logo
ಕನ್ನಡ ಸುದ್ದಿ  /  ಜೀವನಶೈಲಿ  /  ಫ್ಯಾಟಿ ಲಿವರ್ ಸಮಸ್ಯೆ ಇದ್ರೂ 50 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದು ಹೇಗೆ ಹೃತಿಕ್‌ ರೋಷನ್ ಸಹೋದರಿ; ಸುನೈನಾ ರೋಷನ್ ವೈಟ್‌ಲಾಸ್ ಸ್ಟೋರಿ

ಫ್ಯಾಟಿ ಲಿವರ್ ಸಮಸ್ಯೆ ಇದ್ರೂ 50 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದು ಹೇಗೆ ಹೃತಿಕ್‌ ರೋಷನ್ ಸಹೋದರಿ; ಸುನೈನಾ ರೋಷನ್ ವೈಟ್‌ಲಾಸ್ ಸ್ಟೋರಿ

Reshma HT Kannada

Nov 19, 2024 09:59 AM IST

google News

ಸುನೈನಾ ರೋಷನ್ ವೈಟ್‌ಲಾಸ್ ಸ್ಟೋರಿ

    • ತೂಕ ಇಳಿಕೆಯ ಟೆನ್ಷನ್ ಜನಸಾಮಾನ್ಯರಿಗೆ ಮಾತ್ರವಲ್ಲ, ಸೆಲೆಬ್ರಿಟಿಗಳಿಗೂ ತಪ್ಪಿದ್ದಲ್ಲ. ಕೆಲವೊಮ್ಮೆ ಆರೋಗ್ಯ ಸಮಸ್ಯೆಯ ಕಾರಣದಿಂದಲೂ ತೂಕ ಏರಿಕೆಯಾಗುತ್ತೆ. ಬಾಲಿವುಡ್‌ ನಟ ಹೃತಿಕ್ ರೋಷನ್ ಸಹೋದರಿ ಸುಸೈನಾ ರೋಷನ್ ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರೂ ಕೂಡ 50 ಕೆಜಿಯಷ್ಟು ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಇವರ ವೈಟ್‌ಲಾಸ್‌ ಪಯಣ ಹೇಗಿತ್ತು, ನೀವೂ ಓದಿ.
ಸುನೈನಾ ರೋಷನ್ ವೈಟ್‌ಲಾಸ್ ಸ್ಟೋರಿ
ಸುನೈನಾ ರೋಷನ್ ವೈಟ್‌ಲಾಸ್ ಸ್ಟೋರಿ (PC: roshansunaina/ Instagram )

ತೂಕ ಏರಿಕೆಯಾಗಲು ಅತಿಯಾಗಿ ತಿನ್ನುವುದೇ ಕಾರಣ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ತಪ್ಪುಕಲ್ಪನೆ. ತೂಕ ಹೆಚ್ಚಲು ಕಾರಣಗಳು ಹಲವು. ಆರೋಗ್ಯ ಸಮಸ್ಯೆಗಳು ತೂಕ ಏರಿಕೆಗೆ ಕಾರಣವಾಗಬಹುದು. ಹೀಗೆ ಆರೋಗ್ಯ ಸಮಸ್ಯೆಗೆ ಒಳಗಾದ ಬಾಲಿವುಡ್‌ನ ಖ್ಯಾತ ನಟ ಹೃತಿಕ್ ರೋಷನ್ ಸಹೋದರಿ ಇದ್ದಕ್ಕಿದ್ದಂತೆ ಸಾಕಷ್ಟು ದಪ್ಪವಾಗುತ್ತಾರೆ.

ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ನಂತರ ಆಕೆ ದಪ್ಪವಾಗುತ್ತಾ ಹೋಗುತ್ತಾರೆ. ಆಕೆಗೆ ಗರ್ಭಕಂಠದ ಕ್ಯಾನ್ಸರ್ ಜೊತೆ ಫ್ಯಾಟಿ ಲಿವರ್ ಸಮಸ್ಯೆ ಕೂಡ ಕಾಣಿಸಿಕೊಂಡಿತ್ತು. ಆ ಕಾರಣದಿಂದ ಬಹಳಷ್ಟು ದಪ್ಪವಾಗಿದ್ದ ಆಕೆ 50 ಕೆಜಿಯಷ್ಟು ತೂಕ ಇಳಿಸಿಕೊಂಡು ಬಳಕುವ ಬಳ್ಳಿಯಂತಾಗುತ್ತಾರೆ. ಯಾವುದೇ ಕಾರಣದಿಂದ ಎಷ್ಟೇ ದಪ್ಪವಾಗಿದ್ದರೂ ತೂಕ ಇಳಿಸಿಕೊಳ್ಳುವುದು ಅಸಾಧ್ಯವೇನಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಹೃತಿಕ್ ಸಹೋದರಿ.

ಸಾಕಷ್ಟು ತೂಕ ಇಳಿಸಿಕೊಂಡ ಈಕೆ ಹಲವರಿಗೆ ಮಾದರಿಯಾಗಿದ್ದಾರೆ. ಅಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಲೈಪ್‌ಸ್ಟೈಲ್ ಹೀಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಇವರ ವೈಟ್‌ಲಾಸ್ ಪಯಣ ಹೇಗಿತ್ತು ಎಂಬ ವಿವರ ಇಲ್ಲಿದೆ.

ಆರೋಗ್ಯಕರ ಜೀವನಶೈಲಿಗೆ ಸುನೈನಾ ಸಲಹೆ

52 ವರ್ಷವಾದ್ರೂ ಆಕೆ ತನ್ನ ದಿನಚರಿಯಲ್ಲಿ ದೇಹ ಹಾಗೂ ಚರ್ಮದ ಆರೈಕೆಗೆ ಹೆಚ್ಚು ಗಮನ ನೀಡುತ್ತಾರೆ. ಇದರಿಂದ ಆಕೆ ಆರೋಗ್ಯವಾಗಿ, ಸಂತೋಷವಾಗಿ ಇರುತ್ತಾರೆ. ಮಲಗುವ ಮುನ್ನ ನಾವು ಅನುಸರಿಸುವ ಕೆಲವು ದಿನಚರಿಗಳು ನಮ್ಮ ದೇಹವನ್ನು ಡಿಟಾಕ್ಸ್ ಮಾಡುವುದು ಮಾತ್ರವಲ್ಲ, ನಾಳೆಗೆ ನಮ್ಮನ್ನು ಸಿದ್ಧಗೊಳಿಸುತ್ತದೆ. ಮಾತ್ರವಲ್ಲ, ಇದರಿಂದ ನಮ್ಮ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ರಾತ್ರಿ ಮಲಗುವ ಮುನ್ನ ಸುನೈನಾ ಅವರ ದಿನಚರಿ ಹೇಗಿರುತ್ತೆ ಎಂಬುದನ್ನು ಅವರು ವಿವರಿಸಿದ್ದಾರೆ

* ರಾತ್ರಿ 8.30ರ ಒಳಗೆ ಊಟ ಮುಗಿಸಬೇಕು

* ಕ್ಯಾಮೊಮೈಲ್ ಚಹಾ ಕುಡಿಯುವುದರಿಂದ ರಿಫ್ರೆಶ್ ಭಾವ ಮೂಡುತ್ತದೆ

* ಉತ್ತಮ ಸಂಗೀತವನ್ನು ಕೇಳಿ

* ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ

* ಸ್ನೇಹಿತರೊಂದಿಗೆ ಮಾತನಾಡುವುದು

* ಸಾಮಾಜಿಕ ಜಾಲತಾಣಗಳಿಂದ ದೂರವಿರಿ

ಕಾಮಾಲೆ ಸಮಸ್ಯೆಯನ್ನೂ ಎದುರಿಸಿದ್ದ ಸುನೈನಾ ಅದರ ನಂತರ ಆರೋಗ್ಯಕರ ಆಹಾರ ಸೇವನೆಯತ್ತ ಗಮನ ಹರಿಸುತ್ತಾರೆ. ‘ನಾನು ಎಲ್ಲಾ ಅನಾರೋಗ್ಯಕರ ಆಹಾರಗಳನ್ನೂ ಸೇವಿಸುತ್ತಿದ್ದೆ. ಈ ಭೂಮಿ ಮೇಲೆ ಸಿಗುತ್ತ ಎಲ್ಲಾ ರೀತಿಯ ಅನಾರೋಗ್ಯಕರ ಆಹಾರಗಳು ನನಗೆ ಇಷ್ಟವಾಗುತ್ತಿದ್ದವು. ನನ್ನ ದೇಹಕ್ಕೆ ಆರೋಗ್ಯಕರ ಆಹಾರ ಯಾವುದೂ ಹೋಗುತ್ತಿರಲಿಲ್ಲ. ಆದರೆ ಇಂದು ನಾನು ಎಲ್ಲಾ ಜಂಕ್‌ಪುಡ್‌ಗಳಿಂದ ದೂರಾಗಿ, ಆರೋಗ್ಯಕರ ಆಹಾರಗಳನ್ನಷ್ಟೇ ಸೇವಿಸುತ್ತಿದ್ದೇನೆ‘ ಎಂದು ಅವರು ಹೇಳಿಕೊಂಡಿದ್ದಾರೆ.

ಸೋಮಾರಿಯಾಗದಿರಿ, ಕುಗ್ಗದಿರಿ: ಸುನೈನಾ ರೋಷನ್‌

ಸರಳವಾದ ಜೀವನಶೈಲಿ ರೂಢಿಸಿಕೊಂಡು ಸುನೈನಾ ಜೀವನಶೈಲಿ ಬದಲಾವಣೆಯ ಮೂಲಕವೇ ಗ್ರೇಡ್ 3 ಹಂತದಲ್ಲಿದ್ದ ಫ್ಯಾಟಿ ಲಿವರ್ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳುತ್ತಾರೆ. ನಿಧಾನಕ್ಕೆ ನಾನು ಆರೋಗ್ಯಕರ ಜೀವನಶೈಲಿಗೆ ಸ್ವಿಚ್ ಓವರ್ ಮಾಡಿದೆ. ಅದು ನನಗೆ ಖಂಡಿತ ಕಷ್ಟವಾಗಿಲ್ಲ. ನಿಮಗೆಲ್ಲರಿಗೂ ನನ್ನ ಸಲಹೆ ಎಂದರೆ ಅನಾರೋಗ್ಯ ಸಮಸ್ಯೆಯಾದಾಗ ಹೆದರಬೇಡಿ. ಸೋಮಾರಿಯಾಗಬೇಡಿ. ನಿಮ್ಮಿಂದ ಸಾಧ್ಯ ಎಂದುಕೊಂಡು ಮುಂದೆ ಸಾಗಿ. ಆದರೆ ಯಾವುದೇ ಕಾರಣಕ್ಕೂ ತಡ ಮಾಡಬೇಡಿ.

ತೂಕ ಇಳಿಕೆಯ ಜರ್ನಿ ಖಂಡಿತ ಅಸಾಧ್ಯವಲ್ಲ. ಆಲಸ್ಯವನ್ನು ಬಿಟ್ಟು ಧೈರ್ಯವಾಗಿ ಮುಂದೆ ಸಾಗಬೇಕು. ಸ್ಥಿರತೆ ಹಾಗೂ ಸಮರ್ಪಣ ಮನೋಭಾವದಿಂದ ತೂಕ ಇಳಿಸಿಕೊಳ್ಳುವ ಪ್ರಯತ್ನ ಮಾಡಿದ್ರೆ ಖಂಡಿತ ಇದು ಅಸಾಧ್ಯವಲ್ಲ. ಆದರೆ ಆರೋಗ್ಯಕರ ಜೀವನಶೈಲಿ ಪಾಲಿಸುವುದು ಬಹಳ ಮುಖ್ಯ ಎಂದು ಸುನೈನಾ ಸಲಹೆ ನೀಡುತ್ತಾರೆ.

ಸುನೈನಾ ಅವರ ಪ್ರಕಾರ ತೂಕ ಇಳಿಸಿಕೊಳ್ಳುವ ಪ್ರಯತ್ನಕ್ಕೆ ಜೀವನಶೈಲಿ ಬಹಳ ಮುಖ್ಯ. ಅವರು ಸಾಮಾಜಿಕ ಜಾಲತಾಣಗಳಿಂದ ನೀವು ದೂರ ಇರಬೇಕು ಎಂಬುದನ್ನು ಒತ್ತಿ ಹೇಳುತ್ತಾರೆ. ಒಟ್ಟಾರೆ ಜೀವನಶೈಲಿಯನ್ನು ಸುಧಾರಿಸುವ ಮೂಲಕವೇ 50 ಕೆಜಿಯಷ್ಟು ತೂಕ ಇಳಿಸಿಕೊಂಡ ಸುನೈನಾ ತೂಕ ಇಳಿಕೆಯ ಪಯಣ ಹೀಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ