Brain Teaser: ಕಿಟಕಿ ಬಾಗಿಲುಗಳಿಲ್ಲದ ರೂಮ್ ಯಾವುದು; ಬುದ್ಧಿವಂತರಾದ್ರೆ ಯೋಚಿಸಿ ಉತ್ತರ ಹೇಳಿ, ನಿಮ್ಮ ಮೆದುಳಿಗೊಂದು ಸವಾಲ್
Dec 23, 2024 12:21 PM IST
ಬ್ರೈನ್ ಟೀಸರ್
- ಎಕ್ಸ್‌ನಲ್ಲಿ ವೈರಲ್ ಆದ ಪ್ರಶ್ನೆಯೊಂದು ಮೆದುಳಿಗೆ ಹುಳ ಬಿಡೋದು ಪಕ್ಕಾ. ಈ ಪ್ರಶ್ನೆಗೆ ನೀವು 10 ಸೆಕೆಂಡ್ ಒಳಗೆ ಉತ್ತರ ಹೇಳಬೇಕು. ನಿಮ್ಮಲ್ಲಿ ಅಸಾಧಾರಣ ಬುದ್ಧಿವಂತಿಕೆ ಇದ್ರೆ ಮಾತ್ರ ಈ ಪ್ರಶ್ನೆಗೆ ಉತ್ತರ ಹೇಳಲು ಸಾಧ್ಯ. ಹಾಗಾದರೆ ಕಿಟಕಿ, ಬಾಗಿಲುಗಳಲ್ಲಿದ ರೂಮ್ ಯಾವುದು ಉತ್ತರ ಹೇಳಿ.
ಬ್ರೈನ್ ಟೀಸರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿವೆ. ಇವು ನಮ್ಮ ಮೆದುಳು, ಕಣ್ಣಿಗೆ ಸವಾಲು ಹಾಕುತ್ತವೆ. ನಮ್ಮ ಮೆದುಳಿನ ಸಾಮರ್ಥ್ಯ ಪರೀಕ್ಷೆ ಮಾಡುವ ಈ ಪಜಲ್‌ಗಳು ನಮಗೆ ಮೋಜು ನೀಡುತ್ತವೆ. ಒಂದಿಷ್ಟು ಹೊತ್ತು ಮೆದುಳು ಬೇರಾರುವುದೇ ಯೋಚನೆ ಮಾಡದೆ ಇದರ ಬಗ್ಗೆಯೇ ಯೋಚಿಸಬೇಕಾಗುತ್ತದೆ. ಇದರಿಂದ ನಮ್ಮಲ್ಲಿ ಏಕಾಗ್ರತೆಯೂ ಬೆಳೆಯುತ್ತದೆ.
ಮನುಷ್ಯನಲ್ಲಿ ಯೋಚನಾಶಕ್ತಿ ಹೆಚ್ಚಿದಷ್ಟು ಮನುಷ್ಯ ಬುದ್ಧಿವಂತನಾಗುತ್ತಾನೆ ಎಂದು ಹೇಳಲಾಗುತ್ತದೆ. ಅದರಂತೆ ಈ ಬ್ರೈನ್ ಟೀಸರ್‌ಗಳು ನಿಮ್ಮಲ್ಲಿ ಯೋಚನಾಶಕ್ತಿಯನ್ನು ವೃದ್ಧಿಸುತ್ತವೆ. ನಮ್ಮ ಮನಸ್ಸಿಗೆ ಚಾಲೆಂಜ್ ಮಾಡಿ, ನಾವು ಅತಿಯಾಗಿ ತಲೆ ಕೆಡಿಸಿಕೊಳ್ಳುವಂತೆ ಮಾಡುವ ಪವರ್ ಈ ಬ್ರೈನ್ ಟೀಸರ್‌ಗಳಿಗಿದೆ. ವಯೋಮಾನದ ಹಂಗಿಲ್ಲದ ಎಲ್ಲರೂ ಬ್ರೈನ್ ಟೀಸರ್‌ಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು.
Brainy Bits Hub ಎಂಬ ಎಕ್ಸ್ ಪುಟದಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್ ಪ್ರಶ್ನೆ ಇದಾಗಿದೆ. ಈ ಪ್ರಶ್ನೆ ನಿಜಕ್ಕೂ ಸಿಂಪಲ್ ಆಗಿದೆ. ಆದರೆ ಉತ್ತರ ಕಂಡುಹಿಡಿಯೋದು ಮಾತ್ರವಲ್ಲ ಸುಲಭವಲ್ಲ. ಪ್ರಶ್ನೆ ಏನಿದೆ ಅಂದ್ರೆ ‘ಕಿಟಕಿ ಬಾಗಿಲುಗಳಿಲ್ಲದ ರೂಮ್ ಯಾವುದು‘ ಎಂದಾಗಿದೆ. ಈ ಪ್ರಶ್ನೆಗೆ ನೀವು ಸರಿಯಾಗಿ ಯೋಚಿಸಿ ಉತ್ತರ ಹೇಳಬೇಕಾಗಿದೆ. ಇದಕ್ಕೆ ಉತ್ತರ ಹೇಳಲು ಸಾಧ್ಯವಾದರೆ ಖಂಡಿತ ನಿಮ್ಮ ಐಕ್ಯೂ ಲೆವೆಲ್ ಹೈ ಇದೆ ಎಂದರ್ಥ.
ಈ ಪ್ರಶ್ನೆಗೆ ನಿಮ್ಮಿಂದ ಉತ್ತರ ಕಂಡುಹಿಡಿಯಲು ಸಾಧ್ಯವಾಯಿತು ಎಂದಾದರೆ ಇದನ್ನು ನಿಮ್ಮ ಸ್ನೇಹಿತರು, ಆತ್ಮೀಯರಿಗೂ ಶೇರ್ ಮಾಡಿ. ಅವರಿಂದ ಯಾವ ಉತ್ತರ ಬರುತ್ತದೆ ನಿರೀಕ್ಷಿಸಿ. ಅವರ ಬುದ್ಧಿವಂತಿಕೆಯನ್ನು ನೀವು ಪರೀಕ್ಷಿಸಿದಂತಾಗುತ್ತದೆ.
ಈ ಬ್ರೈನ್ ಟೀಸರ್‌ಗಳನ್ನೂ ಓದಿ
Brain Teaser: ಈ ಮೂವರಲ್ಲಿ ಕಲ್ಲಂಗಡಿ ಹೊಟ್ಟೆಯಲ್ಲಿ ಇರಿಸಿಕೊಂಡು ಗರ್ಭಿಣಿಯಂತೆ ನಾಟಕವಾಡುತ್ತಿರುವುದು ಯಾರು, ಥಟ್ಟಂತ ಉತ್ತರ ಹೇಳಿ
ಬ್ರೈನ್ ಟೀಸರ್‌ಗಳು ಒಂಥರಾ ಮಜಾ ಇರೋದು ಮಾತ್ರವಲ್ಲ, ಇವು ಮೆದುಳಿಗೆ ಹುಳ ಬಿಡೋದು ಖಂಡಿತ. ಇಂದಿನ ಬ್ರೈನ್ ಟೀಸರ್‌ನಲ್ಲಿ ಮೂವರು ಗರ್ಭಿಣಿಯರಿದ್ದಾರೆ. ಇವರಲ್ಲಿ ಒಬ್ಬಾಕೆ ಹೊಟ್ಟೆಯ ಬಳಿ ಕಲ್ಲಂಗಡಿ ಇರಿಸಿಕೊಂಡು ಗರ್ಭಿಣಿಯಂತೆ ನಾಟಕವಾಡುತ್ತಿದ್ದಾಳೆ. ಆಕೆ ಯಾರು ಎಂದು ನೀವು ಕಂಡುಹಿಡಿಯಬೇಕು. ಇದು ನಿಮಗಿರುವ ಸವಾಲು.
Brain Teaser: 25ರ ನಂತರ ಬರುವ ಸಂಖ್ಯೆ ಯಾವುದು, ನೀವು ಬುದ್ಧಿವಂತರಾದ್ರೆ ಈ ಪ್ರಶ್ನೆಗೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆದ ಬ್ರೈನ್ ಟೀಸರ್ ನಿಮ್ಮ ಮೆದುಳಿಗೆ ಹುಳ ಬಿಡೋದು ಖಂಡಿತ. ಗಣಿತದಲ್ಲಿಎಕ್ಸ್‌ಪರ್ಟ್ ಆದ್ರೆ ನೀವು ಈ ಬ್ರೈನ್ ಟೀಸರ್‌ಗೆ ಸುಲಭವಾಗಿ ಉತ್ತರ ಹೇಳಲು ಸಾಧ್ಯವಿದೆ. ಹಾಗಾದರೆ ಈ ಬ್ರೈನ್ ಟೀಸರ್‌ನಲ್ಲಿ ಮುಂದಿನ ಸಂಖ್ಯೆ ಯಾವುದು ಕಂಡುಹಿಡಿಯಿರಿ.