ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Venus Transit: ಮಿಥುನ ರಾಶಿಯಲ್ಲಿ ಶುಕ್ರ ಸಂಕ್ರಮಣ; ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

Venus Transit: ಮಿಥುನ ರಾಶಿಯಲ್ಲಿ ಶುಕ್ರ ಸಂಕ್ರಮಣ; ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

Venus Transit: ಜೂನ್ ತಿಂಗಳಲ್ಲಿ ಶುಕ್ರ ಸಂಕ್ರಮಣ ನಡೆಯಲಿದೆ. ಮಿಥುನ ರಾಶಿಯಲ್ಲಿ ಶುಕ್ರನ ಸಂಚಾರದಿಂದ ಕೆಲವು ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಪ್ರಮುಖವಾಗಿ 3 ರಾಶಿಯವರಿಗೆ ಭಾರಿ ಲಾಭಗಳಿವೆ. ಆ ರಾಶಿಗಳು ಯಾವುವು ಅನ್ನೋದನ್ನ ತಿಳಿಯೋಣ.

ಮಿಥುನ ರಾಶಿಯಲ್ಲಿ ಶುಕ್ರ ಸಂಕ್ರಮಣ; ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ
ಮಿಥುನ ರಾಶಿಯಲ್ಲಿ ಶುಕ್ರ ಸಂಕ್ರಮಣ; ಈ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

Venus Transit in Gemini: ಶುಕ್ರನನ್ನು ಪ್ರೀತಿ, ಸಂಪತ್ತು, ಸಂತೋಷ ಹಾಗೂ ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶುಕ್ರ ಕಾಲಕಾಲಕ್ಕೆ ತನ್ನ ಸ್ಥಾನವನ್ನು ಬದಲಾಯಿಸುತ್ತಲೇ ಇರುತ್ತದೆ. ಜೂನ್ ತಿಂಗಳಲ್ಲಿ ಶುಕ್ರ ಸಂಕ್ರಮಣ ನಡೆಯಲಿದೆ. ಪ್ರಸ್ತುತ ಶುಕ್ರನು ವೃಷಭ ರಾಶಿಯಲ್ಲಿದ್ದು, ಜೂನ್ 12 ರಂದು ಬುಧ ರಾಶಿಗೆ ಪ್ರವೇಶಿಸುತ್ತಾನೆ. ವೃಷಭ ರಾಶಿಯಿಂದ ಮಿಥುನ ರಾಶಿಗೆ ಶುಕ್ರನ ಸಂಚಾರವು ಕೆಲವು ರಾಶಿಯವರಿಗೆ ಲಾಭಗಳನ್ನು ತರುತ್ತದೆ. ಪ್ರಮುಖವಾಗಿ 3 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವೇ ಎನ್ನುವಷ್ಟು ಲಾಭಗಳಿವೆ. ಆ ಮೂರು ರಾಶಿಗಳಿಗೆ ಇರುವ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ.

ಮಿಥುನ ರಾಶಿ

ಶುಕ್ರ ಸಂಕ್ರಮಣದಿಂದ ಮಿಥುನ ರಾಶಿಯವರಿಗೆ ಹಲವಾರು ಪ್ರಯೋಜನಗಳಿವೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಹೂಡಿಕೆ ಮಾಡಿ ಲಾಭ ಪಡೆಯುವ ಸಾಧ್ಯತೆ ಇದೆ. ಪ್ರವಾಸವನ್ನು ಕೈಗೊಳ್ಳುತ್ತೀರಿ. ಆರ್ಥಿಕವಾಗಿ ಬಲಗೊಳ್ಳುತ್ತೀರಿ. ಸಂಗಾತಿಯೊಂದಿಗೆ ಸುಮಧರವಾದ ಕ್ಷಣಗಳನ್ನು ಕಳೆಯುತ್ತೀರಿ. ದೇವರ ಆರಾಧನೆಯಲ್ಲಿ ಬಹಳ ಆಸಕ್ತಿ ಹೊಂದಿರುತ್ತೀರಿ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಶುಕ್ರ ಸಂಕ್ರಮಣವು ಹಲವು ಪ್ರಯೋಜನಗಳನ್ನು ನೀಡುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತೀರಿ. ಸಂತೋಷ ಮತ್ತು ಶಾಂತಿಯಿಂದಾಗಿ ಮನೆಯಲ್ಲಿ ವಾತಾವರಣ ತುಂಬಾ ಆಹ್ಲಾದಕರವಾಗಿರುತ್ತದೆ. ಪ್ರಿಯತಮೆಯೊಂದಿಗೆ ಡೇಟಿಂಗ್‌ಗೆಗೆ ಹೋಗುತ್ತೀರಿ. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಹೊಸ ಮೂಲಗಳನ್ನು ಕಂಡುಕೊಳ್ಳುವ ಪ್ರಯತ್ನಗಳನ್ನು ಮಾಡುತ್ತೀರಿ. ಹೊಸ ಉದ್ಯೋಗ ಸಿಗುವ ಸಾಧ್ಯತೆಯೂ ಇದೆ.

ಕನ್ಯಾ ರಾಶಿ

ಶುಕ್ರನು ತನ್ನ ರಾಶಿಯ ಸ್ಥಳ ಬದಲಾವಣೆ ಮಾಡುವುದರಿಂದ ಕನ್ಯಾ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಸಣ್ಣ ಪ್ರವಾಸಗಳಿಗೂ ಹೋಗುವ ಸಾಧ್ಯತೆ ಇದೆ. ನಿಮ್ಮ ವೃತ್ತಿಜೀವನದಲ್ಲಿ ಹೊಸ ಕಾರ್ಯಗಳನ್ನು ಪಡೆಯಬಹುದು. ವೃತ್ತಿಪರವಾಗಿ ಮತ್ತು ಆರ್ಥಿಕವಾಗಿ ಸ್ಥಿರಗೊಳ್ಳುತ್ತೀರಿ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)