logo
ಕನ್ನಡ ಸುದ್ದಿ  /  ಕ್ರೀಡೆ  /  ಚದುರಂಗ ಚತುರ ಗುಕೇಶ್ ದೊಮ್ಮರಾಜು ಆಟಕ್ಕೆ ವಿಶ್ವದಾಖಲೆಯೇ ಧ್ವಂಸ; ಈ ಸಾಧನೆ ಮಾಡಿದ ಎರಡನೇ ಭಾರತೀಯ

ಚದುರಂಗ ಚತುರ ಗುಕೇಶ್ ದೊಮ್ಮರಾಜು ಆಟಕ್ಕೆ ವಿಶ್ವದಾಖಲೆಯೇ ಧ್ವಂಸ; ಈ ಸಾಧನೆ ಮಾಡಿದ ಎರಡನೇ ಭಾರತೀಯ

Prasanna Kumar P N HT Kannada

Dec 12, 2024 09:04 PM IST

google News

ಚದುರಂಗ ಚತುರ ಗುಕೇಶ್ ದೊಮ್ಮರಾಜು ಆಟಕ್ಕೆ ವಿಶ್ವ ದಾಖಲೆಯೇ ಧ್ವಂಸ; ಈ ಸಾಧನೆ ಮಾಡಿದ ಎರಡನೇ ಭಾರತೀಯ

    • Gukesh Dommaraju: ವಿಶ್ವ ಚೆಸ್ ಚಾಂಪಿಯನ್​ ಅಂತಿಮ ಅಥವಾ 14ನೇ ಸುತ್ತಿನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿದ ಭಾರತದ 18 ವರ್ಷದ ಗುಕೇಶ್ ದೊಮ್ಮರಾಜು ಅವರು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಚದುರಂಗ ಚತುರ ಗುಕೇಶ್ ದೊಮ್ಮರಾಜು ಆಟಕ್ಕೆ ವಿಶ್ವ ದಾಖಲೆಯೇ ಧ್ವಂಸ; ಈ ಸಾಧನೆ ಮಾಡಿದ ಎರಡನೇ ಭಾರತೀಯ
ಚದುರಂಗ ಚತುರ ಗುಕೇಶ್ ದೊಮ್ಮರಾಜು ಆಟಕ್ಕೆ ವಿಶ್ವ ದಾಖಲೆಯೇ ಧ್ವಂಸ; ಈ ಸಾಧನೆ ಮಾಡಿದ ಎರಡನೇ ಭಾರತೀಯ

ಡಿಸೆಂಬರ್ 12ರಂದು ನಡೆದ ವಿಶ್ವ ಚೆಸ್ ಚಾಂಪಿಯನ್​ ಅಂತಿಮ ಅಥವಾ 14ನೇ ಸುತ್ತಿನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವ ಚೆಸ್ ವಿಶ್ವ ಚಾಂಪಿಯನ್ ಆಗುವ ಮೂಲಕ ಭಾರತದ ಗ್ರ್ಯಾಂಡ್ ಮಾಸ್ಟರ್​ ಗುಕೇಶ್ ದೊಮ್ಮರಾಜು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿರುವ ಈಕ್ವೇರಿಯಸ್ ಹೋಟೆಲ್‌ನಲ್ಲಿ ಈ ಪಂದ್ಯ ನಡೆಯಿತು. 18 ವರ್ಷದ ಗುಕೇಶ್, 1985 ರಲ್ಲಿ 22ನೇ ವಯಸ್ಸಿನಲ್ಲಿ ಪ್ರಶಸ್ತಿ ಜಯಿಸಿದ್ದ ಗ್ಯಾರಿ ಕಾಸ್ಪರೋವ್​ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಪುಡಿಗಟ್ಟಿದ್ದಾರೆ.

ಕಾಸ್ಪರೋವ್​ ಅವರ ದಾಖಲೆಯನ್ನು ಮುರಿಯುವ ಮೂಲಕ ಅತ್ಯಂತ ಕಿರಿಯ ಆಟಗಾರ ಚಾಂಪಿಯನ್ ಪಟ್ಟ ಅಲಂಕರಿಸಿದ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಿದ್ದಾರೆ. ಮ್ಯಾಗ್ನಸ್ ಕಾರ್ಲ್ಸೆನ್ ಅವರು 2003ರಲ್ಲಿ 22ನೇ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಕಿರೀಟಕ್ಕೆ ಮುತ್ತಿಕ್ಕಿದ್ದರು. ವಿಶ್ವನಾಥನ್ ಆನಂದ್ ನಂತರ ಈ ಪ್ರಶಸ್ತಿ ಗೆದ್ದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಗುಕೇಶ್ ಪಾತ್ರರಾಗಿದ್ದಾರೆ. ಭಾರತದ ಮೊದಲ ಚೆಸ್ ಗ್ರ್ಯಾಂಡ್ ಮಾಸ್ಟರ್ ಆನಂದ್ 2000ರಲ್ಲಿ 31ನೇ ವಯಸ್ಸಿನಲ್ಲಿ ಮೊದಲ ಪ್ರಶಸ್ತಿಯನ್ನು ಗೆದ್ದರು. ಅವರು 2007, 2008, 2010 ಮತ್ತು 2012 ರಲ್ಲಿ ಸತತವಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.

ಕಿರಿಯ ವಿಶ್ವ ಚೆಸ್ ಚಾಂಪಿಯನ್

ಡಿ ಗುಕೇಶ್ - 18 ವರ್ಷ 8 ತಿಂಗಳು 14 ದಿನ - ಡಿಸೆಂಬರ್ 12, 2024

ಗ್ಯಾರಿ ಕಾಸ್ಪರೋವ್ - 22 ವರ್ಷ 6 ತಿಂಗಳು 27 ದಿನಗಳು - ನವೆಂಬರ್ 9, 1985

ಮ್ಯಾಗ್ನಸ್ ಕಾರ್ಲ್ಸೆನ್ - 22 ವರ್ಷಗಳು 11 ತಿಂಗಳುಗಳು 24 ದಿನಗಳು - ನವೆಂಬರ್ 23, 2013

ಮಿಖಾಯಿಲ್ ತಾಲ್ - 23 ವರ್ಷ 5 ತಿಂಗಳು 28 ದಿನಗಳು - ಮೇ 7, 1960

ಅನಾಟೊಲಿ ಕಾರ್ಪೋವ್ - 23 ವರ್ಷ 10 ತಿಂಗಳು 11 ದಿನಗಳು - ಏಪ್ರಿಲ್ 3, 1975

ವ್ಲಾಡಿಮಿರ್ ಕ್ರಾಮ್ನಿಕ್ - 25 ವರ್ಷ 4 ತಿಂಗಳು 10 ದಿನಗಳು - ನವೆಂಬರ್ 4, 2000

ಇಮ್ಯಾನುಯೆಲ್ ಲಾಸ್ಕರ್ - 25 ವರ್ಷ 5 ತಿಂಗಳು 2 ದಿನಗಳು - ಮೇ 26, 1894

ಕಣ್ಣೀರು ಹಾಕಿದ ಗುಕೇಶ್

ಗುಕೇಶ್ 7.5-6.5 ಅಂಕಗಳ ಅಂತರದಿಂದ ಜಯಿಸಿದರು. ಪಂದ್ಯವು ಬಹುಪಾಲು ಡ್ರಾದತ್ತ ಸಾಗಿತು. ಹೀಗಾಗಿ, ಟೈಬ್ರೇಕ್ ಸನ್ನಿಹಿತವಾಗಿತ್ತು. ಆದರೆ, 55ನೇ ನಡೆಯಲ್ಲಿ ಡಿಂಗ್ ಪ್ರಮಾದ ಎಸಗಿದ ಕಾರಣ ಗುಕೇಶ್ ಯಾವುದೇ ತಪ್ಪು ಮಾಡದೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 18ರ ಹರೆಯದ ಯುವಕ ಕಿರೀಟವನ್ನು ಮುದ್ರೆಯೊತ್ತಲು ಗೆಲುವಿನ ನಡೆ ಆಡಿದ ತಕ್ಷಣ ಕಣ್ಣೀರಿಟ್ಟರು. ಗೆಲುವು ಸಾಧಿಸಿದ ನಂತರ ಗುಕೇಶ್, ಕೂತಲೇ ಕಣ್ಣೀರು ಹಾಕಿದರು. ಇದರ ವಿಡಿಯೋಗಳು ವೈರಲ್ ಆಗುತ್ತಿದೆ. ಇಡೀ ದೇಶವೇ ಗುಕೇಶ್ ಸಾಧನೆ ಅಭಿನಂದನೆ ಸಲ್ಲಿಸುತ್ತಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ