logo
ಕನ್ನಡ ಸುದ್ದಿ  /  ಜೀವನಶೈಲಿ  /  Music Day: ಒತ್ತಡ, ಆತಂಕ ನಿವಾರಣೆಗೆ ಸಂಗೀತವೇ ಮದ್ದು; ಸಂಗೀತ ಆಲಿಸುವ ಮೂಲಕ ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳಿ

Music Day: ಒತ್ತಡ, ಆತಂಕ ನಿವಾರಣೆಗೆ ಸಂಗೀತವೇ ಮದ್ದು; ಸಂಗೀತ ಆಲಿಸುವ ಮೂಲಕ ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳಿ

Reshma HT Kannada

Jun 21, 2023 10:25 AM IST

google News

ಒತ್ತಡ, ಆತಂಕ ನಿವಾರಣೆಗೆ ಸಂಗೀತವೇ ಮದ್ದು

    • Music Therapy and Mental Health: ಇತ್ತೀಚೆಗೆ ಒತ್ತಡ, ಆತಂಕದಂತಹ ಮಾನಸಿಕ ಸಮಸ್ಯೆಗಳು ಜನರಲ್ಲಿ ಹೆಚ್ಚುತ್ತಿದೆ. ಆದರೆ ಸಂಗೀತಕ್ಕೆ ಕಿವಿಯಾಗುವ ಮೂಲಕ ಇವುಗಳನ್ನು ದೂರ ಮಾಡಬಹುದು. ಸಂಗೀತಕ್ಕೆ ಮಾನಸಿಕ ಆರೋಗ್ಯ ವೃದ್ಧಿಸುವ ಗುಣವಿದೆ. ಇದು ಮನಸ್ಸಿನ ಭಾವನೆಗಳನ್ನು ಹೊರ ಹಾಕಲು ಸಹಕಾರಿ. ಹಾಗಾದರೆ ಮ್ಯೂಸಿಕ್‌ ಥೆರಪಿಯಿಂದಾಗುವ ಅನುಕೂಲಗಳೇನು ನೋಡಿ. 
ಒತ್ತಡ, ಆತಂಕ ನಿವಾರಣೆಗೆ ಸಂಗೀತವೇ ಮದ್ದು
ಒತ್ತಡ, ಆತಂಕ ನಿವಾರಣೆಗೆ ಸಂಗೀತವೇ ಮದ್ದು

ಬಹುಶಃ ಸಂಗೀತದಷ್ಟು ಮನಸ್ಸಿಗೆ ಖುಷಿ ಕೊಡುವುದು ಬೇರೊಂದಿಲ್ಲ ಎನ್ನಬಹುದು. ಸಂಗೀತಕ್ಕೆ ನೋವು, ದುಃಖ, ಆತಂಕ, ಖಿನ್ನತೆಯನ್ನು ಮರೆಸುವ ಶಕ್ತಿ ಇದೆ. ಮಾನಸಿಕ ಆರೋಗ್ಯ ವೃದ್ಧಿಗೆ ಸಂಗೀತವು ಒಂದು ಥೆರಪಿಯಂತೆ ಕೆಲಸ ಮಾಡುತ್ತದೆ ಎಂದರೆ ತಪ್ಪಾಗಕ್ಕಿಲ್ಲ. ಸಂಗೀತಕ್ಕೆ ಎಲ್ಲವನ್ನೂ ಮರೆಸಿ ತನ್ನೊಳಗೆ ಸೆಳೆದುಕೊಳ್ಳುವ ಆಯಸ್ಕಾಂತದಂತಹ ಶಕ್ತಿ ಇದೆ. ಇದು ಮನಸ್ಸಿಗೆ ಚೈತನ್ಯ ನೀಡಿ, ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡ ನಿವಾರಣೆಗೂ ಇದೇ ಮದ್ದು.

ಸಂಗೀತ ಆಲಿಸುವುದರಿಂದಾಗುವ ಉಪಯೋಗಗಳು

ಸಂಗೀತದ ಆಲಾಪಕ್ಕೆ ಕಿವಿಯಾಗುವುದರಿಂದ ಮಾನಸಿಕ ಆರೋಗ್ಯಕ್ಕೆ ಹಲವು ರೀತಿ ಪ್ರಯೋಜನಗಳಿವೆ.

ಮಾನಸಿಕ ವಿಶ್ರಾಂತಿ

ಸಂಗೀತವು ಮಾನಸಿಕ ವಿಶ್ರಾಂತಿ ನೀಡುತ್ತದೆ. ಅಧ್ಯಯನವೊಂದರ ಪ್ರಕಾರ ರಾತ್ರಿ ಮಲಗುವ ಸಮಯದಲ್ಲಿ ಶಾಸ್ತ್ರೀಯ ಸಂಗೀತಕ್ಕೆ ದನಿಯಾಗುವುದರಿಂದ ಗುಣಮಟ್ಟದ ನಿದ್ದೆಯ ಸಾಧ್ಯ. ಅಲ್ಲದೆ ಈ ಚಟುವಟಿಕೆಯು ಖಿನ್ನತೆಯನ್ನೂ ದೂರ ಮಾಡುತ್ತದೆ.

ಮನಸ್ಸಿಗೆ ಆಹ್ಲಾದ ಭಾವ

ಸಂಶೋಧನೆಗಳ ಪ್ರಕಾರ ಸಂಗೀತವು ಮನಸ್ಸಿಗೆ ಆಹ್ಲಾದಭಾವ ಮೂಡುವಂತೆ ಮಾಡುತ್ತದೆ. ಮಾನಸಿಕ ಸಂತೋಷಕ್ಕೂ ಇದು ಕಾರಣವಾಗುತ್ತದೆ. ಖಿನ್ನತೆಯನ್ನು ದೂರ ಮಾಡಲು ಇತರ ಥೆರಪಿಗಳೊಂದಿಗೆ ಮ್ಯೂಸಿಕ್‌ ಥೆರಪಿಯೂ ನೆರವಾಗುತ್ತದೆ.

ಒತ್ತಡ ನಿವಾರಣೆ

ನಿಮ್ಮ ಮನಸ್ಸಿಗೆ ಆತಂಕ ಅಥವಾ ಒತ್ತಡ ಉಂಟಾಗಿದ್ದರೆ ಸಂಗೀತಕ್ಕೆ ಕಿವಿಯಾಗಬೇಕು. ಸಂಗೀತವು ಮನಸ್ಸನ್ನು ಶಾಂತವಾಗಿಸಿ, ಸ್ಥಿರವಾಗಿಸುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾದವರು ಮೆಲೋಡಿ ಸಂಗೀತವನ್ನು ಆಲಿಸುವುದರಿಂದ ರಕ್ತದೊತ್ತಡದ ಪ್ರಮಾಣ ಸ್ಥಿರವಾಗಿರುತ್ತದೆ ಎಂಬುದನ್ನು ಅಧ್ಯಯನಗಳು ಸಾಬೀತು ಪಡಿಸಿವೆ. ಹಿತವಾದ ಸಂಗೀತ ಆಲಿಸುವವರಿಗೆ ಔಷಧಿಗಳ ಪ್ರಮಾಣ ಕಡಿಮೆ ಸಾಕು ಎಂಬುದನ್ನು ಅಧ್ಯಯನಗಳು ತೋರಿಸಿವೆ.

ನೋವನ್ನು ಹೊರ ಹಾಕುವಂತೆ ಮಾಡುತ್ತದೆ

ಸಂಗೀತವನ್ನು ಆಲಿಸುವುದು, ಸಂಗೀತ ರಚನೆ ಅಥವಾ ಮ್ಯೂಸಿಕ್‌ ನೀಡುವುದು ಇದರಿಂದ ನಮ್ಮ ಮನಸ್ಸಿನಾಳದಲ್ಲಿ ಹುದುಗಿರುವ ನೋವುಗಳನ್ನು ಹೊರ ಹಾಕಬಹುದು. ಹೃದಯ ಬಡಿತದಲ್ಲಿನ ವ್ಯತ್ಯಾಸ, ಸ್ನಾಯುಗಳಲ್ಲಿನ ಒತ್ತಡ ಹಾಗೂ ಕಾರಣವಿಲ್ಲದೇ ಅತಿಯಾಗಿ ಅತಿಯಾಗಿ ಬೆವರುವುದು ಇಂತಹ ಅಸಹಜ ಎನ್ನಿಸುವ ಸಂದರ್ಭದಲ್ಲಿ ಸಂಗೀತವು ಸಹಾಯ ಮಾಡಬಲ್ಲದು. ಒತ್ತಡವನ್ನು ಮಾತಿನ ಮೂಲಕ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಸಂಗೀತ ಆಲಿಸುವುದರಿಂದ ಒತ್ತಡ ಹಾಗೂ ಆತಂಕ ತಾನಾಗಿಯೇ ನಿವಾರಣೆಯಾಗುತ್ತದೆ. ಸಂಗೀತವು ದೇಹ ಹಾಗೂ ಮನಸ್ಸಿನಿಂದ ಒತ್ತಡ ಹೊರ ಹೋಗುವಂತೆ ಮಾಡುತ್ತದೆ.

ವರ್ತಮಾನದಲ್ಲಿ ಬದುಕುವಂತೆ ಮಾಡುತ್ತದೆ

ಭೂತ ಹಾಗೂ ಭವಿಷ್ಯಕಾಲದ ಬಗ್ಗೆ ಅತಿಯಾಗಿ ಯೋಚಿಸುವುದು ಒತ್ತಡ ಹಾಗೂ ಆತಂಕಕ್ಕೆ ಕಾರಣವಾಗಬಹುದು. ಇವು ಮನಸ್ಸಿನ ನಿಯಂತ್ರಣ ತಪ್ಪಲು ಕಾರಣವಾಗಬಹುದು. ಆದರೆ ಸಂಗೀತವು ನಮ್ಮನ್ನು ವರ್ತಮಾನದಲ್ಲಿ ಇರುವಂತೆ ಮಾಡುತ್ತದೆ. ಇದರಿಂದ ಮನಸ್ಸಿನ ನಿಯಂತ್ರಣವೂ ಸಾಧ್ಯ.

ಸೃಜನಶೀಲತೆಯನ್ನು ಉತ್ತೇಜಿಸುತ್ತದೆ

ಮನಸ್ಸು ಒತ್ತಡಕ್ಕೆ ಒಳಗಾದಾಗ ನರಮಂಡಲವು ಸೃಜನಾತ್ಮಕ ಮೋಡ್‌ನಿಂದ ಹೊರಗುಳಿಯುತ್ತದೆ. ಅಂತಹ ಸಂದರ್ಭದಲ್ಲಿ ಸಂಗೀತವನ್ನು ಆಲಿಸುವುದರಿಂದ ಸೃಜನಾತ್ಮಕ ಭಾವ ಮೂಡಲು ಸಂಗೀತ ಸಹಾಯ ಮಾಡುತ್ತದೆ. ಸಂಗೀತವು ಮನಸ್ಸಿಗೆ ವಿಶ್ರಾಂತಿ ನೀಡಿ ಸ್ವಷ್ಟ ಹಾಗೂ ಸಜೃನಶೀಲ ಮನೋಭಾವವನ್ನು ಉತ್ತೇಜಿಸುತ್ತದೆ.

ಮಕ್ಕಳಿಗೆ ಮ್ಯೂಸಿಕ್‌ ಥೆರಪಿ ಹೇಗೆ ಸಹಾಯ ಮಾಡಬಲ್ಲದು

* ಇದು ಮಕ್ಕಳಲ್ಲಿ ಗಮನಶಕ್ತಿ ಹೆಚ್ಚಿಸಿ, ಹೊಂದಾಣಿಕೆ ಭಾವವನ್ನು ಬೆಳೆಸಲು ಸಹಾಯ ಮಾಡುತ್ತದೆ.

* ಮನರಂಜನಾ ವಿಧಾನದಲ್ಲಿ ತಮ್ಮ ಯೋಜನೆ ಹಾಗೂ ಭಾವನೆಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ.

* ಮಕ್ಕಳಲ್ಲಿ ಸಾಮಾಜಿಕ ಸಂವಹನ ಹಾಗೂ ಸಂವಹನ ಕೌಶಲವನ್ನು ವೃದ್ಧಿಸುತ್ತದೆ.

* ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಲು ಇದು ಸಹಕಾರಿ.

* ಸ್ವಾಭಿಮಾನ ಮತ್ತು ಸ್ಥಿತಿಸ್ಥಾಪಕತ್ವ ಬೆಳೆಯಲು ಸಹಕಾರಿ.

* ಭಾಷೆ ಹಾಗೂ ಕೇಳಿಸಿಕೊಳ್ಳುವ ಕೌಶಲ ವೃದ್ಧಿಯಾಗುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ