ವರ್ಷದಿಂದ ವರ್ಷಕ್ಕೆ ಏರಿದೆ ಪ್ರೊ ಕಬಡ್ಡಿ ಲೀಗ್ ಪ್ರೈಜ್ ಮನಿ ಗ್ರಾಫ್; ಮೊದಲ ಆವೃತ್ತಿಯಲ್ಲಿ ಇದ್ದಿದ್ದೆಷ್ಟು, ಈಗಿರುವುದೆಷ್ಟು?
Mar 04, 2024 06:00 AM IST
ವರ್ಷದಿಂದ ವರ್ಷಕ್ಕೆ ಏರಿದ ಪ್ರೊ ಕಬಡ್ಡಿ ಲೀಗ್ ಪ್ರೈಜ್ ಮನಿ ಗ್ರಾಫ್; ಮೊದಲ ಆವೃತ್ತಿಯಲ್ಲಿ ಇದ್ದಿದ್ದೆಷ್ಟು, ಈಗಿರುವುದೆಷ್ಟು?
- PKL 2024 Final Prize Money : ವರ್ಷದಿಂದ ವರ್ಷಕ್ಕೆ ಕಬಡ್ಡಿ ಬಹುಮಾನದ ಗ್ರಾಫ್ ಏರುತ್ತಿದ್ದು, 2014ರಲ್ಲಿ ನಡೆದ ಮೊದಲ ಸೀಸನ್ನಿಂದ 2024ರ 10ನೇ ಆವೃತ್ತಿವರೆಗೂ ಪ್ರೈಜ್ ಮನಿ ಎಷ್ಟೆಲ್ಲಾ ಏರಿದೆ ಎಂಬುದನ್ನು ಈ ಮುಂದೆ ನೋಡೋಣ.
ಪ್ರೊ ಕಬಡ್ಡಿ ಲೀಗ್ ಸೀಸನ್ 10 (Pro Kabaddi League 10) ಇತ್ತೀಚೆಗಷ್ಟೇ ಮುಕ್ತಾಯಗೊಂಡಿತು. ಫೈನಲ್ನಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಗೆಲುವು ಸಾಧಿಸಿದ ಪುಣೇರಿ ಪಲ್ಟನ್ (Puneri Paltan vs Haryana steelers) ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿತು. ಮಾರ್ಚ್ 1ರಂದು ಹೈದರಾಬಾದ್‌ನ ಗಚ್ಚಿ ಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಪುಣೆ 28-25 ಅಂಕಗಳ ಅಂತರದಿಂದ ತಂಡ ಟ್ರೋಫಿ ಗೆದ್ದತು.
ಕಬಡ್ಡಿ ಕಿರೀಟಕ್ಕೆ ಮುತ್ತಿಕ್ಕಿದ ಪುಣೇರಿ ತಂಡಕ್ಕೆ 3 ಕೋಟಿ ರೂಪಾಯಿ ಸಿಕ್ಕಿತು. ರನ್ನರ್ಅಪ್ ಹರಿಯಾಣಗೆ 1.80 ಕೋಟಿ ಸಿಕ್ಕಿತು. ಗ್ರಾಮೀಣ ಸೊಗಡಿನ ಕ್ರೀಡೆ ಇಂದು ಜಾಗತಿಕ ಮಟ್ಟದಲ್ಲಿ ಬೆಳೆದಿದೆ. ಸಾಕಷ್ಟು ಜನಪ್ರಿಯತೆ ಗಳಿಸಿದೆ. ಕಬಡ್ಡಿ ವೀಕ್ಷಣೆಯಲ್ಲೂ ದಾಖಲೆ ಪಡೆಯುತ್ತಿದೆ. ಅಲ್ಲದೆ, ವರ್ಷದಿಂದ ವರ್ಷಕ್ಕೆ ಕಬಡ್ಡಿ ಬಹುಮಾನದ ಗ್ರಾಫ್ ಏರುತ್ತಿದೆ. 2014ರಲ್ಲಿ ನಡೆದ ಮೊದಲ ಸೀಸನ್ನಿಂದ 10ನೇ ಆವೃತ್ತಿವರೆಗೂ ಪ್ರೈಜ್ ಮನಿ ಎಷ್ಟೆಲ್ಲಾ ಏರಿದೆ ಎಂಬುದನ್ನು ಈ ಮುಂದೆ ನೋಡೋಣ.
ಪ್ರೊ ಕಬಡ್ಡಿ ಸೀಸನ್ 1 ಬಹುಮಾನದ ಮೊತ್ತ ಎಷ್ಟಿತ್ತು?
ಒಟ್ಟು ಬಹುಮಾನದ ಮೊತ್ತ - 1 ಕೋಟಿ ರೂಪಾಯಿ
ವಿಜೇತರಿಗೆ ಸಿಕ್ಕಿದ್ದ ಮೊತ್ತ - 50 ಲಕ್ಷ ರೂಪಾಯಿ
ರನ್ನರ್ಅಪ್ಗೆ ಸಿಕ್ಕಿದ್ದ ಮೊತ್ತ - 30 ಲಕ್ಷ ರೂಪಾಯಿ
3ನೇ ಸ್ಥಾನಕ್ಕೆ ಸಿಕ್ಕಿದ್ದ ಮೊತ್ತ - 20 ಲಕ್ಷ ರೂಪಾಯಿ
ಸೀಸನ್-2, ಸೀಸನ್-3, ಸೀಸನ್-4ರ ಪ್ರೈಜ್ ಮನಿ ಎಷ್ಟಿತ್ತು?
ಒಟ್ಟು ಬಹುಮಾನದ ಮೊತ್ತ - 1.80 ಕೋಟಿ ರೂಪಾಯಿ
ವಿಜೇತರಿಗೆ - 1 ಕೋಟಿ ರೂಪಾಯಿ
ರನ್ನರ್ಅಪ್ಗೆ - 50 ಲಕ್ಷ ರೂಪಾಯಿ
3 ನೇ ಸ್ಥಾನಕ್ಕೆ - 30 ಲಕ್ಷ ರೂಪಾಯಿ
ಪ್ರೊ ಕಬಡ್ಡಿ 5 ರಿಂದ ಸೀಸನ್ 10ರವರೆಗೂ ಬಹುಮಾನದ ಮೊತ್ತ
ಒಟ್ಟು ಬಹುಮಾನದ ಮೊತ್ತ - 8 ಕೋಟಿ ರೂಪಾಯಿ
ವಿಜೇತರು - 3 ಕೋಟಿ ರೂಪಾಯಿ
ರನ್ನರ್ ಅಪ್ - 1.8 ಕೋಟಿ ರೂಪಾಯಿ
3 ನೇ ಸ್ಥಾನ - 90 ಲಕ್ಷ ರೂಪಾಯಿ
4 ನೇ ಸ್ಥಾನ - 90 ಲಕ್ಷ ರೂಪಾಯಿ
5 ನೇ ಸ್ಥಾನ - 45 ಲಕ್ಷ ರೂಪಾಯಿ
6 ನೇ ಸ್ಥಾನ - 45 ಲಕ್ಷ ರೂಪಾಯಿ
ಅಮೂಲ್ಯವಾದ ಆಟಗಾರ - 15 ಲಕ್ಷ ರೂಪಾಯಿ
ಅತ್ಯುತ್ತಮ ರೈಡರ್ - 10 ಲಕ್ಷ ರೂಪಾಯಿ
ಏಸ್ ಡಿಫೆಂಡರ್ - 10 ಲಕ್ಷ ರೂಪಾಯಿ
ಉದಯೋನ್ಮುಖ ಆಟಗಾರ - 8 ಲಕ್ಷ ರೂಪಾಯಿ
ಅತ್ಯುತ್ತಮ ತೀರ್ಪುಗಾರ (ಪುರುಷ) - 3.5 ಲಕ್ಷ ರೂಪಾಯಿ
ಅತ್ಯುತ್ತಮ ರೆಫರಿ (ಮಹಿಳೆ) - 3.5 ಲಕ್ಷ ರೂಪಾಯಿ