ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತುಲಾ ಸೇರಿದಂತೆ ಈ 3 ರಾಶಿಯವರ ಮೇಲೆ ಕೋಪಗೊಂಡಿದ್ದಾನೆ ಶನಿ, ಕಷ್ಟ ತಪ್ಪಿದ್ದಲ್ಲ; ಪರಿಹಾರಕ್ಕಾಗಿ ಹೀಗೆ ಮಾಡಿ

ತುಲಾ ಸೇರಿದಂತೆ ಈ 3 ರಾಶಿಯವರ ಮೇಲೆ ಕೋಪಗೊಂಡಿದ್ದಾನೆ ಶನಿ, ಕಷ್ಟ ತಪ್ಪಿದ್ದಲ್ಲ; ಪರಿಹಾರಕ್ಕಾಗಿ ಹೀಗೆ ಮಾಡಿ

ಕೆಲವು ದಿನಗಳ ಹಿಂದಷ್ಟೇ ಕುಜನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ಸಮಯದಲ್ಲಿ ಕುಂಭ ರಾಶಿಯಲ್ಲಿರುವ ಶನಿಯು 3 ನೇ ಮನೆಯಲ್ಲಿ ಫಲಿತಾಂಶವನ್ನು ನೀಡುತ್ತಾನೆ ಇದರ ಪರಿಣಾಮ ಶನಿಯು ತುಲಾ ಸೇರಿದಂತೆ ಈ 3 ರಾಶಿಯವರ ಮೇಲೆ ಕೋಪಗೊಂಡಿದ್ದಾನೆ. ಈ ರಾಶಿಯವರು ಕಷ್ಟದಿಂದ ಹೊರಬರಲು ಹೀಗೆ ಮಾಡಿ.

ತುಲಾ ಸೇರಿದಂತೆ ಈ 3 ರಾಶಿಯವರ ಮೇಲೆ ಕೋಪಗೊಂಡಿದ್ದಾನೆ ಶನಿ, ಕಷ್ಟ ತಪ್ಪಿದ್ದಲ್ಲ; ಪರಿಹಾರಕ್ಕಾಗಿ ಹೀಗೆ ಮಾಡಿ
ತುಲಾ ಸೇರಿದಂತೆ ಈ 3 ರಾಶಿಯವರ ಮೇಲೆ ಕೋಪಗೊಂಡಿದ್ದಾನೆ ಶನಿ, ಕಷ್ಟ ತಪ್ಪಿದ್ದಲ್ಲ; ಪರಿಹಾರಕ್ಕಾಗಿ ಹೀಗೆ ಮಾಡಿ

ಶನಿಯ ಪ್ರತಿ ಬಾರಿ ರಾಶಿಯನ್ನು ಬದಲಿಸಿದಾಗ ವ್ಯಕ್ತಿಗಳ ಜೀವನದಲ್ಲಿ ಕೂಡಾ ಬಹಳ ಬದಲಾವಣೆಗಳಾಗುತ್ತವೆ. ಅದು ನಕಾರಾತ್ಮಕ ಬದಲಾವಣೆ ಇರಬಹುದು, ಅಥವಾ ಸಕಾರಾತ್ಮಕವಾಗಿರಬಹುದು. ನಮ್ಮೆಲ್ಲರ ಆರೋಗ್ಯ ಮತ್ತು ಸಂಪತ್ತು ಶನಿಯ ಸಂಚಾರದಿಂದ ಪ್ರಭಾವಿತವಾಗಿರುತ್ತದೆ. ಜ್ಯೋತಿಷ್ಯದ ಪ್ರಕಾರ, ಶನಿಯ ಕಾಲೋಚಿತ ಬದಲಾವಣೆಯು ಕೆಲವು ರಾಶಿಯವರನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಶನಿಯು ನಿಮಗೆ ಅನೇಕ ಶುಭ, ಅಶುಭ ಫಲಗಳನ್ನು ನೀಡಿದರೂ ಕೆಲವೊಮ್ಮೆ ಜೀವನದಲ್ಲಿ ನಡೆಯಬಾರಂಥ ಘಟನೆಗಳು ನಡೆಯಲು ಕಾರಣನಾಗುತ್ತಾನೆ.

ಇತ್ತೀಚೆಗೆ ಕುಜನು ಮೇಷ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ಸಮಯದಲ್ಲಿ ಕುಂಭ ರಾಶಿಯಲ್ಲಿರುವ ಶನಿಯು 3 ನೇ ಮನೆಯಲ್ಲಿ ಫಲಿತಾಂಶವನ್ನು ನೀಡುತ್ತಾನೆ. ಈ ಕಾರಣದಿಂದಾಗಿ, ಶನಿಯು ಕಟಕ ಸೇರಿದಂತೆ ಮೂರು ರಾಶಿಯ ಜನರಿಗೆ ಆಗಾಗ್ಗೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಈ ರಾಶಿಯವರು ಏನು ಸಮಸ್ಯೆಗಳನ್ನು ಎದುರಿಸುತ್ತಾರೆ, ಇದಕ್ಕೆ ಪರಿಹಾರಗಳೇನು ನೋಡೋಣ.

ಕಟಕ ರಾಶಿ

ಶನಿಯು ಕೋಪಿಷ್ಟನಾದ ಕಾರಣ ನಿಮಗೆ ದೊಡ್ಡ ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ. ನಿಮ್ಮ ಆದಾಯ ಕಡಿಮೆಯಾಗುತ್ತದೆ. ಲಾಭವು ಕಣ್ಮರೆಯಾಗುತ್ತದೆ. ವಿವಿಧ ಕಡೆಗಳಿಂದ ಒತ್ತಡ ಉಂಟಾಗಲಿದೆ. ನಿಮ್ಮ ವೃತ್ತಿಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏನೇ ಮಾಡಿದರೂ ಯಶಸ್ಸು ಸಿಗುವುದಿಲ್ಲ. ವೃತ್ತಿಜೀವನದ ಅನಾನುಕೂಲಗಳು ನಿಮ್ಮನ್ನು ಅಪಾಯಕ್ಕೆ ಸಿಲುಕಿಸಬಹುದು. ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ. ನೀವು ಹಣವನ್ನು ಹೂಡಿಕೆ ಮಾಡಲು ನಿರ್ಧರಿಸಿದ್ದರೆ. ಅದನ್ನು ತಪ್ಪಿಸಲು ನೀವು ಜಾಗರೂಕರಾಗಿರಬೇಕು.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಕೂಡಾ ಶನಿಯು ಬಹಳ ಅಶುಭ ಫಲಿತಾಂಶ ನೀಡಲಿದ್ದಾನೆ. ಪ್ರತಿಯೊಂದು ವಿಚಾರಗಳಿಗೂ ನಿಮಗೆ ಒತ್ತಡ ಹೆಚ್ಚಾಗುತ್ತದೆ. ಸಾಲು ಸಾಲು ಸಮಸ್ಯೆಗಳಿಂದ ಜೀವನವೇ ಸವಾಲಾಗಿ ಪರಿಣಮಿಸುತ್ತದೆ. ಪ್ರತಿ ಹೆಜ್ಜೆಯಲ್ಲೂ ಬಹಳ ಜಾಗರೂಕರಾಗಿರಬೇಕು. ಶತ್ರುಗಳು ಸಾಮಾನ್ಯವಾಗಿ ನಿಮ್ಮ ಜೀವನದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುತ್ತಾರೆ. ಈ ಸಮಯದಲ್ಲಿ ಕೆಲಸ ಮಾಡುವವರಿಗೆ ಇದು ಹೆಚ್ಚಿನ ಸವಾಲುಗಳನ್ನು ಒಡ್ಡುತ್ತದೆ. ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತೀವ್ರ ಎಚ್ಚರಿಕೆಯಿಂದ ಮುಂದುವರೆದರೆ ಸಮಸ್ಯೆಗಳಿಂದ ಸ್ವಲ್ಪವಾದರೂ ಪರಿಹಾರ ದೊರೆಯುತ್ತದೆ.

ತುಲಾ ರಾಶಿ

3 ನೇ ಮನೆಯಲ್ಲಿ ಶನಿಯ ಪ್ರಭಾವವು ತುಲಾ ರಾಶಿಯವರಿಗೆ ಬಹಳ ಅಮಂಗಳ. ಈ ಸಮಯದಲ್ಲಿ ಕುಟುಂಬದಲ್ಲಿ ಹಣ ಮತ್ತು ಆಸ್ತಿಯ ಬಗ್ಗೆ ವಿವಾದ ಹೆಚ್ಚಾಗುತ್ತವೆ. ತುಲಾ ರಾಶಿಯವರು ಮದುವೆಯ ಬಗ್ಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅದು ನಿಮ್ಮ ಜೀವನವನ್ನು ಬಿಕ್ಕಟ್ಟಿಗೆ ಸಿಲುಕಿಸುತ್ತದೆ. ಕೆಲಸದ ಸ್ಥಳದಲ್ಲಿ ಸಮಸ್ಯೆಗಳಿರುತ್ತವೆ. ಅನೇಕ ವಿಷಯಗಳು ನಿಮಗೆ ಒತ್ತಡ ಉಂಟುಮಾಡಬಹುದು. ಈ ಸಮಯದಲ್ಲಿ ಹಣ ಹೂಡಿಕೆ ಬಗ್ಗೆ ಕೂಡಾ ಬಹಳ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು.

ಪರಿಹಾರಗಳು

ಶನಿ ಪ್ರಭಾವವನ್ನು ಸಂಪೂರ್ಣವಾಗಿ ತಡೆಯಲಾಗದಿದ್ದರೂ ಎದುರಾಗುವ ಸಮಸ್ಯೆಗಳನ್ನು ಕಡಿಮೆ ಮಾಡಲು ಈ ಪರಿಹಾರಗಳನ್ನು ಕೈಗೊಳ್ಳಿ.

  • ಪ್ರತಿ ಶನಿವಾರ ಶನಿ ದೇವಸ್ಥಾನಕ್ಕೆ ತೆರಳಿ ಎಳ್ಳೆಣ್ಣೆ ದೀಪ ಹಚ್ಚಿ ಬನ್ನಿ
  • ಶನಿದೇವನಿಗೆ ಕೈ ಮುಗಿಯುವಾಗ ಆತನ ಕಣ್ಣುಗಳನ್ನು ನೋಡಬೇಡಿ, ಪಾದಗಳನ್ನು ನೋಡಿ ನಮಸ್ಕರಿಸಿ ಬನ್ನಿ
  • ಶನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಿ
  • ಹನುಮಾನ್‌ ಚಾಲೀಸಾ ಪಠಿಸಿ
  • ಬಡವರಿಗೆ ಸಹಾಯ ಮಾಡಿ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.