logo
ಕನ್ನಡ ಸುದ್ದಿ  /  ಜೀವನಶೈಲಿ  /  ಮುಟ್ಟಿನ ಸಮಯದಲ್ಲಿ ಸ್ತನಗಳಲ್ಲಿ ನೋವು ಬರಲು ಕಾರಣವೇನು, ನಿವಾರಣೆಗೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ

ಮುಟ್ಟಿನ ಸಮಯದಲ್ಲಿ ಸ್ತನಗಳಲ್ಲಿ ನೋವು ಬರಲು ಕಾರಣವೇನು, ನಿವಾರಣೆಗೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ

Reshma HT Kannada

Nov 27, 2024 05:58 PM IST

google News

ಮುಟ್ಟಿನ ಸಮಯದಲ್ಲಿ ಸ್ತನಗಳಲ್ಲಿ ನೋವು ಬರಲು ಕಾರಣವೇನು?

    • ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು ಸಹಜ. ಇದರೊಂದಿಗೆ ಮೂಡ್‌ ಸ್ವಿಂಗ್‌, ಎದೆನೋವಿನಂತಹ ಸಮಸ್ಯೆಗಳೂ ಜೊತೆಯಾಗುತ್ತವೆ. ಆದರೆ ಕೆಲವು ಮಹಿಳೆಯರಿಗೆ ಪೀರಿಯಡ್ಸ್‌ ಸಮಯದಲ್ಲಿ ಸನ್ತದಲ್ಲಿ ನೋವು ಕಾಣಿಸುತ್ತದೆ. ಇದಕ್ಕೆ ಕಾರಣವೇನು ನೋಡಿ.
ಮುಟ್ಟಿನ ಸಮಯದಲ್ಲಿ ಸ್ತನಗಳಲ್ಲಿ ನೋವು ಬರಲು ಕಾರಣವೇನು?
ಮುಟ್ಟಿನ ಸಮಯದಲ್ಲಿ ಸ್ತನಗಳಲ್ಲಿ ನೋವು ಬರಲು ಕಾರಣವೇನು?

ಮುಟ್ಟಿನ ದಿನಗಳು ಎಂದರೆ ಹೆಣ್ಣುಮಕ್ಕಳಿಗೆ ಒಂದು ರೀತಿಯ ಕಿರಿಕಿರಿ. ಆ ದಿನಗಳಲ್ಲಿ ಅವರ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳಾಗುತ್ತವೆ. ಅತಿಯಾದ ಹೊಟ್ಟೆನೋವಿನಿಂದ, ಬೆನ್ನುನೋವು, ಎದೆನೋವು, ಯೋನಿ ಜಾಗದಲ್ಲಿ ನೋವು ಇಂತಹ ಸಮಸ್ಯೆಗಳು ಎದುರಾಗುತ್ತವೆ. ಅತಿಯಾದ ರಕ್ತಸ್ರಾವವು ಆಯಾಸಕ್ಕೂ ಕಾರಣವಾಗುತ್ತದೆ.

ಮುಟ್ಟಿನ ನೋವಿನ ಲಕ್ಷಣಗಳು ಕೆಲವೊಮ್ಮೆ ವಾರಕ್ಕೂ ಮುಂಚೆ ಕಾಣಿಸುತ್ತದೆ. ಮುಟ್ಟಿನ ದಿನಗಳು ಆರಂಭವಾಗುತ್ತಿದ್ದಂತೆ ಸ್ತನಗಳಲ್ಲಿ ನೋವು ಶುರುವಾಗುತ್ತದೆ. ಒಂದು ರೀತಿಯ ವಿಚಿತ್ರ ಹೇಳಿಕೊಳ್ಳಲಾರದ ನೋವನ್ನು ನೀವು ಅನುಭವಿಸಿ ಇರಬಹುದು. ಹಾಗಾದರೆ ಮುಟ್ಟಿನ ಸಮಯದಲ್ಲಿ ಸ್ತನಗಳಲ್ಲಿ ನೋವು ಕಾಣಿಸುವುದೇಕೆ, ಇದಕ್ಕೆ ಕಾರಣಗಳಿವು.

ಸ್ತನಗಳಲ್ಲಿ ನೋವು ಬರಲು ಕಾರಣ 

ಸ್ತನಗಳಲ್ಲಿ ನೋವು ಕಾಣಿಸಲು ಪ್ರಿ ಮೆನ್ಸ್ಟ್ರುವಲ್‌ ಸಿಂಡ್ರೋಮ್ ಕಾರಣವಾಗಿದೆ. ಇದು ಹಾರ್ಮೋನ್ ಬದಲಾವಣೆಯಿಂದ ಕಾಣಿಸಿಕೊಳ್ಳುತ್ತದೆ. ಇದು ಮುಟ್ಟಿನ ಅವಧಿ ಮುಗಿದ ನಂತರವೂ ಹೆಚ್ಚಾಗಿ ಕಾಣಿಸಬಹುದು.

ಮುಟ್ಟಿನ ಸಮಯದಲ್ಲಿ ಈಸ್ಟ್ರೋಜೆನ್ ಹಾಗೂ ಪ್ರೊಜೆಸ್ಟೆರಾನ್ ಹಾರ್ಮೋನ್‌ಗಳ ಪ್ರಮಾಣ ಕಡಿಮೆಯಾಗುತ್ತದೆ. ಈ ಹಾರ್ಮೋನುಗಳು ಮುಟ್ಟಿನ ಚಕ್ರವನ್ನು ನಿಯಂತ್ರಿಸುತ್ತವೆ. ಈ ಸಮಯದಲ್ಲಿ ಅತಿಯಾದ ಸ್ತನದ ನೋವು ಹೊಂದಿದ್ದರೆ ಕೆಲವು ಆಹಾರಗಳ ಸೇವನೆಯನ್ನು ತಪ್ಪಿಸಬೇಕು. ಕೆಫಿನ್ ಹೊಂದಿರುವ ಆಹಾರಗಳು, ಆಲ್ಕೋಹಾಲ್‌ ಹಾಗೂ ಉಪ್ಪಿನಾಂಶ ಹೆಚ್ಚಿರುವ ಆಹಾರಗಳ ಸೇವನೆಯು ನೋವು ಹೆಚ್ಚಲು ಕಾರಣವಾಗ ಕಾರಣವಾಗಬಹುದು. ಹಾಗಾಗಿ ಈ ಆಹಾರಗಳ ಸೇವನೆಗೆ ಕಡಿವಾಣ ಹಾಕಬೇಕು. ಕೊಬ್ಬಿನಾಂಶ ಇರುವ ಆಹಾರಗಳ ಸೇವನೆಯನ್ನೂ ತಪ್ಪಿಸಬೇಕು.

ಸ್ತನದ ನೋವು ತಡೆಯಲು ಹೀಗಿರಲಿ ಆಹಾರ 

ನಿಮ್ಮ ಆಹಾರದಲ್ಲಿ ಕ್ಯಾರೆಟ್, ಆವಕಾಡೊಗಳು, ಬಾಳೆಹಣ್ಣು, ಲೆಟಿಸ್, ಬ್ರೌನ್ ರೈಸ್ ಮತ್ತು ಮಸೂರಬೇಳೆಗಳು ಸಮೃದ್ಧವಾಗಿರಬೇಕು. ಮೆಗ್ನೀಸಿಯಮ್ ಮತ್ತು ವಿಟಮಿನ್ ಇ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ಸ್ತನದ ನೋವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಪ್ರತಿದಿನ ಲಘು ವ್ಯಾಯಾಮ ಮಾಡುವುದರಿಂದ ಸ್ತನ ನೋವು ಉಲ್ಬಣಗೊಳ್ಳುವುದನ್ನು ತಡೆಯಬಹುದು.

ಮುಟ್ಟಿನ ಸಮಯದಲ್ಲಿ ಸ್ತನಗಳಲ್ಲಿ ನೋವನ್ನು ಎಲ್ಲಾ ಹುಡುಗಿಯರು ಅಥವಾ ಮಹಿಳೆಯರು ಅನುಭವಿಸುವುದಿಲ್ಲ. ಕೆಲವರು ಅತಿಯಾದ ನೋವು ಅನುಭವಿಸುತ್ತಾರೆ.

ಮುಟ್ಟಿನ ಸಮಯದಲ್ಲಿ ಉಂಟಾಗುವ ಈ ಸ್ತನ ನೋವನ್ನು ಮಸ್ಟಲ್ಜಿಯಾ ಎಂದು ಕರೆಯಲಾಗುತ್ತದೆ. ಇದು ಋತುಚಕ್ರದ ಸಮಯದಲ್ಲಿ ಹಾರ್ಮೋನಿನ ಏರಿಳಿತಗಳಿಗೆ ಸಂಬಂಧಿಸಿದೆ, ಆದ್ದರಿಂದ ಋತುಚಕ್ರದ ಸಮಯದಲ್ಲಿ ಕಾಣಿಸುವ ಸ್ತನದ ನೋವಿಗೆ ಹಾರ್ಮೋನ್‌ ಕಾರಣ ಎಂದು ಭಾವಿಸಬಹುದು. ಆದರೆ ಮುಟ್ಟಿನ ಅವಧಿ ಮುಗಿದ ನಂತರವೂ ನೋವು ಕಾಣಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಯಾಕೆಂದರೆ ಮಸ್ಟಲ್ಜಿಯಾ ಎನ್ನುವುದು ಕೇವಲ ಮುಟ್ಟಿನ ನೋವನ್ನು ಮಾತ್ರ ಸಂಕೇತಿಸುವುದಿಲ್ಲ. ಆ ಕಾರಣಕ್ಕೆ ಮುಟ್ಟಲ್ಲ ಎಂದಾಗಲೂ ನೋವು ಬಂದರೆ ವೈದ್ಯರ ಬಳಿ ತೆರಳಿ ಸಲಹೆ ಪಡೆಯಿರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ