Mercury Transit: ಕನ್ಯಾ ರಾಶಿಗೆ ಬುಧ ಪ್ರವೇಶ; ಮೇಷದಿಂದ ಕಟಕ ವರೆಗೆ 4 ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಯಶಸ್ಸು, ಆರೋಗ್ಯವಾಗಿರುತ್ತೀರಿ
Mercury Transit in Virgo: ಸೆಪ್ಟೆಂಬರ್ 23 ರ ಸೋಮವಾರ ಕನ್ಯಾ ರಾಶಿಗೆ ಬುಧನ ಪ್ರವೇಶದಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಸಾಕಷ್ಟು ಲಾಭಗಳಿವೆ. ಏನೆಲ್ಲಾ ಪ್ರಯೋಜಗಳಿವೆ ಅನ್ನೋದನ್ನು ತಿಳಿಯಿರಿ. (ಬರಹ: ಎಚ್ ಸತೀಶ್, ಜ್ಯೋತಿಷಿ)
2024ರ ಸೆಪ್ಟಂಬರ್ 23ರಂದು ಬುಧನು ಕನ್ಯಾರಾಶಿಯನ್ನು ಪ್ರವೇಶಿಸಿ ಅಕ್ಟೋಬರ್ 10 ರವರೆಗೆ ಅದೇ ರಾಶಿಯಲ್ಲಿ ಸಂಚರಿಸುತ್ತಾನೆ. ಈ ಅವಧಿಯಲ್ಲಿ ಬುಧನಿಂದ ಭದ್ರಯೋಗ ಉಂಟಾಗುತ್ತದೆ. ಈ ವೇಳೆಯಲ್ಲಿ ಪ್ರತಿಯೊಂದು ರಾಶಿಗಳಿಗೂ ಧನಾತ್ಮಕ ಫಲಗಳು ದೊರೆಯುತ್ತವೆ. ವಿಶೇಷವಾಗಿ ಮೇಷದಿಂದ ಕಟಕದವರೆಗೆ 4 ರಾಶಿಯವರಿಗೆ ಇರುವ ಪ್ರಯೋಜನಗಳನ್ನು ತಿಳಿಯೋಣ.
ಮೇಷ ರಾಶಿ
ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಆದರೆ ಆತುರಕ್ಕೆ ಒಳಗಾಗದೆ ಸಹನೆಯಿಂದ ಕೆಲಸ ನಿರ್ವಹಿಸಬೇಕು. ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪ್ರಯತ್ನದ ಅವಶ್ಯಕತೆ ಇದೆ. ಯಾವುದೇ ಸಮಸ್ಯೆಯೂ ಎದುರಾದರೂ ಮಕ್ಕಳ ಸಹಾಯದಿಂದ ಪರಿಹಾರ ಗೊಳ್ಳುತ್ತದೆ. ಅವಧಿಯಲ್ಲಿ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಕಲಿಕೆಯಲ್ಲಿ ತೊಡಗಬೇಕು. ಗೆಲ್ಲಲೇ ಬೇಕಂಬ ಚಲದಿಂದ ಉದ್ಯೋಗದಲ್ಲಿ ಯಶಸ್ಸನ್ನು ಗಳಿಸುವಿರಿ. ನರಕ್ಕೆ ಸಂಬಂಧಿಸಿದ ತೊಂದರೆ ಇರುವವರು ಎಚ್ಚರಿಕೆ ವಹಿಸಬೇಕು.
ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಅನಾವಶ್ಯಕ ವಾದ ವಿವಾದಗಳು ಇರುತ್ತವೆ. ಕಲಿಕೆಯ ಅಂತಿಮ ಹಂತದಲ್ಲಿ ಇರುವವರು ಖ್ಯಾತ ಸಂಸ್ಥೆಯಲ್ಲಿ ಕೆಲಸವನ್ನು ಗಳಿಸುತ್ತಾರೆ. ದಾಂಪತ್ಯ ಜೀವನದಲ್ಲಿ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ಅನಿರೀಕ್ಷಿತ ಖರ್ಚು ವೆಚ್ಚಗಳಿಂದ ಬೇಸರಗೊಳ್ಳುವಿರಿ. ಆದರೆ ಹಣ ಉಳಿಸುವ ಯೋಜನೆಯು ಕಾರ್ಯರೂಪಕ್ಕೆ ಬರುತ್ತದೆ. ಕುಟುಂಬದವರಿಂದ ಹಣದ ಸಹಾಯ ದೊರೆಯುತ್ತದೆ. ಅಜೀರ್ಣದ ತೊಂದರೆಯಿಂದ ಬಳಲುವಿರಿ.
ವೃಷಭ ರಾಶಿ
ಬುದ್ಧಿವಂತಿಕೆಯ ತೀರ್ಮಾನಗಳು ಬದುಕಿನಲ್ಲಿ ಹೊಸ ದಾರಿಯನ್ನು ರೂಪಿಸುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಣಯಗಳನ್ನು ಸುಲಭವಾಗಿ ಬದಲಾಯಿಸುವುದಿಲ್ಲ. ಹಣಕಾಸಿನ ತೊಂದರೆ ಇರುವುದಿಲ್ಲ. ದುಡಿದ ಹಣವನ್ನು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸುವಿರಿ. ಕುಟುಂಬದ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಿರಿ. ವಿದ್ಯಾರ್ಥಿಗಳು ವಿಶೇಷವಾದ ಸಾಧನೆಯನ್ನು ಮಾಡುತ್ತಾರೆ. ಕುಟುಂಬದಲ್ಲಿ ನಿಮ್ಮ ಅವಶ್ಯಕತೆ ಹೆಚ್ಚುತ್ತದೆ.
ನಿಮ್ಮ ಮಕ್ಕಳಿಗೆ ಉದ್ಯೋಗ ಲಭಿಸುತ್ತದೆ. ಧಾರ್ಮಿಕ ವಿಚಾರಗಳ ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ. ಸ್ವಲ್ಪ ಎಚ್ಚರಿಕೆ ವಹಿಸಿದಲ್ಲಿ ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಗಳಿಸಿದ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಉನ್ನತ ವಿದ್ಯಾಭ್ಯಾಸ ಮಾಡುವ ನಿಮ್ಮ ಆಸೆ ನೆರವೇರುತ್ತದೆ. ಸೋದರ ಮಾವನಿಂದ ಸಹಾಯ ಲಭ್ಯವಾಗುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ. ಉದ್ಯೋಗದಲ್ಲಿ ಮಾತ್ರ ತಡವಾಗಿ ಯಶಸ್ಸನ್ನು ಗಳಿಸುವಿರಿ. ನಿಮ್ಮ ಹಿರಿಯ ಅಧಿಕಾರಿಗಳ ಸಹಕಾರ ನಿಮಗೆ ದೊರೆಯುತ್ತದೆ. ಶಾರದ ವ್ಯವಹಾರದಲ್ಲಿ ತೊಂದರೆ ಇರುತ್ತದೆ.
ಮಿಥುನ ರಾಶಿ
ದೃಢವಾದ ನಿಲುವಿನಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಉತ್ತಮ ಆದಾಯವಿದ್ದರೂ ಸರಿ ಸಮಾನವಾದ ಖರ್ಚು ವೆಚ್ಚಗಳು ಎದುರಾಗುತ್ತವೆ. ಆದರೂ ಯಾವುದೇ ತೊಂದರೆ ಇರುವುದಿಲ್ಲ. ನಿಮ್ಮ ಬುದ್ಧಿವಂತಿಕೆಯ ನಿರ್ಧಾರಗಳು ಕಷ್ಟ ನಷ್ಟಗಳಿಂದ ಪಾರು ಮಾಡುತ್ತದೆ. ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಮುಂದುವರೆಯುತ್ತಾರೆ. ನೆರೆಹೊರೆಯವರೊಂದಿಗೆ ಉತ್ತಮ ಒಡನಾಟ ಕಂಡು ಬರುತ್ತದೆ. ಅನಿರೀಕ್ಷಿತ ಧನ ಲಾಭವಿರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ತೊಂದರೆ ಉಂಟಾಗಬಹುದು. ಆದ್ದರಿಂದ ಸಾಲದ ವ್ಯವಹಾರದಿಂದ ದೂರವಿರಿ.
ಉದ್ಯೋಗದಲ್ಲಿ ನಿಧಾನಗತಿಯ ಪ್ರಗತಿ ಕಂಡು ಬರುತ್ತದೆ. ಕುಟುಂಬದ ಜವಾಬ್ದಾರಿಯು ಹೆಚ್ಚಿನದಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರವಿರಲಿ. ಅವಿರತ ದುಡಿಮೆಯ ನಡುವೆಯೂ ವಿಶ್ರಾಂತಿಯನ್ನು ತೆಗೆದುಕೊಳ್ಳುವುದನ್ನು ಮರೆಯದಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆತ್ಮೀಯರ ಸಹಾಯವನ್ನು ಪಡೆಯುವಿರಿ. ಪ್ರವಾಸ ಮಾಡುವ ವೇಳೆ ನಿಮಗೆ ಇಷ್ಟವೆನಿಸುವ ವಸ್ತುವೊಂದು ಕಳುವಾಗಬಹುದು ಎಚ್ಚರಿಕೆ ಇರಲಿ. ಹೊಸ ವಾಹನವನ್ನು ಕೊಳ್ಳುವ ಆಸೆ ಈಡೇರುತ್ತದೆ.
ಕಟಕ ರಾಶಿ
ಗೆಲ್ಲುವವರೆಗೂ ಪ್ರಯತ್ನವನ್ನು ನಿಲ್ಲಿಸುವುದಿಲ್ಲ. ನಿಮ್ಮ ಹಠದಿಂದ ಬೇರೆಯವರಿಗೆ ಬೇಸರವಾದರೂ ನಿಮಗೆ ಅನುಕೂಲವಾಗುತ್ತದೆ. ಕುಟುಂಬದ ಹಿರಿಯರು ನಿಮಗೆ ಹಣಕಾಸಿನ ಸಹಾಯ ಮಾಡುತ್ತಾರೆ. ಹಿರಿಯ ಸೋದರಿಯ ಜೀವನದಲ್ಲಿನ ತೊಂದರೆಯೂ ದೂರವಾಗುತ್ತದೆ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆಗಳು ಕಂಡುಬರುತ್ತವೆ. ಉತ್ತಮ ಆದಾಯವಿರುತ್ತದೆ. ಕಷ್ಟಪಟ್ಟು ದುಡಿದ ಹಣವನ್ನು ಒಳ್ಳೆಯ ಕೆಲಸ ಕಾರ್ಯಗಳಿಗೆ ವಿನಯೋಗಿಸುವಿರಿ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗುತ್ತದೆ. ಕುಟುಂಬದಲ್ಲಿ ಧಾರ್ಮಿಕ ಕೆಲಸ ಕಾರ್ಯಗಳು ನಡೆಯಲಿವೆ.
ಆರೋಗ್ಯದ ಬಗ್ಗೆ ಗಮನವಿರಲಿ. ವಾಯುವಿನ ದೋಷ ನಿಮ್ಮನ್ನು ಕಾಡಬಹುದು. ನಿಮ್ಮ ಕೆಲಸ ಕಾರ್ಯಗಳ ಮೇಲೆ ಹಿರಿಯ ಅಧಿಕಾರಿಗಳ ಗಮನವಿರುತ್ತದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ವಂಶದ ಆಸ್ತಿಯ ವಿಚಾರದಲ್ಲಿ ಇದ್ದ ವಿವಾದವು ನಿಮ್ಮಿಂದ ಬಗೆಹರಿಯುತ್ತದೆ. ನಯವಾದ ಮಾತು ಕತೆಯಿಂದ ಕೆಲಸ ಸಾಧಿಸುವಿರಿ. ದಾಂಪತ್ಯದಲ್ಲಿ ಉತ್ತಮ ಸೌಹಾರ್ದತೆ ನೆಲೆಸುತ್ತದೆ. ಮಕ್ಕಳೊಂದಿಗೆ ಸಂತೋಷದಿಂದ ವೇಳೆ ಕಳೆಯುವಿರಿ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.