logo
ಕನ್ನಡ ಸುದ್ದಿ  /  ಜೀವನಶೈಲಿ  /  ತೂಕ ಇಳಿಕೆ ಪ್ರಯತ್ನದಲ್ಲಿ ಯಶಸ್ವಿ: ಬರೋಬ್ಬರಿ 20 ಕೆ.ಜಿ ತೂಕ ಇಳಿಸಿಕೊಂಡ ಈ ವ್ಯಕ್ತಿಯ ಸ್ಫೂರ್ತಿಯ ಕಥೆ ಇಲ್ಲಿದೆ

ತೂಕ ಇಳಿಕೆ ಪ್ರಯತ್ನದಲ್ಲಿ ಯಶಸ್ವಿ: ಬರೋಬ್ಬರಿ 20 ಕೆ.ಜಿ ತೂಕ ಇಳಿಸಿಕೊಂಡ ಈ ವ್ಯಕ್ತಿಯ ಸ್ಫೂರ್ತಿಯ ಕಥೆ ಇಲ್ಲಿದೆ

Priyanka Gowda HT Kannada

Sep 23, 2024 10:49 AM IST

google News

36 ವರ್ಷದ ವ್ಯಕ್ತಿಯೊಬ್ಬರು ತಮ್ಮ ಕಠಿಣ ಪರಿಶ್ರಮದಿಂದ ಬರೋಬ್ಬರಿ 20 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

  • ತೂಕ ಇಳಿಕೆ ಅನ್ನುವುದು ಅತ್ಯಂತ ಕಠಿಣಕರ. ಆದರೆ, ಸಾಧಿಸುವ ಛಲ, ಗುರಿ, ಆತ್ಮವಿಶ್ವಾಸ ಇದ್ದರೆ ಇದು ಕಷ್ಟಸಾಧ್ಯವೇನಲ್ಲ. ಅದೇ ರೀತಿ ಇಲ್ಲೊಬ್ಬ 36 ವರ್ಷದ ವ್ಯಕ್ತಿಯೊಬ್ಬರು ತಮ್ಮ ಕಠಿಣ ಪರಿಶ್ರಮದಿಂದ ಬರೋಬ್ಬರಿ 20 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಈ ವ್ಯಕ್ತಿಯ ಸ್ಪೂರ್ತಿಯ ಕಥೆ ಇಲ್ಲಿದೆ.

36 ವರ್ಷದ ವ್ಯಕ್ತಿಯೊಬ್ಬರು ತಮ್ಮ ಕಠಿಣ ಪರಿಶ್ರಮದಿಂದ ಬರೋಬ್ಬರಿ 20 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.
36 ವರ್ಷದ ವ್ಯಕ್ತಿಯೊಬ್ಬರು ತಮ್ಮ ಕಠಿಣ ಪರಿಶ್ರಮದಿಂದ ಬರೋಬ್ಬರಿ 20 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. (Unsplash)

ಇಂದಿನ ದಿನಗಳಲ್ಲಿ ಬಹುತೇಕರಿಗೆ ತೂಕ ಇಳಿಸುವುದು ಹೇಗೆ ಎಂಬುದೇ ಚಿಂತೆ. ಫಾಸ್ಟ್ ಫುಡ್ ಇತ್ಯಾದಿ ಅನಾರೋಗ್ಯಕರ ಆಹಾರ ತಿಂದು ಸ್ಥೂಲಕಾಯ ಸಮಸ್ಯೆ ಎದುರಿಸುತ್ತಿದ್ದಾರೆ ಬಹುತೇಕ ಮಂದಿ. ಆಹಾರ ಪದ್ಧತಿ ಮಾತ್ರವಲ್ಲದೆ ಜೀವನಶೈಲಿಯ ಬದಲಾವಣೆಯಿಂದಲೂ ಹಲವರು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಬೊಜ್ಜು ಬಂದ ನಂತರ ತಾವು ತೂಕ ಇಳಿಸುವುದು ಹೇಗೆ ಎಂಬ ಚಿಂತೆ ಅನೇಕರನ್ನು ಕಾಡುತ್ತದೆ. ಇದಕ್ಕಾಗಿ ಡಯೆಟ್ ಮಾಡುವುದು, ವಾಕಿಂಗ್ ಹೋಗುವುದು ಇತ್ಯಾದಿ ಮಾಡುತ್ತಾರೆ. ಕೆಲವರು ಕಠಿಣ ಪರಿಶ್ರಮದಿಂದ ಕೆಲವು ತಿಂಗಳುಗಳಲ್ಲಿ ಹಲವಾರು ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಅಂಥವರ ಸ್ಟೋರಿಯನ್ನು ನೀವು ಓದಿರಬಹುದು ಅಥವಾ ಕೇಳಿರಬಹುದು. ಇದೀಗ ಇದೇ ಸಾಲಿಗೆ 36 ವರ್ಷದ ವ್ಯಕ್ತಿಯೊಬ್ಬರು ಸೇರ್ಪಡೆಯಾಗಿದ್ದಾರೆ. ಕುನಾಲ್ ಉಪಾಧ್ಯಾಯ ಎಂಬುವವರು ಒಂದು ವರ್ಷದಲ್ಲಿ ಬರೋಬ್ಬರಿ 20 ಕೆಜಿಗಳಷ್ಟು ತೂಕ ಇಳಿಸಿಕೊಂಡಿದ್ದಾರೆ. ಈ ಮೂಲಕ ತೂಕ ಇಳಿಕೆಯ ಪ್ರಯತ್ನದಲ್ಲಿರುವವರಿಗೆ ಮಾದರಿಯಾಗಿದ್ದಾರೆ.

93 ಕೆಜಿ ತೂಕ ಹೊಂದಿದ್ದ ಕುನಾಲ್ ಅವರು 20 ಕೆಜಿ ತೂಕ ಇಳಿಕೆ ಮಾಡಿಕೊಳ್ಳುವ ಮೂಲಕ ಫಿಟ್ ಆಂಡ್ ಫೈನ್ ಆಗಿದ್ದಾರೆ. ಕಳೆದ 14 ವರ್ಷಗಳಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಇದು ಇವರ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀಳಲು ಕಾರಣವಾಯಿತು. ತೂಕ ಹೆಚ್ಚಾಗುತ್ತಿದ್ದಂತೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದರಿಂದ ತೂಕ ಇಳಿಕೆಯತ್ತ ಗಮನ ಹರಿಸಿದ್ರು. ಜುಲೈ 16ರ 2023ರಂದು ತೂಕ ಇಳಿಕೆಯ ಪ್ರಯಾಣವನ್ನು ಆರಂಭಿಸಿದ ಅವರು, ಒಂದು ವರ್ಷದ ನಂತರ 20 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ.

ಕುನಾಲ್ ಅವರ ತೂಕ ಇಳಿಕೆಯ ಪ್ರಯಾಣ ಹೀಗಿತ್ತು

ಮೊದಲಿಗೆ ಎರಡು ತಿಂಗಳ ಕಾಲ ಡಯೆಟ್ ಮಾಡುವುದರ ಮೂಲಕ ತಮ್ಮ ತೂಕ ಇಳಿಕೆ ಪ್ರಯಾಣವನ್ನು ಪ್ರಾರಂಭಿಸಿದ ಅವರು, ನಂತರ ಓಟ ಹಾಗೂ 20 ಕಿ.ಮೀ ನಷ್ಟು ಸೈಕ್ಲಿಂಗ್ ಮಾಡುತ್ತಿದ್ದರಂತೆ. ಇದು ತೂಕ ಇಳಿಕೆಗೆ ಸಾಕಷ್ಟು ನೆರವಾಯಿತು. ಇದರಿಂದ 93 ಕೆಜಿಗಳಷ್ಟಿದ್ದ ಕುನಾಲ್ ತೂಕ 81 ಕೆ.ಜಿಗೆ ಇಳಿಯಿತು. ಇದರಿಂದ ಅತ್ಯಂತ ಸಂತಸಗೊಂಡ ಅವರು ಕಠಿಣ ಡಯೆಟ್‍ಗೆ ಮೊಕೆ ಹೋದ್ರು. ದಿನಕ್ಕೆ 8 ಗಂಟೆ ಮಾತ್ರ ಆಹಾರ ಸೇವಿಸಲು ಪಣತೊಟ್ಟರು, ಹಾಗೆಯೇ ಮಾಡಿದ್ರು. ಹೀಗಾಗಿ ಸಮತೋಲಿತ, ಪೌಷ್ಟಿಕಾಂಶಭರಿತ ಆಹಾರ ಸೇವನೆಯತ್ತ ಮುಖ ಮಾಡಿದ್ರು. ದೇಹಕ್ಕೆ ಬೇಕಾದ ಅಗತ್ಯ ಪ್ರೊಟೀನ್‍ಗಳು, ಆರೋಗ್ಯಕರ ಕೊಬ್ಬುಗಳು, ತರಕಾರಿಗಳು, ಧಾನ್ಯಗಳು ಸೇರಿದಂತೆ ಪೌಷ್ಟಿಕಾಂಶವುಳ್ಳ ಆಹಾರವನ್ನೇ ಸೇವಿಸುತ್ತಾರೆ.

ಆಹಾರದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದೊಕೊಂಡ ಅವರು, ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಿದರು. ಸ್ನಾಯುಗಳನ್ನು ಗಟ್ಟಿಗೊಳಿಸಲು ಮತ್ತು ತೂಕ ಇಳಿಕೆಗೆ ಶಕ್ತಿ ವ್ಯಾಯಾಮ ಅಭ್ಯಾಸವನ್ನು ಮಾಡಲು ಮುಂದಾದ್ರು. ಆಹಾರದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡ ಕುನಾಲ್, ಪ್ರೊಟೀನ್ ಭರಿತ ಆಹಾರವನ್ನೇ ಸೇವಿಸುತ್ತಿದ್ದರು. ಜೊತೆಗೆ ಕಠಿಣ ತಾಲೀಮಿನಲ್ಲಿ ತೊಡಗಿದ್ದರಿಂದ 93 ಕೆಜಿ ಹೊಂದಿದ್ದ ಅವರು 70 ಕೆ.ಜಿಗೆ ಇಳಿಯುವಲ್ಲಿ ಸಹಕಾರಿಯಾಯಿತು.

ತೂಕ ಇಳಿಕೆ ಅಂದ್ರೆ ಡಯೆಟ್ ಮಾಡುವುದು ಮಾತ್ರವಲ್ಲ ವ್ಯಾಯಾಮವೂ ಅತ್ಯವಶ್ಯಕ ಎಂದು ಅವರು ಪ್ರತಿಪಾದಿಸುತ್ತಾರೆ. ವಾಕಿಂಗ್, ಜಾಗಿಂಗ್, ಸೈಕ್ಲಿಂಗ್‍ ಮಾಡುವುದರಿಂದ ತೂಕ ಇಳಿಕೆಗೆ ನೆರವಾಗುತ್ತದೆ. ವ್ಯಾಯಾಮ ಮಾಡುವುದರಿಂದ ವ್ಯಕ್ತಿಯ ಹೃದಯವು ರಕ್ತವನ್ನು ಪಂಪ್ ಮಾಡುವ ವೇಗವನ್ನು ಹೆಚ್ಚಿಸುತ್ತದೆ. ಇದರಿಂದ ದೇಹದಲ್ಲಿರುವ ಕೊಬ್ಬು ಕರಗಿಸುವಲ್ಲೂ ಸಹಕಾರಿ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

ವ್ಯಾಯಾಮ ಮಾಡುವುದರಿಂದ ತೂಕ ಇಳಿಕೆಗೆ ನೆರವಾಗುವುದು ಮಾತ್ರವಲ್ಲ, ಇದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಹಾಗೂ ಒತ್ತಡ ಕಡಿಮೆ ಮಾಡುವಲ್ಲೂ ಸಹಕಾರಿಯಾಗಿದೆ ಎಂದು ಕುನಾಲ್ ತಿಳಿಸಿದ್ದಾರೆ. ತೂಕವನ್ನು ಕಳೆದುಕೊಳ್ಳಲು ಆಹಾರ ಕ್ರಮದ ಬದಲಾವಣೆಯು ಅತ್ಯಗತ್ಯವಾಗಿದ್ದರೂ ವ್ಯಾಯಾಮ ಮಾಡುವುದರಿಂದ ತೂಕ ಇಳಿಕೆಯ ಪ್ರಗತಿಯನ್ನು ವೇಗಗೊಳಿಸುತ್ತದೆ. ಜೊತೆಗೆ ಆರೋಗ್ಯಕರ ತೂಕ ಇಳಿಕೆಯಲ್ಲಿ ವ್ಯಾಯಾಮವು ಮಹತ್ತರ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ