ಮಹಾಭಾರತ ಕಥೆಗಳು: ಪುರುಷ ಸಂಪರ್ಕವಿಲ್ಲದೆ ಸತ್ಯವತಿ ಗರ್ಭದಲ್ಲಿ ಜನ್ಮತಳೆದ ಮಗು ವೇದವ್ಯಾಸ, ಇವರ ಜನ್ಮದ ಕಥೆಯೇ ಸ್ವಾರಸ್ಯಕರ-indian mythology birth story of veda vyasa son of satyavati and parashara maharshi mabharata stories in kannada sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತ ಕಥೆಗಳು: ಪುರುಷ ಸಂಪರ್ಕವಿಲ್ಲದೆ ಸತ್ಯವತಿ ಗರ್ಭದಲ್ಲಿ ಜನ್ಮತಳೆದ ಮಗು ವೇದವ್ಯಾಸ, ಇವರ ಜನ್ಮದ ಕಥೆಯೇ ಸ್ವಾರಸ್ಯಕರ

ಮಹಾಭಾರತ ಕಥೆಗಳು: ಪುರುಷ ಸಂಪರ್ಕವಿಲ್ಲದೆ ಸತ್ಯವತಿ ಗರ್ಭದಲ್ಲಿ ಜನ್ಮತಳೆದ ಮಗು ವೇದವ್ಯಾಸ, ಇವರ ಜನ್ಮದ ಕಥೆಯೇ ಸ್ವಾರಸ್ಯಕರ

ಮಹಾಭಾರತ ರಚಿಸಿದ ವೇದವ್ಯಾಸರ ಜನ್ಮಕಥೆ ಬಹಳ ಸ್ವಾರಸ್ಯಕರವಾಗಿದೆ. ಇವರು ಜನಿಸಿದ ಕೂಡಲೇ ದೊಡ್ಡವರಾಗಿ ಬೆಳೆದರು. ಸತ್ಯವತಿ ಹಾಗೂ ಪರಾಶರ ಮುನಿಯ ಪುತ್ರರು. ಸತ್ಯವತಿಯು ಪುರುಷನ ಸಂಪರ್ಕ ಇಲ್ಲದೆ ತಾಯಿಯಾಗಿ ವೇದವ್ಯಾಸರಿಗೆ ಜನ್ಮ ನೀಡುತ್ತಾರೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಮಹಾಭಾರತ ಕಥೆಗಳು: ಪುರುಷ ಸಂಪರ್ಕವಿಲ್ಲದೆ ಸತ್ಯವತಿ ಗರ್ಭದಲ್ಲಿ ಜನ್ಮತಳೆದ ಮಗು ವೇದವ್ಯಾಸ, ಇವರ ಜನ್ಮದ ಕಥೆಯೇ ಸ್ವಾರಸ್ಯಕರ
ಮಹಾಭಾರತ ಕಥೆಗಳು: ಪುರುಷ ಸಂಪರ್ಕವಿಲ್ಲದೆ ಸತ್ಯವತಿ ಗರ್ಭದಲ್ಲಿ ಜನ್ಮತಳೆದ ಮಗು ವೇದವ್ಯಾಸ, ಇವರ ಜನ್ಮದ ಕಥೆಯೇ ಸ್ವಾರಸ್ಯಕರ

ರಾಮಾಯಣ, ಮಹಾಭಾರತ ಹಿಂದೂಗಳ ಪವಿತ್ರ ಗ್ರಂಥಗಳು. ವಾಲ್ಮೀಕಿ ಮಹರ್ಷಿ ರಾಮಾಯಣವನ್ನು ಬರೆದರೆ, ವೇದವ್ಯಾಸರು ಗಣಪತಿ ಕೈಯಿಂದ ಮಹಭಾರತವನ್ನು ರಚಿಸುತ್ತಾರೆ. ವ್ಯಾಸ ಮಹರ್ಷಿಗಳ ಜನನದ ಕಥೆ ಬಹಳ ಸ್ವಾರಸ್ಯಕರವಾಗಿದೆ. ಈಕೆಯ ತಾಯಿ ಸತ್ಯವತಿ, ಮದುವೆ ಆಗದೆ ಪುರುಷನ ಸಂಪರ್ಕವಿಲ್ಲದೆ ವ್ಯಾಸರಿಗೆ ಜನ್ಮ ನೀಡುತ್ತಾರೆ.

ಸತ್ಯವತಿಯ ಅಂದಕ್ಕೆ ಮಾರು ಹೋದ ಪರಾಶರ ಮುನಿ

ಉಪಚರ - ಆದ್ರಿಕೆಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿನ ಜನಿಸುತ್ತಾರೆ. ರಾಜನು ಗಂಡು ಮಗುವನ್ನು ತನ್ನ ಬಳಿ ಇರಿಸಿಕೊಂಡು ಹೆಣ್ಣು ಮಗುವನ್ನು ಮೀನುಗಾರರಿಗೆ ನೀಡುತ್ತಾನೆ. ಗಂಡು ಮಗುವಿಗೆ ಮತ್ಸ್ಯರಾಜ ಮತ್ತು ಹೆಣ್ಣು ಮಗುವಿಗೆ ಮತ್ಸ್ಯ ಗಂಧಿನೀ ಎಂಬ ಹೆಸರನ್ನು ಇಡುತ್ತಾರೆ. ಈಕೆಗೆ ಸತ್ಯವತಿ ಎಂಬ ಹೆಸರೂ ಇರುತ್ತದೆ. ಬೆಳೆದು ದೊಡ್ಡವಳಾದ ನಂತರ ಸತ್ಯವತಿ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಜನರನ್ನು ಸಾಗಿಸುವ ಕೆಲಸ ಮಾಡುತ್ತಾಳೆ. ಒಮ್ಮೆ ಮುನಿಗಳಾದ ಪರಾಶರರು ಆಕೆಯನ್ನು ನೋಡಿ ಸೌಂದರ್ಯಕ್ಕೆ ಮಾರು ಹೋಗುತ್ತಾರೆ. ಮನಸ್ಸು ತಡೆಯಲಾಗದೆ ಆಕೆಯೊಂದಿಗೆ ಮೃದುವಾಗಿ ಮಾತನಾಡಿ ತನ್ನ ಮನದ ಆಸೆಯನ್ನು ತಿಳಿಸುತ್ತಾರೆ. 

ಬಾಹ್ಯ ಸೌಂದರ್ಯಕ್ಕಿಂತ ನಿಮ್ಮ ಮುಂದಿನ ಭವಿಷ್ಯ ನನಗೆ ಅತಿಮುಖ್ಯ ತಿಳಿಸುತ್ತಾರೆ. ನಿನ್ನ ಸಂಪರ್ಕವೇ ಇಲ್ಲದಂತೆ ನಾನು ಮಗುವನ್ನು ಸೃಷ್ಟಿಸಬಲ್ಲೆ. ಆದ್ದರಿಂದ ನಿನಗೆ ಮಹಾಮುನಿಯ ತಾಯಿಯಾಗುವ ಅದೃಷ್ಟ ದೊರೆಯುತ್ತದೆ. ವಿಶೇಷವಾದ ತೇಜಸ್ಸಿರುವ ಮಗುವಿನ ತಾಯಿಯಾಗುವ ಅದೃಷ್ಟ ನಿನಗೆ ದೊರೆಯುತ್ತದೆ ಎನ್ನುತ್ತಾರೆ. ನಂತರ ಮಹರ್ಷಿ ಪರಾಶರದಿಂದ ಸತ್ಯವತಿ ಗಂಡು ಸಂತಾನವನ್ನು ಪಡೆಯುತ್ತಾಳೆ. ಮಗು ಜನಿಸಿದ ನಂತರ ಅವಳ ದೇಹದಿಂದ ಮೀನಿನ ವಾಸನೆ ಕಳೆದು ಉತ್ತಮ ಪರಿಮಳ ಬೀರುತ್ತದೆ. ಅಂದಿನಿಂದ ಅವಳಿಗೆ ಯೋಜನ ಗಂಧಿನಿ ಎಂಬ ಹೆಸರು ದೊರೆಯುತ್ತದೆ.

ಹುಟ್ಟಿದ ಕೂಡಲೇ ಬೆಳೆದು ದೊಡ್ಡವರಾದ ವೇದವ್ಯಾಸರು

ಇವರಿಗೆ ಜನಿಸಿದರು ಮಗುವು ವಿಶೇಷವಾಗಿರುತ್ತದೆ. ಸೂರ್ಯನಂತೆ ತೇಜಸ್ಸು ತುಂಬಿದ ಚಂದಿರನಂತ ಮುಖ ಭಾವವಿರುತ್ತದೆ. ಆದರೆ ಜನಿಸಿದ ತಕ್ಷಣ ಎಲ್ಲಾ ಮಕ್ಕಳಂತೆ ಈ ಮಗು ಅಳುವುದಿಲ್ಲ. ಹುಟ್ಟಿದ ಕೂಡಲೇ ದೊಡ್ಡವರಾಗಿ ಬೆಳೆದು ತಾಯಿಯ ಮುಂದೆ ಅವಳ ಪಾದ ಕಮಲಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. ಪ್ರಪಂಚದಲ್ಲಿ ದೊಡ್ಡ ದೇವರಂದರೆ ಜನ್ಮ ನೀಡಿದ ತಾಯಿ ಮಾತ್ರ. ಆದ್ದರಿಂದ ಈ ಪ್ರಪಂಚದ ದರ್ಶನ ಮಾಡಿ ನನ್ನ ಜನ್ಮವನ್ನು ಪಾವನ ಮಾಡಿರುವೆ. ನನ್ನನ್ನು ಆಶೀರ್ವದಿಸು ಎಂದು ತಾಯಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾರೆ. ಈ ಮಗುವೇ ಮಹರ್ಷಿ ವೇದವ್ಯಾಸರು.

ವ್ಯಾಸರು ಗಣಪತಿಗೆ ಮಹಾಭಾರತವನ್ನು ವಿವರಿಸಿದರು. ಮಹಾಭಾರತದಲ್ಲಿ ಇವರದ್ದೂ ಒಂದು ಪಾತ್ರವಿದೆ. ಸತ್ಯವತಿಯು ಕ್ರಮೇಣ ಹಸ್ತಿನಾಪುರದ ರಾಜ ಶಂತನುವನ್ನು ಮದುವೆಯಾಗಿ ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡುತ್ತಾಳೆ. ಈ ಇಬ್ಬರೂ ಸಂತಾನವಿಲ್ಲದೇ ನಿಧನರಾಗುತ್ತಾರೆ. ಆದರೆ ಸತ್ಯವತಿಯು ವ್ಯಾಸರ ಬಳಿ ಬಂದು, ತನ್ನ ಸತ್ತ ಮಗನಾದ ವಿಚಿತ್ರ ವೀರ್ಯನ ಪರವಾಗಿ ಗಂಡು ಮಕ್ಕಳನ್ನು ನೀಡುವಂತೆ ಕೋರುತ್ತಾಳೆ. ಈ ಪ್ರಕಾರ ವ್ಯಾಸರು ತೀರಿಕೊಂಡ ರಾಜನ ಪತ್ನಿಯರಾದ ಅಂಬಿಕೆ ಮತ್ತು ಅಂಬಾಲಿಕೆಯಿಂದ ಧೃತರಾಷ್ಟ್ರ ಮತ್ತು ಪಾಂಡುವಿನ ತಂದೆಯಾಗುತ್ತಾರೆ. ಇದೇ ರೀತಿ ರಾಣಿಯರ ಸೇವಕಿಯಿಂದ ವಿದುರನ ಜನ್ಮವಾಗುತ್ತದೆ.

ಗಣೇಶನ ಮೂಲಕ ಮಹಾಭಾರತ ರಚಿಸಿದ ವ್ಯಾಸರು

ಆದರೆ ಈ ಮೂವರನ್ನೂ ವ್ಯಾಸರ ಪುತ್ರರೆಂದು ಪರಿಗಣಿಸುವುದಿಲ್ಲ. ವ್ಯಾಸರ ಮತ್ತೊಬ್ಬ ಪುತ್ರನಾದ ಶುಕನು ಇವರ ನಿಜವಾದ ಆಧ್ಯಾತ್ಮಿಕ ಪುತ್ರನೆಂದು ಕರೆಸಿಕೊಳ್ಳುತ್ತಾನೆ. ಇದರ ಪ್ರಕಾರ ವ್ಯಾಸರು ಕೌರವರು ಮತ್ತು ಪಾಂಡವರ ತಾತರಾಗುತ್ತಾರೆ. ತದ ನಂತರ ಮಹಾಭಾರತದಲ್ಲಿ ಆಧ್ಯಾತ್ಮಿಕ ಗುರುವಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ. ಮಹಾಭಾರತದ ಮೊದಲ ಗ್ರಂಥದಲ್ಲಿ ಇವರು ಈ ಮಹಾ ಕಾವ್ಯವನ್ನು ರಚಿಸಲು ಗಣೇಶನನ್ನು ಕೇಳಿಕೊಳ್ಳುತ್ತಾರೆ. ಗಣೇಶನು ವ್ಯಾಸರಿಗೆ ಮಹಾಕಾವ್ಯವನ್ನು ಒಂದು ಕ್ಷಣವನ್ನೂ ನಿಲ್ಲಿಸಿದೇ ಹೇಳಲು ಷರತ್ತು ವಿಧಿಸುತ್ತಾನೆ. ಇದರಂತೆ ಮಹಾಭಾರತ ಕಾವ್ಯ ರಚಿತವಾಗುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.