ಏನೇ ತಗೊಂಡ್ರು 10 ರೂಪಾಯಿ ಮಾತ್ರ! ಹಣ ಮುಖ್ಯ ಅಲ್ಲ, ತೃಪ್ತಿ ಮುಖ್ಯ ಅಂತಾರೆ ಶ್ರೀ ಕುಂಟೆ ಬಸವೇಶ್ವರ ಖಾನಾವಳಿ ಮಾಲೀಕ ವಿರುಪಾಕ್ಷಪ್ಪ
Sep 13, 2024 12:40 PM IST
ಶ್ರೀಕುಂಟೆ ಬಸವೇಶ್ವರ ಲಿಂಗಾಯತ ಖಾನಾವಳಿ
- ರೊಕ್ಕ ಇಂಪಾರ್ಟೆಂಟ್ ಅಲ್ಲ, ತೃಪ್ತಿ ಇಂಪಾರ್ಟೆಂಟ್ ಆಹಾ ಎಂಥಾ ಮಾತು. ಈ ಕಾಲದಲ್ಲೂ ಈ ರೀತಿ ಜನ ಇರ್ತಾರಾ ಅಂತ ಅನಿಸುತ್ತೆ. ಆದರೆ ಕೆಲವು ಹೋಟೆಲ್‌ಗಳಲ್ಲಿ ಇನ್ನೂ ಈ ರೀತಿಯ ಶ್ರೀಮಂತಿಕೆ ಉಳಿದುಕೊಂಡಿದೆ. ಈ ಬಗ್ಗೆ ಯಲ್ಲಪ್ಪಾ ಹಂದ್ರಾಳ್ ಅವರು ಹಂಚಿಕೊಂಡ ವಿಚಾರ ಇಲ್ಲಿದೆ ಗಮನಿಸಿ.
3 ಇಡ್ಲಿ ಚಟ್ನಿ,ಸಾರ್, ಸಿರಾ, ಉಪ್ಪಿಟ್ಟು,ರೈಸ್ ಬಾತ್ ಏನೇ ತಗೊಳ್ಳಿ ಕೇವಲ ಹತ್ತು ರೂಪಾಯಿ. ಆಶ್ಚರ್ಯ ಆಯ್ತಾ ಹೌದು ನೀವು ಕೇಳುತ್ತಿರುವುದು ಸರಿ ಇದೆ. ಇಂಥಾ ದುಬಾರಿ ದುನಿಯಾದೊಳಗೆ ಕಮ್ಮಿ ಅನ್ನ ನೀಡಿ ಗಿರಾಕಿಯಂಬ ದೇವರಿಗೆ ವಸೂಲಿಗಿಳಿದಂತೆ ತೋರುವುದನ್ನೇ ನೋಡಿದವರಿಗೆ ಇಲ್ಲೊಂದು ಅಚ್ಚರಿ ಕಾದಿದೆ.
ಲಿಂಗಸುಗೂರು ನಗರದ ಹೊರಭಾಗದ ಎಪಿಎಂಸಿ ಭಾಗದಲ್ಲಿ (ಹೆದ್ದಾರಿಯಲ್ಲಿ) ಇರುವ ಕುಂಟೆ ಬಸವೇಶ್ವರ ಹೊಟೆಲ್ ಹಾಗೂ ಖಾನಾವಳಿ ಎಂಬ ಹೆಸರಿನ ಉಪಹಾರ ಮಂದಿರವಿದೆ. ಇಲ್ಲಿ ಮೂರು ಹೊತ್ತು ಏನರ ಉಪಹಾರ ಮಾಡು ಕೇವಲ ಹತ್ತು ರೂಪಾಯಿ. ಮಧ್ಯಾಹ್ನ ಎಷ್ಟರ ಊಟ(ಹೋಳಿತುಪ್ಪ-ರೊಟ್ಟಿ-ಅನ್ನ-ಸಾರು) ಮಾಡಿ ಎಂಬತ್ತು ರೂಪಾಯಿ. ಕೋವಿಡ್ ಟೈಮಲ್ಲಿ ಸತ್ತೋಗಿದ್ರೆ ಏನ್ ಮಾಡ್ತಿದ್ವಿ. ಉಳಕಂಡೀವಿ. ಏನರ ಒಳ್ಳೇದು ಮಾಡಬೇಕು ಅಷ್ಟೆ. ಉಪಹಾರದ ಖರ್ಚು ವೆಚ್ಚ ಹೆಂಗ್ ಮಾಡ್ತೀರಿ ಎಂದು ಕೇಳಿದರೆ ಮಧ್ಯಾಹ್ನ ಊಟದ ಸಮಯದಲ್ಲಿ ಒಂದಷ್ಟು ಉಳಿಯುತ್ತದೆ.ಅದು ಕವರ್ ಆಗುತ್ತದೆ ಎನ್ನುತ್ತಾರೆ ಮಾಲಿಕ ವಿರುಪಾಕ್ಷಪ್ಪ.
ಕಾಲೇಜು ವಿದ್ಯಾರ್ಥಿಗಳಿಗೆ ಸಹಕಾರಿ
ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಈ ಹೊಟೆಲ್ ತುಂಬಾ ಸಹಕಾರಿಯಾಗಿದೆ. ನೀವೂ ಈ ಭಾಗಕ್ಕೆ ಬಂದರೆ ಮುದಗಲ್ ಭಾಗದಿಂದ ಬಂದರೆ ಆರಂಭದಲ್ಲೇ ಎಡಭಾಗದಲ್ಲಿ ಹಾಗೂ ಲಿಂಗಸೂಗೂರಿನಿಂದ ಬಂದರೆ ಬಲಭಾಗದಲ್ಲಿ ಈ ಹೊಟೆಲ್ ಸಿಗುತ್ತದೆ. ಅನ್ನದಾತ ಸುಖ ಭವ ಆ ದೇವರು ನಿಮಗೆ ನೂರು ವರ್ಷ ಆಯಸ್ಸು ಹಾಕಿ ಕೊಟ್ಟು ಕಾಪಾಡಲಿ ಎಂದು ಜನರು ಕಮೆಂಟ್ ಮಾಡಿದ್ದಾರೆ. ಇವರ ಈ ಮನೋಭಾವವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
ಹೋಟೆಲ್ ಎಲ್ಲಿದೆ?
ಲಿಂಗಸುಗೂರು ನಗರದ ಹೊರಭಾಗದ ಎಪಿಎಂಸಿ ಭಾಗದಲ್ಲಿ (ಹೆದ್ದಾರಿಯಲ್ಲಿ) ಇರುವ ಕುಂಟೆ ಬಸವೇಶ್ವರ ಹೊಟೆಲ್ ಹಾಗೂ ಖಾನಾವಳಿ ಎಂಬ ಹೆಸರಿನಲ್ಲಿ ಇದೆ.
ಇದು ತುಂಬಾ ಬಹುಕಾಲದ ಹೋಟೆಲ್
“ಲಿಂಗಸೂಗುರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಬರುವ ಬಹುತೇಕರು ಇಲ್ಲಿ ಊಟ ಮಾಡದೆ ಹೋಗಲ್ಲ. ಸೋಮುವಾರ ಸ್ಪೆಷಲ್ ಹೋಳಿಗೆ ಊಟ ಇರುತ್ತೆ. ಉತ್ತಮ ಗುಣಮಟ್ಟದ ರುಚಿಕರವಾದ ಊಟ ಕಡಿಮೆ ಬೆಲೆಯಲ್ಲೆ ಸಿಗುತ್ತೆ. ಇದು ಲಿಂಗಸುಗೂರುನಲ್ಲಿ ಉತ್ತಮ ಹೋಟೆಲ್ ಎಂಬ ಹೆಸರು ಪಡೆದಿದೆ” ಎಂದು ವೀರೇಶ. ಎಸ್. ಅಂಗಡಿ ಅವರು ಕಮೆಂಟ್ ಮಾಡಿದ್ಧಾರೆ.
ನಿಜವಾಗಿಯೂ ಒಳ್ಳೆಯ ಕೆಲಸ ಮಾಡತಾ ಇದ್ದಾರೆ
“ಹೆಚ್ಚು ರೇಟ್ ಮಾಡಿ ಉತ್ತಮ ಆಹಾರ ತಯಾರಿಸಿ ಜಾಸ್ತಿ ಲಾಭ ತೆಗೆಯಲು ಹೋದರೇ ಕಡಿಮೆ ಅಥವಾ ೧೦ ಜನ ಬರತಾರೆ. ಅದೇ ಕಡಿಮೆ ಬೆಲೆ ಮಾಡಿ , ಉತ್ತಮ ಆಹಾರ ತಯಾರಿಸಿ ಸಾವಿರಾರು ಮಂದಿ ಸೇವಿಸಿದರೇ ಹೆಚ್ಚು ಲಾಭ ಬರುತ್ತದೆ. ಒಳ್ಳೆಯ ವಿಷಯ” ಎಂದು ಶಶಿಧರ್ ಪಾಟೀಲ್ ತಮ್ಮ ಕಮೆಂಟ್ ಮೂಲಕ ತಿಳಿಸಿದ್ದಾರೆ.
ಯಲ್ಲಪ್ಪಾ ಹಂದ್ರಾಳ್ ಅವರ ಫೇಸ್ಬುಕ್ ಪೋಸ್ಟ್‌ಅನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ವಿಭಾಗ