Mercury Transit: ಕನ್ಯಾ ರಾಶಿಗೆ ಬುಧ ಪ್ರವೇಶ; ಸಿಂಹದಿಂದ ವೃಶ್ಚಿಕದವರಿಗೆ 4 ರಾಶಿಯವರಿಗೆ ಖರ್ಚು ಹೆಚ್ಚಾಗುತ್ತೆ, ಉದ್ಯೋಗ ಬಲಿಸುವ ಸಾಧ್ಯತೆ-horoscope mercury transit in virgo on september 23 2024 leo virgo libra scorpio zodiac signs benefits sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mercury Transit: ಕನ್ಯಾ ರಾಶಿಗೆ ಬುಧ ಪ್ರವೇಶ; ಸಿಂಹದಿಂದ ವೃಶ್ಚಿಕದವರಿಗೆ 4 ರಾಶಿಯವರಿಗೆ ಖರ್ಚು ಹೆಚ್ಚಾಗುತ್ತೆ, ಉದ್ಯೋಗ ಬಲಿಸುವ ಸಾಧ್ಯತೆ

Mercury Transit: ಕನ್ಯಾ ರಾಶಿಗೆ ಬುಧ ಪ್ರವೇಶ; ಸಿಂಹದಿಂದ ವೃಶ್ಚಿಕದವರಿಗೆ 4 ರಾಶಿಯವರಿಗೆ ಖರ್ಚು ಹೆಚ್ಚಾಗುತ್ತೆ, ಉದ್ಯೋಗ ಬಲಿಸುವ ಸಾಧ್ಯತೆ

Mercury Transit in Virgo: ಸೆಪ್ಟೆಂಬರ್ 23 ರ ಸೋಮವಾರ ಕನ್ಯಾ ರಾಶಿಗೆ ಬುಧನ ಪ್ರವೇಶದಿಂದ ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರಿಗೆ ಸಾಕಷ್ಟು ಲಾಭಗಳಿವೆ. ಏನೆಲ್ಲಾ ಪ್ರಯೋಜಗಳಿವೆ ಅನ್ನೋದನ್ನು ತಿಳಿಯಿರಿ. (ಬರಹ: ಎಚ್ ಸತೀಶ್, ಜ್ಯೋತಿಷಿ)

Mercury Transit: ಕನ್ಯಾ ರಾಶಿಗೆ ಬುಧ ಪ್ರವೇಶ; ಸಿಂಹದಿಂದ ವೃಶ್ಚಿಕದವರಿಗೆ 4 ರಾಶಿಯವರಿಗೆ ಖರ್ಚು ಹೆಚ್ಚಾಗುತ್ತೆ, ಉದ್ಯೋಗ ಬಲಿಸುವ ಸಾಧ್ಯತೆ
Mercury Transit: ಕನ್ಯಾ ರಾಶಿಗೆ ಬುಧ ಪ್ರವೇಶ; ಸಿಂಹದಿಂದ ವೃಶ್ಚಿಕದವರಿಗೆ 4 ರಾಶಿಯವರಿಗೆ ಖರ್ಚು ಹೆಚ್ಚಾಗುತ್ತೆ, ಉದ್ಯೋಗ ಬಲಿಸುವ ಸಾಧ್ಯತೆ

2024ರ ಸೆಪ್ಟಂಬರ್ 23ರಂದು ಬುಧನು ಕನ್ಯಾರಾಶಿಯನ್ನು ಪ್ರವೇಶಿಸಿ ಅಕ್ಟೋಬರ್ 10 ರವರೆಗೆ ಅದೇ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಬುಧನಿಂದ ಭದ್ರಯೋಗ ಉಂಟಾಗುತ್ತದೆ. ಈ ವೇಳೆಯಲ್ಲಿ ಪ್ರತಿಯೊಂದು ರಾಶಿಗಳಿಗೂ ಧನಾತ್ಮಕ ಫಲಗಳು ದೊರೆಯುತ್ತವೆ. ಸಿಂಹದಿಂದ ವೃಶ್ಚಿಕದವರಿಗೆ 4 ರಾಶಿಯವರಿಗೆ ಇರುವ ಪ್ರಯೋಜನಗಳನ್ನು ತಿಳಿಯೋಣ.

ಸಿಂಹ ರಾಶಿ

ಹಣದ ಕೊರತೆ ಕಡಿಮೆಯಾಗುತ್ತದೆ. ಉತ್ತಮ ಮಾತುಕತೆಯಿಂದ ಎಲ್ಲಾ ರೀತಿಯ ಅನುಕೂಲತೆಗಳನ್ನು ಪಡೆಯುವಿರಿ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಬದಲಿಸುವುದಿಲ್ಲ. ಕೋಪವನ್ನು ಕಡಿಮೆ ಮಾಡಿಕೊಂಡಷ್ಟು ಒಳ್ಳೆಯದು. ಉದ್ಯೋಗದ ವಿಚಾರದಲ್ಲಿ ಆತುರದಿಂದ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಆದಾಯವಿರುತ್ತದೆ. ನಿಮ್ಮ ಆತ್ಮೀಯರು ನಿಮ್ಮೊಂದಿಗೆ ಪ್ರವಾಸಕ್ಕೆ ತೆರಳುತ್ತಾರೆ. ಕಷ್ಟಕಾಲಕ್ಕೆಂದು ಹಣವನ್ನು ಉಳಿಸುವಿರಿ.

ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಉದ್ಯೋಗವನ್ನು ಬದಲಿಸುವ ಸೂಚನೆಗಳಿವೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನ ನಡೆಸುವ ಅವಕಾಶ ದೊರೆಯುತ್ತದೆ. ಸ್ಟಾಕ್ ಮತ್ತು ಷೇರ್‌ಗಳಿಂದ ಆದಾಯ ದೊರೆಯುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ. ಮಾನಸಿಕ ಒತ್ತಡಕ್ಕೆ ಒಳಗಾಗದೆ ಆಸ್ತಿಯ ವಿಚಾರದಲ್ಲಿ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ. ನಿಮ್ಮ ತಾಯಿಗೆ ಅವರ ತವರು ಮನೆಯಿಂದ ಹಣದ ಸಹಾಯ ದೊರೆಯುತ್ತದೆ.

ಕನ್ಯಾ ರಾಶಿ

ನಿಮ್ಮ ವಿದ್ಯೆಗೆ ತಕ್ಕಂತಹ ಉದ್ಯೋಗ ದೊರೆಯುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆತು ದೂರದ ಊರಿಗೆ ತೆರಳಬೇಕಾಗುತ್ತದೆ. ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ಪಡೆಯುತ್ತಾರೆ. ಕುಟುಂಬದ ಹಿರಿಯರ ಸಲುವಾಗಿ ಹಣ ವೆಚ್ಚವಾಗಲಿದೆ. ಬೇರೆಯವರನ್ನು ನಂಬದೇ ಸ್ವತಂತ್ರವಾಗಿ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಗಳಿಸುವಿರಿ. ವಂಶಾನುಗತವಾಗಿ ಬಂದ ವೃತ್ತಿಯೊಂದು ನಿಮಗೆ ಆಧಾರವಾಗುತ್ತದೆ.

ಕುಟುಂಬದಲ್ಲಿ ಶುಭ ಸಮಾರಂಭವನ್ನು ನಡೆಸಿ ಕೊಡುವಿರಿ. ಇರುವ ಮನೆಯನ್ನು ನವೀಕರಣಗೊಳಿಸಲು ಹಣ ವೆಚ್ಚವಾಗುತ್ತದೆ. ಬಂಧು ಒಬ್ಬರಿಗೆ ಒತ್ತಾಯಪೂರ್ವಕವಾಗಿ ಹಣ ಸಹಾಯ ಮಾಡುವಿರಿ. ಸಮಾಜ ಸೇವೆ ಮಾಡುವ ನಿಮ್ಮ ಆಸೆಗೆ ಆತ್ಮೀಯರ ಬೆಂಬಲವಿರುತ್ತದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ದೋಷಗಳು ಉಂಟಾಗಬಹುದು. ಮಹಿಳೆಯರು ತಮ್ಮ ಮನಸ್ಸಿಗೆ ಒಪ್ಪುವ ಒಡವೆ ವಸ್ತ್ರಗಳನ್ನು ಕೊಳ್ಳುತ್ತಾರೆ.

ತುಲಾ ರಾಶಿ

ಖರ್ಚು ವೆಚ್ಚಗಳು ಅಧಿಕವಾದರೂ ಸರಿಸಮನಾದ ಆದಾಯವಿರುತ್ತದೆ. ವಿದೇಶ ಪ್ರಯಾಣ ಯೋಗವಿದೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ. ನಿಮಗೆ ಕಣ್ಣಿನ ತೊಂದರೆ ಉಂಟಾಗಬಹುದು. ಸಂತಾನ ಲಾಭವಿದೆ. ನಿಮ್ಮ ಮಕ್ಕಳ ಜೀವನದಲ್ಲಿ ಮಹತ್ತರ ತಿರುವು ಕಂಡು ಬರುತ್ತದೆ. ವಿದ್ಯಾರ್ಥಿಗಳು ಚುರುಕಿನಿಂದ ಕಲಿಕೆಯಲ್ಲಿ ಮುಂದಿರುತ್ತಾನೆ. ಸಮಾಜದಲ್ಲಿ ನಿಮಗೆ ಗೌರವಯುತ ಸ್ಥಾನಮಾನ ಲಭಿಸುತ್ತದೆ. ಬಹುದಿನದಿಂದ ನಿರೀಕ್ಷಿಸುತ್ತಿದ್ದ ಉದ್ಯೋಗದಲ್ಲಿನ ಯಶಸ್ಸು ನಿಮ್ಮದಾಗುತ್ತದೆ.

ತುಲಾ ರಾಶಿಯವರು ಕಮಿಷನ್ ಆಧಾರದಲ್ಲಿ ನಡೆಸುವ ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯಲಿವೆ. ಸಂಗಾತಿಯ ಜೊತೆ ಅನಾವಶ್ಯಕ ವಾದ ವಿವಾದಗಳಿರುತ್ತವೆ. ಮನಸ್ಸಿಟ್ಟು ಮಾಡುವ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ. ಸಹನೆಯಿಂದ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸಲು ಪ್ರಯತ್ನಿಸಿ. ಹಣಕಾಸಿನ ವಿಚಾರದಲ್ಲಿ ಇದ್ಧ ವಿವಾದವು ಕೊನೆಗೊಳ್ಳುವುದು. ಅನಿರೀಕ್ಷಿತ ಧನ ಲಾಭವಿರುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ. ಕುಟುಂಬದ ಆಸ್ತಿಯ ವಿವಾದವು ಕಾನೂನಿನ ಮುಖಾಂತರ ಪರಿಹಾರ ಗೊಳ್ಳುತ್ತದೆ.

ವೃಶ್ಚಿಕ ರಾಶಿ

ಗುರು ಹಿರಿಯರ ಸಲಹೆ ಸೂಚನೆಯಂತೆ ನಡೆಯುವ ಕಾರಣ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ನಿಮ್ಮ ನಿರೀಕ್ಷೆಯಂತೆ ಹಣಕಾಸಿನ ಲಭ್ಯತೆ ಇರುತ್ತದೆ. ಉದ್ಯೋಗದಲ್ಲಿ ವಿಶೇಷವಾದ ಸ್ಥಾನಮಾನ ಗಳಿಸುವಿರಿ. ಸಾಕುಪ್ರಾಣಿಗಳಿಂದ ತೊಂದರೆಯಾಗಬಹುದು ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಬೆಳವಣಿಗೆ ಕಂಡು ಬರುತ್ತದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ ಮಾಡುವರು. ಅನಾವಶ್ಯಕವಾಗಿ ಉದ್ಯೋಗ ಬದಲಿಸುವ ನಿರ್ಧಾರ ಮಾಡುವಿರಿ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಇದ್ದ ವಿವಾದವನ್ನು ಪರಿಹರಿಸುವಿರಿ.

ವೃಶ್ಚಿಕ ರಾಶಿಯವರಿಗೆ ಸಮಾಜ ಸೇವೆ ಮಾಡುವ ಅವಕಾಶ ಸಿಗುತ್ತೆ. ನಿಮ್ಮಿಂದ ದೂರವಾಗಿದ್ದ ತಾಯಿಯ ಕಡೆ ಸಂಬಂಧಿಕರು ಒಬ್ಬರು ಮರಳಿ ಬರುತ್ತಾರೆ. ಹೊಸ ವಾಹನಕೊಳ್ಳುವ ಸೂಚನೆಗಳಿವೆ. ಇರುವ ಮನೆಯನ್ನು ನವೀಕರಣಗೊಳಿಸಲು ಹಣ ಹೊಂದಿಸಬೇಕಾಗುತ್ತದೆ. ಮಕ್ಕಳ ಸಲುವಾಗಿ ಕುಟುಂಬದಲ್ಲಿ ಬೇಸರದ ಸನ್ನಿವೇಶ ಎದುರಿಸುವಿರಿ. ಕಲಾವಿದರಾದಲ್ಲಿ ಅಪರೂಪದ ಅವಕಾಶ ದೊರೆಯಲಿದೆ. ಬೇಸರ ಕಳೆಯಲು ಕುಟುಂಬದ ಸದಸ್ಯರ ಜೊತೆ ಯಾತ್ರಾಸ್ಥಳಕ್ಕೆ ಭೇಟಿ ನೀಡುವಿರಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.