Mercury Transit: ಕನ್ಯಾ ರಾಶಿಗೆ ಬುಧ ಪ್ರವೇಶ; ಈ ರಾಶಿಯವರು ಸೋಲಿಗೆ ಹೆದರದೆ ಅಸಾಧ್ಯವೆನಿಸುವ ಕೆಲಸ ಮಾಡುತ್ತಾರೆ
Mercury Transit in Virgo: ಸೆಪ್ಟೆಂಬರ್ 23 ರ ಸೋಮವಾರ ಕನ್ಯಾ ರಾಶಿಗೆ ಬುಧನ ಪ್ರವೇಶದಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಸಾಕಷ್ಟು ಲಾಭಗಳಿವೆ. ಏನೆಲ್ಲಾ ಪ್ರಯೋಜಗಳಿವೆ ಅನ್ನೋದನ್ನು ತಿಳಿಯಿರಿ. (ಬರಹ: ಎಚ್ ಸತೀಶ್, ಜ್ಯೋತಿಷಿ)
2024ರ ಸೆಪ್ಟಂಬರ್ 23ರಂದು ಬುಧನು ಕನ್ಯಾರಾಶಿಯನ್ನು ಪ್ರವೇಶಿಸಿ ಅಕ್ಟೋಬರ್ 10 ರವರೆಗೆ ಅದೇ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಬುಧನಿಂದ ಭದ್ರಯೋಗ ಉಂಟಾಗುತ್ತದೆ. ಈ ವೇಳೆಯಲ್ಲಿ ಪ್ರತಿಯೊಂದು ರಾಶಿಗಳಿಗೂ ಧನಾತ್ಮಕ ಫಲಗಳು ದೊರೆಯುತ್ತವೆ. ವಿಶೇಷವಾಗಿ ಧನು ರಾಶಿಯಿಂದ ಮೀನದವರೆಗೆ 4 ರಾಶಿಯವರಿಗೆ ಇರುವ ಪ್ರಯೋಜನಗಳನ್ನು ತಿಳಿಯೋಣ.
ಧನು ರಾಶಿ
ಸೋಲಿಗೆ ಹೆದರದೆ ಅಸಾಧ್ಯವೆನಿಸುವ ಕೆಲಸವನ್ನು ಮಾಡುತ್ತೀರಿ. ಆದರೆ ದೃಢವಾದ ನಿಲುವು ತಾಳಲು ವಿಫಲರಾಗುವಿರಿ. ಕೈಹಿಡಿದ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಿವೆ. ಸಮಯವನ್ನು ವ್ಯರ್ಥ ಮಾಡದೆ ಅನೇಕ ರೀತಿಯ ಕೆಲಸ ಕಾರ್ಯಗಳನ್ನು ಮಾಡುವಿರಿ. ಎಲ್ಲರಿಗೂ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ವಿಶ್ವಾಸ ಗಳಿಸುವಿರಿ. ಕುಟುಂಬದಲ್ಲಿ ಇದ್ದ ಬೇಸರವು ದೂರವಾಗಿ ಉತ್ತಮ ಹೊಂದಾಣಿಕೆ ಮೂಡುತ್ತದೆ. ಉದ್ಯೋಗದಲ್ಲಿ ನಿಮ್ಮ ಇಚ್ಛೆಯಂತೆ ಫಲಿತಾಂಶಗಳು ದೊರೆಯುತ್ತದೆ.
ಒತ್ತಡವಿದ್ದರೂ ಉದ್ಯೋಗವನ್ನು ಬದಲಾಯಿಸುವ ಇಚ್ಛೆ ಇರುವುದಿಲ್ಲ. ಹಿರಿಯ ಅಧಿಕಾರಿಗಳು ನಿಮ್ಮ ಪ್ರತಿಮೆಯನ್ನು ತೋರಲು ಉತ್ತಮ ಅವಕಾಶವನ್ನು ನೀಡುತ್ತಾರೆ. ಸ್ವತಂತ್ರವಾಗಿ ನಿರ್ವಹಿಸುವ ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯಲಿವೆ. ವಿದ್ಯಾರ್ಥಿಗಳು ತಮ್ಮ ಹೊಣೆಯನ್ನು ಅರಿತು ಕರ್ತವ್ಯವನ್ನು ನಿರ್ವಹಿಸುವಿರಿ. ಉತ್ತಮ ಆರೋಗ್ಯ ಇರುತ್ತದೆ. ಕುಟುಂಬದಲ್ಲಿ ಪ್ರತಿಯೊಂದು ವಿಚಾರದಲ್ಲಿಯೂ ಒಂದೇ ರೀತಿಯ ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಸಹಕಾರದ ಮನೋಭಾವನೆ ಇರುವ ಕಾರಣ ಎಲ್ಲರೂ ಸ್ನೇಹಿತರಾಗಿಯೇ ಬಾಳುತ್ತಾರೆ. ದುಡುಕಿನ ಗುಣ ಇರದ ಕಾರಣ ಯಾವುದೇ ತೊಂದರೆ ಕಾಣದು.
ಮಕರ ರಾಶಿ
ಆರಂಭಿಸಿದ ಕೆಲಸವನ್ನು ಪೂರ್ಣಗೊಳಿಸುವಿರಿ. ಆತುರದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳಬಹುದು. ಉತ್ತಮ ಆದಾಯವಿರುವ ಕಾರಣ ಮನಸ್ಸಿಗೆ ನೆಮ್ಮದಿ ಇರುತ್ತದೆ. ಯಾವುದೇ ಕೆಲಸವನ್ನು ಸುಲಭವಾಗಿ ಮಾಡುತ್ತೀರಿ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ವಿಶೇಷವಾದ ಯಶಸ್ಸು ದೊರೆಯುತ್ತದೆ. ಅನಿರೀಕ್ಷಿತ ಧನ ಲಾಭವಿರುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ. ಮಾತಿನ ಮೇಲೆ ಹಿಡಿತ ಸಾಧಿಸಿದರೆ ಸೋಲಿನ ಭಯವಿರುವುದಿಲ್ಲ. ಮನಸ್ಸು ಒಳ್ಳೆಯದಾದರೂ ದುಡುಕಿನ ಮಾತಿನಿಂದ ಸಮಸ್ಯೆಗಳನ್ನು ಎದುರಿಸುವಿರಿ. ನಿರುದ್ಯೋಗಿಗಳಿಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ.
ಕುಟುಂಬದ ಸದಸ್ಯರಲ್ಲಿ ಪರಸ್ಪರ ಸಹಕಾರವಿರುತ್ತದೆ. ಬಿಡುವಿಲ್ಲದ ಕೆಲಸದಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಪ್ರವಾಸದಿಂದ ಲಾಭವಿದೆ. ಸ್ವಂತ ವ್ಯಾಪಾರ ವ್ಯವಹಾರಗಳಿದ್ದಲ್ಲಿ ಆದಾಯದಲ್ಲಿ ಕೊರತೆ ಇರುವುದಿಲ್ಲ. ಉನ್ನತ ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತದೆ. ನೀರಿರುವ ಸ್ಥಳಗಳಿಂದ ದೂರವಿರುವುದು ಒಳ್ಳೆಯದು. ಸಮಾಜಕ್ಕೆ ಅನುಕೂಲವೆನಿಸುವ ಕೆಲಸಗಳನ್ನು ಮಾಡುವಿರಿ. ಆತ್ಮೀಯರ ಕಷ್ಟದ ಪರಿಸ್ಥಿತಿಯಲ್ಲಿ ಸಹಾಯ ಮಾಡುವಿರಿ. ಹಣಕಾಸಿನ ವ್ಯವಹಾರದ ವಿಚಾರದಲ್ಲಿ ಎಚ್ಚರಿಕೆ ಇರಲಿ. ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವ ಜನರಿರುತ್ತಾರೆ.
ಕುಂಭ ರಾಶಿ
ನಿಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ಸಮಯ ಇಲ್ಲದಂತಾಗುತ್ತದೆ. ಸದಾಕಾಲ ಬೇರೆಯವರಿಗೆ ಸಹಾಯ ಮಾಡಬೇಕಾಗುತ್ತದೆ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಹಾಗೆಯೇ ತೊಂದರೆಯೂ ಇರುವುದಿಲ್ಲ. ವಿದ್ಯಾರ್ಥಿಗಳು ಅನಿರೀಕ್ಷಿತ ಫಲಿತಾಂಶದಿಂದ ಸಂತಸ ಪಡುತ್ತಾರೆ. ನಿಮ್ಮ ಆತ್ಮೀಯರೊಬ್ಬರಿಗೆ ಅನಾರೋಗ್ಯವಿರುತ್ತದೆ. ಬಾಳಸಂಗಾತಿಯೊಂದಿಗೆ ಅನಾವಶ್ಯಕ ಮನಸ್ತಾಪ ಉಂಟಾಗುತ್ತದೆ. ಸ್ವಂತ ವ್ಯಾಪಾರ ವ್ಯವಹಾರವಿದ್ದಲ್ಲಿ ಮಾತ್ರ ಉತ್ತಮ ಆದಾಯವಿರುತ್ತದೆ. ಉದ್ಯೋಗಸ್ಥರು ಪರಿಸ್ಥಿತಿಗೆ ಹೊಂದಿಕೊಂಡು ಬಾಳುವ ಕಾರಣ ಯಾವುದೇ ತೊಂದರೆ ಇರದು.
ಕುಂಭ ರಾಶಿಯವರು ದೊರೆಯುವ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಮಕ್ಕಳ ಸಹಾಯವಿರುವುದರಿಂದ ನೆಮ್ಮದಿಯ ಜೀವನ ಸಾಗಿಸುವಿರಿ. ವಾಸಸ್ಥಳವನ್ನು ಬದಲಾಯಿಸುವ ಸೂಚನೆಗಳಿವೆ. ಸಂದಿಗ್ದ ಪರಿಸ್ಥಿತಿಯಲ್ಲಿ ಬುದ್ಧಿವಂತಿಕೆಯ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಹಣದ ತೊಂದರೆ ಉಂಟಾಗುವುದಿಲ್ಲ. ಅನಿರೀಕ್ಷಿತ ಧನ ಲಾಭವಿರುತ್ತದೆ. ಗಂಟಲಿಗೆ ಸಂಬಂಧಪಟ್ಟಂತೆ ತೊಂದರೆ ಇರುತ್ತದೆ.
ಮೀನ ರಾಶಿ
ಬಹುದಿನದಿಂದ ಇದ್ದ ನಿಮ್ಮ ಮನದಾಸೆಗಳನ್ನು ಈಡೇರಿಸಿಕೆೊಳ್ಳುತ್ತೀರಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ಸಿಗುತ್ತೆ. ಆದಾಯದಲ್ಲಿ ಹೆಚ್ಚಳ ಕಂಡು ಬರುತ್ತದೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯುತ್ತದೆ. ವಿದ್ಯಾರ್ಥಿಗಳು ಕೇವಲ ಕಲಿಕೆ ಮಾತ್ರವಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಹ ಮುಂದಿರುತ್ತಾರೆ. ಅನಿರೀಕ್ಷಿತ ಧನಲಾಭವಿರುತ್ತದೆ. ಕುಟುಂಬದಲ್ಲಿ ನಿಮ್ಮಿಂದ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಕುಟುಂಬದಲ್ಲಿ ನಿಮ್ಮ ಜವಾಬ್ದಾರಿಯು ಹೆಚ್ಚುತ್ತದೆ. ಪದೇ ಪದೇ ತೆಗೆದುಕೊಳ್ಳುವ ನಿರ್ಣಯಗಳನ್ನು ಬದಲಿಸುವಿರಿ.
ಅವಿವಾಹಿತರಿಗೆ ವಿವಾಹ ಯೋಗವಿದೆ. ಉದ್ಯೋಗವನ್ನು ಬದಲಾಯಿಸುವ ಸಾಧ್ಯತೆಗಳಿವೆ. ಸ್ನೇಹಿತರ ಜೊತೆಗೂಡಿ ಸಂಘ-ಸಂಸ್ಥೆಯನ್ನು ಆರಂಭಿಸುವಿರಿ. ಸಮಾಜದಲ್ಲಿ ವಿಶೇಷ ಗೌರವ ಲಭಿಸುತ್ತದೆ. ಹೊಸ ಮನೆಯನ್ನು ಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ಅನಾವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಕ್ರೀಡಾ ಸ್ಪೂರ್ತಿಯಿಂದ ಮನಸ್ಸಿನ ಚಿಂತೆಯು ದೂರವಾಗುತ್ತದೆ. ದೀರ್ಘಕಾಲದಿಂದ ಕಾಣುತ್ತಿದ್ದ ಅನಾರೋಗ್ಯದಿಂದ ಗುಣಮುಖರಾಗುತ್ತೀರಿ. ನೂತನ ವಾಹನ ಲಾಭವಿದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.