ಒಲಿಂಪಿಕ್ಸ್ ಇತಿಹಾಸ: ಬರೋಬ್ಬರಿ 187 ದಿನಗಳ ಕಾಲ ನಡೆದಿತ್ತು1908ರ ಒಲಿಂಪಿಕ್ಸ್; ಭಾರತ ಭಾಗವಹಿಸಿತ್ತೇ?
Jul 06, 2024 07:00 PM IST
ಒಲಿಂಪಿಕ್ಸ್ ಇತಿಹಾಸ: ಬರೋಬ್ಬರಿ 187 ದಿನಗಳ ಕಾಲ ನಡೆದಿತ್ತು1908ರ ಒಲಿಂಪಿಕ್ಸ್; ಭಾರತ ಭಾಗವಹಿಸಿತ್ತೇ?
- History of Olympics: 1904 ಮತ್ತು 1908ರಲ್ಲಿ ನಡೆದಿದ್ದ ಒಲಿಂಪಿಕ್ಸ್ ಕುರಿತು ಈ ವರದಿಯಲ್ಲಿ ತಿಳಿಯೋಣ. ಕ್ರೀಡಾಕೂಟ ಎಲ್ಲಿ, ಯಾವಾಗ ನಡೆದಿತ್ತು? ಎಷ್ಟು ದೇಶಗಳು ಪಾಲ್ಗೊಂಡಿದ್ದವು, ಎಷ್ಟು ಸ್ಪರ್ಧಿಗಳು ಪಾಲ್ಗೊಂಡಿದ್ದರು, ಯಾವ ದೇಶ ಹೆಚ್ಚು ಪದಕ ಗೆದ್ದಿತ್ತು? ಇಲ್ಲಿದೆ ವಿವರ.
ಬಹುನಿರೀಕ್ಷಿತ 2024ರ ಪ್ಯಾರಿಸ್ ಒಲಿಂಪಿಕ್ಸ್ (Olympic Games Paris 2024) ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಜುಲೈ 26ರಿಂದ ಪ್ರಾರಂಭವಾಗುವ ಕ್ರೀಡಾಕೂಟಕ್ಕೆ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾರತೀಯ ಕ್ರೀಡಾಪಟುಗಳು ಸಹ ದೇಶಕ್ಕೆ ಪದಕ ಗೆಲ್ಲಲು ಹಾತೊರೆಯುತ್ತಿದ್ದಾರೆ. ಈ ಬಾರಿಗೆ ಒಟ್ಟಾರೆ 10,500 ಆಥ್ಲೀಟ್ಗಳು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ಇತಿಹಾಸವನ್ನೊಮ್ಮೆ ಕೆದಕೋಣ.
1904 ಮತ್ತು 1908ರಲ್ಲಿ ನಡೆದಿದ್ದ ಒಲಿಂಪಿಕ್ಸ್ ಕುರಿತು ಈ ವರದಿಯಲ್ಲಿ ತಿಳಿಯೋಣ. ಕ್ರೀಡಾಕೂಟ ಎಲ್ಲಿ, ಯಾವಾಗ ನಡೆದಿತ್ತು? ಎಷ್ಟು ದೇಶಗಳು ಪಾಲ್ಗೊಂಡಿದ್ದವು, ಎಷ್ಟು ಸ್ಪರ್ಧಿಗಳು ಪಾಲ್ಗೊಂಡಿದ್ದರು, ಯಾವ ದೇಶ ಹೆಚ್ಚು ಪದಕ ಗೆದ್ದಿತ್ತು? 1904ರ ಒಲಿಂಪಿಕ್ಸ್ ಯುರೋಪ್ನ ಹೊರಗೆ ನಡೆದಿದ್ದೇಕೆ? 1908ರ ಒಲಿಂಪಿಕ್ಸ್ 187 ದಿನಗಳ ಕಾಲ ನಡೆದಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.
1904ರ ಒಲಿಂಪಿಕ್ಸ್
ಅಮೆರಿಕದ ಸೇಂಟ್ ಲೂಯಿಸ್ನಲ್ಲಿ 1904ರ ಆಗಸ್ಟ್ 29ರಿಂದ ಸೆಪ್ಟೆಂಬರ್ 3ರ ತನಕ 3ನೇ ಒಲಿಂಪಿಕ್ಸ್ ನಡೆದಿತ್ತು. ಇದು ಯುರೋಪ್ನಿಂದ ಹೊರಗೆ ನಡೆದಿತ್ತು. ಯುರೋಪ್ನಿಂದ ಹೊರಗೆ ಜರುಗಿದ ಮೊದಲ ಒಲಿಂಪಿಕ್ಸ್ ಇದಾಗಿತ್ತು. ಆದರೆ, ರಷ್ಯಾ ಮತ್ತು ಜಪಾನ್ ನಡುವಿನ ಯುದ್ಧದ ಕಾರಣದಿಂದ ಬಹುತೇಕ ಸ್ಫರ್ಧಿಗಳು ಕೂಟದಿಂದ ಹಿಂದೆ ಸರಿದಿದ್ದರು. 16 ಕ್ರೀಡೆಗಳ ಪೈಕಿ 95 ಕ್ರೀಡಾ ವಿಭಾಗಗಲ್ಲಿ ಸ್ಫರ್ಧೆ ನಡೆಯಿತು.
ಒಟ್ಟು 12 ದೇಶಗಳು ಪಾಲ್ಗೊಂಡಿದ್ದ ಈ ಕ್ರೀಡಾಕೂಟದಲ್ಲಿ 6 ಮಹಿಳೆಯರು ಸಹಿತ 648 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪೈಕಿ 74 ಮಂದಿ ಮಾತ್ರ ಉತ್ತರ ಅಮೆರಿಕದಿಂದ ಹೊರಗಿನವರಾಗಿದ್ದರು. ಅಗ್ರ ಮೂವರು ವಿಜೇತರಿಗೆ ಚಿನ್ನ, ಬೆಳ್ಳಿ, ಕಂಚಿನ ಪದಕ ನೀಡುವ ಸಂಪ್ರದಾಯ ಈ ಒಲಿಂಪಿಕ್ಸ್ನಿಂದ ಆರಂಭಗೊಂಡಿತು. ಅಮೆರಿಕ 76 ಚಿನ್ನ ಸಹಿತ 231 ಪದಕ ಗೆದ್ದು ಪ್ರಾಬಲ್ಯ ಸಾಧಿಸಿತು. ಆದರೆ ಈ ಕೂಟದಲ್ಲಿ ಭಾರತ ಭಾಗವಹಿಸಿಲ್ಲ.
1908ರ ಒಲಿಂಪಿಕ್ಸ್
ಇಂಗ್ಲೆಂಡ್ನ ಲಂಡನ್ನಲ್ಲಿ 1908ರ ಏಪ್ರಿಲ್ 27ರಿಂದ ಅಕ್ಟೋಬರ್ 31ರ ತನಕ ನಾಲ್ಕನೇ ಒಲಿಂಪಿಕ್ಸ್ ನಡೆಯಿತು. ರೋಮ್ನಲ್ಲಿ ನಿಗದಿಯಾಗಿದ್ದ ಈ ಒಲಿಂಪಿಕ್ಸ್, 1906ರಲ್ಲಿ ವೆಸುನಿಯಸ್ ಸ್ಫೋಟಕ್ಕೆ 100ಕ್ಕೂ ಅಧಿಕ ಮಂದಿ ಬಲಿಯಾದರು. ಹೀಗಾಗಿ ಲಂಡನ್ಗೆ ಸ್ಥಳಾಂತರಗೊಂಡಿತು. ಹೀಗಾಗಿ 187 ದಿನಗಳ (6 ತಿಂಗಳು, 4 ದಿನ) ಕಾಲ ನಡೆದ ಕ್ರೀಡಾಕೂಟ ಅತ್ಯಂತ ಸುದೀರ್ಘ ಆಧುನಿಕ ಎನಿಸಿದೆ. 22 ಕ್ರೀಡೆಗಳ 110 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. 22 ದೇಶಗಳ 2 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಿದ್ದರು. ಆತಿಥೇಯ ಬ್ರಿಟನ್ 56 ಚಿನ್ನ ಸಹಿತ 146 ಪದಕ ಗೆದ್ದಿತ್ತು. ಈ ಕೂಟದಲ್ಲಿ ಭಾರತ ಕೂಡ ಭಾಗವಹಿಸಿರಲಿಲ್ಲ.