Brain Teaser: 4ಕ್ಕೆ 4 ಕೂಡಿಸಿ 4 ಗುಣಿಸಿ 4 ಕಳೆದು ನಾಲ್ಕರಿಂದ ಭಾಗಿಸಿದ್ರೆ ಉತ್ತರ ಎಷ್ಟು? ಥಟ್ಟಂತ ಹೇಳಿ-viral news brain teaser are you good at maths fine answer for this maths puzzle social media viral ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: 4ಕ್ಕೆ 4 ಕೂಡಿಸಿ 4 ಗುಣಿಸಿ 4 ಕಳೆದು ನಾಲ್ಕರಿಂದ ಭಾಗಿಸಿದ್ರೆ ಉತ್ತರ ಎಷ್ಟು? ಥಟ್ಟಂತ ಹೇಳಿ

Brain Teaser: 4ಕ್ಕೆ 4 ಕೂಡಿಸಿ 4 ಗುಣಿಸಿ 4 ಕಳೆದು ನಾಲ್ಕರಿಂದ ಭಾಗಿಸಿದ್ರೆ ಉತ್ತರ ಎಷ್ಟು? ಥಟ್ಟಂತ ಹೇಳಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಗಣಿತದ ಪಜಲ್‌ವೊಂದು ನಿಮ್ಮ ಮೆದುಳಿಗೆ ಹುಳ ಬಿಡುವುದು ಸುಳ್ಳಲ್ಲ. ಲೆಕ್ಕದಲ್ಲಿ ನೀವು ಎಷ್ಟೇ ಪಂಟರಾದ್ರೂ ಈ ಪ್ರಶ್ನೆ ನಿಮಗೆ ಗೊಂದಲ ಮಾಡಿಸುತ್ತೆ. ಕೂಡಿಸಿ, ಗುಣಿಸಿ, ಕಳೆದು ಭಾಗಿಸುವ ಪ್ರಶ್ನೆಗೆ ಉತ್ತರ ಎಷ್ಟು ಅಂತ ಥಟ್ಟಂತ ಹೇಳಿ.

 4ಕ್ಕೆ 4 ಕೂಡಿಸಿ 4 ಗುಣಿಸಿ 4 ಕಳೆದು ನಾಲ್ಕರಿಂದ ಭಾಗಿಸಿದ್ರೆ ಉತ್ತರ ಎಷ್ಟು? ಥಟ್ಟಂತ ಹೇಳಿ
4ಕ್ಕೆ 4 ಕೂಡಿಸಿ 4 ಗುಣಿಸಿ 4 ಕಳೆದು ನಾಲ್ಕರಿಂದ ಭಾಗಿಸಿದ್ರೆ ಉತ್ತರ ಎಷ್ಟು? ಥಟ್ಟಂತ ಹೇಳಿ

ಗಣಿತದ ಪಜಲ್‌ ಬಿಡಿಸುವುದು ಹಲವರಿಗೆ ಇಷ್ಟವಾಗುತ್ತದೆ. ಯಾಕೆಂದರೆ ಇದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ನಮ್ಮಲ್ಲಿ ಯೋಚನಾಶಕ್ತಿಯ ಪ್ರಮಾಣವೂ ಹೆಚ್ಚುತ್ತದೆ. ಇದು ಒಂದಿಷ್ಟು ಹೊತ್ತು ಮನಸ್ಸಿಗೆ ಖುಷಿ ನೀಡುವಂತೆ ಮಾಡುತ್ತದೆ. ಟ್ವಿಟರ್‌ನಲ್ಲಿ ಇದೀಗ ಇಂತಹದ್ದೇ ಒಂದು ಬ್ರೈನ್‌ ಟೀಸರ್‌ ವೈರಲ್‌ ಆಗಿದೆ. ಇದಕ್ಕೆ ನೀವು ಥಟ್ಟಂತ ಉತ್ತರ ಹೇಳಬೇಕು.

ಗಣಿತದಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೂ ಕೂಡ ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟವಾಗುತ್ತದೆ. ಯಾಕೆಂದರೆ ಇದು ಸುಲಭ ಗಣಿತ ಆದ್ರೂ ಕೂಡ ಮೆದುಳಿಗೆ ಹುಳ ಬಿಡುವಂತಿರುವುದು ಸುಳ್ಳಲ್ಲ.

@SultanAcademyUS ಎನ್ನುವ ಟ್ವಿಟರ್‌ ಪುಟದಲ್ಲಿ ಈ ಬ್ರೈನ್‌ ಟೀಸರ್‌ ಅನ್ನು ಹಂಚಿಕೊಳ್ಳಲಾಗಿದೆ. ಮಾಥ್ಸ್‌ ಕ್ವಿಜ್‌ ಎಂದು ಬರೆಯಲಾಗಿರುವ ಈ ಚಿತ್ರದಲ್ಲಿ ಈ ಕೆಳಗಿನ ಪ್ರಶ್ನೆಗೆ ಉತ್ತರ ಹೇಳಿ ಎಂದು ಕೂಡ ಬರೆಯಲಾಗಿದೆ. 4+4*4-4/4=? ಎಂಬುದು ಪ್ರಶ್ನೆಯಾಗಿದೆ. ಜುಲೈ 27ರಂದು ಈ ಬ್ರೈನ್‌ ಟೀಸರ್‌ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾಗಿತ್ತು. ಈಗಾಗಲೇ 426ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಕೆಲವರು ಕಾಮೆಂಟ್‌ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ. ಈ ಬ್ರೈನ್‌ ಟೀಸರ್‌ಗೆ ಹಲವರು 1 ಎಂದು ಉತ್ತರ ಹೇಳಿದ್ದರೆ ಇನ್ನೂ ಕೆಲವರು 7 ಎಂದು ಉತ್ತರ ಹೇಳಿದ್ದಾರೆ. ಹಾಗಾದರೆ ಈ ಬ್ರೈನ್‌ ಟೀಸರ್‌ಗೆ ನಿಮ್ಮ ಉತ್ತರವೇನು?

ಬ್ರೈನ್‌ ಟೀಸರ್‌ಗಳು ನಮ್ಮಲ್ಲಿ ಸಮಸ್ಯೆಯನ್ನು ಪರಿಹರಿಸುವ ಗುಣವನ್ನು ವೃದ್ಧಿಸುತ್ತದೆ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಕೆಲವು ಹೊತ್ತು ನಮ್ಮ ಮೆದುಳು ಬೇರೇನೂ ಯೋಚಿಸದೇ ಇದರ ಉತ್ತರವನ್ನು ಹುಡುಕಾಡುತ್ತದೆ. ಹಾಗಾಗಿ ಹಲವರು ಬ್ರೈನ್‌ ಟೀಸರ್‌ಗಳಿಗೆ ಉತ್ತರ ಹುಡುಕುವುದನ್ನು ಮೆಚ್ಚುತ್ತಾರೆ.

ಈ ಬ್ರೈನ್‌ ಟೀಸರ್‌ಗಳನ್ನೂ ಓದಿ 

Brain Teaser: ಈ 5 ಮಂದಿಯಲ್ಲಿ ಕಳ್ಳ ಯಾರು? ಬುದ್ಧಿ ಉಪಯೋಗಿಸಿ ಉತ್ತರ ಹೇಳಿ, ನಿಮಗಿರೋದು ಕೇವಲ 15 ಸೆಕೆಂಡ್‌ ಸಮಯ

ಲೌ, ಲೋ, ಲಾ, ಲೀ, ಲ್ಯೂ ಈ ಐವರಲ್ಲಿ ಕಳ್ಳ ಯಾರು, ನಿಮ್ಮ ಮೆದುಳು ನಿಜಕ್ಕೂ ಚುರುಕಾಗಿದ್ರೆ 15 ಸೆಕೆಂಡ್‌ನಲ್ಲಿ ಈ ಬ್ರೈನ್‌ ಟೀಸರ್‌ಗೆ ಉತ್ತರ ಹೇಳಿ. ಶೇ 11 ರಷ್ಟು ಮಂದಿಗಷ್ಟೇ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಾಗಿದೆ, ನೀವು ಆ ಸಾಲಿಗೆ ಸೇರುತ್ತೀರಾ ನೋಡಿ.