Virat Kohli-Anushka: ವಿರಾಟ್ ಕೊಹ್ಲಿ ಹೆಸರನ್ನು ತನ್ನ ಮೊಬೈಲ್ನಲ್ಲಿ ಅನುಷ್ಕಾ ಏನೆಂದು ಸೇವ್ ಮಾಡಿದ್ದಾರಂತೆ ಗೊತ್ತಾ; ವಿಡಿಯೋ ವೈರಲ್
Jun 24, 2023 10:01 AM IST
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ
- Virat Kohli-Anushka Sharma: ಬೆಂಗಳೂರಿನಲ್ಲಿ ಪೂಮಾ ಆಯೋಜಿಸಿದ್ದ 'ಲೆಟ್ ದೇರ್ ಬಿ ಸ್ಪೋರ್ಟ್' ಎಂಬ ಕಾರ್ಯಕ್ರಮದಲ್ಲಿ ಅನುಷ್ಕಾ ಶರ್ಮಾ, ತನ್ನ ಮೊಬೈಲ್ನಲ್ಲಿ ವಿರಾಟ್ ಕೊಹ್ಲಿ ಹೆಸರನ್ನು ಏನೆಂದು ಸೇವ್ ಮಾಡಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಜುಲೈ 12ರಿಂದ ಶುರುವಾಗುವ ವೆಸ್ಟ್ ಇಂಡೀಸ್ (West Indies) ಪ್ರವಾಸಕ್ಕೆ ಭಾರತ ತಂಡ (Team India) ಪ್ರಕಟವಾಗಿದೆ. ಏಕದಿನ ಮತ್ತು ಟೆಸ್ಟ್ ಸರಣಿಗೆ (ODI and Test) ತಂಡವು ಘೋಷಣೆಯಾಗಿದೆ. ಕೆಲವು ಹಿರಿಯ ಆಟಗಾರರನ್ನು ತಂಡದಿಂದ ಹೊರಗಿಡಲಾಗಿದೆ. ಹಾಗೆಯೇ ಯುವ ಆಟಗಾರರಿಗೂ ಮಣೆ ಹಾಕಲಾಗಿದೆ. ಈ ಪ್ರವಾಸಕ್ಕೆ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದ್ದ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾಗೆ (Rohit Sharma) ಅವಕಾಶ ನೀಡಲಾಗಿದೆ.
ಫೆಬ್ರವರಿಯಿಂದ ಜೂನ್ 11ರವರೆಗೂ ನಿರಂತವಾಗಿ ಕ್ರಿಕೆಟ್ ಸೇವೆಯಲ್ಲಿ ತೊಡಗಿದ ಟೀಮ್ ಇಂಡಿಯಾ ಆಟಗಾರರು, ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಜುಲೈ 12ರಿಂದ ಕೆರಿಬಿಯನ್ನರ ನಾಡಲ್ಲಿ ಮೂರು ಮಾದರಿಯ ಸರಣಿಗಳಲ್ಲೂ ಬ್ಯುಸಿಯಾಗಲಿದೆ. ಪ್ರಸ್ತುತ ಆಟಗಾರರು, ರಜೆಯ ಮಜಾ ಎಂಜಾಯ್ ಮಾಡುತ್ತಿದ್ದಾರೆ. ಡಬ್ಲ್ಯುಟಿಸಿ ಫೈನಲ್ (WTC Final 2023) ಬಳಿಕವೂ ವಿರಾಟ್ ಕೊಹ್ಲಿ ಈಗ ಲಂಡನ್ನಿಂದ ನೆದರ್ಲೆಂಡ್ಗೆ ಮರಳಿದ್ದಾರೆ.
ನೆದರ್ಲೆಂಡ್ಗೆ ತೆರಳಿದ ಕೊಹ್ಲಿ ದಂಪತಿ
ಪತ್ನಿ ಅನುಷ್ಕಾ ಶರ್ಮಾ (Anushka Sharma) ಜೊತೆ ಲಂಡನ್ನಲ್ಲಿ ಬೀಡು ಬಿಟ್ಟಿದ್ದ ವೇಳೆ ವಿರಾಟ್ ಕೊಹ್ಲಿ, ಭಜನಾ ಕಾರ್ಯಕ್ರಮಕ್ಕೆ ತೆರಳಿದ್ದರು. ಇದೀಗ ನೆದರ್ಲೆಂಡ್ಗೆ ತೆರಳಿದ್ದು, ರಜೆಯ ದಿನಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ವಿಶ್ವಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ಈ ಜೋಡಿಗೆ ಸಂಬಂಧಿಸಿ ಏನೇ ವಿಷಯ ಹೊರ ಬಂದರೂ ಗಾಳಿಯಂತೆ ವೇಗವಾಗಿ ವೈರಲ್ ಆಗುತ್ತದೆ.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಪತ್ನಿ ಹಾಗೂ ಬಾಲಿವುಡ್ ನಟಿಯೂ ಆಗಿರುವ ಅನುಷ್ಕಾ ಶರ್ಮಾ ಅವರಿಗೆ ಸಂಬಂಧಿಸಿದ ಮತ್ತೊಂದು ವಿಷಯ ಈಗ ಭಾರಿ ಸುದ್ದಿಯಲ್ಲಿದೆ. 16ನೇ ಆವೃತ್ತಿಯ ಐಪಿಎಲ್ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಭರ್ಜರಿ ಸುತ್ತಾಟ ನಡೆಸಿದ್ದ ಈ ಜೋಡಿ, ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆಯೊಂದು ಸಖತ್ ಟ್ರೆಂಡ್ ಆಗುತ್ತಿದೆ.
ಬೆಂಗಳೂರಿನಲ್ಲಿ ಪೂಮಾ ಇಂಡಿಯಾ ಆಯೋಜಿಸಿದ್ದ 'ಲೆಟ್ ದೇರ್ ಬಿ ಸ್ಪೋರ್ಟ್' (Let There be Sport) ಎಂಬ ಕಾರ್ಯಕ್ರಮದಲ್ಲಿ ಅನುಷ್ಕಾ ಶರ್ಮಾ, ತನ್ನ ಮೊಬೈಲ್ನಲ್ಲಿ ವಿರಾಟ್ ಕೊಹ್ಲಿ ಹೆಸರನ್ನು ಏನೆಂದು ಸೇವ್ ಮಾಡಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಕೊಹ್ಲಿ ಹೆಸರನ್ನು ಏನೆಂದು ಸೇವ್ ಮಾಡಿಕೊಂಡಿದ್ದೀರಾ ಎಂಬ ಪ್ರಶ್ನೆ, ಅನುಷ್ಕಾಗೆ ಎದುರಾಯಿತು. ಇದಕ್ಕೆ ಅನುಷ್ಕಾ ನಕ್ಕಳು.
ಇದಕ್ಕೆ ನಗುತ್ತಾ ತಮಾಷೆಯಾಗಿ ಉತ್ತರಿಸಿದ ಅನುಷ್ಕಾ, 'ಪತಿ ಪರಮೇಶ್ವರ್' (Pati Parmeshwar) ಎಂದು ಸೇವ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಮಾತು ಮುಂದುವರೆಸಿದ ಓಜಿ ಎಂದು ನಗುತ್ತಾ ಹೇಳಿದರು. ಬಳಿಕ ವಿರಾಟ್ ಕೊಹ್ಲಿಗೂ ಇದೇ ಪ್ರಶ್ನೆ ಎದುರಾಗಿದ್ದು, ಅದಕ್ಕೆ ಉತ್ತರವಾಗಿ 'ಡಾರ್ಲಿಂಗ್'(Darling) ಎಂದು ಸೇವ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ನೆಟ್ಟಿಗರು ಈ ಉತ್ತರಗಳನ್ನು ಕೇಳಿ ಆಶ್ಚರ್ಯಚಕಿತಗೊಂಡಿದ್ದಾರೆ. ಎಷ್ಟು ಮುದ್ದು ಜೋಡಿ ಅಲ್ವಾ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ನಟಿಸಿದ್ದ ತಮ್ಮ 2ನೇ ಚಿತ್ರ 'ಬ್ಯಾಂಡ್ ಬಾಜಾ ಬಾರಾತ್' ಚಿತ್ರದ ಡೈಲಾಗ್ ಹೇಳುವ ಮೂಲಕ ಗಮನ ಸೆಳೆದರು. ಇನ್ನು ಕಿಂಗ್ ಕೊಹ್ಲಿ, ರಣವೀರ್ ಸಿಂಗ್ (Ranveer Singh) ಶೈಲಿಯಲ್ಲಿ ಉತ್ತರಿಸುವ ಮೂಲಕ ಎಲ್ಲರಿಗೂ ಶಾಕ್ ನೀಡಿದರು. ವಿಕೆಟ್ ಪಡೆಯುವ ಬೌಲರ್ಗಿಂತಲೂ ಕೊಹ್ಲಿಯೇ ಹೆಚ್ಚು ಮೈದಾನದಲ್ಲಿ ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡುತ್ತಾರೆ ಎಂದು ಹೇಳುವ ಮೂಲಕ ಅನುಷ್ಕಾ ಕಾಲೆಳೆದಿದ್ದಾರೆ. ಆಗ ನನಗೆ ನಾಚಿಕೆಯಾಗುತ್ತದೆ. ಬನ್ನಿ ಕುಳಿತುಕೊಳ್ಳಿ ಎಂದು ಹೇಳಿದ್ದು, ತುಂಬಾ ಮಜವಾಗಿತ್ತು.