ವಿನೇಶ್ ಫೋಗಾಟ್ ಚಿನ್ನಕ್ಕೆ ಹೋರಾಟ, 2 ಪದಕ ಸುತ್ತು, ಮೀರಾಬಾಯಿ ಚಾನು ಕಣಕ್ಕೆ; ಆಗಸ್ಟ್ 7ರ ಭಾರತದ ವೇಳಾಪಟ್ಟಿ
Aug 07, 2024 08:08 AM IST
ವಿನೇಶ್ ಫೋಗಾಟ್ ಚಿನ್ನಕ್ಕೆ ಹೋರಾಟ, 2 ಪದಕ ಸುತ್ತು, ಮೀರಾಬಾಯಿ ಚಾನು ಕಣಕ್ಕೆ; ಆಗಸ್ಟ್ 7ರ ಭಾರತದ ವೇಳಾಪಟ್ಟಿ
- Paris Olympics 2024 Day 12, August 7: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದ 12ನೇ ದಿನದಲ್ಲಿ ಭಾರತದ ಸ್ಪರ್ಧೆಗಳ ವೇಳಾಪಟ್ಟಿ ಇಲ್ಲಿದೆ ನೋಡಿ.
2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ 11ನೇ ದಿನದಂದು ಭಾರತದ ಪಾಲಿಗೆ ಒಂದೂ ಪದಕವೂ ಸೇರಿಲ್ಲ. ಆದರೆ 12ನೇ ದಿನವಾದ ಇಂದು ಆಗಸ್ಟ್ 7ರಂದು ಭಾರತದ ಪದಕದ ಖಾತೆಗೆ ಚಿನ್ನ ಅಥವಾ ಬೆಳ್ಳಿ ಪದಕ ಸೇರ್ಪಡೆಯಾಗಲಿದೆ. ಮಹಿಳಾ ಫ್ರೀಸ್ಟೈಲ್ 50 ಕೆಜಿ ಸ್ಪರ್ಧೆಯಲ್ಲಿ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರು ಸಾರಾ ಹಿಲ್ಡೆಬ್ರಾಂಟ್ ವಿರುದ್ಧ ಚಿನ್ನದ ಪದಕದ ಪಂದ್ಯದಲ್ಲಿ ಸ್ಪರ್ಧಿಸಲಿದ್ದಾರೆ.
ಮಂಗಳವಾರ ನಡೆದ ಸೆಮಿಫೈನಲ್ನಲ್ಲಿ ವಿನೇಶ್, ಕ್ಯೂಬಾದ ಯೂಸ್ನೆಲಿಸ್ ಗುಜ್ಮನ್ ಲೋಪೆಜ್ ವಿರುದ್ಧ 5-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಕ್ವಾರ್ಟರ್ಫೈನಲ್ನಲ್ಲಿ ಯುಯಿ ಸುಸಾಕಿ ವಿರುದ್ಧ ಅಸಾಧ್ಯವಾದ ಗೆಲುವು ಸಾಧಿಸಿದರು. ಸೋಲಬೇಕಿದ್ದ ಪಂದ್ಯದಲ್ಲಿ ಕೊನೆಯ 10 ಸೆಕೆಂಡ್ಗಳಲ್ಲಿ 3 ಅಂಕ ಪಡೆದು ಸೆಮಿಫೈನಲ್ಗೆ ಅರ್ಹತೆ ಪಡೆದರು.
ಭಾರತದ ಮಹಿಳಾ ಟೇಬಲ್ ಟೆನಿಸ್ ತಂಡವು ಶ್ರೀಜಾ ಅಕುಲಾ, ಮಣಿಕಾ ಬಾತ್ರಾ ಮತ್ತು ಅರ್ಚನಾ ಗಿರೀಶ್ ಕಾಮತ್ ಅವರು ಮಧ್ಯಾಹ್ನ ಜರ್ಮನಿ ವಿರುದ್ಧ ಕ್ವಾರ್ಟರ್ ಫೈನಲ್ನಲ್ಲಿ ಸೆಣಸಲಿದ್ದಾರೆ. ವಿನೇಶ್ ಅವರಲ್ಲದೆ, ಭಾರತದ ಮತ್ತೊಬ್ಬ ಪ್ರಮುಖ ಕುಸ್ತಿಪಟು ಆಂಟಿಮ್ ಪಂಘಲ್ ಬುಧವಾರ ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಝೆನೆಪ್ ಯೆಟ್ಗಿಲ್ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.
ಮಹಿಳಾ 49 ಕೆಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಕೂಡ ತಮ್ಮ ಅಭಿಯಾನವನ್ನು ಇಂದು ಪ್ರಾರಂಭಿಸಲಿದ್ದು, ಅವರ ಮೂಲಕ ಭಾರತವು ಮತ್ತೊಂದು ಪದಕವನ್ನು ತನ್ನ ಕಿಟ್ಟಿಗೆ ಸೇರಿಸಲು ಎದುರು ನೋಡುತ್ತಿದೆ. ಅವರು ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಭಾರತದ ಮೊದಲ ವೇಟ್ ಲಿಫ್ಟರ್ ಆಗಲು ಪ್ರಯತ್ನಿಸಲಿದ್ದಾರೆ. ಟೊಕಿಯೊದಲ್ಲಿ 202 ಕೆಜಿ (87 ಕೆಜಿ 115 ಕೆಜಿ) ಭಾರ ಎತ್ತುವ ಮೂಲಕ ಬೆಳ್ಳಿ ಗೆದ್ದಿದ್ದರು.
ಪ್ಯಾರಿಸ್ ಒಲಿಂಪಿಕ್ಸ್: 12ನೇ ದಿನದ ಭಾರತದ ಸ್ಪರ್ಧೆಗಳ ವೇಳಾಪಟ್ಟಿ
ಅಥ್ಲೆಟಿಕ್ಸ್
ಮಿಶ್ರ ಮ್ಯಾರಥಾನ್ ನಡಿಗೆ ರಿಲೇ (ಪದಕ ಸುತ್ತು): ಪ್ರಿಯಾಂಕಾ ಗೋಸ್ವಾಮಿ ಮತ್ತು ಸೂರಜ್ ಪನ್ವಾರ್ - ಬೆಳಿಗ್ಗೆ 11.00
ಹೈ ಜಂಪ್ (ಅರ್ಹತೆ): ಸರ್ವೇಶ್ ಕುಶಾರೆ - ಮಧ್ಯಾಹ್ನ 1.35
100 ಮೀಟರ್ ಹರ್ಡಲ್ಸ್ (ರೌಂಡ್ 1): ಜ್ಯೋತಿ ಯರ್ರಾಜಿ (ಹೀಟ್ 4) - ಮಧ್ಯಾಹ್ನ 1.45
ಮಹಿಳಾ ಜಾವೆಲಿನ್ ಥ್ರೋ (ಅರ್ಹತೆ): ಅನ್ನು ರಾಣಿ - ಮಧ್ಯಾಹ್ನ 1.55
ಪುರುಷರ ಟ್ರಿಪಲ್ ಜಂಪ್ (ಅರ್ಹತೆ): ಪ್ರವೀಣ್ ಚಿತ್ರವೇಲ್ ಮತ್ತು ಅಬ್ದುಲ್ಲಾ ಅಬೂಬಕ್ಕರ್
ಪುರುಷರ 3,000 ಮೀಟರ್ ಸ್ಟೀಪಲ್ಚೇಸ್ (ಫೈನಲ್): ಅವಿನಾಶ್ ಸೇಬಲ್ - ರಾತ್ರಿ 1.13 (ಆಗಸ್ಟ್ 8, ಗುರುವಾರ)
ಗಾಲ್ಫ್
ಮಹಿಳಾ ವೈಯಕ್ತಿಕ (ರೌಂಡ್ 1): ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ - ಮಧ್ಯಾಹ್ನ 12.30
ಟೇಬಲ್ ಟೆನಿಸ್
ಮಹಿಳಾ ತಂಡ (ಕ್ವಾರ್ಟರ್ ಫೈನಲ್): ಭಾರತ (ಶ್ರೀಜಾ ಅಕುಲಾ, ಮಣಿಕಾ ಬಾತ್ರಾ ಮತ್ತು ಅರ್ಚನಾ ಗಿರೀಶ್ ಕಾಮತ್) ವಿರುದ್ಧ ಜರ್ಮನಿ - ಮಧ್ಯಾಹ್ನ 1.30
ಕುಸ್ತಿ
ಮಹಿಳಾ ಫ್ರೀಸ್ಟೈಲ್ 53 ಕೆಜಿ (ಕ್ವಾರ್ಟರ್ಫೈನಲ್) ಆಂಟಿಮ್ ಪಂಗಲ್ - ಸಂಜೆ 4.20 ರಿಂದ
ಮಹಿಳಾ ಫ್ರೀಸ್ಟೈಲ್ 53 ಕೆಜಿ (ಸೆಮಿಫೈನಲ್ - ಅರ್ಹತೆ ಪಡೆದರೆ): ಆಂಟಿಮ್ ಪಂಗಲ್ - ರಾತ್ರಿ 10.25 ರಿಂದ
ಮಹಿಳಾ ಫ್ರೀಸ್ಟೈಲ್ 50 ಕೆಜಿ (ಚಿನ್ನದ ಪದಕ ಪಂದ್ಯ): ವಿನೇಶ್ ಫೋಗಟ್ ಮತ್ತು ಸಾರಾ ಹಿಲ್ಡೆಬ್ರಾಂಟ್ - ರಾತ್ರಿ 9.45 ರಿಂದ
ವೇಟ್ ಲಿಫ್ಟಿಂಗ್
ಮಹಿಳೆಯರ 49 ಕೆಜಿ (ಪದಕ ಸುತ್ತು): ಸೈಖೋಮ್ ಮೀರಾಬಾಯಿ ಚಾನು - ರಾತ್ರಿ 11.00