logo
ಕನ್ನಡ ಸುದ್ದಿ  /  ಕ್ರೀಡೆ  /  Neeraj Chopra:ಪಾಕ್ ಬಾವುಟವಿಲ್ಲದೆ ನಿಂತಿದ್ದ ಅರ್ಷದ್‌ಗೆ ತ್ರಿವರ್ಣ ಧ್ವಜದೊಂದಿಗೆ ನಿಲ್ಲಲು ಅವಕಾಶ; ನೀರಜ್ ಚೋಪ್ರಾ ನಡೆಗೆ ಭಾರಿ ಮೆಚ್ಚುಗೆ

Neeraj Chopra:ಪಾಕ್ ಬಾವುಟವಿಲ್ಲದೆ ನಿಂತಿದ್ದ ಅರ್ಷದ್‌ಗೆ ತ್ರಿವರ್ಣ ಧ್ವಜದೊಂದಿಗೆ ನಿಲ್ಲಲು ಅವಕಾಶ; ನೀರಜ್ ಚೋಪ್ರಾ ನಡೆಗೆ ಭಾರಿ ಮೆಚ್ಚುಗೆ

Raghavendra M Y HT Kannada

Aug 29, 2023 08:34 AM IST

google News

ಪಾಕ್ ಧ್ವಜ ಇಲ್ಲದೆ ಸುಮ್ಮನೆ ನಿಂತಿದ್ದ ಪಾಕಿಸ್ತಾನದ ಬೆಳ್ಳಿ ಪದಕ ವಿಜೇತ ಅರ್ಷದ್‌ ಅವರನ್ನು ಭಾರತದ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ತ್ರಿವರ್ಣ ಧ್ವಜದಡಿ ನಿಲ್ಲಿಸಿಕೊಂಡಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. (AP)

  • ಪಾಕಿಸ್ತಾನ  ಧ್ವಜ ಇಲ್ಲದೆ ಸುಮ್ಮನೆ ನಿಂತಿದ್ದ ಅರ್ಷದ್ ನಮೀದ್ ಅವರನ್ನು ಭಾರತದ ನೀರಜ್ ಚೋಪ್ರಾ ತ್ರಿವರ್ಣ ಧ್ವಜದಡಿ ನಿಲ್ಲಿಸಿಕೊಂಡಿದ್ದಾರೆ. ನೀರಜ್ ಅವರ ಈ ನಡಗೆ ಜಗತ್ತಿನಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಪಾಕ್ ಧ್ವಜ ಇಲ್ಲದೆ ಸುಮ್ಮನೆ ನಿಂತಿದ್ದ ಪಾಕಿಸ್ತಾನದ ಬೆಳ್ಳಿ ಪದಕ ವಿಜೇತ ಅರ್ಷದ್‌ ಅವರನ್ನು ಭಾರತದ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ತ್ರಿವರ್ಣ ಧ್ವಜದಡಿ ನಿಲ್ಲಿಸಿಕೊಂಡಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. (AP)
ಪಾಕ್ ಧ್ವಜ ಇಲ್ಲದೆ ಸುಮ್ಮನೆ ನಿಂತಿದ್ದ ಪಾಕಿಸ್ತಾನದ ಬೆಳ್ಳಿ ಪದಕ ವಿಜೇತ ಅರ್ಷದ್‌ ಅವರನ್ನು ಭಾರತದ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ತ್ರಿವರ್ಣ ಧ್ವಜದಡಿ ನಿಲ್ಲಿಸಿಕೊಂಡಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. (AP)

ಬುಡಾಪೆಸ್ಟ್ (ಹಂಗೇರಿ): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (World Athletics Championships 2023) ಭಾರತ ನೀರಜ್ ಚೋಪ್ರಾ (Neeraj Chopra) ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ಇದರ ಜೊತೆಗೆ ಪಾಕ್ ಆಟಗಾರ, ಬೆಳ್ಳಿ ಪದಕ ವಿಜೇತ ಅರ್ಷದ್ ನದೀಮ್ (Arshad Nadeem) ಅವರನ್ನು ನಡೆಸಿಕೊಂಡ ರೀತಿಗೂ ಇಡೀ ಜಗತ್ತು ಮೆಚ್ಚುಗೆ ವ್ಯಕ್ತಪಡಿಸಿದೆ.

ತನ್ನ ದೇಶದ ಧ್ವಜವಿಲ್ಲದ ಸುಮ್ಮನೆ ನಿಂತಿದ್ದ ಪಾಕಿಸ್ತಾನದ ಅರ್ಷದ್ ಅವರನ್ನು ತ್ರಿವರ್ಣ ಧ್ವಜದಡಿ ನಿಲ್ಲುವಂತೆ ಭಾರತದ ಸ್ಟಾರ್ ಬಾವೆಲಿನ್ ಆಟಗಾರ ನೀರಜ್ ಚೋಪ್ರಾ ಅವರು ಕೋರಿದ್ದಾರೆ. ಈ ಮನವಿಗೆ ಸ್ಪಂದಿಸಿದ ಅರ್ಷದ್ ಆತನ ಪಕ್ಕದಲ್ಲಿ ಬಂದು ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದು, ನೀರಜ್ ಅವರ ನಡೆಯನ್ನು ಶ್ಲಾಘಿಸುತ್ತಿದ್ದಾರೆ.

ಶನಿವಾರ (ಪಂದ್ಯ ನಡೆದಿದ್ದು ರಾತ್ರಿ) ನಡೆದ ಫೈನಲ್​​ನಲ್ಲಿ ಬರೋಬ್ಬರಿ 88.17 ಮೀಟರ್​ ದೂರ ಭರ್ಜಿ ಎಸೆಯುವ ಮೂಲಕ ವಿಶ್ವ ಅಥ್ಲೆಟಿಕ್ಸ್​​ ಚಾಂಪಿಯನ್​ಶಿಪ್​​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ.

ಒಲಿಂಪಿಕ್ಸ್, ಕಾಮನ್​ವೆಲ್ತ್ ಗೇಮ್ಸ್​ ಮತ್ತು ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಪದಕ ಗೆದ್ದಿದ್ದಾರೆ. ಈಗ ವಿಶ್ವ ಅಥ್ಲೀಟ್​ ಚಾಂಪಿಯನ್​ಶಿಪ್​​ನಲ್ಲೂ ಸ್ವರ್ಣ ಗೆಲ್ಲುವ ಮೂಲಕ ಪ್ರಮುಖ 4 ಟೂರ್ನಿಗಳಲ್ಲೂ ಚಿನ್ನದ ಸಾಧನೆ ಮಾಡಿರುವ ಭಾರತದ ಮೊದಲ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದಾರೆ. ಅಲ್ಲದೆ, ಡೈಮಂಡ್ ಲೀಗ್​​ನಲ್ಲೂ ಎರಡು ಸಲ ಚಿನ್ನಕ್ಕೆ ಕೊರೊಳೊಡ್ಡಿದ್ದಾರೆ.

ಫೈನಲ್​​ನಲ್ಲಿ ಚಿನ್ನ ಗೆದ್ದ ಬಳಿಕ ನೀರಜ್ ಚೋಪ್ರಾ, ಸಂಭ್ರಮದಲ್ಲಿ ಮಿಂದೆದ್ದರು. ಕ್ಯಾಮೆರಾಗಳು ಅವರ ಹಿಂದೆಯೇ ಇದ್ದವು. ಭಾರತದ ಧ್ವಜ ಹಿಡಿದು ಕ್ಯಾಮೆರಾ ಎದುರು ಮಿಂಚುತ್ತಿದ್ದರು. ಮತ್ತೊಂದೆಡೆ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಜಯಿಸಿದ ಜೆಕ್​ ಗಣರಾಜ್ಯದ ಜಾಕುಬ್ ವಡ್ಲೆಜ್ ಅವರು ಸಹ ತಮ್ಮ ದೇಶದ ಧ್ವಜ ಹಿಡಿದು ಕ್ಯಾಮೆರಾ ಮುಂದೆ ಮಿಂಚುತ್ತಿದ್ದರು. ಆದರೆ, ಬೆಳ್ಳಿ ಪದಕ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಅವರ ಬಳಿ ತಮ್ಮ ದೇಶದ ಧ್ವಜ ಇರಲಿಲ್ಲ.

ಆಗ ನೀರಜ್‌ ಚೋಪ್ರಾ, ಅರ್ಷದ್‌ ನದೀಮ್‌ ತಮ್ಮ ಪಕ್ಕದಲ್ಲಿ ಬಂದು ನಿಲ್ಲುವಂತೆ ಕರೆದಿದ್ದಾರೆ. ಭಾರತದ ತ್ರಿವರ್ಣ ಧ್ವಜದ ಜೊತೆಗೆಯೇ ಇಬ್ಬರು ಕ್ಯಾಮೆರಾಗೆ ಪೋಸ್ ನೀಡಿದರು. ವಿಶೇಷ ಅಂದರೆ, ಬದ್ಧವೈರಿ ದೇಶದ ಆಟಗಾರನಾದರೂ, ಚೋಪ್ರಾ ಕರೆದ ತಕ್ಷಣವೇ ಆಗಮಿಸಿದ ನದೀಮ್‌, ತಿರಂಗಾ ಬಳಿ ನಿಂತು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದು ವಿಶೇಷವಾಗಿತ್ತು.

ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​​ಶಿಪ್​ ಫೈನಲ್​ಗೂ ಮುನ್ನ ತುಂಬಾ ಅದ್ಭುತ ಸ್ನೇಹಿತರೂ ಆಗಿರುವ ಅವರೀಗ 2024ರ ಪ್ಯಾರಿಸ್ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿದ್ದಾರೆ. ಅವರನ್ನು ಕರೆದ ನೀರಜ್ ಚೋಪ್ರಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇದುವರೆಗೂ 2 ಪದಕ ಮಾತ್ರ ಗೆದ್ದಿತ್ತು. ಇದೀಗ ಚೋಪ್ರಾ ಅವರು ಮತ್ತೊಂದು ಪದಕ ಗೆದ್ದು ಅದನ್ನು 3ಕ್ಕೆ ಏರಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಕಳೆದ ವರ್ಷ ಕೂಡ ಚೋಪ್ರಾ ಅವರೇ ಒಂದು ಪದಕ ತಂದುಕೊಟ್ಟಿದ್ದರು. ಅದರಲ್ಲಿ ಅವರೇ ಜಯಿಸಿದ್ದರೆ, ಮತ್ತೊಂದನ್ನು 2003ರ ಪ್ಯಾರಿಸ್ ವಿಶ್ವ ಕೂಟದ ಮಹಿಳೆಯರ ಲಾಂಗ್​ಜಂಪ್​ನಲ್ಲಿ ಅಂಜು ಬಾಬಿ ಜಾರ್ಚ್​ ಕಂಚಿನ ಪದಕ ಗೆಲ್ಲುವ ಮೂಲಕ ಮೊದಲ ಪದಕ ತಂದುಕೊಟ್ಟಿದ್ದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ