Horoscope Today: ಸ್ತ್ರೀಯರೊಂದಿಗೆ ವಾದ ವಿವಾದ ಬೇಡ, ದಿನನಿತ್ಯದ ಆದಾಯ ಹೆಚ್ಚಳ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ-horoscope today astrology prediction 23 february 2024 leo virgo libra scorpio daily horoscope sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಸ್ತ್ರೀಯರೊಂದಿಗೆ ವಾದ ವಿವಾದ ಬೇಡ, ದಿನನಿತ್ಯದ ಆದಾಯ ಹೆಚ್ಚಳ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ

Horoscope Today: ಸ್ತ್ರೀಯರೊಂದಿಗೆ ವಾದ ವಿವಾದ ಬೇಡ, ದಿನನಿತ್ಯದ ಆದಾಯ ಹೆಚ್ಚಳ; ಸಿಂಹದಿಂದ ವೃಶ್ಚಿಕ ರಾಶಿವರೆಗಿನ ದಿನಭವಿಷ್ಯ

ಫೆಬ್ರವರಿ 23, ಶುಕ್ರವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (23 February 2024 Daily Horoscope).

ಫೆಬ್ರವರಿ 23ರ ದಿನಭವಿಷ್ಯ
ಫೆಬ್ರವರಿ 23ರ ದಿನಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ( February 23 2024 Daily Horoscope).

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಶುಕ್ಲಪಕ್ಷ, ಶುಕ್ರವಾರ

ತಿಥಿ : ಚತುರ್ದಶಿ ತಿಥಿಯು ಹಗಲು 03.01 ರವರೆಗು ಇದ್ದು ಆನಂತರ ಹುಣ್ಣಿಮೆ ಆರಂಭವಾಗುತ್ತದೆ.

ನಕ್ಷತ್ರ : ಆಶೇಷ ನಕ್ಷತ್ರವು ರಾ.07.06 ವರೆಗು ಇರುತ್ತದೆ. ಆನಂತರ ಮಖ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.39

ಸೂರ್ಯಾಸ್ತ: ಸ.06.26

ರಾಹುಕಾಲ : ಬೆ.10.30 ರಿಂದ ಮ. 12.00

ರಾಶಿ ಫಲಗಳು

ಸಿಂಹ

ಯಾಂತ್ರಿಕ ಬದುಕಿನಿಂದ ಬೇಸರ ಇರುತ್ತದೆ. ಉದ್ಯೋಗದಲ್ಲಿ ತೋರುವ ತಲ್ಲೀನತೆ ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಸಹೋದ್ಯೋಗಿಗಳ ನಡುವಿರಿ. ಅಸಹಕಾರ ಮನೋಭಾವನೆ ದೂರವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ನೇರವಾದ ನಡೆನುಡಿ ಕೆಲವರ ಅಸಹನೆಗೆ ಕಾರಣವಾಗಲಿದೆ. ವಿದ್ಯಾರ್ಥಿಗಳು ದೃಢವಾದ ಮನಸ್ಸಿನಿಂದ ಕಲಿಕೆಯಲ್ಲಿ ಮುಂದುವರೆಯಬೇಕಾಗುತ್ತದೆ. ಸೇವಾ ಮನೋಭಾವನೆಯ ಕಾರಣ ಜನಪ್ರಿಯತೆ ಲಭಿಸುತ್ತದೆ. ಉದರ ದೋಷದ ತೊಂದರೆ ಇರುತ್ತದೆ. ಹಣಕಾಸಿನ ಸಮಸ್ಯೆಯೊಂದು ನಿವಾರಣೆ ಆಗುತ್ತದೆ. ಉದ್ಯೋಗದಲ್ಲಿರುವ ಮಹಿಳೆಯರಿಗೆ ಅಧಿಕಾರ ಲಭಿಸುತ್ತದೆ. ಹೊಸ ವ್ಯಾಪಾರ ಆರಂಭಿಸುವ ಯೋಜನೆ ಮುಂದೆ ಹೋಗಲಿದೆ.

ಪರಿಹಾರ : ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಹಸಿರು ಬಣ್ಣ

ಕನ್ಯಾ

ಆತ್ಮೀಯರ ಸಹವಾಸ ಕುಟುಂಬದಲ್ಲಿ ಸಂತಸವನ್ನು ಉಂಟುಮಾಡಲಿದೆ. ದಿನದ ಮುಖ್ಯವಾದ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುವಿರಿ. ಬಂಧು ಬಳಗದವರ ಕಷ್ಟ ನಷ್ಟಗಳಿಗೆ ಸ್ಪಂದಿಸುಉವಿರಿ. ವೈದ್ಯಕೀಯ ನೆರವಿನಿಂದ ಆರೋಗ್ಕದಲ್ಲಿನ ತೊಂದರೆ ಗುಣವಾಗುವುದು. ತಂದೆಯವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಕುಟುಂಬದಲ್ಲಿನ ನಿಮ್ಮ ಜವಾಬ್ದಾರಿಯು ಹೆಚ್ಚುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಉದ್ಯೋಗ ಬದಲಿಸುವ ಸೂಚನೆಗಳಿವೆ. ಮನೆಯಲ್ಲಿ ಮಂಗಳಕಾರ್ಯವೊಂದು ನೆರವೇರುತ್ತದೆ. ಸ್ತ್ರೀಯರೊಂದಿಗೆ ವಾದ ವಿವಾದವನ್ನು ಮಾಡದೇ ಇರುವುದು ಒಳ್ಳೆಯದು. ಚಾಡಿಮಾತು ನಂಬದಿರಿ. ವಿದ್ಯಾರ್ಥಿಗಳು ಸ್ನೇಹಮಯ ವಾತಾವರಣದಲ್ಲಿ ಬೆಳೆಯುತ್ತಾರೆ.

ಪರಿಹಾರ : ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೀಲಿ ಬಣ್ಣ

ತುಲಾ

ಹಿಂದೊಂದು ದಿನ ಮಾಡಿದ್ದ ಸಹಾಯಕ್ಕೆ ಪ್ರತಿಯಾಗಿ ಆತ್ಮೀಯರ ಸಹಾಯ ದೊರೆಯುತ್ತದೆ. ಆತುರದ ಬುದ್ದಿ ಬಿಟ್ಟಲ್ಲಿ ಕುಟುಂಬದಲ್ಲಿ ನೆಮ್ಮದಿ ಉಳಿಯುತ್ತದೆ. ಉದ್ಯೋಗದಲ್ಲಿ ಎಲ್ಲರ ಸ್ನೇಹ ಪ್ರೀತಿ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಸ್ನೇಹಿತರ ಸಹಾಯ ದೊರೆಯಲಿದೆ. ವಿದ್ಯಾರ್ಥಿಗಳು ನೆಮ್ಮದಿಯಿಂದ ತಮ್ಮ ಗುರಿ ತಲುಪುತ್ತಾರೆ. ಮಕ್ಕಳಿಗೆ ಉದ್ಯೋಗ ದೊರೆವ ಸೂಚನೆಗಳಿವೆ. ಕೆಲಸ ಕಾರ್ಯದ ನಡುವೆ ವಿಶ್ರಾಂತಿ ತೆಗೆದುಕೊಳ್ಳಿ. ಸಾರ್ವಜನಿಕ ಕೆಲಸಗಳಲ್ಲಿ ಆಸಕ್ತಿ ಉಂಟಾಗಲಿದೆ. ಹಣದ ಕೊರತೆ ಇರುವುದಿಲ್ಲ. ಗುರು ಹಿರಿಯರನ್ನು ಗೌರವಿಸುವ ಅವಕಾಶ ದೊರೆಯುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಕಿರುಪ್ರವಾಸ ಕೈಗೊಳ್ಳುವಿರಿ. ಆರೋಗ್ಯದ ಬಗ್ಗೆ ಗಮನವಿರಲಿ.

ಪರಿಹಾರ : ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ವೃಶ್ಚಿಕ

ಗೆಲ್ಲುವ ಛಲ ಇರುತ್ತದೆ. ಬಿಡುವಿನ ವೇಳೆಯಲ್ಲಿಯೂ ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ಕುಟುಂಬದಲ್ಲಿ ನೆಮ್ಮದಿಯ ಕೊರತೆ ಇರಲಿದೆ. ಮಾನಸಿಕ ಶಕ್ತಿ ಹೊಸ ಆಸೆಗಳಿಗೆ ಕಾರಣವಾಗಲಿದೆ. ಉದ್ಯೋಗದಲ್ಲಿ ಹೊಸಬರಿಗೆ ತರಬೇತಿ ನೀಡುವ ಜವಾಬ್ದಾರಿ ದೊರೆಯುತ್ತದೆ. ದೊರೆಯುವ ಅವಕಾಶವನ್ನು ಬಳಸಿಕೊಂಡು ಹೊಸ ವ್ಯಾಪಾರೀ ಸಂಸ್ಥೆಯನ್ನು ಆರಂಭಿಸುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಆಶಾದಾಯಕ ವಿಚಾರ ಇರುತ್ತದೆ. ಕಲಿಕೆಯಲ್ಲಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ದಿನನಿತ್ಯದ ಆದಾಯವು ಹೆಚ್ಚುತ್ತದೆ. ಬೆನ್ನು ನೋವು ಬಹಳವಾಗಿ ಕಾಡಲಿದೆ. ಯೋಗಾಸನದಂತಹ ಅಭ್ಯಾಸಗಳನ್ನು ಬೆಳಗಿಸಿಕೊಳ್ಳುವಿರಿ. ವಾಸಸ್ಥಳ ಬದಲಾವಣೆಯ ಸೂಚನೆ ಇದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

---------------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.