ನಿಮ್ಮ ಮೂಗು ಅರ್ಧ ಬಾಗಿದ ಬಿಲ್ಲಿನಂತಿದೆಯಾ? ಚಿಕ್ಕ ವಯಸ್ಸಿನಲ್ಲೇ ನಾಯಕತ್ವ ಗುಣ ಸೇರಿ ಈ ವ್ಯಕ್ತಿತ್ವ ನಿಮ್ಮದಾಗಿರುತ್ತೆ
ಮೂಗು ಅರ್ಧ ಬಾಗಿದ ಬಿಲ್ಲಿನಂತೆ ಕಾಣುತ್ತಿದ್ದರೆ ನಿಮ್ಮ ವ್ಯಕ್ತಿತ್ವ ಹೇಗಿರುತ್ತದೆ ಎಂದು ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಈ ಸ್ಟೋರಿಯನ್ನು ಓದಿ. ಚಿಕ್ಕ ವಯಸ್ಸಿನಲ್ಲೇ ನಾಯಕತ್ವದ ಗುಣಗಳು ಸೇರಿದಂತೆ ಯಾವ ರೀತಿಯ ವ್ಯಕ್ತಿತ್ವ ಇರಲಿದೆ ಅನ್ನೋದನ್ನ ತಿಳಿಯಿರಿ.
ಕೆಲವರ ಮೂಗು ಅರ್ಧ ಬಾಗಿದ ಬಿಲ್ಲಿನಂತೆ ಕಾಣುತ್ತದೆ. ಇಂಥ ಮೂಗಿನ ಆಕಾರದ ಹೊರಂದಿರುವವರ ವ್ಯಕ್ತಿತ್ವ ತುಂಬಿ ವಿಭಿನ್ನವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಇವರನ್ನು ಮಾತಿನಲ್ಲಿ ಗೆಲ್ಲಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಶೀತದ ತೊಂದರೆ ಇವರನ್ನು ಬಹುವಾಗಿ ಕಾಡುತ್ತದೆ. ಇವರು ಸಾಮಾನ್ಯವಾಗಿ ಯಾರಿಗೂ ಮೋಸವನ್ನು ಮಾಡುವುದಿಲ್ಲ. ಆರಂಭಿಸಿದ ಕೆಲಸ ಕಾರ್ಯಗಳು ಎಷ್ಟೇ ಕಠಿಣವೆನಿಸಿದರು ಬುದ್ಧಿವಂತಿಕೆಯಿಂದ ತಮಗೆ ಅನುಕೂಲವಾಗುವಂತೆ ಪೂರ್ಣಗೊಳಿಸುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಇವರು ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುತ್ತಾರೆ. ಸುಲಭವಾಗಿ ಸಹನೆಯನ್ನು ಕಳೆದುಕೊಂಡು ಮುಂಗೋಪದಿಂದ ವರ್ತಿಸುತ್ತಾರೆ. ಆದರೆ ಬರುವ ಕೋಪವು ಬೇಗನೆ ಮರೆಯಾಗುತ್ತದೆ. ಇವರು ಸುಲಭವಾಗಿ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಲಾರರು.
ಸಣ್ಣ ಪುಟ್ಟ ವಿಚಾರವಾದರೂ ಆಳವಾದ ಆಲೋಚನೆಯ ನಂತರ ಕಾರ್ಯಗತಗೊಳಿಸುತ್ತಾರೆ. ವಿದ್ಯಾಭ್ಯಾಸದಲ್ಲಿ ಸಾಮಾನ್ಯವಾಗಿ ಇವರಿಗೆ ತಿಳಿಯದ ವಿಚಾರವೂ ಯಾವುದು ಇರುವುದಿಲ್ಲ. ಕನಿಷ್ಠಪಕ್ಷ ಸಣ್ಣ ಪ್ರಮಾಣದ ಜ್ಞಾನವಾದರೂ ಇವರಿಗೆ ಇರುತ್ತದೆ. ಯಾವುದೇ ವಿಚಾರವಾದರೂ ವಿದ್ಯಾರ್ಥಿ ಜೀವನದಲ್ಲಿ ಆಳವಾಗಿ ಅಧ್ಯಯನ ಮಾಡುತ್ತಾರೆ. ಇವರಲ್ಲಿ ಅತಿಯಾದ ಆಸೆ ಇರುವುದಿಲ್ಲ.
ಚಿಕ್ಕ ವಯಸ್ಸಿನಲ್ಲೂ ಅತಿಯಾದ ಆತ್ಮಾಭಿಮಾನ ಇರುತ್ತದೆ. ಎಲ್ಲರನ್ನೂ ಗೌರವಿಸುವ ಇವರು ಬೇರೆಯವರಿಂದಲೂ ಗೌರವವನ್ನು ನಿರೀಕ್ಷಿಸುತ್ತಾರೆ. ಇವರ ಮನಸ್ಸಿಗೆ ಒಪ್ಪುವಂತಹ ವಿದ್ಯಾಭ್ಯಾಸವನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಬೇರೆಯವರಿಗೆ ಅಸಾಧ್ಯವೆನಿಸುವ ವಿಚಾರಗಳು ಇವರಿಗೆ ಸುಲಭವಾಗಿ ಅರ್ಥವಾಗುತ್ತವೆ. ವಿದ್ಯಾರ್ಥಿಯಾಗಿದ್ದಾಗಲೆ ಹಣವನ್ನು ಸಂಪಾದಿಸುವ ಚತುರತೆ ಇವರಲ್ಲಿರುತ್ತದೆ.
ಇವರಿಗೆ ಒಂದಕ್ಕಿಂತ ಹೆಚ್ಚಿನ ಆದಾಯ ಮೂಲಗಳು, ದುರಾಸೆ ಗುಣವಿಲ್ಲ
ಆರಂಭದಲ್ಲಿ ಸ್ವತಂತ್ರವಾಗಿ ಹಣವನ್ನು ಸಂಪಾದಿಸುವ ದಾರಿಯನ್ನು ಹುಡುಕುತ್ತಾರೆ. ಹಣದ ಬಗ್ಗೆ ದುರಾಸೆಯ ಗುಣ ಇವರಿಗೆ ಇರುವುದಿಲ್ಲ. ಬಂದ ಆದಾಯಕ್ಕೆ ತಕ್ಕಂತೆ ಜೀವನ ನಡೆಸುವುದು ಇವರಲ್ಲಿನ ವಿಶೇಷತೆ. ಆದರೆ ದಿನೇ ದಿನೇ ಆದಾಯದಲ್ಲಿ ಪ್ರಗತಿ ಕಂಡುಬರುತ್ತದೆ. ಒಂದಕ್ಕಿಂತಲೂ ಹೆಚ್ಚಿನ ರೀತಿಯ ಆದಾಯ ಇವರಿಗೆ ಇರುತ್ತದೆ. ಇವರಿಗೆ ಹಣವನ್ನು ಉಳಿಸುವ ಯೋಚನೆ ಅಥವಾ ಯೋಜನೆ ಇರುವುದಿಲ್ಲ. ಕೇವಲ ಅಂದಿನ ದಿನಕ್ಕೆ ಮೊದಲ ಪ್ರಾಧಾನ್ಯತೆಯನ್ನು ನೀಡುತ್ತಾರೆ.
ವಿಶೇಷವಾದ ವಿಚಾರವೆಂದರೆ ಇವರಿಗೆ ಇಷ್ಟವಾದಂತಹ ಉದ್ಯೋಗವು ಇವರಿಗೆ ದೊರೆಯುತ್ತದೆ. ಕನಿಷ್ಠಪಕ್ಷ ಎಂದರು ಎರಡರಿಂದ ಮೂರು ಬಾರಿ ಉದ್ಯೋಗವನ್ನು ಬದಲಿಸುತ್ತಾರೆ. ಇವರಿಗೆ ಇವರ ಮನಸ್ಸನ್ನು ಅರಿತು ನಡೆಯುವಂತಹ ಸಹೋದ್ಯೋಗಿಗಳು ಇರುತ್ತಾರೆ. ಅನೇಕ ಬಾರಿ ಹಿರಿಯ ಅಧಿಕಾರಿಗಳು ಇವರ ಸಲಹೆ ಸೂಚನೆಗಳನ್ನು ಪಾಲಿಸುತ್ತಾರೆ. ಇವರಿಗೆ ಉತ್ತಮ ಆತ್ಮವಿಶ್ವಾಸ ಇರುತ್ತದೆ. ಜಯಗಳಿಸಲೇಬೇಕೆಂದು ಹೊಸ ಕೆಲಸ ಕಾರ್ಯಗಳನ್ನು ಆರಂಭಿಸುತ್ತಾರೆ. ತಾವು ಕಷ್ಟದಲ್ಲಿ ಇದ್ದರೂ ಬೇರೆಯವರಿಗೆ ಸಹಾಯ ಮಾಡುವುದೇ ಇವರಿಗೆ ಸಂತೋಷ ತರುವ ವಿಚಾರ. ಅತಿಯಾಗಿ ಆಹಾರ ಸೇವನೆ ಮಾಡುವ ಕಾರಣ ಉದರಬೇನೆಯು ಸದಾಕಾಲ ಇವರನ್ನು ಕಾಡುತ್ತದೆ.
ಸ್ವತಂತ್ರವಾಗಿ ಶಾಲಾ ಕಾಲೇಜುಗಳನ್ನು ಆರಂಭಿಸುವ ಅಭಿಲಾಷೆ ಇವರಲ್ಲಿರುತ್ತದೆ. ಸ್ವಂತ ವ್ಯಾಪಾರ ವ್ಯವಹಾರಾದಿಗಳಲ್ಲಿ ಉತ್ತಮ ಆದಾಯ ಗಳಿಸುತ್ತಾರೆ. ಸಾಮಾನ್ಯವಾಗಿ ಇವರು ತಮ್ಮ ಕಾರ್ಯವಿಧಾನವನ್ನು ಅವಶ್ಯಕತೆಗೆ ತಕ್ಕಂತೆ ಬದಲಿಸುತ್ತಾರೆ. ಉತ್ತಮ ಆದಾಯವಿಲ್ಲದ ಕೆಲಸಗಳಿಂದ ದೂರ ಉಳಿಯುತ್ತಾರೆ. ವಿವಾಹದ ಬಗ್ಗೆ ಇವರಿಗೆ ವಿಶೇಷವಾದಂತಹ ಅಭಿಲಾಷೆ ಇರುತ್ತದೆ. ಆದರೆ ಕುಟುಂಬದ ಹಿರಿಯರ ನುಡಿಯೇ ಇವರಿಗೆ ಮುಖ್ಯವಾಗುತ್ತದೆ. ಆದ್ದರಿಂದ ಪರಿಸ್ಥಿತಿಗೆ ಅನುಗುಣವಾಗಿ ವಿವಾಹದ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ.
ಸ್ತ್ರೀಯರಾಗಲಿ ಪುರುಷರಾಗಲಿ ದಾಂಪತ್ಯ ಜೀವನವು ಸಂತೋಷದಿಂದ ಕೂಡಿರುತ್ತದೆ. ಮನಸ್ಸಿಗೆ ಸಂತಸ ಎನಿಸುವಂತಹ ಸಂತಾನ ಇವರಿಗೆ ಇರುತ್ತದೆ. ಮಕ್ಕಳ ಉತ್ತಮ ಜೀವನಕ್ಕಾಗಿ ಶ್ರಮಿಸುತ್ತಾರೆ. ಮಕ್ಕಳು ಇವರನ್ನು ಮೀರಿಸುವಂತೆ ಉತ್ತಮ ಜ್ಞಾನವನ್ನು ಗಳಿಸುತ್ತಾರೆ. ಸದಾಕಾಲ ಇವರು ಸ್ವತಂತ್ರವಾಗಿ ಜೀವನ ನಡೆಸುತ್ತಾರೆ. ಬೇರೆಯವರ ಮೇಲೆ ಅವಲಂಬಿತರಾಗುವುದಿಲ್ಲ. ಬೇರೆಯವರಿಂದ ಹಣದ ಸಹಾಯವನ್ನು ಬೇಡುವುದಿಲ್ಲ. ಆದರೆ ತಾನಾಗಿಯೇ ಒದಗುವ ಸಹಾಯವನ್ನು ತಿರಸ್ಕರಿಸುವುದಿಲ್ಲ. ಜನಸೇವೆಯ ಮುಖಾಂತರ ನಿವೃತ್ತಿಯ ಜೀವನವನ್ನು ಕಳೆಯುತ್ತಾರೆ. ಬೇರೆಯವರಿಗೆ ಬುದ್ಧಿವಾದ ಹೇಳುವುದು ಇವರಿಗೆ ಆಸಕ್ತಿದಾಯಕ ವಿಚಾರ. ಒಟ್ಟಾರೆ ಬೇರೆಯವರಿಗೆ ಭಾರವಾಗದೆ ಜೀವನ ನಡೆಸುತ್ತಾರೆ. ಧಾರ್ಮಿಕತೆಗೆ ಸಂಬಂಧಪಟ್ಟ ಕೆಲಸ ಕಾರ್ಯಗಳನ್ನು ನಿರ್ವಹಿಸುವಲ್ಲಿ ಯಶಸ್ಸನ್ನು ಕಾಣುತ್ತಾರೆ.