ತೂಕ ಇಳಿತಿಲ್ಲ ಅಂತ ಚಿಂತೆ ಮಾಡ್ಬೇಡಿ, ಊಟಕ್ಕೂ ಮುನ್ನ ಈ ಕೆಲಸ ಮಾಡಿ; ಒಂದೇ ತಿಂಗಳಲ್ಲಿ ಮೂರು ಕೆಜಿ ಕಡಿಮೆ ಆಗ್ತೀರಿ, ಟ್ರೈ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ತೂಕ ಇಳಿತಿಲ್ಲ ಅಂತ ಚಿಂತೆ ಮಾಡ್ಬೇಡಿ, ಊಟಕ್ಕೂ ಮುನ್ನ ಈ ಕೆಲಸ ಮಾಡಿ; ಒಂದೇ ತಿಂಗಳಲ್ಲಿ ಮೂರು ಕೆಜಿ ಕಡಿಮೆ ಆಗ್ತೀರಿ, ಟ್ರೈ ಮಾಡಿ

ತೂಕ ಇಳಿತಿಲ್ಲ ಅಂತ ಚಿಂತೆ ಮಾಡ್ಬೇಡಿ, ಊಟಕ್ಕೂ ಮುನ್ನ ಈ ಕೆಲಸ ಮಾಡಿ; ಒಂದೇ ತಿಂಗಳಲ್ಲಿ ಮೂರು ಕೆಜಿ ಕಡಿಮೆ ಆಗ್ತೀರಿ, ಟ್ರೈ ಮಾಡಿ

ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಬಹುತೇಕರಿಗೆ ಸವಾಲಾಗಿರುವುದು ಸುಳ್ಳಲ್ಲ. ಆದರೆ ಊಟಕ್ಕೂ ಮುನ್ನ ನೀವು ಈ ಕೆಲಸ ಮಾಡಿದ್ರೆ ಖಂಡಿತ ಒಂದೇ ತಿಂಗಳಲ್ಲಿ ಮೂರ್ನ್ಕಾಲು ಕೆಜಿ ಕಡಿಮೆ ಆಗ್ತೀರಿ ಎನ್ನುತ್ತಾರೆ ಪೌಷ್ಟಿಕ ತಜ್ಞರು. ಹಾಗಾದರೆ ಆ ಕೆಲಸ ಯಾವುದು, ತೂಕ ಇಳಿಕೆಯ ಮೇಲೆ ಇದರ ಪರಿಣಾಮ ಹೇಗೆ ಎಂಬ ವಿವರ ಇಲ್ಲಿದೆ.

ತೂಕ ಇಳಿಕೆಯ ತಂತ್ರಗಳು
ತೂಕ ಇಳಿಕೆಯ ತಂತ್ರಗಳು

ಬಹುತೇಕರು ತೂಕ ಇಳಿಸಲು ಹರಸಾಹಸ ಪಡುತ್ತಾರೆ. ಆದರೆ ಎಲ್ಲರಿಗೂ ಉತ್ತಮ ಫಲಿತಾಂಶ ದೊರೆಯುವುದಿಲ್ಲ, ಬಹುತೇಕರು ಎಷ್ಟೇ ಪ್ರಯತ್ನ ಪಟ್ಟರೂ ತೂಕ ಇಳಿಯುವುದಿಲ್ಲ ಎಂದೇ ದೂರುತ್ತಾರೆ. ಆದರೆ ಪೌಷ್ಟಿಕ ತಜ್ಞರಾದ ಅಲನ್ ಅರಾಗೊನ್ ಅವರು ತೂಕ ಇಳಿಕೆಗೆ ಒಂದು ಪರಿಣಾಮಕಾರಿ ಹಾಗೂ ಸುಲಭದ ದಾರಿ ಹೇಳಿದ್ದಾರೆ. ಹೀಗೆ ಮಾಡಿದ್ರೆ ನೀವು ಒಂದೇ ತಿಂಗಳಲ್ಲಿ ಮೂರ್ನ್ಕಾಲು ಕೆಜಿ ತೂಕ ಕಡಿಮೆ ಮಾಡಿಕೊಳ್ಳಬಹುದಂತೆ. ಹಾಗಾದರೆ ಆ ದಾರಿ ಯಾವುದು ಅಂತೀರಾ ಮುಂದಿದೆ ಓದಿ.

ಅಲನ್ ಅವರ ಪ್ರಕಾರ ‘ಊಟಕ್ಕೆ ಮೊದಲು ಎರಡು ಲೋಟ ನೀರು ಕುಡಿಯುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಊಟ ಮಾಡುವ ಮೊದಲು ಎರಡು ಲೋಟ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದಂತಿರುತ್ತದೆ. ಇದರಿಂದ ಊಟ ಹೆಚ್ಚು ಸೇರುವುದಿಲ್ಲ. ಕಡಿಮೆ ತಿನ್ನಲು ನಾನು ಹೀಗೆ ಮಾಡುತ್ತೇನೆ‘ ಎಂದು ಹೇಳಿಕೊಂಡಿದ್ದಾರೆ. ಇದನ್ನು ಅವರು ವಾಟರ್ ಟ್ರಿಕ್ ಎಂದು ಕರೆದುಕೊಂಡಿದ್ದಾರೆ.

'ವಾಟರ್ ಟ್ರಿಕ್' ನಿಜಕ್ಕೂ ವರ್ಕ್ ಆಗುತ್ತಾ?

ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ದೇಹವನ್ನು ತೇವಾಂಶದಿಂದ ಇಡಲು ನೀರು ಕುಡಿಯುವುದು ಅತ್ಯಗತ್ಯ. ಅಲನ್ ಅರಾಗೊನ್ ಅವರ 'ವಾಟರ್ ಟ್ರಿಕ್' ಹಸಿವನ್ನು ನಿಯಂತ್ರಿಸಲು ತುಂಬಾ ಉಪಯುಕ್ತವಾಗಿದೆ. ಇದು ನಮ್ಮ ದೇಹದ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಊಟಕ್ಕೆ ಮುಂಚಿತವಾಗಿ ಎರಡು ಲೋಟ ನೀರು ಕುಡಿಯುವ ಕ್ರಮ ಉತ್ತಮ ಎಂದು ಪೌಷ್ಟಿಕ ತಜ್ಞರು ಸಲಹೆ ನೀಡುತ್ತಾರೆ.

ಅಲನ್ ಹೇಳುವಂತೆ ಹೊಟ್ಟೆ ತುಂಬಿದಂತಿದ್ದರೆ ನಾವು ಕಡಿಮೆ ತಿನ್ನುತ್ತೇವೆ. ಆ ಕಾರಣಕ್ಕೆ ಪ್ರತಿದಿನ ವಾಟರ್‌ ಟ್ರಿಕ್ ಪಾಲಿಸುವುದು ಬಹಳ ಮುಖ್ಯ. ನೀವು ಒಂದು ತಿಂಗಳಲ್ಲಿ ಮೂರು ಕೆಜಿಯಷ್ಟು ತೂಕ ಕಳೆದುಕೊಳ್ಳಲು ಬಯಸಿದರೆ ಪ್ರತಿ ಊಟಕ್ಕೂ ಮೊದಲು ಎರಡು ಲೋಟ ನೀರು ಕುಡಿಯಲು ಪ್ರಯತ್ನಿಸಿ. ನೀರು ಕುಡಿದ ನಂತರ ಕಡಿಮೆ ಆಹಾರ ಸೇವಿಸಿ. ಊಟ ಮಾಡಲು ಹೋಗುವ ಮುನ್ನ ಈ ಕ್ರಮ ಪಾಲಿಸುವುದು ಉತ್ತಮ.

ಊಟಕ್ಕೆ ಮುನ್ನ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ?

ಊಟಕ್ಕೂ ಮುನ್ನ ಈ ರೀತಿ ಸಾಕಷ್ಟು ನೀರು ಕುಡಿಯುವುದು ಆರೋಗ್ಯಕರವೇ ಹೊರತು ಹಾನಿಕಾರಕವಲ್ಲ. ಹೆಚ್ಚು ನೀರು ಕುಡಿಯುವುದರಿಂದ ಜೀರ್ಣಕಾರಿ ಕಿಣ್ವಗಳು ದುರ್ಬಲಗೊಳ್ಳುತ್ತವೆ ಎಂದು ಚಿಂತಿಸಬೇಡಿ. ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಎದುರಾಗುವುದಿಲ್ಲ. ತೂಕ ಇಳಿಸಿಕೊಳ್ಳಲು ‘ವಾಟರ್ ಟ್ರಿಕ್’ ಅನುಸರಿಸುವುದು ಉತ್ತಮ ಎನ್ನುತ್ತಾರೆ ಪೌಷ್ಟಿಕತಜ್ಞರು.

ಊಟಕ್ಕೂ ಮುನ್ನ ನೀರು ಕುಡಿಯುವ ಪ್ರಯೋಜನ

ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗಳ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ ಡಾ.ರಾಕೇಶ್ ಗುಪ್ತಾ ಅವರ ಪ್ರಕಾರ, ಊಟಕ್ಕೆ ಮುಂಚೆ ನೀರು ಕುಡಿಯುವ ಟ್ರಿಕ್ ತೂಕ ನಿರ್ವಹಣೆಯಲ್ಲಿ ಮಾತ್ರವಲ್ಲದೆ ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುವಲ್ಲಿಯೂ ಪರಿಣಾಮಕಾರಿಯಾಗಿದೆ. ಊಟಕ್ಕೂ ಮುನ್ನ ನೀರು ಕುಡಿಯುವುದು ನಿಮಗೆ ಎಲ್ಲ ರೀತಿಯಿಂದಲೂ ಒಳ್ಳೆಯದು. ಇದು ಹೆಚ್ಚಿನ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.

ಊಟಕ್ಕೂ ಮುನ್ನ ನೀರು ಕುಡಿಯುವುದು ನಿಜವಾಗಿಯೂ ತೂಕ ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ ಎಂದು ಹಲವು ಅಧ್ಯಯನಗಳು ದೃಢಪಡಿಸಿವೆ ಎನ್ನುತ್ತಾರೆ ಡಾ.ರಾಕೇಶ್ ಗುಪ್ತಾ. ನೀರಿಗೆ ಕ್ಯಾಲೊರಿ ಇಲ್ಲ. ಆದರೆ ಹೊಟ್ಟೆಯು ಪೂರ್ಣ ಭಾವನೆಯನ್ನು ನೀಡುತ್ತದೆ. ಇದು ಊಟದ ಸಮಯದಲ್ಲಿ ಕಡಿಮೆ ತಿನ್ನುವಂತೆ ಮಾಡುತ್ತದೆ. ಅಧ್ಯಯನವೊಂದರ ಪ್ರಕಾರ ಪ್ರತಿ ಊಟಕ್ಕೂ ಮೊದಲು ಅರ್ಧ ಲೀಟರ್‌ನಷ್ಟು ನೀರು ಕುಡಿದವರು ಮೂರು ತಿಂಗಳೊಳಗೆ ಹೆಚ್ಚು ತೂಕವನ್ನು ಕಳೆದುಕೊಳ್ಳಬಹುದು.

ಅಲ್ಲದೆ, ನೀರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ದೇಹವು ತನ್ನ ನೈಸರ್ಗಿಕ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಆರೋಗ್ಯಕ್ಕೆ ಇದು ಮುಖ್ಯವಾಗಿದೆ. ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಆದರೆ, ಊಟಕ್ಕೂ ಮುನ್ನ ನೀರು ಕುಡಿಯುವುದೊಂದೇ ತೂಕ ಇಳಿಕೆಗೆ ಪರಿಹಾರ ಎಂದು ಭಾವಿಸಬೇಡಿ. ಆರೋಗ್ಯಕರ ಆಹಾರ ಪದ್ಧತಿಯೊಂದಿಗೆ ನಿಯಮಿತ ವ್ಯಾಯಾಮ ಅತ್ಯಗತ್ಯ ಎಂಬುದು ನೆನಪಿರಲಿ.

Whats_app_banner