Tilak Varma: ವಿಂಡೀಸ್ ವಿರುದ್ಧ ಮಿಂಚಿದ ತಿಲಕ್ ವರ್ಮಾ; ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಹಾರ್ದಿಕ್, ಕಿಶನ್ ಹಿಂದಿಕ್ಕಿದ ಯುವ ಪ್ರತಿಭೆ
Aug 10, 2023 11:31 AM IST
ವೆಸ್ಟ್ ಇಂಡೀಸ್ ವಿರುದ್ಧದ ಮೂರು ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ತಿಲಕ್ ವರ್ಮಾ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. (AP)
ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾದ ಯುವ ಪ್ರತಿಭೆ ತಿಲಕ್ ವರ್ಮಾ ಮೂವರು ಹಿರಿಯ ಆಟಗಾರರನ್ನು ಹಿಂದಿಕ್ಕಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ವರ್ಮಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಮುಂಬೈ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ ಆಡಿರುವ ಮೂರು ಪಂದ್ಯಗಳಲ್ಲಿ 1-2 ಅಂತರವನ್ನು ಕಾಯ್ದುಕೊಂಡಿದೆ. ಪದಾರ್ಪಣೆ ಸರಣಿಯಲ್ಲಿ ಯುವ ಪ್ರತಿಭೆ ತಿಲಕ್ ವರ್ಮಾ (Tilak Verma) ಮಿಂಚುತ್ತಿದ್ದಾರೆ.
ಆಡಿರುವ ಸತತ ಮೂರು ಪಂದ್ಯಗಳಲ್ಲಿ ಕ್ರಮವಾಗಿ 39, 51 ಹಾಗೂ 49 ರನ್ ಗಳಿಸಿದ್ದು, ಇದರೊಂದಿಗೆ ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಟಿ20ಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ಅವರನ್ನೇ ಹಿಂದಿಕ್ಕಿದ್ದಾರೆ.
ಐಸಿಸಿ ಪ್ರತಿವಾರ ಬಿಡುಗಡೆ ಮಾಡುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ತಿಲಕ್ ವರ್ಮಾ 503 ಅಂಕಗಳೊಂದಿಗೆ 46ನೇ ಸ್ಥಾನಕ್ಕೆ ಬಂದಿದ್ದಾರೆ ಎಂಬುದು ಗಮನಾರ್ಹ ಅಂಶವಾಗಿದೆ. ಇದಲ್ಲದೆ, ಟಿ20 ಬ್ಯಾಟ್ಸಮನ್‌ಗಳ ಶ್ರೇಯಾಂಕದಲ್ಲಿ ಭಾರತದಲ್ಲಿ ಟೀಂ ಇಂಡಿಯಾದ ಐದನೇ ಅತ್ಯುತ್ತಮ ರ‍್ಯಾಂಕಿಂಗ್ ಪಡೆದಿರುವ ಆಟಗಾರರಾಗಿದ್ದಾರೆ.
ವಿಂಡೀಸ್ ವಿರುದ್ಧದ ಮೂರನೇ ನಿರ್ಮಾಣಯ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಟಿ20 ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂಬರ್ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಟೀಂ ಇಂಡಿಯಾದ ಇತರೆ ಬ್ಯಾಟರ್‌ಗಳಾದ ಕಿಂಗ್ ಕೊಹ್ಲಿ 19ನೇ ಸ್ಥಾನದಲ್ಲಿದ್ದರೆ, ಕನ್ನಡಿಗ ಕೆಎಲ್ ರಾಹುಲ್ 33ನೇ ಸ್ಥಾನದಲ್ಲಿ ನಾಯಕ ರೋಹಿತ್ ಶರ್ಮಾ 34 ನೇ ಸ್ಥಾನದಲ್ಲಿ ಇದ್ದಾರೆೆ. ಈ ಹಿರಿಯ ಆಟಗಾರರ ನಂತರದ ಸ್ಥಾನಕ್ಕೆ ಯುವ ಪ್ರತಿಭೆ ತಿಲಕ್ ವರ್ಮಾ ಬಂದಿದ್ದಾರೆ.
ಪ್ರಸ್ತುತ ತಿಲಕ್ ಮರ್ಮಾ ಅತ್ಯುತ್ತಮ ರ‍್ಯಾಂಕಿಂಗ್ ಪಡೆದಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಕೆಲ ದಿನಗಳಿಂದ 20 ಪಂದ್ಯಗಳನ್ನು ಆಡುತ್ತಿಲ್ಲ. ಈ ಲೆಕ್ಕಾಚಾರದ ಪ್ರಕಾರ ಹೇಳುವುದಾದರೆ ಭಾರತೀಯ ಬ್ಯಾಟರ್‌ಗಳ ಪೈಕಿ ಸೂರ್ಯಕುಮಾರ್ ಯಾದವ್ ನಂತರದ ಸ್ಥಾನದಲ್ಲಿ ತಿಲಕ್ ವರ್ಮಾ ನಿಲ್ಲುತ್ತಾರೆ.
ಇನ್ನ ಸತತವಾಗಿ ಬ್ಯಾಟಿಂಗ್‌ನಲ್ಲಿ ವಿಫಲವಾಗುತ್ತಿರುವ ಶುಭ್ಮನ್ ಗಿಲ್ 68ನೇ ರ‍್ಯಾಂಕಿಂಗ್‌ನಲ್ಲಿ ಇದ್ದರೆ, ಇಶಾನ್ ಕಿಶನ್ 54 ಹಾಗೂ ಹಾರ್ದಿಕ್ ಪಾಂಡ್ಯ 53ನೇ ರ‍್ಯಾಂಕಿಂಗ್‌ನಲ್ಲಿದ್ದಾರೆ.
ಇನ್ನ ಬೌಲರ್‌ಗಳ ವಿಷಯಕ್ಕೆ ಬಂದರೆ ಕುಲ್ದೀದ್ ಯಾದವ್ ತಮ್ಮ ರ‍್ಯಾಂಕಿಂಗ್‌ಅನ್ನು ಸುಧಾರಿಸಿಕೊಂಡಿದ್ದಾರೆ. 30ನೇ ಟಿ20 ಪಂದ್ಯದಲ್ಲಿ 50 ವಿಕೆಟ್‌ಗಳನ್ನು ಪೂರೈಸಿದ ಕುಲ್ದೀಪ್ ತಮ್ಮ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ. 24 ಶ್ರೇಯಾಂಕಗಳನ್ನು ದಾಟಿ 51ನೇ ಸ್ಥಾನಕ್ಕೆ ಬಂದಿದ್ದಾರೆ. ಟಿ10 ಅಗ್ರ 10 ಬೌಲರ್‌ಗಳ ಪಟ್ಟಿಯಲ್ಲಿ ಟೀಂ ಇಂಡಿಯಾದ ಯಾವೊಬ್ಬ ಆಟಗಾರನಿಗೆ ಸ್ಥಾನ ಸಿಕ್ಕಿಲ್ಲ. ಅರ್ಷದೀಪ್ 17ನೇ ರ‍್ಯಾಂಕಿಂಗ್, ಅಕ್ಷರ್ ಪಟೇಲ್ 33ನೇ ರ‍್ಯಾಂಕಿಂಗ್ ಹಾಗೂ ಹಾರ್ದಿಕ್ ಪಾಂಡ್ಯ 37ನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದ ಟಾಪ್ 10 ರಲ್ಲಿ ನಾಯಕ ರೋಹಿತ್ ಶರ್ಮಾ ಮಾತ್ರ ಸ್ಥಾನ ಪಡೆದಿದ್ದಾರೆ. ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಶುಭ್ಮನ್ ಗಿಲ್ 5 ಹಾಗೂ ಕಿಂಗ್ ಕೊಹ್ಲಿ 9ನೇ ಸ್ಥಾನದಲ್ಲಿದ್ದಾರೆ.
-----------------------------------------------------------------------------------
ಸಂಬಂಧಿತ ಲೇಖನ