ಭಾರತ ತಂಡವನ್ನು ಕೆಡವಿದ ಜೆಫ್ರಿ ವಾಂಡರ್ಸೆ ಯಾರು; 1 ವರ್ಷ ನಿಷೇಧಕ್ಕೊಳಗಾಗಿದ್ದ ಸ್ಪಿನ್ನರ್ ಕುರಿತ ಅಚ್ಚರಿ ಸಂಗತಿಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ ತಂಡವನ್ನು ಕೆಡವಿದ ಜೆಫ್ರಿ ವಾಂಡರ್ಸೆ ಯಾರು; 1 ವರ್ಷ ನಿಷೇಧಕ್ಕೊಳಗಾಗಿದ್ದ ಸ್ಪಿನ್ನರ್ ಕುರಿತ ಅಚ್ಚರಿ ಸಂಗತಿಗಳು

ಭಾರತ ತಂಡವನ್ನು ಕೆಡವಿದ ಜೆಫ್ರಿ ವಾಂಡರ್ಸೆ ಯಾರು; 1 ವರ್ಷ ನಿಷೇಧಕ್ಕೊಳಗಾಗಿದ್ದ ಸ್ಪಿನ್ನರ್ ಕುರಿತ ಅಚ್ಚರಿ ಸಂಗತಿಗಳು

Who Is Jeffrey Vandersay: ಟೀಮ್ ಇಂಡಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 6 ವಿಕೆಟ್ ಉರುಳಿಸಿ ಮಿಂಚಿದ ಟೀಮ್ ಇಂಡಿಯಾದ ಜೆಫ್ರಿ ವಾಂಡರ್ಸೆ ಯಾರು? ಆತನ ಕುರಿತು ಇಲ್ಲಿವೆ ಸ್ವಾರಸ್ಯಕರ ಸಂಗತಿಗಳು.

ಭಾರತ ತಂಡವನ್ನು ಕೆಡವಿದ ಜೆಫ್ರಿ ವಾಂಡರ್ಸೆ ಯಾರು; 1 ವರ್ಷ ನಿಷೇಧಕ್ಕೊಳಗಾಗಿದ್ದ ಸ್ಪಿನ್ನರ್ ಕುರಿತ ಅಚ್ಚರಿ ಸಂಗತಿಗಳು
ಭಾರತ ತಂಡವನ್ನು ಕೆಡವಿದ ಜೆಫ್ರಿ ವಾಂಡರ್ಸೆ ಯಾರು; 1 ವರ್ಷ ನಿಷೇಧಕ್ಕೊಳಗಾಗಿದ್ದ ಸ್ಪಿನ್ನರ್ ಕುರಿತ ಅಚ್ಚರಿ ಸಂಗತಿಗಳು

ಯಾರೂ ಊಹಿಸಿರಲಿಲ್ಲ, ಜೆಫ್ರಿ ವಾಂಡರ್ಸೆ (34 ವರ್ಷ) 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಚಚ್ಚಿ ಕೆಡವುತ್ತಾರೆಂದು! ಯಾರೋ ಯಾಕೆ ಟೀಂ ಇಂಡಿಯಾ ಆಟಗಾರರೇ ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ, ಆಗಿದ್ದೇ ಬೇರೆ. ಅಗ್ರ-7 ಬ್ಯಾಟರ್​ಗಳ ಪೈಕಿ 6 ಮಂದಿ ಔಟ್ ಆಗಿದ್ದೇ ಜೆಫ್ರಿ ಸ್ಪಿನ್​ ದಾಳಿಗೆ. ತನ್ನ ಪಾಲಿನ 10 ಓವರ್​​ಗಳಲ್ಲಿ 33 ರನ್ ಬಿಟ್ಟುಕೊಟ್ಟು 6 ವಿಕೆಟ್ ಕಿತ್ತ ವಾಂಡರ್ಸೆ, 2018ರಲ್ಲಿ 1 ವರ್ಷ ನಿಷೇಧಕ್ಕೊಳಗಾಗಿದ್ದರು. ಪದಾರ್ಪಣೆಗೈದು 9 ವರ್ಷವಾದರೂ ಆಡಿದ್ದು ಮೂವತ್ತೇಳೇ ಪಂದ್ಯ.

ಜೆಫ್ರಿ ವಾಂಡರ್ಸೆ ಯಾರು? ಕೊಲಂಬೊದಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮಾಂತ್ರಿಕ ಸ್ಪೆಲ್ ಬೌಲ್ ಮಾಡಿದ್ದನ್ನು ಕಂಡಾಗಿನಿಂದ ಈ ಪ್ರಶ್ನೆ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗಳ ಮನಸ್ಸನ್ನು ಕಾಡುತ್ತಿದೆ. ಭಾರತದ ಮೊದಲ ವಿಕೆಟ್​ 97 ರನ್​ಗೆ ಕಳೆದುಕೊಂಡಿತು. ಅಲ್ಲಿಂದಾಚೆ ನಡೆದಿದ್ದು ಅಚ್ಚರಿ ಮತ್ತು ಪವಾಡ. ವಾಂಡರ್ಸೆ ನಡೆಸಿದ ಸ್ಪಿನ್​​ಗೆ ಭಾರತ ನಿಜವಾಗಲೂ ತತ್ತರಿಸಿ ಹೋಯಿತು. ಗೆಲ್ಲುತ್ತೇವೆ ಎಂದು ವಿಶ್ವಾಸ ಹೊಂದಿದ್ದ ಭಾರತದ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ ಜೆಫ್ರಿ ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಂಡರು.

ಭಾರತದ ವಿಶ್ವ ದರ್ಜೆಯ ಬ್ಯಾಟರ್​ಗಳನ್ನು ಜೆಫ್ರಿ ಸಾಧಾರಣವಾಗಿ ಕಾಣುವಂತೆ ಕಂಡರು. ಸ್ಪಿನ್​ಗೆ ಅತ್ಯುತ್ತಮವಾಗಿ ಬ್ಯಾಟ್ ಬೀಸುತ್ತಾರೆ ಎಂದು ಬೀಗುತ್ತಿದ್ದ ಬ್ಯಾಟರ್​​​ಗಳು, ವಾಂಡರ್ಸೆ ಆಫ್​​ಸ್ಪಿನ್​​​​ ಮಾಯಾ ಜಾಲಕ್ಕೆ ಉತ್ತರವೇ ಇರಲಿಲ್ಲ. ಭಾರತ ತಂಡವನ್ನು 32 ರನ್‌ಗಳಿಂದ ಸೋಲಿಸಲು ಸಹಾಯ ಮಾಡಿ ಸ್ಪಿನ್ನರ್​, 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ತಂದುಕೊಟ್ಟರು. 2ನೇ ಏಕದಿನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಎಲ್ಲರಿಗೂ ಚಿರಪರಿತರಾಗಿದ್ದಾರೆ. ಜನರಿಗೆ ತಿಳಿದಿಲ್ಲದ ಸಂಗತಿಯೆಂದರೆ ಅವರು ಸುಮಾರು ಒಂದು ದಶಕದಿಂದ ಶ್ರೀಲಂಕಾ ಕ್ರಿಕೆಟ್ ತಂಡದ ಭಾಗವಾಗಿದ್ದಾರೆ ಎಂಬುದು.

ಜೆಫ್ರಿ ವಾಂಡರ್ಸೆ ಬಗ್ಗೆ ಆಸಕ್ತಿದಾಯಕ ಸಂಗತಿಗಳು

2015ರಲ್ಲಿ ಪದಾರ್ಪಣೆ: ಜೆಫ್ರಿ ವಾಂಡರ್ಸೆ ಅವರು 2015ರ ಜುಲೈ 30 ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡದ ವಿರುದ್ಧದ ಟಿ20ಐನಲ್ಲಿ ಶ್ರೀಲಂಕಾ ಪರ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು. ಅವರ ಕೊನೆಯ ಟಿ20ಐ ಪಂದ್ಯ ಭಾರತದ ವಿರುದ್ಧ ಧರ್ಮಶಾಲಾದಲ್ಲಿ ನಡೆದಿತ್ತು.

ಮರೆಯಲಾಗದ ಚೊಚ್ಚಲ ಏಕದಿನ ಪಂದ್ಯ: 2015ರ ಡಿಸೆಂಬರ್​ 28ರಂದು ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್​ ಚರ್ಚ್​​ನಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಆ ಪಂದ್ಯದಲ್ಲಿ ಭಾರತದ ವಿರುದ್ಧ ಅವರ ಸ್ಪೆಲ್‌ಗಿಂತ ಭಿನ್ನವಾಗಿತ್ತು. ವಾಂಡರ್ಸೆ ಅವರ ಮೊದಲ ಎರಡು ಓವರ್​​ಗಳಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ 34 ರನ್‌ ಚಚ್ಚಿದ್ದರು. ಹೆಚ್ಚು ರನ್ ಲೀಕ್ ಮಾಡಿದ್ದ ಕಾರಣ ಮತ್ತೆ ಬೌಲಿಂಗ್ ಮಾಡಲಿಲ್ಲ.

ಟೆಸ್ಟ್ ಪದಾರ್ಪಣೆಗಾಗಿ ದೀರ್ಘ ಕಾಯುವಿಕೆ: 2015ರಲ್ಲಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರೂ ಟೆಸ್ಟ್​ಗೆ ಪದಾರ್ಪಣೆ ಮಾಡಲು ದೀರ್ಘಕಾಲ ತೆಗೆದುಕೊಂಡರು. 2017ರಲ್ಲಿ ಭಾರತದ ಸರಣಿಗೆ ರಂಗಣ್ಣ ಹೆರಾತ್ ಬದಲಿಗೆ ಜೆಫ್ರಿ ಅವಕಾಶ ಪಡೆದಿದ್ದರೂ ಪ್ಲೇಯಿಂಗ್​ 11ನಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಇದಾದ ಐದು ವರ್ಷಗಳ ನಂತರ 2022ರ ಜೂನ್​ನಲ್ಲಿ ಗಾಲೆಯಲ್ಲಿ ನಡೆದ ಅಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ್ದರು. ಅದೇ ಅವರ ಮೊದಲ ಹಾಗೂ ಕೊನೆಯ ಟೆಸ್ಟ್​.

ಒಂದು ವರ್ಷ ಅಮಾನತು: 2018ರ ಜುಲೈನಲ್ಲಿ ಜೆಫ್ರಿ ವಾಂಡರ್ಸೆ ಅವರನ್ನು ಶ್ರೀಲಂಕಾ ಕ್ರಿಕೆಟ್ (SLC) ಒಂದು ವರ್ಷದ ಅಮಾನತು ಮತ್ತು ವಾರ್ಷಿಕ ಒಪ್ಪಂದದ ಶುಲ್ಕದ ಶೇ. 20 ರಷ್ಟು ದಂಡ ವಿಧಿಸಿತ್ತು. ವೆಸ್ಟ್ ಇಂಡೀಸ್ ಪ್ರವಾಸದ ಸಮಯದಲ್ಲಿ ಆಫ್-ಸ್ಪಿನ್ನರ್ ನೈಟ್ ಔಟ್ ಹೋಗಿ ಸಮಯಕ್ಕೆ ಸರಿಯಾಗಿ ಟೀಮ್ ಹೋಟೆಲ್‌ಗೆ ಮರಳದ ಕಾರಣ ಈ ಕಠಿಣ ಕ್ರಮವನ್ನು ಕೈಗೊಳ್ಳಲಾಗಿತ್ತು.

ದೊಡ್ಡ ಟೂರ್ನಿಗಳಲ್ಲಿ ಫ್ಲಾಪ್ ಶೋ: ಭಾರತ ತಂಡದ ವಿರುದ್ಧ ಅಬ್ಬರಿಸಿದ ಜೆಫ್ರಿ ವಾಂಡರ್ಸೆ, ಶ್ರೀಲಂಕಾ ಪರ 2 ಐಸಿಸಿ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದಾರೆ. ಭಾರತದಲ್ಲಿ ನಡೆದ 2016ರ ಟಿ20 ವಿಶ್ವಕಪ್ ಅವರ ಮೊದಲ ಪ್ರಮುಖ ಟೂರ್ನಿಯಾಗಿತ್ತು. ಅವರು ಟೂರ್ನಿಯಲ್ಲಿ ತಮ್ಮ ತಂಡದ ಪರ ಜಂಟಿ-ಅತಿ ಹೆಚ್ಚು ವಿಕೆಟ್-ಟೇಕರ್ ಆಗಿ ಮುಗಿಸಿದರು. 2019ರ ಏಕದಿನ ವಿಶ್ವಕಪ್​​​ಗೂ ಆಯ್ಕೆಯಾಗಿದ್ದ ಜೆಫ್ರಿ, ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 7 ಓವರ್‌ಗಳಲ್ಲಿ 50 ರನ್‌ ಕೊಟ್ಟರು. ಆದರೆ ಆ ಟೂರ್ನಿಯಲ್ಲಿ ಅದೇ ಅವರ ಕೊನೆಯ ಪಂದ್ಯವಾಯಿತು. ಆಡಿದ್ದು ಕೂಡ ಒಂದೇ ಪಂದ್ಯ.

ಜೆಫ್ರಿ ವಾಂಡರ್ಸೆ ವೃತ್ತಿಜೀವನ

ಟೆಸ್ಟ್​: 1 ಪಂದ್ಯ, 2 ವಿಕೆಟ್, ಅತ್ಯುತ್ತಮ 2/68

ಏಕದಿನ: 22 ಪಂದ್ಯ, 33 ವಿಕೆಟ್, ಅತ್ಯುತ್ತಮ 6/33

ಟಿ20ಐ: 14 ಪಂದ್ಯ, 7 ವಿಕೆಟ್, ಅತ್ಯುತ್ತಮ 2/26

Whats_app_banner