ಒಂದೇ ತಿಂಗಳಲ್ಲಿ ತೂಕ ಕಡಿಮೆಯಾಗ್ಬೇಕಾ, ಈ ವಸ್ತುವನ್ನ ನೀರಿಗೆ ಬೆರೆಸಿ ಪ್ರತಿದಿನ ಕುಡಿಯಿರಿ, ಇದ್ರಿಂದ ಆರೋಗ್ಯವೂ ಸುಧಾರಿಸುತ್ತೆ
Nov 11, 2024 05:52 PM IST
ತೂಕ ಇಳಿಕೆಗೆ ಟಿಪ್ಸ್
- ಇತ್ತೀಚೆಗೆ ತೂಕ ಇಳಿಸಲು ಹಲವರು ಹರಸಾಹಸ ಪಡುತ್ತಿದ್ದಾರೆ. ಜಿಮ್, ಡಯೆಟ್ ಮಾತ್ರವಲ್ಲ ಔಷಧಿಗಳ ಮೊರೆ ಹೋಗುತ್ತಿದ್ದಾರೆ. ಆದರೆ ಇದರಿಂದ ತಾತ್ಕಾಲಿಕವಾಗಿ ತೂಕ ಇಳಿದರೂ ಅಡ್ಡಪರಿಣಾಮಗಳು ಜಾಸ್ತಿ. ನಿಮಗೆ ಒಂದೇ ತಿಂಗಳಲ್ಲಿ ತೂಕ ಕಡಿಮೆ ಆಗಬೇಕು ಅಂತಿದ್ರೆ ಈ ವಸ್ತುವನ್ನು ನೀರಿಗೆ ಹಾಕಿ ಕುಡಿಯುವ ಅಭ್ಯಾಸ ಮಾಡಿ.
ಮಾರ್ಡನ್ ಯುಗದ ಆಹಾರಶೈಲಿ, ಜೀವನಕ್ರಮ ಈ ಎಲ್ಲವೂ ತೂಕ ಹೆಚ್ಚಲು ಕಾರಣವಾಗುತ್ತಿದೆ. ತೂಕ ಹೆಚ್ಚುವುದರಿಂದ ಅಂದ ಕೆಡುವುದು ಮಾತ್ರವಲ್ಲ, ಇಲ್ಲದ ಆರೋಗ್ಯ ಸಮಸ್ಯೆಗಳು ಕೂಡ ಕಾಡಲು ಆರಂಭವಾಗುತ್ತದೆ. ತೂಕ ಇಳಿಸುವುದು ಸವಾಲಾಗಿರುವ ಈ ಹೊತ್ತಿನಲ್ಲಿ ಹಲವರು ತೂಕ ಕಡಿಮೆ ಮಾಡಿಕೊಳ್ಳಲು ವಿವಿಧ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ಕೆಲವರು ಔಷಧಿಗಳನ್ನು ಸೇವಿಸುತ್ತಾರೆ. ಕೆಲವರು ದೇಹಕ್ಕೆ ಒಗ್ಗದ ಡಯೆಟ್ ಕ್ರಮಗಳನ್ನು ಪಾಲಿಸುತ್ತಾರೆ. ಇದರಿಂದ ಅಡ್ಡ ಪರಿಣಾಮಗಳೇ ಜಾಸ್ತಿ. ಆರೋಗ್ಯವನ್ನು ಕಾಪಾಡಿಕೊಂಡು ತೂಕ ಇಳಿಸಬೇಕು ಅಂತಿದ್ದರೆ ಬೆಳಗೆದ್ದು ನೀರಿಗೆ ಈ ವಸ್ತುವನ್ನು ಸೇರಿಸಿ ಕುಡಿಯಬೇಕು. ಅದೇನೆಂದರೆ ಜೀರಿಗೆ.
ಜೀರಿಗೆ ಪ್ರತಿಯೊಂದು ಅಡುಗೆಮನೆಯಲ್ಲಿಯೂ ಸುಲಭವಾಗಿ ದೊರೆಯುವ ಸಾಂಬಾರ ಪದಾರ್ಥವಾಗಿದ್ದು, ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಹೆಚ್ಚಿನ ಲಾಭ ಸಿಗುತ್ತದೆ. ಎಷ್ಟೋ ಜನರು ಟೀ ಅಥವಾ ಕಾಫಿಯ ಬದಲಿಗೆ ಜೀರಿಗೆ ನೀರಿನಿಂದ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಈ ನೀರು ವಿಶೇಷವಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಜೀರಿಗೆ ನೀರನ್ನು ಕುಡಿಯುವುದರಿಂದ ಒಂದು ತಿಂಗಳೊಳಗೆ ತೂಕವನ್ನು ಕಳೆದುಕೊಳ್ಳಬಹುದು. ಇದರೊಂದಿಗೆ, ಇದು ಇನ್ನೂ ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಾಗಾದರೆ ಪ್ರತಿದಿನ ಬೆಳಗ್ಗೆ ಜೀರಿಗೆ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ
ಜೀರಿಗೆ ನೀರಿನ ಪ್ರಯೋಜನಗಳು
- ಜೀರಿಗೆ ನೀರು ನಮ್ಮ ದೇಹದಲ್ಲಿ ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ, ಇದು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ.
- ಜೀರಿಗೆ ನೀರು ಹೊಟ್ಟೆಯುಬ್ಬರ, ಮಲಬದ್ಧತೆ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.
- ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.
- ಜೀರಿಗೆ ನೀರಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ಫ್ರಿ ರಾಡಿಕಲ್ ಕೋಶಗಳಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಆರೋಗ್ಯಕರವಾಗಿಸುತ್ತದೆ.
- ಈ ನೀರನ್ನು ಕುಡಿಯುವುದರಿಂದ ಮೊಡವೆಗಳು, ಕಲೆಗಳು ಮತ್ತು ಇತರ ಚರ್ಮದ ಸಮಸ್ಯೆಗಳು ಕಡಿಮೆಯಾಗುತ್ತದೆ.
- ಜೀರಿಗೆ ನೀರು ಕೂದಲನ್ನು ಬಲಪಡಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಜಿಮ್‌ಗೂ ಹೋಗದೇ ಕಟ್ಟುನಿಟ್ಟಿನ ಡಯೆಟ್ ಕೂಡ ಮಾಡದೇ 20 ಕೆಜಿ ತೂಕ ಇಳಿಸಿಕೊಂಡ ಯುವತಿ; ಹೀಗಿತ್ತು ರಿಧಿ ಶರ್ಮಾರ ವೈಟ್‌ಲಾಸ್ ಪಯಣ
ಜೀರಿಗೆ ನೀರಿನ ಇತರ ಆರೋಗ್ಯ ಪ್ರಯೋಜನಗಳು
- ಜೀರಿಗೆ ನೀರು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ರೋಗಗಳಿಂದ ರಕ್ಷಿಸುತ್ತದೆ.
- ಈ ನೀರು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ದೇಹವನ್ನು ನಿರ್ವಿಷಗೊಳಿಸುತ್ತದೆ.
- ಜೀರಿಗೆ ನೀರು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ.
ಜೀರಿಗೆ ನೀರು ಮಾಡುವುದು ಹೇಗೆ?
ಜೀರಿಗೆ ನೀರು ತಯಾರಿಸುವುದು ತುಂಬಾ ಸುಲಭ. ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆಯನ್ನು ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ಬೇಕಿದ್ದರೆ ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಕೂಡ ಕುಡಿಯಬಹುದು.
ಈ ವಿಷಯಗಳನ್ನು ನೆನಪಿಡಿ!
ಜೀರಿಗೆ ನೀರು ಅನೇಕ ಪ್ರಯೋಜನಗಳನ್ನು ಹೊಂದಿದ್ದರೂ, ಕೆಲವರಿಗೆ ಇದು ಅಲರ್ಜಿಯಾಗಿರಬಹುದು. ಆದ್ದರಿಂದ, ನಿಮಗೆ ಜೀರಿಗೆ ಅಲರ್ಜಿ ಇದ್ದರೆ, ಅದನ್ನು ಸೇವಿಸಬೇಡಿ. ಇದಲ್ಲದೆ, ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು ಜೀರಿಗೆ ನೀರನ್ನು ಕುಡಿಯುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.
(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ನಾವು ಹೇಳಿಕೊಳ್ಳುವುದಿಲ್ಲ. ವಿವರವಾದ ಮತ್ತು ಹೆಚ್ಚಿನ ಮಾಹಿತಿಗಾಗಿ, ಸಂಬಂಧಿತ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಬೇಕು.)
ವಿಭಾಗ