್ಮಲ್ಲಿ ಯೋಚನಾಶಕ್ತಿ ಬೆಳೆಯುವಂತೆ ಮಾಡುವುದು ಸುಳ್ಳಲ್ಲ. ಇದರಿಂದ ನಾವು ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ಕಲಿಯಯತ್ತೇವೆ. ಇದು ನಮ್ಮಲ್ಲಿ ಕುತೂಹಲ ಬೆಳೆಯಲು ಕಾರಣವಾಗುತ್ತದೆ.

ಈ ಬ್ರೈನ್ ಟೀಸರ್‌ಗಳನ್ನೂ ಓದಿ 

Brain Teaser: 1+1=2, 2+2=8 ಆದ್ರೆ 4+4= ಎಷ್ಟು? ಶೇ 80 ರಷ್ಟು ಜನರಿಗೆ ಹೇಳಲು ಸಾಧ್ಯವಾಗದ ಈ ಪ್ರಶ್ನೆಗೆ ನಿಮ್ಮ ಉತ್ತರವೇನು ಹೇಳಿ ‌‌‌‌‌‌

ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್ ಚಿತ್ರವೊಂದು ಇದೀಗ ಹಲವರ ಮೆದುಳಿಗೆ ಹುಳ ಬಿಟ್ಟಿದೆ. ಶೇ 80ರ‌ಷ್ಟು ಮಂದಿಗೆ ಉತ್ತರ ಹೇಳಲು ಸಾಧ್ಯವಾಗದ ಈ ಪ್ರಶ್ನೆಗೆ ನಿಮ್ಮಿಂದ ಉತ್ತರಿಸಲು ಸಾಧ್ಯವೇ ಪ್ರಯತ್ನಿಸಿ. ನೀವು ಹೇಳಬೇಕಾಗಿರುವುದು 4+4= ಎಷ್ಟು ಎಂದು. ಉತ್ತರ ಖಂಡಿತ 8 ಅಲ್ಲ? 20 ಸೆಕೆಂಡ್‌ನಲ್ಲಿ ಸರಿಯಾದ ಉತ್ತರ ಹೇಳಿ.

Brain Teaser: ಈ ಚಿತ್ರದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ನಿಮ್ಮ ಮೆದುಳು ಚುರುಕಾಗಿದ್ರೆ ಥಟ್ಟಂತ ಉತ್ತರ ಹೇಳಿ

ಗಣಿತದಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲೊಂದು ಬ್ರೈನ್ ಟೀಸರ್ ಚಿತ್ರವಿದೆ. ಎಕ್ಸ್‌ನಲ್ಲಿ ವೈರಲ್ ಆದ ಈ ಬ್ರೈನ್ ಟೀಸರ್‌ನಲ್ಲಿ ಮಿಸ್ ಆಗಿರುವ ನಂಬರ್ ಯಾವುದು ಎಂದು ನೀವು ಹೇಳಬೇಕು. ನಿಮಗಿರೋದು 10 ಸೆಕೆಂಡ್ ಸಮಯ, ಟ್ರೈ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ