logo
ಕನ್ನಡ ಸುದ್ದಿ  /  ಕ್ರೀಡೆ  /  Asian Games 2023: ಏಷ್ಯನ್ ಗೇಮ್ಸ್ ಕಬಡ್ಡಿ; ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 63-26 ಅಂತರದ ಗೆಲುವು; ಇತರೆ ಪಂದ್ಯಗಳ ಫಲಿತಾಂಶ ಹೀಗಿದೆ

Asian Games 2023: ಏಷ್ಯನ್ ಗೇಮ್ಸ್ ಕಬಡ್ಡಿ; ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 63-26 ಅಂತರದ ಗೆಲುವು; ಇತರೆ ಪಂದ್ಯಗಳ ಫಲಿತಾಂಶ ಹೀಗಿದೆ

Raghavendra M Y HT Kannada

Oct 04, 2023 08:10 AM IST

google News

ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಥಾಯ್ಲೆಂಡ್ ವಿರುದ್ಧ 63-26 ಅಂತರದ ದೊಡ್ಡ ಗೆಲುವು ಸಾಧಿಸಿದ ಭಾರತ ತಂಡ.

  • ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಥಾಯ್ಲೆಂಡ್ ವಿರುದ್ಧ 63-26 ಅಂತರದ ದೊಡ್ಡ ಗೆಲುವು ಸಾಧಿಸಿದ ಭಾರತ ತಂಡ.

ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಥಾಯ್ಲೆಂಡ್ ವಿರುದ್ಧ 63-26 ಅಂತರದ ದೊಡ್ಡ ಗೆಲುವು ಸಾಧಿಸಿದ ಭಾರತ ತಂಡ.
ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಥಾಯ್ಲೆಂಡ್ ವಿರುದ್ಧ 63-26 ಅಂತರದ ದೊಡ್ಡ ಗೆಲುವು ಸಾಧಿಸಿದ ಭಾರತ ತಂಡ.

ಚೀನಾದ ಕ್ರೀಡಾ ಗ್ರಾಮ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನೇ ಗೇಮ್ಸ್‌ನಲ್ಲಿ ಭಾರತ ಮತ್ತೊಂದು ಪದಕ ಗೆದ್ದಿದೆ. 35 ಕಿಲೋ ಮೀಟರ್ ಓಟದ ನಡಿಗೆ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತ ಕಂಚಿಗೆ ತೃಪ್ತಿಪಟ್ಟುಕೊಂಡಿದೆ. ಭಾರತದ ರಾಮ್ ಬಾಬೂ ಮತ್ತು ಮಂಜು ರಾಣಿ ಅವರು 5:51:14 ಸಂಯೋಜಿತ ಸಮಯದೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ.

ಆರ್ಚರಿಯಲ್ಲಿ ಭಾರತಕ್ಕೆ ಪದಕ ಖಚಿತ

ಇನ್ನ ಇತರೆ ವಿಭಾಗಗಳಲ್ಲಿ ಫಲಿತಾಂಶವನ್ನು ನೋಡುವುದಾದರೆ ಆರ್ಚರಿಯ ಮಿಶ್ರ ಕಾಂಪೌಂಡ್ ಸೆಮಿ ಫೈನಲ್‌ನಲ್ಲಿ ಜ್ಯೋತಿ ಮತ್ತು ಓಜಸ್ ಜೋಡಿ ಕಜಕಿಸ್ತಾನದ ಅಡೆಲ್ ಜೆಕ್ಸೆನ್ಬಿನೊವಾ ಮತ್ತು ಆಂಡ್ರೆ ಟ್ಯುಟ್ಯುನ್ ಜೋಡಿಯನ್ನು 159-154 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ನಾಳೆ ಬೆಳಗ್ಗೆ 8 ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದರೆ ಚಿನ್ನ ಇಲ್ಲವೇ ಬೆಳ್ಳಿ ಎರಡಲ್ಲಿ ಒಂದು ಖಚಿತವಾಗಿ ಸಿಗಲಿದೆ. 2018ರಲ್ಲಿ ನಡೆದಿದ್ದ ಏಷ್ಯಾನ್ ಗೇಮ್ಸ್‌ ಭಾರತ 70 ಪದಕಗಳನ್ನು ಗೆದ್ದುಕೊಂಡಿರುವುದು ಈವರೆಗಿನ ಒಂದೇ ಆವೃತ್ತಿಯ ಗರಿಷ್ಠ ಮೆಡಲ್‌ಗಳ ಸಾಧನೆಯಾಗಿದೆ.

ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ತನ್ನ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 55-18 ಅಂಕಗಳ ಅಂತರದಿಂದ ಮಣಿಸಿದ್ದ ಭಾರತ ಕಬಡ್ಡಿ ತಂಡ ಇಂದು (ಅಕ್ಟೋಬರ್ 4, ಬುಧವಾರ) ಅದ್ಭುತ ಪ್ರದರ್ಶ ನೀಡಿದ್ದು, ಗ್ರೂಪ್‌ ಎ ನಲ್ಲಿ ಥಾಯ್ಲೆಂಡ್ ತಂಡವನ್ನು 63-26 ಅಂಕಗಳ ಮಣಿಸಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ