logo
ಕನ್ನಡ ಸುದ್ದಿ  /  ಜೀವನಶೈಲಿ  /  Wednesday Motivation: ಜೀವನಕ್ಕೊಂದು ಸ್ಫೂರ್ತಿಮಾತು: ಸಕಾರಾತ್ಮಕ ಆಲೋಚನೆಗಳಿದ್ದರೆ ಅರ್ಧ ಸಮಸ್ಯೆಗಳು ಮುಗಿದಂತೆ, ಈ ನಾವಿಕನ ಕಥೆ ಓದಿ

Wednesday Motivation: ಜೀವನಕ್ಕೊಂದು ಸ್ಫೂರ್ತಿಮಾತು: ಸಕಾರಾತ್ಮಕ ಆಲೋಚನೆಗಳಿದ್ದರೆ ಅರ್ಧ ಸಮಸ್ಯೆಗಳು ಮುಗಿದಂತೆ, ಈ ನಾವಿಕನ ಕಥೆ ಓದಿ

HT Kannada Desk HT Kannada

Mar 13, 2024 07:04 AM IST

google News

ಜೀವನಕ್ಕೊಂದು ಸ್ಫೂರ್ತಿಮಾತು

  • Wednesday Motivation: ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಧೈರ್ಯವಾಗಿ ಎದುರಿಸಬೇಕು. ಸಮಸ್ಯೆಗಳು ಬಂತೆಂದು ಕುಗ್ಗದೆ ಧೈರ್ಯದಿಂದ ಇದ್ದರೆ, ಸಕಾರಾತ್ಮಕವಾಗಿ ಚಿಂತಿಸಿದರೆ ಸಮಸ್ಯೆಗಳು ಅರ್ಧ ಬಗೆಹರಿದಂತೆ. ಸಮುದ್ರದಲ್ಲಿ ದಾರಿ ತಪ್ಪಿ ಎಷ್ಟೋ ದಿನಗಳ ಕಾಲ ದ್ವೀಪದಲ್ಲಿ ವಾಸಿಸಿ, ಕೊನೆಗೂ ಅಲ್ಲಿಂದ ಪಾರಾಗಿ ಬಂದ ನಾವಿಕನ ಕಥೆಯನ್ನು ಓದಿ. 

ಜೀವನಕ್ಕೊಂದು ಸ್ಫೂರ್ತಿಮಾತು
ಜೀವನಕ್ಕೊಂದು ಸ್ಫೂರ್ತಿಮಾತು (PC: Pixabay)

ಜೀವನಕ್ಕೊಂದು ಸ್ಫೂರ್ತಿಮಾತು: ಒಳ್ಳೆಯದನ್ನೇ ಯೋಚಿಸಬೇಕು, ಒಳ್ಳೆಯದನ್ನೇ ಮಾಡಬೇಕು ಎನ್ನುತ್ತಾರೆ. ನಿಮ್ಮ ತಲೆಯಲ್ಲಿ ಸಕಾರಾತ್ಮಕ ಯೋಚನೆಗಳಿದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ. ಆದರೆ ಕೆಲವರು ಪ್ರತಿ ಬಾರಿಯೂ ನಕಾರಾತ್ಮಕವಾಗಿ ಚಿಂತಿಸುತ್ತಾರೆ. ಕೆಟ್ಟ ಆಲೋಚನೆಗಳನ್ನೇ ಮಾಡುತ್ತಾರೆ. ಆದರೆ ಒಳ್ಳೆ ಆಲೋಚನೆಗಳು ನಿಮಗೆ ಒಳ್ಳೆಯದನ್ನೇ ಮಾಡುತ್ತದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಕಥೆ ಇದೆ.

ಬಿರುಗಾಳಿ ಬೀಸಿ ದಾರಿ ತಪ್ಪಿದ ಹಡಗು

ಒಬ್ಬ ನಾವಿಕನು ತನ್ನ ಸಿಬ್ಬಂದಿಯೊಂದಿಗೆ ಸಮುದ್ರದಲ್ಲಿ ಪ್ರಯಾಣಿಸುತ್ತಿರುತ್ತಾನೆ. ಇದ್ದಕ್ಕಿದ್ದಂತೆ ದೊಡ್ಡ ಬಿರುಗಾಳಿ ಬೀಸಿ ಹಡಗು ಜನವಸತಿ ಇಲ್ಲದ ದ್ವೀಪದ ಕಡೆಗೆ ಸಾಗುತ್ತದೆ. ಅನೇಕ ನಾವಿಕರು ಭಯದಿಂದ ಸಮುದ್ರಕ್ಕೆ ಹಾರಿದರೆ ಮತ್ತೊಬ್ಬ ನಾವಿಕ ಹಡಗು ಎಲ್ಲಿಗೆ ಹೋಗುತ್ತಿದೆಯೋ ಅಲ್ಲಿಗೆ ಹೋಗಲು ನಿರ್ಧರಿಸಿದರು. ಇದರಿಂದ ತನ್ನ ಪ್ರಾಣವಾದರೂ ಉಳಿಯುತ್ತದೆ ಎಂಬ ಯೋಚನೆ ಆತನದ್ದು. ಕೊನೆಗೆ ಹಡಗು ಒಂದು ನಿರ್ಜನ ದ್ವೀಪಕ್ಕೆ ಹೋಗಿ ನಿಂತಿತು. ಇತರ ನಾವಿಕರು ಏನಾದರೆಂದು ತಿಳಿಯಲಿಲ್ಲ. ಆದರೆ ಈತ ಬದುಕಿ ಉಳಿದ, ಆದರೂ ಆ ದ್ವೀಪದಿಂದ ಹೊರ ಹೋಗಲು ನಿರ್ಧರಿಸಿದರು. ಆದರೆ ಒಂದೇ ಒಂದು ಹಡಗು ಆ ಕಡೆ ಬರಲಿಲ್ಲ. ಪ್ರಯತ್ನಿಸಿ ಸುಸ್ತಾಗಿ ಕೊನೆಗೆ ಇನ್ನು ನನ್ನ ಜೀವನ ಇಲ್ಲೇ ಇದೆ ಎಂದು ನಿರ್ಧರಿಸಿದನು. ಕಟ್ಟಿಗೆಗಳನ್ನು ಸಂಗ್ರಹಿಸಿ ಸಣ್ಣ ಗುಡಿಸಲು ನಿರ್ಮಿಸಿದನು.

ಆ ನಾವಿಕ ಕಾಡಿನಲ್ಲೇ ದೊರೆಯುವ ಹಣ್ಣು, ಹಂಫಲು ತಿನ್ನುತ್ತಾ ಜೀವನವನ್ನು ಕಳೆಯುತ್ತಾನೆ. ಅದೇ ರೀತಿ ಕೆಲವು ದಿನಗಳು ಕಳೆಯಿತು. ಆ ನಾವಿಕ ಕಾಡಿನಲ್ಲಿ ಆಹಾರ ಹುಡುಕಿ ಹೊರಟನು. ಅಲ್ಲಿಂದ ಬರುವಷ್ಟರಲ್ಲಿ ಆತನ ಗುಡಿಸಲು ಬೆಂಕಿಗೆ ಆಹುತಿಯಾಗಿದ್ದನ್ನು ಕಾಣುತ್ತಾನೆ. ಆತನಿಗಿದ್ದ ಒಂದೇ ಒಂದು ಸೂರು ಗುಡಿಸಲು. ಆದರೆ ಅದನ್ನೂ ಕಳೆದುಕೊಂಡು ಆತ ಬಹಳ ಬೇಸರಗೊಳ್ಳುತ್ತಾನೆ. ಇಷ್ಟಾದರೂ ಆತನಲ್ಲಿ ಸಕಾರಾತ್ಮಕ ಆಲೋಚನೆಗಳು ಕಡಿಮೆ ಆಗಲಿಲ್ಲ. ಮತ್ತೆ ಗುಡಿಸಲನ್ನು ಕಟ್ಟಿ ಜೀವಿಸಲು ಆರಂಭಿಸಿನು. ಒಮ್ಮೆ ಒಂದು ಹಡಗು ಸಮುದ್ರದಲ್ಲಿ ಕಾಣಿಸಿಕೊಂಡಿತು. ಅದನ್ನು ನೋಡಿ ಆ ನಾವಿಕನಿಗೆ ಆಶ್ಚರ್ಯದ ಜೊತೆಗೆ ಬಹಳ ಖುಷಿಯಾಯ್ತು.

ಸಕಾರಾತ್ಮಕ ಆಲೋಚನೆಯಿಂದಲೇ ಬದುಕುಳಿದ ನಾವಿಕ

ದ್ವೀಪದ ಬಳಿ ನಿಂತ ಹಡಗಿನಿಂದ 4-5 ಕೆಳಗೆ ಇಳಿದರು. ಇತ್ತ ಹೋಗುವಾಗ ದಟ್ಟ ಹೊಗೆ ಕಾಣಿಸಿಕೊಂಡಿತು. ಏನಾಗಿರಬಹುದು ಎಂದು ನೋಡಲು ಇತ್ತ ಬಂದೆವು. ಆದರೆ ಇಲ್ಲಿ ನೀವು ಕಂಡಿರಿ ಎಂದು ಹೇಳಿದಾಗ ನಾವಿಕನಿಗೆ ನನ್ನ ಗುಡಿಸಲು ಬೆಂಕಿಗೆ ಆಹುತಿಯಾಗಿದ್ದು ಒಳ್ಳೆಯದೇ ಆಯ್ತು ಎಂದುಕೊಂಡನು. ನಂತರ ಹಡಗಿನಲ್ಲಿ ನಾವಿಕ ತನ್ನ ಮನೆ ಸೇರಿಕೊಳ್ಳುತ್ತಾನೆ. ಆದ್ದರಿಂದ ಬದುಕಿನಲ್ಲೇ ಎಷ್ಟೇ ಕಷ್ಟ ಬಂದರೂ ಖಿನ್ನತೆಗೆ ಒಳಗಾಗಬೇಡಿ, ನನ್ನ ಬದುಕು ಇನ್ನು ಮುಗಿಯಿತು ಎಂದು ಸಕಾರಾತ್ಮಕವಾಗಿ ಯೋಚಿಸುವುದು ತಪ್ಪು. ಅದರ ಬದಲಿಗೆ ಏನೇ ಕಷ್ಟ ಬಂದರೂ ಎದುರಿಸುತ್ತೇವೆ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ಸಕಾರಾತ್ಮಕ ಯೋಚನೆ ಇದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ.

ಧನಾತ್ಮಕ ಚಿಂತನೆಗಳನ್ನು ಹೊಂದಿರುವ ವ್ಯಕ್ತಿಯನ್ನು ಯಾವುದೇ ಸೋಲು ನಿರುತ್ಸಾಹಗೊಳಿಸಲಾರದು. ಈ ನಾವಿಕ ದ್ವೀಪದಲ್ಲಿ ಏಕಾಂಗಿಯಾಗಿ ವಾಸಿಸಬೇಕಾದಾಗ ಆತಂಕಗೊಂಡಿದ್ದರೆ ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತು. ಅದರೆ ಆತ ಧೈರ್ಯದಿಂದ ಮುಂದುವರಿಯಲು ನಿರ್ಧರಿಸಿದರು. ಈ ನಾವಿಕನ ಜೀವನ ನಿಮ್ಮೆಲ್ಲರಿಗೂ ಸ್ಪೂರ್ತಿಯಾಗಲಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ