ದೈಹಿಕ ಶಕ್ತಿ ಹೆಚ್ಚಳದಿಂದ ತಲೆ ನೋವಿಗೆ ಪರಿಹಾರದವರಿಗೆ; ಬನ್ನಿ ಮರದಲ್ಲಿನ ಔಷಧೀಯ ಗುಣ ತಿಳಿದರೆ ನೀವು ಬಳಸುತ್ತೀರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೈಹಿಕ ಶಕ್ತಿ ಹೆಚ್ಚಳದಿಂದ ತಲೆ ನೋವಿಗೆ ಪರಿಹಾರದವರಿಗೆ; ಬನ್ನಿ ಮರದಲ್ಲಿನ ಔಷಧೀಯ ಗುಣ ತಿಳಿದರೆ ನೀವು ಬಳಸುತ್ತೀರಿ

ದೈಹಿಕ ಶಕ್ತಿ ಹೆಚ್ಚಳದಿಂದ ತಲೆ ನೋವಿಗೆ ಪರಿಹಾರದವರಿಗೆ; ಬನ್ನಿ ಮರದಲ್ಲಿನ ಔಷಧೀಯ ಗುಣ ತಿಳಿದರೆ ನೀವು ಬಳಸುತ್ತೀರಿ

ದಸರಾ ಸಮಯದಲ್ಲಿ ಸಾಮಾನ್ಯವಾಗಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ. ಇದನ್ನು ಶಮೀ ವೃಕ್ಷ ಅಂತಲೂ ಕರೆಯಲಾಗುತ್ತದೆ. ಎದೆ ನೋವನ್ನು ಕಡಿಮೆ ಮಾಡುವುದರಿಂದ ಹಿಡಿದು ಮಲಗಿದಾಗ ತಲೆ ಬರುವುದನ್ನು ತಡೆಯುವವರೆಗೆ ಬನ್ನಿ ಮರದ ಎಲೆಗಳಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ನೀಡಲಾಗಿದೆ. (ಬರಹ: ಎಚ್ ಸತೀಶ್, ಜ್ಯೋತಿಷಿ)

ಬನ್ನಿ ಮರದಲ್ಲಿನ ಏನೆಲ್ಲಾ ಔಷಧೀಯ ಗುಣಗಳಿವೆ. ಇವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೇಗೆ ನೆರವಾಗುತ್ತವೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಬನ್ನಿ ಮರದಲ್ಲಿನ ಏನೆಲ್ಲಾ ಔಷಧೀಯ ಗುಣಗಳಿವೆ. ಇವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೇಗೆ ನೆರವಾಗುತ್ತವೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಹಿಂದೂ ಧರ್ಮ ಹಾಗೂ ಜ್ಯೋತಿಷ್ಯದಲ್ಲಿ ಮರಗಳಿಗೆ ತುಂಬಾ ಪ್ರಾಮುಖ್ಯವನ್ನು ನೀಡಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಮರ ಅಥವಾ ಅದರ ಎಲೆಗಳಲ್ಲಿ ಇರುವ ಔಷಧಿಯ ಗುಣಗಳು. ಧಾರ್ಮಿಕ ದೃಷ್ಟಿಕೋನಗಳಿಂದ ನೋಡಿದಾಗ ಕೆಲವು ಮರಗಳಿಗೆ ದೇವರ ಸ್ಥಾನವನ್ನು ನೀಡಿ ಪೂಜಿಸಲಾಗುತ್ತದೆ. ಇಂಥ ಮರಗಳ ಪೈಕಿ ಬನ್ನಿ ಮರವು ಕೂಡ ಒಂದು. ಶಮೀ ವೃಕ್ಷ ಅಂತಲೂ ಕರೆಯಲಾಗುವ ಬನ್ನಿ ಮರದಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಎಂಬುದನ್ನು ಜ್ಯೋತಿಷಿ ಎಚ್ ಸತೀಶ್ ಅವರು ವಿವರಿಸಿದ್ದಾರೆ. ಧಾರ್ಮಿಕ ಕ್ರಿಯಾವಿಧಿಗಳಲ್ಲಿ ನಾವು ಬಳಸುವ ಹೂವುಗಳು , ಪತ್ರೆಗಳು ಅಥವಾ ಇನ್ನಿತರ ಸಾಮಗ್ರಿಗಳು ಔಷಧೀಯ ಗುಣಗಳನ್ನು ಹೊಂದಿವೆ. ವಿಜಯದಶಮಿಯ ದಿನದಂದು ನಾವು ಬಳಸುವ ಬನ್ನಿಮರವು ಸಹ ಅನೇಕ ರೀತಿಯಲ್ಲಿ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ವೈಜ್ಞಾನಿಕವಾಗಿ ಬನ್ನಿಮರವನ್ನು ಅಕೇಶಿಯಾ ಫೆರುಜಿನಿಯಾ ಎಂದು ಕರೆಯುತ್ತೇವೆ. ಇದಕ್ಕೆ ಅರಿಮೇಧ ಎಂಬ ಹೆಸರಿದೆ. ಮುಖ್ಯವಾಗಿ ಇದರ ತೊಗಟೆಯು ಕಹಿಯಾದ ರುಚಿಯನ್ನು ಹೊಂದಿದೆ. ಆದರೆ ಇದನ್ನು ಅಲ್ಪಪ್ರಮಾಣದ ಎಣೆಗೆಂಪು ಬಣ್ಣದ ಬೆಲ್ಲವನ್ನು ಮಿಶ್ರಮಾಡಿ ಬಿಸಿನೀರು ಅಥವಾ ಹಾಲಿನ ಜೊತೆ ಸೇವಿಸಿದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ.

ಬನ್ನಿ ಮರದಲ್ಲಿ ಇರುವ ಔಷಧೀಯ ಗುಣಗಳು

  • ಬನ್ನಿ ಮರ ಅಥವಾ ಶಮೀ ವೃಕ್ಷದ ಹಸಿರು ಬಣ್ಣದ ಎಲೆಗಳನ್ನು ಬಿಸಿ ನೀರಿನೊಂದಿಗೆ ಕಷಾಯ ಮಾಡಿ ಸೇವಿಸುದರಿಂದ ಹೃದಯಕ್ಕೆ ಸಂಬಂಧಿಸದ ಎದೆನೋವು ಕಡಿಮೆ ಆಗುತ್ತದೆ.
  • ಒಣಗಿದ ಎಲೆಗಳನ್ನು ಲವಣದ ಜೊತೆ ಬೆರೆಸಿ ಪುಡಿಮಾಡಿ ಹಲ್ಲನ್ನು ಉಜ್ಜಿದಲ್ಲಿ ಒಸಡಿನ ಊತ ಕಡಿಮೆ ಆಗುತ್ತದೆ
  • ಒಣಗಿದ ಎಲೆ ಮತ್ತು ಹೂಗಳನ್ನು ಪುಡಿ ಮಾಡಿ ಸಣ್ಣಪ್ರಮಾಣದ ಜೇನುತುಪ್ಪದೊಂದಿಗೆ ಹಣೆಗೆ ಹಚ್ಚಿ ಮಲಗಿದಲ್ಲಿ ತಲೆನೋವಿನಿಂದ ಉಪಶಮನ ದೊರೆಯುತ್ತದೆ.
  • ಬನ್ನಿ ಮರದ ಎಲೆಗಳಿಂದ ರಸವನ್ನು ತೆಗೆದು ಅದಕ್ಕೆ ಉಗುರುಬೆಚ್ಚಗಿನ ಕೊಬರಿ ಎಣ್ಣೆಯನ್ನು ಬೆರೆಸಿ ಕತ್ತಿನ ಹಿಂಭಾಗ ಮತ್ತು ಪಾರ್ಶ್ವಗಳಲ್ಲಿ ನಯವಾಗಿ ಮಸಾಜ್ ಮಾಡಿದಲ್ಲಿ ಕಿವಿಯಲ್ಲಿ ಉಂಟಾಗುವ ಗುಯ್ ಎಂಬ ಸದ್ದು ಕಡಿಮೆ ಆಗುತ್ತದೆ
  • ಒಣಗಿದ ಎಲೆಗಳನ್ನು ಪುಡಿಮಾಡಿ ಅದಕ್ಕೆ ಸ್ವಲ್ಪ ಪ್ರಮಾಣದ ಜೀರಿಗೆ ಬೆರೆಸಿ ರುಚಿಗಾಗಿ ಬೆಲ್ಲ ಸೇರಿಸಿ ಸೇವಿಸಿದಲ್ಲಿ ತಲೆ ತಿರುಗುವುದು ಕಡಿಮೆ ಆಗುತ್ತದೆ
  • ಒಣಗಿದ ತೊಗಟೆಗೆ ಸಾಸಿವೆ ಎಣ್ಣೆ ಬೆರೆಸಿ ಹಚ್ಚಿದಲ್ಲಿ ಕೀಲು ನೋವು ತಹಬಂದಿಗೆ ಬರುತ್ತದೆ
  • ಬನ್ನಿ ಮರದ ಒಣಗಿದ ತೊಗಟೆಯನ್ನು ತಂದು ಅದಕ್ಕೆ ಸ್ವಲ್ಪ ಕೊಬರಿ ಎಣ್ಣೆ ಮಿಶ್ರಣ ಮಾಡಿ ಪಾದಗಳಿಗೆ ಹಚ್ಚಿದಲ್ಲಿ ಪಾದಗಳಲ್ಲಿನ ಬಿರುಕು ಕಡಿಮೆ ಆಗುತ್ತದೆ
  • ಈ ಮರದ ತೊಗಟೆಯನ್ನು ನುಣ್ಣಗೆ ಪುಡಿಮಾಡಿ ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಮಸಾಜ್ ಮಾಡಿದಲ್ಲಿ ಗ್ರಂಥಿಗಲ್ಲಿನ ಗಡ್ಡೆಯ ಊತವು ಕಡಿಮೆ ಆಗುತ್ತದೆ
  • ಈ ಮರಗಳಿರುವ ಜಾಗದಲ್ಲಿ ವಾಯುವಿಹಾರ ಮಾಡಿದಲ್ಲಿ ಶ್ವಾಸಕೋಶ ಸಂಬಂಧಿತ ತೊಂದರೆಯು ದೂರವಾಗುತ್ತದೆ
  • ನೀರಿಗೆ ಇದರ ಕಾಂಡ ಮತ್ತು ಎಲೆಗಳನ್ನು ಬೆರೆಸಿ ಬೆಳಗಿನ ವೇಳೆ ಸ್ನಾನವನ್ನು ಮಾಡಿದಲ್ಲಿ ಸೋಂಕು ನಿವಾರಣೆ ಆಗುತ್ತದೆ. ದೈಹಿಕ ಶಕ್ತಿಯು ಹೆಚ್ಚುತ್ತದೆ
  • ಕೆಂಪು ಕಲ್ಲುಸಕ್ಕರೆಯ ಜೊತೆ ಇದರ ಹೂವುಗಳನ್ನು ಸೇವಿಸಿದಲ್ಲಿ ರಕ್ತವು ಹೆಚ್ಚುತ್ತದೆ
  • ಬನ್ನಿ ಮರದ ಹೂವು ಅಥವಾ ಎಲೆಗಳನ್ನು ಶುಚಿಗೊಳಿಸಿ ನೀರಿನೊಂದಿಗೆ ಬಾಯಿ ಮುಕ್ಕಳಿಸಿದಲ್ಲಿ ಬಾಯಿಯಲ್ಲಿನ ಹುಣ್ಣುಗಳು ಮಾಯವಾಗುತ್ತವೆ
  • ಶಮೀ ವೃದ್ಧ ಎಲೆಗಳನ್ನು ತಾಮ್ರದ ಪಾತ್ರೆಯ ಮೇಲೆ ಉಜ್ಜಿ ಅದರಲ್ಲಿ ಬರುವ ರಸವನ್ನು ಹಚ್ಚಿದಲ್ಲಿ ತುರಿಕೆ ಕಡಿಮೆಯಾಗುತ್ತದೆ. ಸುಟ್ಟಗಾಯಕ್ಕೆ ಸಹ ಇದು ರಾಮಬಾಣವಾಗಿ ಕೆಲಸ ಮಾಡುತ್ತೆ
  • ಶುಂಠಿಯ ಜೊತೆ ಇದರ ತೊಗಟೆ ಬೆರೆಸಿ ಕಷಾಯವನ್ನು ತಯಾರಿಸಿ ಸೇವಿಸಿದಲ್ಲಿ ಅಜೀರ್ಣವು ಕಡಿಮೆಯಾಗುತ್ತದೆ. ಆಮ್ಲೀಯತೆಯು ಕಡಿಮೆ ಆಗುತ್ತದೆ.
  • ತಲೆ ಜುಮ್ ಎನ್ನುತ್ತಿದ್ದಲ್ಲಿ ಇದರ ಎಲೆಯ ಕಷಾಯವು ಸಹಕಾರಿಯಾಗುತ್ತದೆ

ಬನ್ನಿ ಮರದಿಂದ ಇನ್ನೂ ಏನೆಲ್ಲಾ ಪ್ರಯೋಜನಗಳಿವೆ

ಕೃಷಿಕರು ಬೆಳೆಯುವ ಬೆಳೆಯ ಮದ್ಯೆ ಇದನ್ನು ಬೆಳೆಯುತ್ತಾರೆ. ಈ ಮರದ ಸಹಾಯದಿಂದ ಬರೆಯುವ ಶಾಯಿ ಮತ್ತು ಅಂಟನ್ನು ತಯಾರಿಸಲು ಬಳಸುತ್ತಾರೆ. ನುರಿತ ವೈದ್ಯರು ಇದನ್ನು ಆಸ್ತಮ ಖಾಯಿಲೆ ಗುಣಪಡಿಸಲು ಬಳಸುತ್ತಾರೆ. ಇದರ ಕಾಂಡ, ಎಲೆ ಹಾಗೂ ಒಣಗಿದ ತೊಗಟೆಯ ಸಹಾಯದಿಂದ ಮೂಲವ್ಯಾದಿಗೆ ಔಷಧ ತಯಾರಿಸುತ್ತಾರೆ. ಇದರ ಎಲೆಯ ರಸವನ್ನು ಕೊಬ್ಬರಿ ಎಣ್ಣೆಗೆ ಬೆರೆಸಿ ಕಾಲಿನ ಸಂಧುಗಳಿಗೆ ಹಚ್ಚಿದಲ್ಲಿ ಬೆರಳಿನ ನಡುವಿನ ಹುಣ್ಣು ಆರುತ್ತದೆ.

ಬನ್ನಿ ಮರದ ಹೂಗಳಲ್ಲಿ ಏನೇನಿದೆ?

ಬನ್ನಿ ಮರದ ಎಲೆಗಳನ್ನು ಕುರಿ-ಮೇಕೆ ಸೇರಿದಂತೆ ಪ್ರಾಣಿಗಳು ಆಹಾರವಾಗಿ ತನ್ನುತ್ತವೆ. ಇದರ ಹಸಿರು ಎಲೆಗಳಿಂದ ಉಪ್ಪಿನಕಾಯಿ ತಯಾರಿಸಬಹುದು. ಮಧುಮೇಹಿಗಳು ಇದನ್ನು ಹೆಚ್ಚು ಸೇವಿಸಬಾರದು. ಇದರ ಹೂವುಗಳಲ್ಲಿ ಫ್ಲೇವೊನ್, ಪ್ರೊಸೊಜೆರಿನ್ ಬಿ, ಪ್ರೊಸೊಜೆರಿನ್ ಎ ಮತ್ತು ಚಾಲ್ಕೋನ್ ಎಂಬ ಅಪರೂಪದ ರಸಾಯನಿಕಗಳು ಇರುತ್ತವೆ. ಗ್ಯಾಲಿಕ್ ಆಮ್ಲ, ಗ್ಲೈಕೋಸೈಡ್‌ಗಳು ಅಧಿಕವಾಗಿ ಇದರಿಲ್ಲಿವೆ. ಆಲ್ಕಲಾಯ್ಡ್ ಇರುವ ಕಾರಣ ಕೆಲವರು ನಿದ್ದೆಯ ಮಂಪರಿಗೆ ಜಾರಬಹುದು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.