logo
ಕನ್ನಡ ಸುದ್ದಿ  /  ಕ್ರೀಡೆ  /  Sunil Gavaskar: ವಿಶ್ವಕಪ್​ಗೆ ಅರ್ಹತೆ ಪಡೆಯದ ತಂಡದ ವಿರುದ್ಧ ರೋಹಿತ್-ಕೊಹ್ಲಿಸಿಡಿಸಿದ ಶತಕದಿಂದ ಸೆಲೆಕ್ಟರ್ಸ್ ಕಲಿತಿದ್ದೇನು; ಗವಾಸ್ಕರ್

Sunil Gavaskar: ವಿಶ್ವಕಪ್​ಗೆ ಅರ್ಹತೆ ಪಡೆಯದ ತಂಡದ ವಿರುದ್ಧ ರೋಹಿತ್-ಕೊಹ್ಲಿಸಿಡಿಸಿದ ಶತಕದಿಂದ ಸೆಲೆಕ್ಟರ್ಸ್ ಕಲಿತಿದ್ದೇನು; ಗವಾಸ್ಕರ್

Prasanna Kumar P N HT Kannada

Jul 27, 2023 03:09 PM IST

google News

ರೋಹಿತ್ ಶರ್ಮಾ, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ

    • ವೆಸ್ಟ್​ ಇಂಡೀಸ್ ಟೆಸ್ಟ್​ ಸರಣಿಯಲ್ಲಿ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli) ಮತ್ತು ಯಶಸ್ವಿ ಜೈಸ್ವಾಲ್ (Yashavi Jaiswal) ಶತಕ ಗಳಿಸಿ ಗಮನ ಸೆಳೆದರು. ಅದಾಗಿಯೂ ರೋಹಿತ್​​-ಕೊಹ್ಲಿ ಆಯ್ಕೆ ಕುರಿತು ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ (Sunil Gavaskar) ಬೇಸರ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ, ಸುನಿಲ್ ಗವಾಸ್ಕರ್, ವಿರಾಟ್ ಕೊಹ್ಲಿ

ನಿರೀಕ್ಷೆಯಂತೆ ವೆಸ್ಟ್ ಇಂಡೀಸ್ ಎದುರಿನ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ (India vs West Indies) ಗೆಲುವು ಸಾಧಿಸಿದೆ. ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್​ ಮತ್ತು 141 ರನ್​ ಗಳಿಸಿದೆ. ಆದರೆ, 2ನೇ ಟೆಸ್ಟ್​ ಪಂದ್ಯವು ಮಳೆಯ ಕಾರಣದಿಂದ ಡ್ರಾನಲ್ಲಿ ಅಂತ್ಯಕಂಡಿತು. ಈಗ ಇಂದಿನಿಂದ ಜುಲೈ 27ರಿಂದ ಏಕದಿನ ಸರಣಿ ಶುರುವಾಗಲಿದೆ. ಇನ್ನು ಈ ಟೆಸ್ಟ್​ ಸರಣಿಯಲ್ಲಿ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli) ಮತ್ತು ಯಶಸ್ವಿ ಜೈಸ್ವಾಲ್ (Yashavi Jaiswal) ಶತಕ ಗಳಿಸಿ ಗಮನ ಸೆಳೆದರು. ಬೌಲಿಂಗ್​​ನಲ್ಲಿ ರವಿಚಂದ್ರನ್ ಅಶ್ವಿನ್ (R Ashwin) ಧಮಾಕ ಸೃಷ್ಟಿಸಿದರು.

ಗವಾಸ್ಕರ್ ಬೇಸರ

ಅದಾಗಿಯೂ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ (Sunil Gavaskar) ಈ ವಿಷಯದಲ್ಲಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಗಳಿಸಿದ ಈ ರನ್‌ಗಳ ಹಿಂದಿನ ಉದ್ದೇಶವನ್ನು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್​ಗೆ ಅರ್ಹತೆ ಪಡೆಯದ ವೆಸ್ಟ್​ ಇಂಡೀಸ್​ ವಿರುದ್ಧ ಆಡಿದರೇನು? ಬಿಟ್ಟರೇನು? ನೆದರ್ಲೆಂಡ್ಸ್​​, ಸ್ಕಾಟ್ಲೆಂಡ್​ ಎದುರು ಸೋತವರ ಎದುರು ಶತಕ ಸಿಡಿಸಿ ತೊಡೆ ತಟ್ಟುತ್ತೀರಾ ಎಂದು ಪ್ರಶ್ನಿಸಿದ ಗವಾಸ್ಕರ್, ಯುವ ಆಟಗಾರರಿಗೆ ಈ ಸರಣಿಗೆ ಆಯ್ಕೆ ಮಾಡಬೇಕಿತ್ತು ಎಂದಿದ್ದಾರೆ.

ಭವಿಷ್ಯದ ತಂಡ ಕಟ್ಟುವುದು ಸುಲಭದ ಮಾತಲ್ಲ

ಸರ್ಫರಾಜ್ ಖಾನ್‌ ಅವರಂತಹ ಯುವ ಆಟಗಾರರಿಗೆ ಮೊದಲು ಪ್ರಾಶಸ್ತ್ರ್ಯ ನೀಡದಿರುವುದ್ದಕ್ಕೆ ಅಸಮಾಧಾನಗೊಂಡ ಗವಾಸ್ಕರ್, ಆಯ್ಕೆದಾರರನ್ನು ಮತ್ತೊಮ್ಮೆ ಪ್ರಶ್ನಿಸುವ ಮೂಲಕ ತಮ್ಮ ವಿಷಯವನ್ನು ಪುನರುಚ್ಚರಿಸಿದರು. ಇದೀಗ ಅಜಿತ್ ಅಗರ್ಕರ್ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತಂಡವನ್ನು ಹೇಗೆ ಕಟ್ಟುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಹಿರಿಯರಿಂದಲೇ ತುಂಬಿರುವ ತಂಡದಿಂದ ಭವಿಷ್ಯದ ತಂಡ ಕಟ್ಟುವುದು ಸುಲಭದ ಮಾತಲ್ಲ ಎಂದು ಗವಾಸ್ಕರ್​ ಅಚ್ಚರಿ ಹೇಳಿಕೆಯನ್ನೂ ನೀಡಿದ್ದಾರೆ.

ಆಯ್ಕೆದಾರರು ಏನು ಕಲಿತರು?

ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿ ಎಷ್ಟು ದುರ್ಬಲವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ನೆದರ್ಲೆಂಡ್ಸ್, ಸ್ಕಾಟ್ಲೆಂಡ್ ವಿರುದ್ಧವೇ ಸೋತಿದೆ. ಅಂತಹ ವೆಸ್ಟ್ ಇಂಡೀಸ್ ವಿರುದ್ಧ ರೋಹಿತ್ ಮತ್ತು ಕೊಹ್ಲಿ ಗಳಿಸಿದ ರನ್​​ಗಳಿಂದ ಆಯ್ಕೆದಾರರು, ತಿಳಿದಿರದಿದ್ದನ್ನು ಏನು ಕಲಿತರು? ಯುವ ಆಟಗಾರರಿಗೆ ಅವಕಾಶ ನೀಡಿದರೆ, ಏನಾಗುತ್ತಿತ್ತು? ಸಾಕಷ್ಟು ಕಲಿಯಲು ಅವಕಾಶವಿತ್ತು. ವಿಂಡೀಸ್‌ನಂತಹ ದೇಶಗಳ ವಿರುದ್ಧದ ಸರಣಿಯು ಯುವ ಆಟಗಾರರನ್ನು ಪರೀಕ್ಷಿಸಲು ತುಂಬಾ ಉಪಯುಕ್ತ ಎಂದು ಹೇಳಿದ್ದಾರೆ.

ಯುವಕರಿಗೆ ಅವಕಾಶ ನೀಡಬೇಕು

ಭವಿಷ್ಯದ ತಂಡವನ್ನು ಕಟ್ಟುವ ಸಲುವಾಗಿ, ಇಂತಹ ಸರಣಿಗಳಿಗೆ ಆಯ್ಕೆ ಮಾಡಬೇಕು. ಕೆಲವರು ಯುವಕರು ಟೆಸ್ಟ್​ ಕ್ರಿಕೆಟ್​ಗೆ ಹೇಗೆ ಹೊಂದಿಕೊಳ್ಳುತ್ತಾರೆ. ಆಡುತ್ತಾರೆ ಇಲ್ಲವೇ ಎಂಬುದನ್ನು ಪರೀಕ್ಷೆ ನಡೆಸಬೇಕು. ಅವರು ಸವಾಲುಗಳನ್ನು ಹೇಗೆ ಎದುರಿಸುತ್ತಾರೆ. ಕಿರಿಯ ಆಟಗಾರರನ್ನು ಇಂತಹ ರೀತಿಯ ಸವಾಲು ಬಯಸುವುದಿಲ್ಲವೇ ಎಂದು ಮಿಡ್​ ಡೇ ಅಂಕಣದಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಾರೆ.

‘ಅವರನ್ನೇ ನಂಬಿಕೊಂಡರೆ ಬದಲಾವಣೆ ಕಷ್ಟ’

ಸ್ಟಾರ್ ಆಟಗಾರರ ಬದಲು ಮ್ಯಾಚ್ ವಿನ್ನರ್​ಗಳಿಗೆ ತಂಡದಲ್ಲಿ ಅವಕಾಶ ಸಿಕ್ಕಾಗ ಮಾತ್ರ ತಂಡ ಬದಲಾಗುತ್ತದೆ. ಅಗರ್ಕರ್ ಅದೇ ಸ್ಟಾರ್​ ಆಟಗಾರರು ಮತ್ತು ಹಿರಿಯರನ್ನೇ ನಂಬಿಕೊಂಡರೆ, ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ' ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಯುವಕರಿಗೆ ಹೆಚ್ಚೆಚ್ಚು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮೊದಲ ಟೆಸ್ಟ್​ ಪಂದ್ಯದಲ್ಲಿ ರೋಹಿತ್ ಶರ್ಮಾ 103 ರನ್ ಗಳಿಸಿದರು. ಚೊಚ್ಚಲ ಟೆಸ್ಟ್​ ಪಂದ್ಯದಲ್ಲೇ ಯಶಸ್ವಿ ಜೈಸ್ವಾಲ್ 171 ರನ್​ ಗಳಿಸಿ ದಾಖಲೆ ಬರೆದಿದ್ದರು. ಮೊದಲ ಪಂದ್ಯದಲ್ಲಿ ಇವರಿಬ್ಬರು ಅಬ್ಬರಿಸಿದರೆ, ಎರಡನೇ ಟೆಸ್ಟ್​​​ನಲ್ಲಿ ಕೊಹ್ಲಿ ದರ್ಬಾರ್​ ನಡೆಸಿದರು. 2018ರ ಬಳಿಕ ವಿದೇಶದಲ್ಲಿ ಶತಕ (121) ಸಿಡಿಸಿದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ