Feng Shui: ಶೀಘ್ರ ವಿವಾಹಕ್ಕೆ ಫೆಂಗ್ ಶುಯಿ ಪರಿಹಾರಗಳು, ನಿಮ್ಮ ಮಲಗುವ ಕೋಣೆಯಲ್ಲಿ ಈ ಫೋಟೋ ಹಾಕಿದರೆ ದಂಪತಿಗಳಲ್ಲಿ ಕಲಹ ಬರುವುದಿಲ್ಲ-feng shui marriage compatibility suggested photos in couple room try this sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Feng Shui: ಶೀಘ್ರ ವಿವಾಹಕ್ಕೆ ಫೆಂಗ್ ಶುಯಿ ಪರಿಹಾರಗಳು, ನಿಮ್ಮ ಮಲಗುವ ಕೋಣೆಯಲ್ಲಿ ಈ ಫೋಟೋ ಹಾಕಿದರೆ ದಂಪತಿಗಳಲ್ಲಿ ಕಲಹ ಬರುವುದಿಲ್ಲ

Feng Shui: ಶೀಘ್ರ ವಿವಾಹಕ್ಕೆ ಫೆಂಗ್ ಶುಯಿ ಪರಿಹಾರಗಳು, ನಿಮ್ಮ ಮಲಗುವ ಕೋಣೆಯಲ್ಲಿ ಈ ಫೋಟೋ ಹಾಕಿದರೆ ದಂಪತಿಗಳಲ್ಲಿ ಕಲಹ ಬರುವುದಿಲ್ಲ

ಮಲಗುವ ಕೊಠಡಿಯಲ್ಲಿ ಈ ಬಾತು ಕೋಳಿಗಳನ್ನು ಇಟ್ಟಲ್ಲಿ, ದಂಪತಿಗಳ ನಡುವಿನ ಮನಸ್ತಾಪವು ಮರೆಯಾಗಿ ಆರಂಭ ದಿನದಲ್ಲಿನ ಪ್ರೀತಿ ವಿಶ್ವಾಸವು ಮರುಕಳಿಸುತ್ತದೆ. ನೀವೂ ಇದೇ ರೀತಿ ಫೋಟೋ ಇಟ್ಟು ನೋಡಿ.

ನವವಿವಾಹಿತರು
ನವವಿವಾಹಿತರು

ವಿವಾಹವು ಪ್ರತಿಯೊಬ್ಬರ ಜೀವನದಲ್ಲಿ ಮಹತ್ತರವಾದ ಘಟ್ಟ. ಹತ್ತು ಹಲವು ಕಾರಣದಿಂದಾಗಿ ವಿವಾಹ ಆಗದೆ ಹೋಗಬಗುದು ಉಕ್ಕವೆ ವುವಾಗ ತಡವಾಗಬಹುದು. ಮಂದಾರಿನ್ ಬಾತುಕೋಳಿಗಳು ಈ ವಿಚಾರದಲ್ಲಿ ಸಹಕಾರಿಯಾಗುತ್ತದೆ.

ಜೋತಿಷ್ಯದ ಪ್ರಕಾರ ಈ ಬಾತು ಕೋಳಿಗಳು ಉತ್ತಮ ಬಾಳ ಸಂಗಾತಿಗಳಾಗುತ್ತವೆ. ಈ ಬಾತು ಕೋಳಿಗಳ ಬಳಕೆಯಿಂದ ಪರಸ್ಪರ ದಂಪತಿಗಳಲ್ಲಿ ಒಬ್ಬರನ್ನೊಬ್ಬರು ಪ್ರೀತಿ-ವಿಶ್ವಾಸ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಇದನ್ನು ಬಳಸಿದಲ್ಲಿ ದಂಪತಿಗಳ ನಡುವೆ ಇರಬಹುದಾದ ಮನಸ್ತಾಪ ಮರೆಯಾಗಿ ಪರಸ್ಪರ ಅನ್ಯೋನ್ಯತೆ ಉಂಟಾಗುತ್ತದೆ. ಮುಖ್ಯವಾದ ವಿಚಾರವೆಂದರೆ ಬಾತುಕೋಳಿಗಳನ್ನು ಪರಸ್ಪರ ಒಂದರ ಮುಖವನ್ನು ಇನ್ನೊಂದು ನೋಡುವಂತೆ ಇರಿಸಬೇಕು.

ಈ ಬಾತು ಕೋಳಿಗಳನ್ನು ಪೂರ್ವ ದಿಕ್ಕಿನಲ್ಲಿ ಇರಿಸಿದಲ್ಲಿ ಕುಲದೇವರ ಮತ್ತು ಗುರುಗಳ ಅನುಗ್ರಹ ದೊರೆತು ಶ್ರೀಘ್ರ ಗತಿಯಲ್ಲಿ ವಿವಾಹವು ನಿಶ್ಚಯವಾಗುತ್ತದೆ.

ಮಲಗುವ ಕೊಠಡಿಯಲ್ಲಿ ಈ ಬಾತು ಕೋಳಿಗಳನ್ನು ಇಟ್ಟಲ್ಲಿ, ದಂಪತಿಗಳ ನಡುವಿನ ಮನಸ್ತಾಪವು ಮರೆಯಾಗಿ ಆರಂಭ ದಿನದಲ್ಲಿನ ಪ್ರೀತಿ ವಿಶ್ವಾಸವು ಮರುಕಳಿಸುತ್ತದೆ. ಮಲಗುವ ಕೋಣೆಯಲ್ಲಿನ ಪೂರ್ವ ದಿಕ್ಕಿನಲ್ಲಿ ಈ ಬಾತುಕೋಳಿಗಳನ್ನು ಇಟ್ಟಲ್ಲಿ ಸಂತಾನ ಲಾಭವಾಗುತ್ತದೆ. ಜನ್ಮ ಕುಂಡಲಿಯಲ್ಲಿನ ದೋಷಗಳು ನಿಷ್ಪಲವಾಗಿ ಶುಭಫಲಗಳು ದೊರೆಯುತ್ತವೆ.

ಈ ಬಾತುಕೋಳಿಗಳನ್ನು ಕಸವಿರುವ ಜಾಗದಲ್ಲಿ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಿದಲ್ಲಿ ದಂಪತಿಗಳ ನಡುವೆ ಅನಾವಶ್ಯಕವಾದ ವಿವಾದಗಳು ಉಂಟಾಗಿ ದಾಂಪತ್ಯ ಜೀವನವು ನಿರಾಸಾದಾಯಕವಾಗುತ್ತದೆ.

ಈ ಬಾತುಕೋಳಿಗಳನ್ನು ಉಷ್ಣವನ್ನು ಉಂಟುಮಾಡುವ ನೀರಿನ ಹೀಟರ್, ಟಿವಿ ಮುಂತಾದ ಕಡೆ ಇರಿಸದಲ್ಲಿ ದಂಪತಿಗಳ ನಡುವೆ ಬಿಗುವಿನ ವಾತಾವರಣ ಉಂಟಾಗುತ್ತದೆ.

ಯಾವುದೇ ಕಾರಣಕ್ಕೂ ಇದನ್ನು ಪಶ್ಚಿಮ ಅಥವ ದಕ್ಷಿಣ ದಿಕ್ಕುಗಳಲ್ಲಿ ಮತ್ತು ಮಂಚದ ಕೆಳಗೆ ಬಾತು ಕೋಳಿಗಳನ್ನು ಇಡಬಾರದು. ಒಂದು ವೇಳೆ ಇಟ್ಟಲ್ಲಿ ದಂಪತಿಗಳ ನಡುವೆ ಉತ್ತಮ ಹೊಂದಾಣಿಕೆ ಕಂಡುಬರುವುದಿಲ್ಲ.

ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಫೆಂಗ್ ಶುಯಿನಲ್ಲಿನ ವಸ್ತು ಎಂದರೆ ವಿದ್ಯಾಗೋಪುರ. ಇದು ದೇವಾಲಯಗಳ ಗೋಪುರವನ್ನುಹೋಲುತ್ತದೆ. ಅಲ್ಲದೆ ನಾವು ದಿನ ನಿತ್ಯ ಪೂಜೆ ಮಾಡುವ ಮಹಾಮೇರುವನ್ನು ಹೋಲುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಉಂಟಾಗುತ್ತದೆ. ಕಷ್ಟವೆನಿಸುವ ವಿಚಾರಗಳನ್ನು ಸುಲಭವಾಗಿ ಅರಿಯುತ್ತಾರೆ. ನೆನಪಿನ ಶಕ್ತಿಯು ಹೆಚ್ಚುತ್ತದೆ. ತಮಗೆ ತಾವೇ ಕೆಲವು ಕಟ್ಟುಪಾಡುಗಳನ್ನು ಹಾಕಿಕೊಂಡುವಿದ್ಯಾಭ್ಯಾಸದಲ್ಲಿ ತೊಡಗುತ್ತಾರೆ. ಇವರಲ್ಲಿ ಇದ್ದ ಅತಿಯಾದ ಕೋಪವೂ ಮರೆಯಾಗಿ ಶಾಂತಿ ಸಂಯಮವು ಹೆಚ್ಚುತ್ತದೆ. ವಿದ್ಯಾರ್ಥಿಗಳಲ್ಲಿ ಇದರ ಬಳಕೆಯಿಂದ ಮಾನಸಿಕ ಸಮತೋಲನವು ಉಂಟಾಗುತ್ತದೆ.

ಓದುವ ವೇಳೆಯಲ್ಲಿ ಪೂರ್ವ ದಿಕ್ಕಿನ ಕೋಣೆಯನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಓದುವ ಕೊಠಡಿಯ ಗೋಡೆಗಳಿಗೆ ಕೆಂಪು, ಕಪ್ಪು ಅಥವಾ ಗಾಢ ನೀಲಿ ಬಣ್ಣಗಳನ್ನು ಬಳೆದಿರಬಾರದು. ಯಾವುದೇ ರೀತಿಯ ಧನತ್ಮಕ ಶಕ್ತಿಯನ್ನು ಹೊರ ಸೂಸುವ ದಿಲ್ಲ. ಬಿಳಿ ಬಣ್ಣ, ತಿಳಿ ನೀಲಿ ಬಣ್ಣ ಮತ್ತು ಕೇಸರಿ ಬಣ್ಣಗಳಿದ್ದಲ್ಲಿ ಧನಾತ್ಮಕ ಚಿಂತನೆಯು ಹೆಚ್ಚುತ್ತದೆ.

ವಿದ್ಯಾ ಗೋಪುರವನ್ನು ಈಶಾನ್ಯ ಮೂಲೆಯಲ್ಲಿ ಇರಿಸಿದಲ್ಲಿ ಮರೆವು ಕಡಿಮೆಯಾಗಿ ಜ್ಞಾಪಕ ಶಕ್ತಿಯು ಹೆಚ್ಚುತ್ತದೆ. ಕೆಲವು ವಿದ್ಯಾರ್ಥಿಗಳಿಗೆ ತಲೆ ನೋವಿನ ತೊಂದರೆ ಇರುತ್ತದೆ. ಅಂತಹವರು ವಿದ್ಯಾ ಗೋಪುರವನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸುವುದು ಹೆಚ್ಚು ಪ್ರಯೋಜನಕಾರಿ ಆಗಿದೆ.

ಪೂರ್ವ ದಿಕ್ಕಿನಲ್ಲಿ ವಿದ್ಯಾ ಗೋಪುರವನ್ನು ಇಟ್ಟಲ್ಲಿ ವಿದ್ಯಾರ್ಥಿಗಳ ಗ್ರಹಣ ಶಕ್ತಿಯು ಹೆಚ್ಚುತ್ತದೆ. ಮುಖ್ಯವಾಗಿ ಗಣಿತ ಮತ್ತು ವಿಜ್ಞಾನವನ್ನು ಅಭ್ಯಾಸ ಮಾಡಲು ಕಷ್ಟಪಡುವವರಿಗೆ ಈ ದಿಕ್ಕು ಹೆಚ್ಚು ಅನುಕೂಲಕಾರಿಯಾಗುತ್ತದೆ.

ಆಗ್ನೇಯ ಮತ್ತು ಪಶ್ಚಿಮ ದಿಕ್ಕುಗಳು ಒಳ್ಳೆಯದಲ್ಲ. ಅನಿವಾರ್ಯವಾದಲ್ಲಿ ನೈರುತ್ಯದಲ್ಲಿ ವಿದ್ಯಾ ಗೋಪುರವನ್ನು ಇರಿಸಬಹುದು. ಇದು ತಂತ್ರಜ್ಞಾನವನ್ನು ಅಭ್ಯಾಸ ಮಾಡುವವರಿಗೆ ಒಳ್ಳೆಯದು.

ಉತ್ತರ ದಿಕ್ಕಿನಲ್ಲಿ ವಿದ್ಯಾಗೋಪುರ ಇರಿಸಿದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಭ್ಯಾಸ ಮಾಡುವ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿರುವವರಿಗೆ ಸಹ ಶುಭ ಉಂಟಾಗುತ್ತದೆ. ಈ ದಿಕ್ಕಿನಲ್ಲಿ ವಿದ್ಯಾಗೋಪುರವಿದ್ದಲ್ಲಿ ವಿದ್ಯಾರ್ಥಿಗಳ ಆತ್ಮವಿಶ್ವಾಸವು ಹೆಚ್ಚುತ್ತದೆ.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.