logo
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಎಂದಾದರೂ ಮಸಾಲೆ ಚಹಾ ಸೇವಿಸಿದ್ದೀರಾ; ಚಳಿಗಾಲದಲ್ಲಿ ಚಿಲ್ಲಿ ಟೀ ಕುಡಿಯುವುದರ ಆರೋಗ್ಯ ಪ್ರಯೋಜನಗಳು ಹತ್ತಾರು

ನೀವು ಎಂದಾದರೂ ಮಸಾಲೆ ಚಹಾ ಸೇವಿಸಿದ್ದೀರಾ; ಚಳಿಗಾಲದಲ್ಲಿ ಚಿಲ್ಲಿ ಟೀ ಕುಡಿಯುವುದರ ಆರೋಗ್ಯ ಪ್ರಯೋಜನಗಳು ಹತ್ತಾರು

Priyanka Gowda HT Kannada

Dec 16, 2024 01:54 PM IST

google News

ಚಳಿಗಾಲದಲ್ಲಿ ಚಿಲ್ಲಿ ಟೀ ಅಥವಾ ಮಸಾಲೆ ಚಹಾದ ಆರೋಗ್ಯ ಪ್ರಯೋಜನಗಳು ಹಲವು

  • ದಿನಾ ಚಹಾ ಕುಡಿಯದಿದ್ದರೆ ಏನೋ ಕಳೆದುಕೊಂಡಂತೆ ಕೆಲವರಿಗೆ ಭಾಸವಾಗಬಹುದು. ಸಾಮಾನ್ಯವಾಗಿ ಗ್ರೀನ್ ಚಹಾ, ಹಾಲಿನ ಚಹಾ, ಬ್ಲಾಕ್ ಟೀ, ಶುಂಠಿ ಚಹಾವನ್ನು ಕುಡಿದಿರಬಹುದು. ಆದರೆ, ಎಂದಾದರೂ ಮಸಾಲೆಯುಕ್ತ ಚಹಾ ಅಥವಾ ಚಿಲ್ಲಿ ಟೀ ಸೇವಿಸಿದ್ದೀರಾ. ಚಳಿಗಾಲದಲ್ಲಿ ಇದರ ಆರೋಗ್ಯ ಪ್ರಯೋಜನಗಳು ಹಲವು. ಈ ಬಗ್ಗೆ ಇಲ್ಲಿದೆ ಮಾಹಿತಿ.

ಚಳಿಗಾಲದಲ್ಲಿ ಚಿಲ್ಲಿ ಟೀ ಅಥವಾ ಮಸಾಲೆ ಚಹಾದ ಆರೋಗ್ಯ ಪ್ರಯೋಜನಗಳು ಹಲವು
ಚಳಿಗಾಲದಲ್ಲಿ ಚಿಲ್ಲಿ ಟೀ ಅಥವಾ ಮಸಾಲೆ ಚಹಾದ ಆರೋಗ್ಯ ಪ್ರಯೋಜನಗಳು ಹಲವು (Pexel)

ಚಹಾ ಎಂದಾಕ್ಷಣ ಎಲ್ಲರ ಮನಸ್ಸಿನಲ್ಲಿ ಹಾದುಹೋಗುವುದು ಗ್ರೀನ್ ಟೀ, ಶುಂಠಿ ಚಹಾ, ಹಾಲಿನ ಚಹಾ ಅಥವಾ ಬ್ಲಾಕ್ ಟೀ. ಚಳಿಗಾಲದಲ್ಲಿ ಚಿಲ್ಲಿ ಟೀ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಮಸಾಲೆಯುಕ್ತ ಚಹಾವನ್ನು ಕುಡಿಯುವುದರಿಂದ ಶೀತ ವಾತಾವರಣದಲ್ಲಿ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಈ ಮಸಾಲೆ ಚಹಾವು ದೇಹದ ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಇದಕ್ಕೆ ಮಸಾಲೆಯುಕ್ತ ರುಚಿಯನ್ನು ನೀಡುತ್ತದೆ. ಇದು ನಿಮ್ಮ ದೇಹದ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸುವಲ್ಲೂ ಸಹಕಾರಿಯಾಗಿದೆ. ಈ ಚಹಾವನ್ನು ಸೇವನೆ ಮಾಡುವುದರಿಂದ ದೇಹವನ್ನು ಬೆಚ್ಚಗಾಗಿಸುತ್ತದೆ. ನೀವು ಮಸಾಲೆಯುಕ್ತ ಪಾನೀಯವನ್ನು ಬಯಸಿದರೆ, ಖಂಡಿತವಾಗಿಯೂ ಈ ಚಹಾವನ್ನು ಇಷ್ಟಪಡುತ್ತೀರಿ. ಇದನ್ನು ಮಾಡುವುದು ಹೇಗೆ, ಏನೆಲ್ಲಾ ಪ್ರಯೋಜನಗಳಿವೆ ಎಂಬುದು ಇಲ್ಲಿದೆ.

ಚಿಲ್ಲಿ ಟೀ ಅಥವಾ ಮಸಾಲೆ ಚಹಾ ಮಾಡುವುದು ಹೀಗೆ

ಈ ಮಸಾಲೆಯುಕ್ತ ಚಹಾವನ್ನು ಹಸಿಮೆಣಸಿನಕಾಯಿ ಅಥವಾ ಒಣ ಮೆಣಸಿನಕಾಯಿಯಿಂದ ತಯಾರಿಸಲಾಗುತ್ತದೆ. ಈ ಚಹಾಕ್ಕೆ ದಾಲ್ಚಿನ್ನಿ, ಏಲಕ್ಕಿ ಮತ್ತು ಶುಂಠಿ ಕೂಡ ಸೇರಿಸಲಾಗುತ್ತದೆ. ಇವೆಲ್ಲವನ್ನೂ ಬೆರೆಸಿದರೆ, ರುಚಿಕರವಾದ ಚಿಲ್ಲಿ ಟೀ ಆಗುತ್ತದೆ. ಬಿಸಿನೀರಿನಲ್ಲಿ ಹಸಿಮೆಣಸಿನಕಾಯಿ ಪೇಸ್ಟ್, ದಾಲ್ಚಿನ್ನಿ ಮತ್ತು ಶುಂಠಿ ಪೇಸ್ಟ್ ಸೇರಿಸಿ ಚೆನ್ನಾಗಿ ಕುದಿಸಿ ಸೋಸಿ ಒಂದು ಲೋಟಕ್ಕೆ ಹಾಕಿ. ಅದನ್ನು ಬಿಸಿ ಬಿಸಿಯಾಗಿ ಕುಡಿಯಿರಿ. ಒಂದು ಹಸಿಮೆಣಸಿನಕಾಯಿ ಸೇರಿಸಿದರೆ ಸಾಕಾಗುತ್ತದೆ.

ಮಸಾಲೆ ಚಹಾ/ಚಿಲ್ಲಿ ಟೀ ಆರೋಗ್ಯ ಪ್ರಯೋಜನಗಳು

ನೋವನ್ನು ಕಡಿಮೆ ಮಾಡುತ್ತದೆ: ಕ್ಯಾಪ್ಸೈಸಿನ್ ಎಂಬ ಸಂಯುಕ್ತವು ಮೆಣಸಿನಕಾಯಿಗಳಲ್ಲಿದೆ. ಇದು ನೋವು ನಿವಾರಕ ಗುಣಗಳನ್ನು ಹೊಂದಿದೆ. ಕ್ಯಾಪ್ಸೈಸಿನ್‌ನಲ್ಲಿ ಸಮೃದ್ಧವಾಗಿರುವ ಮೆಣಸಿನಕಾಯಿಯನ್ನು ಸೇವಿಸಿದಾಗ, ಅದು ನೋವನ್ನು ಉಂಟುಮಾಡುವ ಅಂಶಗಳನ್ನು ಕಡಿಮೆ ಮಾಡುತ್ತದೆ. ಸಂಧಿವಾತ ಸೇರಿದಂತೆ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಇದನ್ನು ಸೇವಿಸುವುದು ಉತ್ತಮ. ಇದು ಸ್ನಾಯುವಿನ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

ಜೀರ್ಣಕಾರಿ ಆರೋಗ್ಯ: ಈ ಚಹಾವನ್ನು ಕುಡಿಯುವುದರಿಂದ ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ. ಕ್ಯಾಪ್ಸೈಸಿನ್ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಇದು ನಿಮ್ಮ ಬಾಯಿಯಲ್ಲಿ ಲಾಲಾರಸವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಹಾಗೆಯೇ ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ನಿಮ್ಮ ದೇಹವು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಹೊಟ್ಟೆ ಉಬ್ಬರ, ಅಜೀರ್ಣ, ಮಲಬದ್ಧತೆಯನ್ನು ನಿವಾರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸಹ ಶಮನಗೊಳಿಸುತ್ತದೆ. ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಒಟ್ಟಾರೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಈ ಮಸಾಲೆಯುಕ್ತ ಚಹಾಲನ್ನು ಮಿತವಾಗಿ ಕುಡಿದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

ಕ್ಯಾಪ್ಸೈಸಿನ್ ದೇಹದ ಚಯಾಪಚಯವನ್ನು ಉತ್ತೇಜಿಸುವ ಕ್ಷಾರೀಯ ಸಂಯುಕ್ತವಾಗಿದೆ. ವಿಶ್ರಾಂತಿಯಲ್ಲಿರುವಾಗಲೂ ಕ್ಯಾಲೊರಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಇದು ದೇಹದ ತೂಕವನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳುವಲ್ಲೂ ಇದು ಸಹಕಾರಿ.

ಉರಿಯೂತವನ್ನು ಕಡಿಮೆ ಮಾಡುತ್ತದೆ: ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಧಿವಾತ, ಕರುಳಿನ ಉರಿಯೂತ, ಚರ್ಮದ ಉರಿಯೂತದಂತಹ ಸಮಸ್ಯೆಗಳನ್ನು ಅಭಿವೃದ್ಧಿಪಡಿಸುವುದನ್ನು ತಡೆಯುತ್ತದೆ. ಇದು ದೇಹದಲ್ಲಿನ ನೋವನ್ನು ಕಡಿಮೆ ಮಾಡುತ್ತದೆ. ಉರಿಯೂತವನ್ನು ತಡೆಯುತ್ತದೆ, ಅಂಗಾಂಶ ಪುನರುತ್ಪಾದನೆಯನ್ನು ಸುಧಾರಿಸುತ್ತದೆ.

ಮನಸ್ಥಿತಿಯನ್ನು ಸುಧಾರಿಸುತ್ತದೆ: ಈ ಚಹಾ ಸೇವನೆ ಮಾಡುವುದರಿಂದ ಆಂತರಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ದೇಹದಲ್ಲಿ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ನೈಸರ್ಗಿಕ ನೋವನ್ನು ಕಡಿಮೆ ಮಾಡುತ್ತದೆ ಹಾಗೆಯೇ ಮನಸ್ಥಿತಿಯನ್ನು ಬದಲಾಯಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ. ಭಯ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದು ಒಟ್ಟಾರೆ ದೈಹಿಕ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮವನ್ನು ಸುಧಾರಿಸುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ