logo
ಕನ್ನಡ ಸುದ್ದಿ  /  ಕ್ರೀಡೆ  /  77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್: 13 ವರ್ಷದ ದಾಖಲೆ ಮುರಿದ ಹಶಿಕಾ, ಕರ್ನಾಟಕಕ್ಕೆ 6 ಚಿನ್ನ, 3 ಬೆಳ್ಳಿ

77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್‌ಶಿಪ್: 13 ವರ್ಷದ ದಾಖಲೆ ಮುರಿದ ಹಶಿಕಾ, ಕರ್ನಾಟಕಕ್ಕೆ 6 ಚಿನ್ನ, 3 ಬೆಳ್ಳಿ

Prasanna Kumar P N HT Kannada

Sep 14, 2024 06:15 PM IST

google News

13 ವರ್ಷದ ದಾಖಲೆ ಮುರಿದ ಹಶಿಕಾ

    • Sports News: 77ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್​ಶಿಪ್​​-2024 ಟೂರ್ನಿಯಲ್ಲಿ ಕರ್ನಾಟಕದ ಹಶಿಕಾ ರಾಮಚಂದ್ರ 13 ವರ್ಷದ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಯಾವ ಯಾವ ವಿಭಾಗದಲ್ಲಿ ಯಾರ್ಯಾರು ಪದಕ ಜಯಿಸಿದ್ದಾರೆ ಎಂಬುದನ್ನು ಈ ಮುಂದೆ ತಿಳಿಯೋಣ.
13 ವರ್ಷದ ದಾಖಲೆ ಮುರಿದ ಹಶಿಕಾ
13 ವರ್ಷದ ದಾಖಲೆ ಮುರಿದ ಹಶಿಕಾ

ಮಂಗಳೂರು: ಕರ್ನಾಟಕದ ಹಶಿಕಾ ರಾಮಚಂದ್ರ ಅವರು ಮಂಗಳೂರಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ನಡೆದ 77ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಶಿಪ್‌ನಲ್ಲಿ (77th National Senior Swimming Championship) ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಮಹಿಳೆಯರ ವಿಭಾಗದ 400 ಮೀಟರ್​ ಪ್ರೀಸ್ಟೈಲ್‌ನಲ್ಲಿ ಕರ್ನಾಟಕದ ಹಶಿಕಾ ರಾಮಚಂದ್ರ 4 ನಿಮಿಷ, 24 ಸೆಕೆಂಡ್, 70 ಮಿಲಿ ಸೆಕೆಂಡ್​ಗಳಲ್ಲಿ ಗುರಿ ತಲುಪುವ ಮೂಲಕ 13 ವರ್ಷ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

2011ರಲ್ಲಿ ಪೊಲೀಸ್ ಇಲಾಖೆಯನ್ನು ಪ್ರತಿನಿಸಿದ್ದ ರಾಂಚಿಯ ರಿಚಾ ಮಿಶ್ರಾ (4 ನಿಮಿಷ, 25 ಸೆಕೆಂಡ್, 76 ಮಿಲಿ ಸೆಕೆಂಡ್​​) ಮಹಿಳೆಯರ 400 ಮೀಟರ್​ ಪ್ರೀಸ್ಟೈಲ್‌ನಲ್ಲಿ ದಾಖಲೆ ಮಾಡಿದ್ದರು. 13 ವರ್ಷಗಳ ಬಳಿಕ ಈ ದಾಖಲೆಯನ್ನು ರಾಜ್ಯದ ಹಶಿಕಾ ರಾಮಚಂದ್ರ ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ತೆಲಂಗಾಣದ ವೃತಿ ಅಗರವಾಲ್ ದ್ವಿತೀಯ ಸ್ಥಾನ, ದೆಹಲಿಯ ಸಚ್‌ದೇವ್ ತೃತೀಯ ಸ್ಥಾನ ಪಡೆದಿದ್ದಾರೆ.

ಮಿಂಚಿದ ರಾಜ್ಯದ ಅನೀಶ್ ಗೌಡ, ಆಕಾಶ್

ಪುರುಷರ ವಿಭಾಗದ 400 ಮೀಟರ್​ ಪ್ರಿಸ್ಟೈಲ್‌ನಲ್ಲಿ ಕರ್ನಾಟಕದ ಅನೀಶ್ ಎಸ್ ಗೌಡ 3 ನಿಮಿಷ, 56 ಸೆಕೆಂಡ್, 59 ಮಿಲಿ ಸೆಕೆಂಡ್​​ಗಳಲ್ಲಿ ಕ್ರಮಿಸಿ ಚಿನ್ನದ ಪದಕಕ್ಕೆ ಭಾಜನರಾದರು. ಇದೇ ವಿಭಾಗದಲ್ಲಿ ಕರ್ನಾಟಕದವರೇ ಆದ ದರ್ಶನ್ ಎಸ್ ದ್ವಿತೀಯ ಸ್ಥಾನ, ಆರ್‌ಎಸ್‌ಬಿಯ ದೇವಾಂಶ್ ಮಹೇಶ್ ಕುಮಾರ್ ಪರ್ಮರ್ ತೃತೀಯ ಸ್ಥಾನ ಪಡೆದಿದ್ದಾರೆ.

ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ಆಕಾಶ್ ಮಣಿ (56.15 ಸೆಕೆಂಡ್) ಅಗ್ರಸ್ಥಾನಿಯಾದರೆ, ಮಹಾರಾಷ್ಟ್ರದ ರಿಷಬ್ ಅನುಪಮ್ ದಾಸ್ ದ್ವಿತೀಯ, ಎಸ್‌ಎಸ್‌ಸಿಬಿಯ ವಿನಾಯಕ್ ವಿಜಯ್ ತೃತೀಯ ಸ್ಥಾನ ಪಡೆದಿದ್ದಾರೆ.

200 ಮೀಟರ್​ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ತಮಿಳುನಾಡಿನ ಧನುಷ್ ಸುರೇಶ್ (2 ನಿಮಿಷ, 18 ಸೆಕೆಂಡ್, 85 ಮಿಲಿ ಸೆಕೆಂಡ್​​) ಪ್ರಥಮ, ಕರ್ನಾಟಕದ ಮಣಿಕಂಠ ಎಲ್ (2 ನಿಮಿಷ, 20 ಸೆಕೆಂಡ್, 66 ಮಿಲಿ ಸೆಕೆಂಡ್​) ದ್ವಿತೀಯ, ಆರ್‌ಎಸ್‌ಪಿಬಿಯ ಅನೂಪ್ ಅಗಸ್ಟಿನ್ ತೃತೀಯ ಸ್ಥಾನ ಪಡೆದಿದ್ದಾರೆ.

50 ಮೀಟರ್​ ಬಟರ್ ಫ್ಲೈ ವಿಭಾಗದಲ್ಲಿ ತಮಿಳುನಾಡಿನ ಬಿ ಬೆನೆಡಿಕ್ಟನ್ ರೋಹಿತ್ (24.22 ಸೆಕೆಂಡ್) ಪ್ರಥಮ ಸ್ಥಾನ, ಮಹಾರಾಷ್ಟ್ರದ ಮಿಹಿರ್ ಆಮ್ರೆ ದ್ವಿತೀಯ, ಅದಿತ್ಯಾ ದಿನೇಶ್ ತೃತೀಯ ಸ್ಥಾನ ಪಡೆದಿದ್ದಾರೆ.

ಮಹಿಳೆಯರ ವಿಭಾಗದ 200 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಕರ್ನಾಟಕದ ತನ್ಯಾ ಷಡಕ್ಷರಿ (2 ನಿಮಿಷ, 40 ಸೆಕೆಂಡ್, 54 ಮಿಲಿ ಸೆಕೆಂಡ್) ಮೊದಲಿಗರಾದರೆ, ಮಹಾರಾಷ್ಟ್ರದ ಜ್ಯೋತಿ ಬಾಜಿರಾವ್ ಪಾಟೀಲ್ ದ್ವಿತೀಯ, ಆರ್‌ಎಸ್‌ಪಿಬಿಯ ಹರ್ಷಿತಾ ಜಯರಾಮ್ ತೃತೀಯ ಸ್ಥಾನ ಪಡೆದಿದ್ದಾರೆ.

100 ಮೀಟರ್​ ಬ್ಯಾಕ್‌ಸ್ಟ್ರೋಕ್‌ನಲ್ಲಿ ಬಂಗಾಳದ ಸೌಬ್ರಿಟಿ ಮೊಂಡಾಲ್ (1 ನಿಮಿಷ, 05 ಸೆಕೆಂಡ್, 51 ಮಿಲಿ ಸೆಕೆಂಡ್​) ಪ್ರಥಮ ಸ್ಥಾನ, ಒಡಿಶಾದ ಪ್ರತ್ಯಾಸ ರೇ ದ್ವಿತೀಯ, ಮಹಾರಾಷ್ಟ್ರದ ರುಜುಟ ಪ್ರಸಾದ್ ತೃತೀಯ ಸ್ಥಾನ ಪಡೆದಿದ್ದಾರೆ.

50 ಮೀಟರ್​ ಬಟರ್‌ಫ್ಲೈ ವಿಭಾಗದಲ್ಲಿ ಬಿಹಾರದ ಮಹಿ ಶ್ವೇತರಾಜ್ (28.33 ಸೆಕೆಂಡ್) ಪ್ರಥಮ, ಕರ್ನಾಟಕದ ಮಾನ್ವಿ ವರ್ಮಾ ದ್ವಿತೀಯ ಸ್ಥಾನ, ಮಹಾರಾಷ್ಟ್ರದ ರುಜುಟ ಪ್ರಸಾದ್ ತೃತೀಯ ಸ್ಥಾನ ಪಡೆದಿದ್ದಾರೆ.

ಪುರುಷರ 4X200 ಮೀಟರ್ ಫ್ರೀಸ್ಟೈಲ್ ರಿಲೇಯಲ್ಲಿ ಕರ್ನಾಟಕ ತಂಡ (7 ನಿಮಿಷ, 42 ಸೆಕೆಂಡ್, 90 ಸೆಕೆಂಡ್) ಪ್ರಥಮ ಸ್ಥಾನ, ಆರ್‌ಎಸ್‌ಪಿಬಿ ತಂಡ ದ್ವಿತೀಯ ಸ್ಥಾನ, ಎಸ್‌ಎಸ್‌ಸಿಬಿ ತೃತೀಯ ಸ್ಥಾನ ಪಡೆದಿದ್ದಾರೆ.

ಮಹಿಳಾ ವಿಭಾಗದ 4X200 ಮೀಟರ್ ಫ್ರೀಸ್ಟೈಲ್ ರಿಲೇಯ

ಷ, 54 ಸೆಕೆಂಡ್, 85 ಮಿಲಿ ಸೆಕೆಂಡ್​) ಪ್ರಥಮ ಸ್ಥಾನ, ಮಹಾರಾಷ್ಟ್ರ ದ್ವಿತೀಯ ಹಾಗೂ ಒಡಿಶಾ ತೃತೀಯ ಸ್ಥಾನ ಗಳಿಸಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ