logo
ಕನ್ನಡ ಸುದ್ದಿ  /  ಕ್ರೀಡೆ  /  Asia Cup: ಪಾಕಿಸ್ತಾನಕ್ಕೆ ಭಾರಿ ಹಿನ್ನಡೆ; ಶ್ರೀಲಂಕಾದಲ್ಲಿ ಏಷ್ಯಾಕಪ್ ನಡೆಯುವ ಸಾಧ್ಯತೆ

Asia Cup: ಪಾಕಿಸ್ತಾನಕ್ಕೆ ಭಾರಿ ಹಿನ್ನಡೆ; ಶ್ರೀಲಂಕಾದಲ್ಲಿ ಏಷ್ಯಾಕಪ್ ನಡೆಯುವ ಸಾಧ್ಯತೆ

Jayaraj HT Kannada

May 09, 2023 04:32 PM IST

ಬಾಬರ್ ಆಜಮ್, ರೋಹಿತ್ ಶರ್ಮಾ

    • ಸದ್ಯ, ಪಾಕಿಸ್ತಾನದ ನಿಲುವಿನ ಬಗ್ಗೆ ಸ್ಪಷ್ಟತೆ ಇಲ್ಲ. ಆತಿಥ್ಯದ ಹಕ್ಕನ್ನು ಕಿತ್ತುಕೊಂಡರೆ ಟೂರ್ನಿಯಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿಕೊಂಡಿದ್ದ ಪಾಕಿಸ್ತಾನ, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತದೆಯೇ ಎಂಬುದು ಸದ್ಯದ ಕುತೂಹಲವಾಗಿದೆ.
ಬಾಬರ್ ಆಜಮ್, ರೋಹಿತ್ ಶರ್ಮಾ
ಬಾಬರ್ ಆಜಮ್, ರೋಹಿತ್ ಶರ್ಮಾ (REUTERS)

ಏಷ್ಯಾಕಪ್ (Asia Cup 2023) ಅನ್ನು 'ಹೈಬ್ರಿಡ್ ಮಾದರಿ'ಯಲ್ಲಿ ಆಯೋಜಿಸುವ ಪಿಸಿಬಿಯ ಪ್ರಸ್ತಾವನೆಯನ್ನು ಏಷ್ಯಾ ಕ್ರಿಕೆಟ್ ಮಂಡಳಿಯ (Asian Cricket Council) ಸದಸ್ಯ ರಾಷ್ಟ್ರಗಳು ತಿರಸ್ಕರಿಸಿದೆ. ಹೀಗಾಗಿ ಏಷ್ಯಾ ಕಪ್ ಅನ್ನು ಪಾಕ್‌ನಿಂದ ಸ್ಥಳಾಂತರಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಸೋಮವಾರ ನಿರ್ಧರಿಸಿದೆ. ಹೀಗಾಗಿ ತನ್ನ ದೇಶದಲ್ಲಿ ಕ್ರೀಡಾಕೂಟವನ್ನು ಆಯೋಜಿಸುವ ಕನಸು ಕಂಡಿದ್ದ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಫೆಡರೇಶನ್ ಕಪ್‌ನಲ್ಲಿ ಬಂಗಾರ ಗೆದ್ದ ನೀರಜ್‌ ಚೋಪ್ರಾ; ಕೂದಲೆಳೆ ಅಂತರದಲ್ಲಿ ಬೆಳ್ಳಿಗೆ ತೃಪ್ತಿ ಪಟ್ಟ ಡಿಪಿ ಮನು

ರೆಸ್ಲರ್ ಅಮನ್ ಸೆಹ್ರಾವತ್​ಗೆ ಪ್ಯಾರಿಸ್ ಒಲಿಂಪಿಕ್ಸ್​ ಟಿಕೆಟ್; ಮೊದಲ ಬಾರಿಗೆ ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ

ಸೆಪ್ಟೆಂಬರ್ 2ರಿಂದ 17ರವರೆಗೆ ಏಷ್ಯಾಕಪ್‌ ನಡೆಯಲಿದ್ದು, ಇನ್ನೂ ಆತಿಥ್ಯದ ಬಗ್ಗೆ ಅಂತಿಮ ನಿರ್ಧಾರ ಹೊರಬಂದಿಲ್ಲ. ಟೂರ್ನಿಯನ್ನು ಆಯೋಜಿಸುವ ಇರಾದೆ ಹೊಂದಿರುವ ದೇಶಗಳಲ್ಲಿ ಮುಂಚೂಣಿಯಲ್ಲಿರುವ ಯುಎಇನಲ್ಲಿ, ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ಕಡಿಮೆ ಇದೆ. ಸೆಪ್ಟೆಂಬರ್‌ ತಿಂಗಳಲ್ಲಿ ಅರಬ್‌ ರಾಷ್ಟ್ರದಲ್ಲಿ ಅತ್ಯಂತ ಆರ್ದ್ರ ವಾತಾವರಣ ಇರುವುದರಿಂದ, ಆಟಗಾರರ ಗಾಯಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ದ್ವೀಪರಾಷ್ಟ್ರ ಶ್ರೀಲಂಕಾವು ಆರು ರಾಷ್ಟ್ರಗಳು ಭಾಗಿಯಾಗುವ ಪಂದ್ಯಾವಳಿಯನ್ನು ಆಯೋಜಿಸಲು ಮುಂಚೂಣಿಯಲ್ಲಿದೆ.

ಸದ್ಯ, ಪಾಕಿಸ್ತಾನದ ನಿಲುವಿನ ಬಗ್ಗೆ ಸ್ಪಷ್ಟತೆ ಇಲ್ಲ. ಆತಿಥ್ಯದ ಹಕ್ಕನ್ನು ಕಿತ್ತುಕೊಂಡರೆ ಟೂರ್ನಿಯಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿಕೊಂಡಿದ್ದ ಪಾಕಿಸ್ತಾನ, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಸ್ಪರ್ಧಿಸುತ್ತದೆಯೇ ಎಂಬುದು ಸದ್ಯದ ಕುತೂಹಲವಾಗಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಭಾರತ ತಂಡವನ್ನು ನೆರೆಯ ರಾಷ್ಟ್ರಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿತ್ತು. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಆತಿಥ್ಯಕ್ಕೆ ಪರ್ಯಾಯ ಮಾರ್ಗವನ್ನು ಹುಡುಕಬೇಕಾಯ್ತು.

ಮಂಗಳವಾರ ಮತ್ತೊಂದು ಸುತ್ತಿನ ಚರ್ಚೆ ನಡೆಯಲಿದೆ ಎಂಬ ಭರವಸೆಯಲ್ಲಿ ಪಿಸಿಬಿ ಇದೆ. ಇದ್ದರೆ, ಸದಸ್ಯ ರಾಷ್ಟ್ರಗಳ ಮನಪರಿವರ್ತನೆಗೆ ಪಾಕ್‌ ಪ್ರಯತ್ನಿಸಲಿದೆ. ಪಾಕಿಸ್ತಾನವು ತವರು ನೆಲದಲ್ಲಿ ಪಂದ್ಯಗಳನ್ನು ಆಯೋಜಿಸಿದರೆ, ಭಾರತವು ಯುಎಇಯಲ್ಲಿ ತಮ್ಮ ಪಂದ್ಯಗಳನ್ನು ಆಡಬಹುದು ಎಂದು ಪಿಸಿಬಿ ಪ್ರಸ್ತಾಪಿಸಿತ್ತು. ಇದಕ್ಕೆ ಭಾರತ ಮಾತ್ರವಲ್ಲದೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕೂಡಾ ವಿರೋಧಿಸಿದೆ.

“ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಆತಿಥ್ಯ ಹಕ್ಕಿನ ಪ್ರಸ್ತಾಪವಿತ್ತರು. ಆದರೆ ಪಾಕಿಸ್ತಾನವು ಕರಾಚಿ ಅಥವಾ ಲಾಹೋರ್‌ನಲ್ಲಿ ತನ್ನ ಆಟಗಳನ್ನು ಆಡುವ ಮತ್ತು ಭಾರತವು ಯುಎಇಯಲ್ಲಿ ಆಡುವ ಪ್ರಸ್ತಾಪವನ್ನು ಸದಸ್ಯ ರಾಷ್ಟ್ರಗಳು ಒಪ್ಪಿಕೊಳ್ಳಲಿಲ್ಲ. ಶ್ರೀಲಂಕಾ ಯಾವಾಗಲೂ ಬಿಸಿಸಿಐಗೆ ಬೆಂಬಲವಾಗಿ ನಿಂತಿದೆ. ಇದೀಗ ಬಾಂಗ್ಲಾದೇಶ ಕೂಡಾ ಪಾಕ್‌ ಯೋಜನೆಯನ್ನು ವಿರೋಧಿಸುತ್ತಿದೆ” ಎಂದು ಎಸಿಸಿ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.

“ಎಸಿಸಿಯು 'ಹೈಬ್ರಿಡ್ ಮಾದರಿ'ಗೆ ತಾತ್ವಿಕವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ಅಲ್ಲದೆ ಬಜೆಟ್ ಕೂಡಾ ಅಂಗೀಕರಿಸಲಾಗುವುದಿಲ್ಲ. ಇದು ಪಾಕಿಸ್ತಾನ ತನ್ನ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಮಾತ್ರವಲ್ಲ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿದ್ದರೆ, ಮೂರನೇ ತಂಡ ಕೂಡಾ ದುಬೈ ಮತ್ತು ಪಾಕಿಸ್ತಾನದ ನಗರಗಳ ನಡುವೆ ಪ್ರಯಾಣಿಸಬೇಕಾಗುತ್ತದೆ” ಎಂದು ಮೂಲಗಳು ತಿಳಿಸಿದೆ.

ಸದ್ಯ ಪಾಕಿಸ್ತಾನಕ್ಕೆ ಎಲ್ಲಾ ರೀತಿಯಿಂದಲೂ ಹಿನ್ನಡೆಯಾಗಿದೆ. ಹೀಗಾಗಿ ಪಾಕಿಸ್ತಾನವು ಏಷ್ಯಾಕಪ್‌ನಲ್ಲಿ ಭಾಗವಹಿಸುತ್ತದೆಯೇ ಅಥವಾ ಇಲ್ಲವೇ ಎಂಬುದು ಕುತೂಹಲ ಮೂಡಿಸಿದೆ. ಅಲ್ಲದೆ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಭಾಗವಹಿಸುತ್ತದೆಯೇ ಇಲ್ಲವೇ ಎಂಬುದು ಸದ್ಯ ಕುತೂಹಲ ಮೂಡಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ