Weight Loss: 27 ಕೆಜಿ ತೂಕ ಇಳಿಸಿಕೊಂಡ ಖ್ಯಾತ ನಿರೂಪಕ ರಾಕಿ ಸಿಂಗ್‌; ಅಬ್ಬಾ! ಎಂದು ಆಶ್ಚರ್ಯ ಪಟ್ಟ ನೆಟ್ಟಿಗರು-rakhi singh try to lose his weight he shared a post in x here is the picture smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: 27 ಕೆಜಿ ತೂಕ ಇಳಿಸಿಕೊಂಡ ಖ್ಯಾತ ನಿರೂಪಕ ರಾಕಿ ಸಿಂಗ್‌; ಅಬ್ಬಾ! ಎಂದು ಆಶ್ಚರ್ಯ ಪಟ್ಟ ನೆಟ್ಟಿಗರು

Weight Loss: 27 ಕೆಜಿ ತೂಕ ಇಳಿಸಿಕೊಂಡ ಖ್ಯಾತ ನಿರೂಪಕ ರಾಕಿ ಸಿಂಗ್‌; ಅಬ್ಬಾ! ಎಂದು ಆಶ್ಚರ್ಯ ಪಟ್ಟ ನೆಟ್ಟಿಗರು

Rakhi Singh: ರಾಕಿ ಸಿಂಗ್ ತಮ್ಮ ತೂಕ ಇಳಿಸುವ ಪ್ರಕ್ರಿಯೆಯ ಫೋಟೋ ಶೇರ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ಧಾರೆ. 'ಹೈವೇ ಆನ್ ಮೈ ಪ್ಲೇಟ್' ಹೋಸ್ಟ್‌ ಮಾಡುವಾಗ ತಾನು ಹೇಗಿದ್ದೆ? ಈಗ ಹೇಗಾಗಿದ್ದೇನೆ ಎಂಬುದನ್ನು ಅವರೇ ತಿಳಿಸಿದ್ದಾರೆ ನೋಡಿ. ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಕಿ ಸಿಂಗ್ ತಮ್ಮ ತೂಕ ಇಳಿಸುವ ಪಯತ್ನದಲ್ಲಿ ಯಶಸ್ವಿಯಾಗುತ್ತಿರುವ ಫೋಟೋ
ರಾಕಿ ಸಿಂಗ್ ತಮ್ಮ ತೂಕ ಇಳಿಸುವ ಪಯತ್ನದಲ್ಲಿ ಯಶಸ್ವಿಯಾಗುತ್ತಿರುವ ಫೋಟೋ

ರಾಕಿ ಸಿಂಗ್ ತಮ್ಮ ತೂಕ ಇಳಿಸುವ ಪ್ರಕ್ರಿಯೆಯ ಬಗ್ಗೆ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ರಾಕಿ ಸಿಂಗ್ ಅವರು ತಮ್ಮ ಕಡಿಮೆ ಆದ ನಂತರ ತಾನು ಹೇಗೆ ಕಾಣುತ್ತಾ ಇದ್ದೇನೆ ಎನ್ನುವುದನ್ನು ಫೋಟೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇವರ ಫೋಟೋ ನೋಡಿದವರು ಆಶ್ಚರ್ಯಪಡುತ್ತಾ ಇದ್ಧಾರೆ. ಒಂದು ವರ್ಷದ ಅವಧಿಯಲ್ಲಿ 27 ಕೆಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಒಂದು ವರ್ಷದ ಅವಧಿಯಲ್ಲಿ 27 ಕೆಜಿ ತೂಕವನ್ನು ಜರ್ನಿ ಆರಂಭ ಮಾಡಿದ್ದಾರೆ. ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗ 134.9 ಕೆಜಿ ತೂಕವನ್ನು ಅವರು ಹೊಂದಿದ್ದರು.

ರಾಕಿ ಅವರು ತಮ್ಮ ಫಿಟ್‌ನೆಸ್ ಪ್ರಯಾಣದಲ್ಲಿ ಅರ್ಧ ದಾರಿಯಲ್ಲಿದ್ದಾರೆ ಆದರೆ ಇನ್ನೂ 20 ಕೆಜಿ ತೂಕವನ್ನು ಕಳೆದುಕೊಳ್ಳುವ ಭರವಸೆ ಇದೆ ಎಂದು ಹೇಳಿದ್ದಾರೆ. ಈ ಫೋಟೋವನ್ನು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ಧಾರೆ. ಹಲವಾರು ಜನರು ಕಮೆಂಟ್ ಕೂಡ ಮಾಡಿದ್ಧಾರೆ. ಇನ್ನಷ್ಟು ಜನ ಆಶ್ಚರ್ಯಚಕಿತರಾಗಿದ್ದಾರೆ. ಹಲವು ಸ್ಪೂರ್ತಿದಾಯಕ ಕಮೆಂಟ್‌ಗಳು ಕೂಡ ಬಂದಿದೆ.

2007 ಮತ್ತು 2013 ರ ಸಂದರ್ಭದಲ್ಲಿ ತನ್ನ ಸ್ನೇಹಿತ ಮಯೂರ್ ಶರ್ಮಾ ಅವರೊಂದಿಗೆ 'ಹೈವೇ ಆನ್ ಮೈ ಪ್ಲೇಟ್' ಅನ್ನು ಹೋಸ್ಟ್ ಮಾಡುವಾಗ ತಾನು ತೂಕ ಇಳಿಸಿಕೊಳ್ಳಬೇಕು ಎಂದು ನಿರ್ಧರಿಸಿದರಂತೆ. ಇಲ್ಲಿ ಅವರು ಹಂಚಿಕೊಂಡ ಪೋಸ್ಟ್ ಇದೆ ಗಮನಿಸಿ.

ಇಲ್ಲಿದೆ ಅವರ ಪೋಸ್ಟ್‌

“ವಾವ್ ಇದು ಅದ್ಭುತ ರಾಕಿ! ಎಂತಹ ಸ್ಪೂರ್ತಿ,'' ಎಂದು ವಿಮಾನ ತಜ್ಞ ಸಂಜಯ್ ಲಾಜರ್ ರಾಕಿಯನ್ನು ಶ್ಲಾಘಿಸಿದ್ದಾರೆ. ಹಿಂದಿನ ಪೋಸ್ಟ್‌ಗಳಲ್ಲಿ, ರಾಕಿ ಅವರು ತೂಕವನ್ನು ಕಡಿಮೆ ಮಾಡಿಕೊಳ್ಳು ತಾನು ಏನೆಲ್ಲ ಪ್ರಯತ್ನ ಮಾಡುತ್ತಿದ್ದೇನೆ ಎಂಬುದನ್ನು ಹಂಚಿಕೊಂಡಿದ್ದರು. ತರಬೇತಿ ಮತ್ತು ವ್ಯಾಯಾಮದ ಬಗ್ಗೆ ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದರು. ತೂಕ ಇಳಿಕೆ ಮಾಡಿಕೊಳ್ಳುವ ಪ್ರಯತ್ನ ಹಾಗೂ ಸರಿಯಾದ ಮನಸು ಇದ್ದರೆ ಸಾಕು ಯಾರು ಬೇಕಾದರೂ ತೂಕ ಇಳಿಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗುವಂತೆ ಬದಲಾಗಿದ್ದಾರೆ.

ಇನ್ನು ಹಲವಾರು ಸ್ಪೂರ್ತಿದಾಯಕ ಕಮೆಂಟ್‌ಗಳು ಇವರಿಗೆ ಬಂದಿದೆ. ಆದರೂ ಕೆಲಸ ಮತ್ತು ತೂಕ ಇಳಿಕೆ ಪ್ರಯತ್ನ ಇವೆರಡನ್ನೂ ಒಟ್ಟಿಗೆ ನಿಭಾಯಿಸುವುದು ಕಷ್ಟ ಎಂದು ಅವರು ಹೇಳಿದ್ದಾರೆ.

mysore-dasara_Entry_Point