ತಪ್ಪುಗಳನ್ನು ತಿದ್ದಿಕೊಳ್ಳುವುದರ ಜತೆಗೆ ತಂಡದಲ್ಲಿ ಬದಲಾವಣೆಯೂ ಅಗತ್ಯ; ಪ್ಲೇಯಿಂಗ್ 11, ಹವಾಮಾನ, ಪಿಚ್ ರಿಪೋರ್ಟ್-india vs sri lanka 3rd odi match preview probable xi colombo pitch report stats and weather report ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ತಪ್ಪುಗಳನ್ನು ತಿದ್ದಿಕೊಳ್ಳುವುದರ ಜತೆಗೆ ತಂಡದಲ್ಲಿ ಬದಲಾವಣೆಯೂ ಅಗತ್ಯ; ಪ್ಲೇಯಿಂಗ್ 11, ಹವಾಮಾನ, ಪಿಚ್ ರಿಪೋರ್ಟ್

ತಪ್ಪುಗಳನ್ನು ತಿದ್ದಿಕೊಳ್ಳುವುದರ ಜತೆಗೆ ತಂಡದಲ್ಲಿ ಬದಲಾವಣೆಯೂ ಅಗತ್ಯ; ಪ್ಲೇಯಿಂಗ್ 11, ಹವಾಮಾನ, ಪಿಚ್ ರಿಪೋರ್ಟ್

India vs Sri Lanka 3rd ODI: ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ ತಪ್ಪುಗಳನ್ನು ತಿದ್ದಿಕೊಳ್ಳುವುದರ ಜೊತೆಗೆ ತಂಡದಲ್ಲಿ ಬದಲಾವಣೆಯೂ ಅಗತ್ಯವಾಗಿದೆ. ಪ್ಲೇಯಿಂಗ್ 11, ಹವಾಮಾನ, ಪಿಚ್ ರಿಪೋರ್ಟ್ ಇಲ್ಲಿದೆ.

ತಪ್ಪುಗಳನ್ನು ತಿದ್ದಿಕೊಳ್ಳುವುದರ ಜತೆಗೆ ತಂಡದಲ್ಲಿ ಬದಲಾವಣೆಯೂ ಅಗತ್ಯ; ಪ್ಲೇಯಿಂಗ್ 11, ಹವಾಮಾನ, ಪಿಚ್ ರಿಪೋರ್ಟ್
ತಪ್ಪುಗಳನ್ನು ತಿದ್ದಿಕೊಳ್ಳುವುದರ ಜತೆಗೆ ತಂಡದಲ್ಲಿ ಬದಲಾವಣೆಯೂ ಅಗತ್ಯ; ಪ್ಲೇಯಿಂಗ್ 11, ಹವಾಮಾನ, ಪಿಚ್ ರಿಪೋರ್ಟ್

ಶ್ರೀಲಂಕಾ ಎದುರಿನ 3 ಪಂದ್ಯಗಳ ಟಿ20ಐ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್​ ಸ್ವೀಪ್ ಮಾಡಿದ ಟೀಮ್ ಇಂಡಿಯಾ, ಏಕದಿನ ಸರಣಿಯಲ್ಲಿ ಗೆಲುವಿಗಾಗಿ ಪರದಾಡುತ್ತಿದೆ. ಘಟಾನುಘಟಿ ಆಟಗಾರರೇ ತಂಡದಲ್ಲಿದ್ದರೂ ಅನಾನುಭವಿ ಬೌಲರ್​​ಗಳ ಎದುರು ರನ್ ಗಳಿಸಲು ಪರದಾಟ ನಡೆಸುತ್ತಿದ್ದಾರೆ. ಮೊದಲ ಪಂದ್ಯವನ್ನು ಟೈ ಮಾಡಿಕೊಂಡಿದ್ದ ರೋಹಿತ್ ಪಡೆ, 2ನೇ ಏಕದಿನದಲ್ಲಿ 32 ರನ್​ಗಳಿಂದ ಹೀನಾಯ ಸೋಲು ಅನುಭವಿಸಿದೆ. ಇದೀಗ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗುತ್ತಿದ್ದು, ಸರಣಿ ಸೋಲಿನ ಮುಖಭಂಗದಿಂದ ಪಾರಾಗಲು ಯೋಜನೆ ರೂಪಿಸುತ್ತಿದೆ.

ತಪ್ಪುಗಳಿಂದ ತಿದ್ದುಕೊಳ್ಳುವುದು ಅನಿವಾರ್ಯ

ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುವ ಅಗತ್ಯ ಏನಿತ್ತು. ಹೌದು, ಎರಡೂ ಏಕದಿನ ಪಂದ್ಯಗಳಲ್ಲಿ ಬ್ಯಾಟಿಂಗ್​ ಬದಲಾವಣೆ ಮಾಡಲಾಗಿದೆ. ಮೊದಲ ಏಕದಿನದಲ್ಲಿ ವಾಷಿಂಗ್ಟನ್​​ ಸುಂದರ್​​ನನ್ನು (5 ರನ್​ಗೆ ಔಟ್) 4ನೇ ಕ್ರಮಾಂಕದಲ್ಲಿ, ಎರಡನೇ ಏಕದಿನದಲ್ಲಿ ಮತ್ತದೇ ತಪ್ಪು ರಿಪೀಟ್ ಮಾಡಿದ ಕೋಚ್ ಗೌತಮ್ ಗಂಭೀರ್, 4ನೇ ಕ್ರಮಾಂಕದಲ್ಲಿ ಶಿವಂ ದುಬೆ ಅವರನ್ನು ಆಡಿಸಿದ್ದರು. ಆದರೆ ದುಬೆ ಡಕೌಟ್ ಆಗಿ ಹೊರ ನಡೆದರು. ಆದರೆ ನಾಲ್ಕನೇ ಕ್ರಮಾಂಕವು ಶ್ರೇಯಸ್ ಅಯ್ಯರ್​ ಸ್ಥಾನವಾಗಿದ್ದು, ಅವರನ್ನು ಕೆಳ ಕ್ರಮಾಂಕದಲ್ಲಿ ಆಡಿಸಲಾಯಿತು. ಹಾಗಾಗಿ ಬ್ಯಾಟಿಂಗ್ ಆರ್ಡರ್​​​ನಲ್ಲಿ ಪ್ರಯೋಗ ಮಾಡುವುದನ್ನು ಮೊದಲು ನಿಲ್ಲಿಸಬೇಕಿದೆ.

ಗಂಭೀರ್ ಬ್ಯಾಟಿಂಗ್ ಪ್ರಯೋಗದಿಂದ ಅಯ್ಯರ್​ ಮತ್ತು ರಾಹುಲ್​​ ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ. ಹಾಗಾಗಿ, ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಯ ಅಗತ್ಯತೆ ಇಲ್ಲ. ದೊಡ್ಡ ಇನ್ನಿಂಗ್ಸ್ ಕಟ್ಟುವ ಜತೆಗೆ ಪಂದ್ಯವನ್ನು ಅಂತಿಮ ಕ್ಷಣದವರೆಗೂ ಕೊಂಡೊಯ್ಯುವ ಜವಬ್ದಾರಿಯನ್ನು ನಿಭಾಯಿಸುವ ಸಾಮರ್ಥ್ಯ ಕಲೆ ರಾಹುಲ್ ಹಾಗೂ ಶ್ರೇಯಸ್​ಗೆ ಇದೆ. ಆದರೆ ಅಂತಹ ಆಟಗಾರರ ಕ್ರಮಾಂಕ ಬದಲಿಸುವುದು ಎಷ್ಟು ಸರಿ? ಇದು ತಂಡದ ಸ್ಥಿರತೆಗೆ ಪೆಟ್ಟು ಬೀಳುತ್ತಿದೆ. ಈ ಪಂದ್ಯದಲ್ಲಾದರೂ ಈ ಪ್ರಯೋಗ ನಡೆಸದಿರುವುದು ಕೂಡ ಮುಖ್ಯವಾಗಿದೆ.

ಪಂದ್ಯದಲ್ಲಿ 3 ಬದಲಾವಣೆ

ಎರಡು ಏಕದಿನಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಶಿವಂ ದುಬೆ, ಕೆಎಲ್ ರಾಹುಲ್ ಇಬ್ಬರನ್ನೂ ಹೊರಗಿಟ್ಟು ಕ್ರಮವಾಗಿ ರಿಯಾನ್ ಪರಾಗ್ ಮತ್ತು ರಿಷಭ್​ ಪಂತ್​ಗೆ ಅವಕಾಶ ನೀಡಲು ಮ್ಯಾನೇಜ್ಮೆಂಟ್ ಚಿಂತಿಸಿದೆ. 3ನೇ ಏಕದಿನ ಪಂದ್ಯ ಕೊಲೊಂಬೊ ಮೈದಾನದಲ್ಲೇ ನಡೆಯಲಿದೆ. ಸ್ಪಿನ್ನರ್​ಗಳ ವಿರುದ್ಧ ಇಬ್ಬರು ಸಹ ಉತ್ತಮ ಪ್ರದರ್ಶನ ನೀಡುವ ಕಾರಣ ಅವರನ್ನು ಪ್ಲೇಯಿಂಗ್​ 11ಗೆ ಕರೆ ತರಲು ಪ್ಲಾನ್ ನಡೀತಿದೆ. ಅದೇ ರೀತಿ ಬೌಲಿಂಗ್​ನಲ್ಲಿ ಅರ್ಷದೀಪ್ ಸಿಂಗ್ ಅಥವಾ ಮೊಹಮ್ಮದ್ ಸಿರಾಜ್ ಇಬ್ಬರಲ್ಲಿ ಒಬ್ಬರನ್ನು ಬೆಂಚ್​ ಮಾಡಿಸಿ ಯುವ ಆಕ್ರಮಣಕಾರಿ ಬೌಲರ್​​ ಹರ್ಷಿತ್​ ರಾಣಾಗೆ ಅವಕಾಶ ನೀಡಲು ಚಿಂತಿಸಿದೆ.

ಪಿಚ್ ರಿಪೋರ್ಟ್

ಮೂರನೇ ಪಂದ್ಯವೂ ಆರ್ ಪ್ರೇಮದಾಸದಲ್ಲೇ ನಡೆಯಲಿದ್ದು, ಇಲ್ಲಿ 150 ಏಕದಿನಗಳು ಜರುಗಿವೆ. ಮೊದಲು ಬ್ಯಾಟಿಂಗ್ ನಡೆಸಿದ ತಂಡವೇ ಹೆಚ್ಚು ಬಾರಿ ಗೆಲುವು ಸಾಧಿಸಿವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 80 ಪಂದ್ಯಗಳನ್ನು ಗೆದ್ದಿದ್ದರೆ, 2ನೇ ಬ್ಯಾಟಿಂಗ್ ಮಾಡಿದ ತಂಡಗಳು 59ರಲ್ಲಿ ಗೆದ್ದಿವೆ. ಎರಡನೇ ಇನ್ನಿಂಗ್ಸ್​​​ ವೇಳೆ ಸ್ಪಿನ್ನರ್​​ಗಳು ಪ್ರಭಾವ ಬೀರುವ ಕಾರಣ ಬ್ಯಾಟಿಂಗ್​ ನಡೆಸುವುದು ಸವಾಲಾಗಿದೆ. ಹಾಗಾಗಿ ಟಾಸ್ ಗೆದ್ದವರೇ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಹವಾಮಾನ ವರದಿ

ಮೊದಲ ಎರಡು ಪಂದ್ಯಗಳಿಗೂ ಮಳೆ ಅಡ್ಡಿ ಪಡಿಸಿರಲಿಲ್ಲ. ಆದರೆ ಹವಾಮಾನ ಇಲಾಖೆ ಮಳೆ ಅಡಚಣೆ ಉಂಟು ಮಾಡುವ ಎಚ್ಚರಿಕೆ ನೀಡಿತ್ತು. ಈಗ ಮೂರನೇ ಏಕದಿನಕ್ಕೂ ಶೇಕಡಾ 80ರಷ್ಟು ವರುಣ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ.

3ನೇ ಏಕದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್/ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್.