logo
ಕನ್ನಡ ಸುದ್ದಿ  /  ಜೀವನಶೈಲಿ  /  Smoking And Health Disease : ಧೂಮಪಾನಿ ಅಲ್ದಿದ್ರೂ Heart Attack ಆಗುವುದೇಕೆ?

Smoking and Health Disease : ಧೂಮಪಾನಿ ಅಲ್ದಿದ್ರೂ heart attack ಆಗುವುದೇಕೆ?

HT Kannada Desk HT Kannada

Aug 24, 2022 10:43 AM IST

google News

ವಾಯುಮಾಲಿನ್ಯ (ಸಾಂದರ್ಭಿಕ ಚಿತ್ರ) (Photo by Sunil Ghosh / Hindustan Times)

    • ಧೂಮಪಾನ ಮಾಡಲ್ಲ. ಚೆನ್ನಾಗೇ ಇದ್ದರು. ಆರೋಗ್ಯವೂ ಚೆನ್ನಾಗೇ ಇತ್ತು. ಆದರೂ ಅವರಿಗೇಕೆ ಹೃದಯಾಘಾತವಾಯಿತು? (Why do non-smokers get heart attacks?). ಅನೇಕ ಸಂದರ್ಭಗಳಲ್ಲಿ ಹೀಗಾಗವುದಿದೆ. ಈ ಪ್ರಶ್ನೆಗಳು ಸಹಜವಾಗಿಯೇ ಕಾಡಿದ್ದಿದೆ. ಸಂಶೋಧಕರು ಇದಕ್ಕೆ ಉತ್ತರ ಕಂಡುಕೊಂಡು, ಅಧ್ಯಯನ ವರದಿಯಲ್ಲಿ ಅದನ್ನು ಪ್ರಕಟಿಸಿದ್ದಾರೆ ಕೂಡ.  ಆ ವರದಿಯ ವಿವರ ಇಲ್ಲಿದೆ. 
ವಾಯುಮಾಲಿನ್ಯ (ಸಾಂದರ್ಭಿಕ ಚಿತ್ರ) (Photo by Sunil Ghosh / Hindustan Times)
ವಾಯುಮಾಲಿನ್ಯ (ಸಾಂದರ್ಭಿಕ ಚಿತ್ರ) (Photo by Sunil Ghosh / Hindustan Times) (Hindustan Times)

ಹೃದಯಾಘಾತ ಎಂಬುದು ಇತ್ತೀಚೆಗೆ ಪದೇಪದೆ ಕೇಳುವ ಪದ. ಬಹುತೇಕ ಹಠಾತ್‌ ಹೃದಯಾಘಾತ ಪ್ರಾಣಕ್ಕೇ ಸಂಚಕಾರ ತಂದೊಡ್ಡುವಂಥದ್ದು. ಮಧ್ಯವಯಸ್ಸಿನವರು ಅನೇಕರು ಇದಕ್ಕೆ ಬಲಿಯಾಗಿದ್ದಾರೆ. ಆಗುತ್ತಲೇ ಇದ್ದಾರೆ. ಎಲ್ಲವನ್ನೂ ಗಮನಿಸುತ್ತಿದ್ದರೆ, ಅನೇಕರಿಗೆ ಧೂಮಪಾನ, ಮದ್ಯಪಾನ ಮುಂತಾದ ಯಾವುದೇ ಕೆಟ್ಟ ಅಭ್ಯಾಸಗಳು ಇಲ್ಲದಿರುವುದು ಗಮನಸೆಳೆದಿದೆ. ಧೂಮಪಾನಿಗಳು ಅಲ್ಲದೇ ಹೋದರೂ ಹೃದಯಾಘಾತ ಯಾಕಾಗುತ್ತದೆ (Why do non-smokers get heart attacks?) ಎಂಬ ಸಂದೇಹ ಕಾಡಿದೆ, ಕಾಡುತ್ತಲೇ ಇದೆ.

ಧೂಮಪಾನ ಮಾಡದವರಿಗೆ ಹೃದಯಾಘಾತ ಏಕೆ? ವಾಯುಮಾಲಿನ್ಯಕ್ಕೂ ಧೂಮಪಾನ ಮಾಡದವರ ಹೃದಯಾಘಾತಕ್ಕೂ ಸಂಬಂಧವಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಹೊಸ ಅಧ್ಯಯನದಲ್ಲಿ ಉತ್ತರ ಸಿಕ್ಕಿದೆ. ಈಗಾಗಲೇ ಹೊಗೆಯನ್ನೇ ಉಸಿರಾಡುವ ನಿಯತ ಧೂಮಪಾನಿಗಳ ಮೇಲೆ ವಾಯು ಮಾಲಿನ್ಯ ಏನೂ ಪರಿಣಾಮ ಬೀರುವುದಿಲ್ಲ. ಅವರು ಕಲುಷಿತ ಗಾಳಿ ಉಸಿರಾಡಿದರೂ ತೊಂದರೆ ಆಗುವುದಿಲ್ಲ ಎಂದು ಅಧ್ಯಯನವು ಹೇಳುತ್ತದೆ. ಇದೇ ವೇಳೆ, ವಾಯು ಮಾಲಿನ್ಯ ಮತ್ತು ಹೃದಯಾಘಾತದ ನಡುವೆ ಸಾಂದರ್ಭಿಕ ಸಂಬಂಧ ಇದೆ ಎಂಬುದು ಅಧ್ಯಯನ ವರದಿಯಿಂದ ಬಹಿರಂಗವಾಗಿದೆ.

ಜರ್ಮನಿಯ ಬರ್ಲಿನ್ ಬ್ರಾಂಡೆನ್‌ಬರ್ಗ್ ಮಯೋಕಾರ್ಡಿಯಲ್ ಇನ್‌ಫಾರ್ಕ್ಷನ್ ರಿಜಿಸ್ಟ್ರಿ (B2HIR) ನ ಅಧ್ಯಯನ ಲೇಖಕ ಡಾ ಇನ್ಸಾ ಡಿ ಬುಹ್ರ್-ಸ್ಟಾಕ್‌ಬರ್ಗರ್ ಕೂಡ ಇದನ್ನು ದೃಢಪಡಿಸಿದ್ದಾರೆ.

ವಾಯು ಮಾಲಿನ್ಯ ಮತ್ತು ಹೃದಯಾಘಾತಗಳ ನಡುವಿನ ಪರಸ್ಪರ ಸಂಬಂಧವು ಧೂಮಪಾನಿಗಳಲ್ಲಿ ಇಲ್ಲ ಎಂಬ ಅಂಶವನ್ನು ನಮ್ಮ ಅಧ್ಯಯನ ತಿಳಿಸಿಕೊಟ್ಟಿದೆ. ಕೆಟ್ಟ ಗಾಳಿ ಅಥವಾ ವಾಯುಮಾಲಿನ್ಯವು ಧೂಮಪಾನಿಗಳಲ್ಲದೇ ಇದ್ದವರಲ್ಲಿ ಹೃದಯಾಘಾತವನ್ನು ಉಂಟುಮಾಡಬಹುದು. ನಿಯತ ಧೂಮಪಾನಿಗಳು ವಾಯು ಮಾಲಿನ್ಯಕಾರಕಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಅವರ ಆರೋಗ್ಯದ ಮೇಲೆ ಬಾಹ್ಯ ಮಾಲಿನ್ಯಕಾರಕಗಳ ಪರಿಣಾಮ ಕಡಿಮೆ ಎಂದು ಡಾ ಇನ್ಸಾ ಡಿ ಬುಹ್ರ್-ಸ್ಟಾಕ್‌ಬರ್ಗರ್ ಹೇಳಿದ್ದಾರೆ.

ನೈಟ್ರಿಕ್ ಆಕ್ಸೈಡ್, 10 um (PM10) ಗಿಂತ ಕಡಿಮೆ ವ್ಯಾಸವನ್ನು ಹೊಂದಿರುವ ಕಣಗಳ ಸಂಯೋಜನೆ ಮತ್ತು ಬರ್ಲಿನ್‌ನಲ್ಲಿ ಹೃದಯ ಸ್ನಾಯುವಿನ ಊತದಿಂದ ಸಾವು ಸಂಭವಿಸುವ ವಾತಾವರಣದ ಸಂಶೋಧನೆಯನ್ನು ಈ ಅಧ್ಯಯನವು ಮಾಡಿದೆ. ನೈಟ್ರಿಕ್ ಆಕ್ಸೈಡ್ ಹೆಚ್ಚಿನ ತಾಪಮಾನದಲ್ಲಿ ದಹನದಿಂದ ಉಂಟಾಗುತ್ತದೆ. ವಿಶೇಷವಾಗಿ ಡೀಸೆಲ್ ವಾಹನಗಳಿಂದ. ಬ್ರೇಕ್‌ಗಳು ಮತ್ತು ಟೈರ್‌ಗಳು ಮತ್ತು ಧೂಳಿನ ಸವೆತದ ಜತೆಗೆ ದಹನವು PM10 ನ ಮೂಲವಾಗಿದೆ.

ಅಧ್ಯಯನ ವರದಿಗೆ ಮೂಲ

ಸಂಶೋಧನೆಯು B2HIR ನಲ್ಲಿ ದಾಖಲಾಗಿರುವ 2008 ಮತ್ತು 2014 ರ ನಡುವೆ ಮಧುಮೇಹ ಮತ್ತು ಹೃದಯ ಸ್ನಾಯುವಿನ ಊತದಿಂದ ಮೃತಪಟ್ಟ 17,873 ರೋಗಿಗಳ ಆರೋಗ್ಯ ವಿವರಗಳನ್ನು ಕೂಡ ಪರೀಕ್ಷಿಸಿದೆ. ನಗರದಾದ್ಯಂತ ದೈನಂದಿನ PM10 ಮತ್ತು ನೈಟ್ರಿಕ್ ಆಕ್ಸೈಡ್ ಸಾಂದ್ರತೆಯನ್ನು ಬರ್ಲಿನ್‌ನ ಸೆನೆಟ್‌ನಿಂದ ಪಡೆಯಲಾಗಿದೆ. ಸನ್‌ಶೈನ್ ಅವಧಿ, ಕನಿಷ್ಠ ಮತ್ತು ಗರಿಷ್ಠ ತಾಪಮಾನ ಮತ್ತು ಮಳೆಯ ಮಾಹಿತಿಯನ್ನು ಬರ್ಲಿನ್ ಟೆಂಪೆಲ್‌ಹಾಫ್ ಹವಾಮಾನ ಕೇಂದ್ರದಿಂದ ಪಡೆಯಲಾಗಿದೆ. ಮಯೋಕಾರ್ಡಿಯಲ್ ಇನ್‌ಫಾರ್ಕ್ಷನ್ ಘಟನೆಗಳು ಮತ್ತು ವಾಯು ಮಾಲಿನ್ಯದ ಡೇಟಾದೊಂದಿಗೆ ವಿಲೀನಗೊಳಿಸಲಾಗಿದೆ. ಅದೇ ದಿನ, ಹಿಂದಿನ ದಿನ ಮತ್ತು ಎಲ್ಲಾ ರೋಗಿಗಳಲ್ಲಿ ಹಿಂದಿನ ಮೂರು ದಿನಗಳ ಸರಾಸರಿಯಲ್ಲಿ ಹೃದಯಾಘಾತ ಮತ್ತು ಸರಾಸರಿ ಮಾಲಿನ್ಯಕಾರಕ ಸಾಂದ್ರತೆಗಳ ನಡುವಿನ ಸಂಪರ್ಕವನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. ಹೃದಯಾಘಾತದ ಸಂಭವ ಮತ್ತು ಹವಾಮಾನ ನಿಯತಾಂಕಗಳ ನಡುವಿನ ಸಂಬಂಧವನ್ನು ಸಹ ವಿಶ್ಲೇಷಿಸಲಾಗಿದೆ.

ಅಧ್ಯಯನದಲ್ಲಿ ದೃಢಪಟ್ಟ ಅಂಶಗಳಿವು

1. ಹೆಚ್ಚಿನ ನೈಟ್ರಿಕ್ ಆಕ್ಸೈಡ್ ಸಾಂದ್ರತೆಯಿರುವ ದಿನಗಳಲ್ಲಿ ಮಾಲಿನ್ಯದಿಂದಾಗುವ ಹೃದಯಾಘಾತಗಳು ಹೆಚ್ಚು. ಇದು ಸಾಮಾನ್ಯ ವಿದ್ಯಮಾನವಾಗಿದೆ.

2. ಹಿಂದಿನ ಮೂರು ದಿನಗಳಲ್ಲಿ ಹೆಚ್ಚಿನ ಸರಾಸರಿ PM10 ಸಾಂದ್ರತೆಯು ಇದ್ದಾಗ ಹೃದಯಾಘಾತಗಳು ಹೆಚ್ಚು ಸಾಮಾನ್ಯವಾಗಿರುವುದು ದೃಢಪಟ್ಟಿದೆ.

3. ಧೂಮಪಾನಿಗಳಲ್ಲಿ ಹೃದಯಾಘಾತದ ಸಂಭವವು ನೈಟ್ರಿಕ್ ಆಕ್ಸೈಡ್ ಮತ್ತು PM10 ಸಾಂದ್ರತೆಗಳಿಂದ ಪ್ರಭಾವಿತವಾಗಿಲ್ಲ.

4. ಹೃದಯಾಘಾತಗಳು ಗರಿಷ್ಠ ತಾಪಮಾನಕ್ಕೆ ಗಮನಾರ್ಹವೆಂಬಂತೆ ಸಂಬಂಧಿಸಿವೆ.

ಅಧ್ಯಯನದ ಒಟ್ಟು ಸಾರ

ಕೊಳಕು ಗಾಳಿಯು ತೀವ್ರವಾದ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (ಹೃದಯಾಘಾತ) ಗೆ ಅಪಾಯಕಾರಿ ಅಂಶ. ಸಂಚಾರ ಮತ್ತು ದಹನದಿಂದ ಆಗುವ ಮಾಲಿನ್ಯವನ್ನು ಕಡಿಮೆ ಮಾಡಲು ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ. ಒಂದು ವೀಕ್ಷಣಾ ಅಧ್ಯಯನದಿಂದ ಕಾರಣವನ್ನು ದೃಢೀಕರಸಲಾಗದು. ನೈಟ್ರಿಕ್ ಆಕ್ಸೈಡ್ ಮತ್ತು PM10 ಉರಿಯೂತವನ್ನು ಉತ್ತೇಜಿಸುತ್ತದೆ. ಅಪಧಮನಿ ಕಾಠಿಣ್ಯವು ಭಾಗಶಃ ಉರಿಯೂತದ ಪ್ರಕ್ರಿಯೆಗಳಿಂದ ಉಂಟಾಗುತ್ತದೆ. ವಾಯುಮಾಲಿನ್ಯದ ಪ್ರಭಾವ ಧೂಮಪಾನಿಗಳ ಮೇಲೆ ಆಗಿರುವುದು ಕಂಡುಬಂದಿಲ್ಲ. ಆದಾಗ್ಯೂ, ಧೂಮಪಾನಿಗಳಲ್ಲದೇ ಇದ್ದವರಲ್ಲಿ ಹೃದಯಾಘಾತಕ್ಕೆ ವಾಯುಮಾಲಿನ್ಯ ಕಾಋಣ ಎಂದು ಸಾಂದರ್ಭಿಕ ಕಾರಣವಾಗಿ ಇಲ್ಲಿ ಗುರುತಿಸುವುದು ಸಾಧ್ಯವಿದೆ ಎಂದು ಡಾ ಇನ್ಸಾ ಡಿ ಬುಹ್ರ್-ಸ್ಟಾಕ್‌ಬರ್ಗರ್ ಪ್ರತಿಪಾದಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ