ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bakrid 2024: ಮುಸಲ್ಮಾನರ ಪವಿತ್ರ ಹಬ್ಬ ಬಕ್ರೀದ್‌ ಆಚರಣೆಯ ಮಹತ್ವವೇನು? ಈ ಬಾರಿ ಹಜ್‌ ಯಾತ್ರೆ ಯಾವಾಗ ಆರಂಭ?

Bakrid 2024: ಮುಸಲ್ಮಾನರ ಪವಿತ್ರ ಹಬ್ಬ ಬಕ್ರೀದ್‌ ಆಚರಣೆಯ ಮಹತ್ವವೇನು? ಈ ಬಾರಿ ಹಜ್‌ ಯಾತ್ರೆ ಯಾವಾಗ ಆರಂಭ?

ಇಸ್ಲಾಮಿಕ್ ಕ್ಯಾಲೆಂಡರ್‌ನ ಹನ್ನೆರಡನೇ ತಿಂಗಳಾದ ಧುಲ್-ಹಿಜ್ಜಾ/ದುಲ್-ಹಿಜ್ಜಾದ ಹತ್ತನೇ ದಿನದಂದು ಬಕ್ರೀದ್‌ ಆಚರಿಸಲಾಗುತ್ತದೆ. ಬಕ್ರಾ ಈದ್, ಬಕ್ರೀದ್, ಈದ್ ಕುರ್ಬಾನ್ ಅಥವಾ ಕುರ್ಬಾನ್ ಬೈರಾಮಿ, ಈದ್‌ ಉಲ್‌ ಅಧಾ ಎಂದೆಲ್ಲಾ ಕರೆಯುವ ಈ ಹಬ್ಬವನ್ನು ಜೂನ್‌ 17 ರಂದು ಆಚರಿಸಲಾಗುತ್ತಿದೆ.

ಮುಸಲ್ಮಾನರ ಪವಿತ್ರ ಹಬ್ಬ ಬಕ್ರೀದ್‌ ಆಚರಣೆ ಹಿಂದಿನ ಮಹತ್ವವೇನು? ಈ ಬಾರಿ ಹಜ್‌ ಯಾತ್ರೆ ಯಾವಾಗ ಆರಂಭ?
ಮುಸಲ್ಮಾನರ ಪವಿತ್ರ ಹಬ್ಬ ಬಕ್ರೀದ್‌ ಆಚರಣೆ ಹಿಂದಿನ ಮಹತ್ವವೇನು? ಈ ಬಾರಿ ಹಜ್‌ ಯಾತ್ರೆ ಯಾವಾಗ ಆರಂಭ?

ಈದ್-ಉಲ್-ಅಧಾ 2024: ಮುಸ್ಲಿಂರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್‌ ಕೂಡಾ ಒಂದು. ಇದನ್ನು ಭಾರತದಲ್ಲಿ ಬಕ್ರೀದ್‌ ಎಂದು ವಿದೇಶಗಳಲ್ಲಿ ಈದ್‌ ಉಲ್‌ ಅಧಾ ಎಂದೂ ಕರೆಯಲಾಗುತ್ತದೆ. ಬಕ್ರಾ ಈದ್, ಬಕ್ರೀದ್, ಈದ್ ಕುರ್ಬಾನ್ ಅಥವಾ ಕುರ್ಬಾನ್ ಬೈರಾಮಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಹನ್ನೆರಡನೇ ತಿಂಗಳಾದ ಧುಲ್-ಹಿಜ್ಜಾ/ದುಲ್-ಹಿಜ್ಜಾದ ಹತ್ತನೇ ದಿನದಂದು ಇದನ್ನು ಆಚರಿಸಲಾಗುತ್ತದೆ.

ಈ ಬಾರಿ ಜೂನ್‌ 17, ಸೋಮವಾರದಂದು ಬಕ್ರೀದ್‌ ಆಚರಿಸಾಗುತ್ತದೆ. ಇದಕ್ಕೂ ಒಂದು ದಿನ ಮುಂಚಿತವಾಗಿ, ಒಂಬತ್ತನೇ ದಿನ ಕೂಡಾ ಅತ್ಯಂತ ಪವಿತ್ರ ದಿನವಾಗಿದೆ. ಈ ವರ್ಷ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮುಸ್ಲಿಮರು ಜೂನ್ 16 ರಂದು ಸಂಜೆ ಅರಾಫತ್ ದಿನವನ್ನು ಆಚರಿಸುತ್ತಾರೆ. ಈದ್-ಉಲ್-ಅಧಾವನ್ನು ಅರಾಫತ್ ದಿನವಾದ ಹಜ್‌ನ ಮುಖ್ಯ ಆಚರಣೆಯ ನಂತರ ಆಚರಿಸಲಾಗುತ್ತದೆ. ಅಂದರೆ ಭಾರತದಲ್ಲಿನ ಮುಸ್ಲಿಮರು ಜೂನ್ 17, ಸೋಮವಾರದಂದು ಬಕ್ರೀದ್‌ ಹಬ್ಬವನ್ನು ಆಚರಿಸುತ್ತಿದ್ದಾರೆ.

ತ್ಯಾಗ ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಮುಂಜಾನೆ ಮಸೀದಿಗೆ ತೆರಳಿ ನಮಾಜ್‌ ಸಲ್ಲಿಸುವ ಮೂಲಕ ಬಕ್ರೀದ್‌ ಹಬ್ಬ ಆರಂಭವಾಗುತ್ತದೆ. ನಂತರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ಕುರಿ/ಮೇಕೆಯನ್ನು ಬಲಿ ಕೊಟ್ಟು ವಿವಿಧ ಭಕ್ಷ್ಯಗಳನ್ನು ತಯಾರಿಸಿ ಬಂಧುಗಳೊಂದಿಗೆ ಸವಿಯಲಾಗುತ್ತದೆ.

ಬಕ್ರೀದ್‌ನ ಮಹತ್ವ

ಧಾರ್ಮಿಕ ಗ್ರಂಥಗಳ ಪ್ರಕಾರ, ಸಮಾಜದ ಒಳಿತಿಗಾಗಿ ಬಕ್ರೀದ್‌ ಆಚರಿಲಾಗುತ್ತದ. ಒಮ್ಮೆ ಅಲ್ಲಾಹ್‌ ತನ್ನ ಭಕ್ತನಾದ ಪ್ರವಾದಿ ಮುಹಮ್ಮದ್ ಕನಸಿನಲ್ಲಿ ಬಂದು ನಿನಗೆ ಇಷ್ಟವಾಗಿದ್ದನ್ನು ನನಗೆ ನೀಡುವಂತೆ ಹೇಳುತ್ತಾರೆ. ಆಗ ಪ್ರವಾದಿ ಮಹಮ್ಮದ್‌, ತಾನು ಬಹಳ ಇಷ್ಟಪಡುತ್ತಿದ್ದ ಮಗ ಇಸ್ಮಾಯಿಲ್‌ನನ್ನು ಅಲ್ಲಾಹ್‌ಗಾಗಿ ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಮಗನನ್ನು ಬಲಿ ಕೊಡಲು ಮುಂದಾದಾಗ ಅಲ್ಲಿ ಅಲ್ಲಾಹ್‌ ಎದುರಾಗುತ್ತಾರೆ. ಬಲಿಪೀಠದಲ್ಲಿ ಇಸ್ಮಾಯಿಲ್‌ ಬದಲಿಗೆ ಒಂದು ಕುರಿ ಕಾಣಿಸಿಕೊಳ್ಳುತ್ತದೆ. ಆದರೆ ಅದು ಅಲ್ಲಾಹ್‌ ಕಳಿಸಿದ ದೈವಿಕ ಕುರಿಯಾಗಿರುತ್ತದೆ. ಅಂದಿನಿಂದ ಇದುವರೆಗೂ ಆ ದಿನವನ್ನು ಬಕ್ರೀದ್‌ ಎಂದು ಕರೆಯಲಾಗುತ್ತದೆ. ಈ ಘಟನೆಯು ಅಲ್ಲಾಹ್‌ನಲ್ಲಿ ಭಕ್ತಿ ನಂಬಿಕೆ ಇದ್ದರೆ ಎಲ್ಲರನ್ನೂ ರಕ್ಷಿಸುತ್ತಾನೆ ಎಂದು ಹೇಳುವ ಸಂಕೇತವಾಗಿದೆ.

ಕುರ್ಬಾನಿ ಮಾಡುವ ಉದ್ದೇಶವೇನು?

ಬಕ್ರೀದ್ ಹಬ್ಬದಂದು ಮೇಕೆ, ಕುರಿ ಮುಂತಾದ ಪ್ರಾಣಿಗಳನ್ನು ಬಲಿ ಕೊಡುವುದು ವಾಡಿಕೆ. ಹಾಗಾಗಿ ಅದು ಬಕ್ರ ಈದ್ ಆಯಿತು. ಬಕ್ರೀದ್ ಹಬ್ಬದ ಪ್ರಮುಖ ಅಂಶವೆಂದರೆ ಪ್ರಾಣಿ ಬಲಿ. ಇದನ್ನು ಕುರ್ಬಾನಿ ಎನ್ನುತ್ತಾರೆ. ಕುರ್ಬಾನಿ ಮಾಡುವ ಮೂಲಕ ಬಲಿದಾನವನ್ನು ಸ್ಮರಿಸಲಾಗುತ್ತದೆ. ಬಲಿ ನೀಡಿದ ಪ್ರಾಣಿಯ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಅದರಲ್ಲಿ ಒಂದು ಭಾಗವನ್ನು ಭಾಗವನ್ನು ಸಂಬಂಧಿಕರು ಮತ್ತು ಸ್ನೇಹಿತರಿಗೆ ಹಂಚಲಾಗುತ್ತದೆ. ಎರಡನೇ ಭಾಗವನ್ನು ಬಡವರಿಗೆ ನೀಡಲಾಗುತ್ತದೆ. ಹಾಗೂ ಮತ್ತೊಂದು ಭಾಗವನ್ನು ಮನೆಯಲ್ಲಿ ಅಡುಗೆ ತಯಾರಿಸಿ ಸೇವಿಸಲಾಗುತ್ತದೆ. ಈ ಮೂಲಕ ಬಕ್ರೀದ್‌ ಹಬ್ಬ ದಾನ ಮಾಡುವ ಮೂಲಕ, ಕರುಣಿ ತೋರಿಸುವ ಮನೋಭಾವನೆಯನ್ನು ವ್ಯಕ್ತಪಡಿಸುತ್ತದೆ.

ಹಜ್‌ ಯಾತ್ರೆ

ಸಾಮಾನ್ಯವಾಗಿ ಬಕ್ರೀದ್‌ ಸಮಯದಲ್ಲಿ ಮುಸ್ಲಿಂ ಬಾಂಧವರು ಹಜ್‌ ಯಾತ್ರೆಗೆ ತೆರಳುತ್ತಾರೆ. ಪ್ರಪಂಚದ ವಿವಿಧ ಸ್ಥಳಗಳಿಂದ ಮುಸ್ಲಿಮರು ಇಲ್ಲಿಗೆ ಬಂದು ಪ್ರಾರ್ಥನೆ ಮಾಡುತ್ತಾರೆ. ಇದು, ಪ್ರತಿಯೊಬ್ಬ ಮುಸ್ಲಿಮರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮಾಡಲೇಬೇಕಾದ ಯಾತ್ರೆ. ಹಜ್‌ ಯಾತ್ರೆಗೆ ಹೋಗಲು ಕೆಲವೊಂದು ನೀತಿ ನಿಯಮಗಳಿವೆ. ಹಜ್‌ ಯಾತ್ರೆಗೆ ಹೋಗಬೇಕೆನ್ನುವವರಿಗೆ ಭಾರತದಲ್ಲಿ ಹಜ್‌ ಸಮಿತಿ ಸಹಾಯ ಮಾಡುತ್ತದೆ. ಖಾಸಗಿಯಾಗಿ ಹೋಗಬೇಕು ಎನ್ನುವವರು ಪ್ರತ್ಯೇಕವಾಗಿ ಹೋಗಿ ಬರಬಹುದು. ಸಂಪೂರ್ಣ ಹಜ್‌ ಯಾತ್ರೆ 40 ದಿನಗಳ ಕಾಲ ತೆಗೆದುಕೊಳ್ಳುತ್ತದೆ. ಈ ಬಾರಿ ಜೂನ್‌ 14 ರಂದು ಹಜ್‌ ಯಾತ್ರೆ ಆರಂಭವಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.