logo
ಕನ್ನಡ ಸುದ್ದಿ  /  ಜೀವನಶೈಲಿ  /  ಶಿಶುಗಳು ದಣಿದಾಗ ಯಾಕೆ ತಮ್ಮ ಕಣ್ಣುಗಳನ್ನು ಉಜ್ಜಿಕೊಳ್ಳುತ್ತವೆ? ಇಲ್ಲಿದೆ ಇಂಟರೆಸ್ಟಿಂಗ್‌ ವಿಚಾರ

ಶಿಶುಗಳು ದಣಿದಾಗ ಯಾಕೆ ತಮ್ಮ ಕಣ್ಣುಗಳನ್ನು ಉಜ್ಜಿಕೊಳ್ಳುತ್ತವೆ? ಇಲ್ಲಿದೆ ಇಂಟರೆಸ್ಟಿಂಗ್‌ ವಿಚಾರ

Suma Gaonkar HT Kannada

Aug 09, 2024 03:43 PM IST

google News

ಶಿಶು

    • ತನ್ನ ಕಣ್ಣುಗಳನ್ನು ಏಕೆ ಉಜ್ಜಿಕೊಳ್ಳುತ್ತಿದ್ದೇನೆ ಎಂಬುದನ್ನು ಅಳುವ ಮಗು ನಮಗೆ ವಿವರಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಈ ವಿಷಯದ ಮೇಲೆ ಸಹಜವಾಗಿ ಕುತೂಹಲ ಮೂಡುತ್ತದೆ. ಈ ಕುತೂಹಲಕ್ಕೆ ಉತ್ತರ ಇಲ್ಲಿದೆ ಗಮನಿಸಿ. 
ಶಿಶು
ಶಿಶು (Meta AI)

ಇದೇ ಮೊದಲ ಬಾರಿ ತಾಯಿ ಆದವರಿಗೆ ತಮ್ಮ ಮಕ್ಕಳ ಬಗ್ಗೆ ಹಾಗೂ ಅವರ ಸಣ್ಣ ಪುಟ್ಟ ಚಲನ ವಲನದ ಬಗ್ಗೆಯೂ ಕಾಳಜಿ ಇರುತ್ತದೆ. ಅಷ್ಟೇ ಅಲ್ಲ ತನ್ನ ಮಗು ಯಾಕೆ ಹೀಗೆ ಮಾಡ್ತಾ ಇದೆ ಎಂದು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಇನ್ನು ಹಲವಾರು ಬಾರಿ ಏನಾಯ್ತು ಎಂದು ಗಾಬರಿ ಆಗುವುದೂ ಇದೆ. ತನ್ನ ಕಣ್ಣುಗಳನ್ನು ಏಕೆ ಉಜ್ಜಿಕೊಳ್ಳುತ್ತಿದ್ದೇನೆ ಎಂಬುದನ್ನು ಅಳುವ ಮಗು ನಮಗೆ ವಿವರಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಈ ವಿಷಯದ ಮೇಲೆ ಸಹಜವಾಗಿ ಕುತೂಹಲ ಮೂಡುತ್ತದೆ.

ಅಧ್ಯಯನ ಏನು ಹೇಳುತ್ತದೆ?

UCLA ಡೇವಿಡ್ ಗೆಫೆನ್ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ ಸಾಮಾನ್ಯ ಮಕ್ಕಳ ವೈದ್ಯಶಾಸ್ತ್ರದ ಸಹ ಪ್ರಾಧ್ಯಾಪಕ ಡಾ ರೆಬೆಕಾ ಡುಡೋವಿಟ್ಜ್ ಈ ಬಗ್ಗೆ ಸಂಶೋಧನೆಯನ್ನು ನಡೆಸಿ ಅವುಗಳ ಬಗ್ಗೆ ಅಧ್ಯಯನ ಮಾಡುತ್ತಾರೆ. ಆಗ ಅವರಿಗೆ ತಿಳಿದು ಬಂದ ಅಂಶವೆಂದರೆ ಮಗುವಿನ ಕಣ್ಣಿನ ಸ್ನಾಯುಗಳು ಸೋತಾಗ ಅವು ಈ ರೀತಿ ಮಾಡುತ್ತವೆ ಎಂಬುದಾಗಿ. ಈ ಅಂಶವನ್ನು ಅವರು ಲೈವ್‌ ಸೈನ್ಸ್‌ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೇವಲ ಮಕ್ಕಳು ಮಾತ್ರ ಈ ರೀತಿ ಮಾಡುವುದಿಲ್ಲ. ಎಲ್ಲ ಜೀವಿಗಳಿಗೂ ಇದೇ ರೀತಿ ಆಗುತ್ತದೆ. ಮಕ್ಕಳು ನಿದ್ದೆ ಬಂದ ತಕ್ಷಣ ಅಥವಾ ಅವರಿಗೆ ದಣಿವಾದಾಗ ಈ ರೀತಿ ಮಾಡುತ್ತಾರೆ. ಕಣ್ಣಿನ ಸ್ನಾಯುಗಳಿಂದ ಉಂಟಾಗುವ ಅಸ್ವಸ್ಥತೆಯ ಪರಿಣಾಮದಿಂದ ಕಣ್ಣುಜ್ಜಿಕೊಳ್ಳುತ್ತವೆ.

ಕಣ್ಣಿನ ದಣಿವು ಇದಕ್ಕೆ ಕಾರಣ

ಇದು ಕೇವಲ ಶಿಶುಗಳಿಗೆ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಅಂದರೆ ಕಚೇರಿಯಲ್ಲಿ ಕೆಲಸ ಮಾಡುವ ಅಥವಾ ನೋಡಿದ್ದನ್ನೇ ನೋಡುತ್ತಾ ಇರುವ ಯಾವ ಕೆಲಸವೇ ಆದರೂ ಕಣ್ಣಿನ ಸ್ನಾಯುಗಳಿಗೆ ತೊಂದರೆ ಆಗುತ್ತದೆ. ಕಣ್ಣಿಗೆ ಆಯಾಸವಾಗುತ್ತದೆ. ನಿಮಗೆ ಹತ್ತು ನೋವು ಬಂದ ರೀತಿಯಲ್ಲೇ ಇದು ಕೂಡ. ಟೇಲರ್‌, ಕುಸುರಿ ಮಾಡುವವರು, ಬಟ್ಟೆ ಹೊಲಿಯುವವರು ಮತ್ತು ಇನ್ನಿತರ ಹಲವು ಜನರಿಗೆ ಕಣ್ಣಿನ ಸ್ನಾಯುಗಳ ದುರ್ಬಲತೆ ಉಂಟಾಗುವುದು ಹೆಚ್ಚು.

ನೀವು ಇಡೀ ದಿನ ಮೇಜಿನ ಬಳಿ ಕುಳಿತಿರುವಾಗ ಮತ್ತು ನಿಮ್ಮ ಭುಜಗಳು ಒತ್ತಡವನ್ನು ಅನುಭವಿಸಿದಾಗ, ನಿಮ್ಮ ಕಣ್ಣುಗಳನ್ನು ಉಜ್ಜುವುದು ನಿಮಗೆ ಒಂದು ರೀತಿಯ ಆರಾಮದಾಯಕ ಅನುಭವವನ್ನು ನೀಡುತ್ತದೆ ಅಲ್ಲವೇ? ಇದು ನೈಸರ್ಗಿಕವಾದ ಸ್ವಭಾವ. ನಿಮ್ಮ ಕಣ್ಣುಗಳು ಯಾವಾಗ ಸೋಲುತ್ತವೆಯೋ ಆಗ ನೀವು ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳುತ್ತೀರಿ. ಕಣ್ಣನ್ನು ಉಚ್ಚಿ ಕೊಂಡಾಗ ಸ್ನಾಯುಗಳು ರಿಲ್ಯಾಕ್ಸ್ ಆಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ