ನೈಸರ್ಗಿಕ ವಿಪತ್ತು, ಭೂಮಿಗೆ ಅಪ್ಪಳಿಸಲಿರುವ ಕ್ಷುದ್ರಗ್ರಹ: ಫ್ರೆಂಚ್ ಜ್ಯೋತಿಷಿ ನಾಸ್ಟ್ರಾಡಾಮಸ್ ಭವಿಷ್ಯ ವಾಣಿ 2025
Nostradamus 2025 Prediction: ಬಾಬಾ ವಂಗಾ ಭವಿಷ್ಯವಾಣಿಯಂತೆ ಫ್ರೆಂಚ್ ಜ್ಯೋತಿಷಿ, ವೈದ್ಯ ನಾಸ್ಟ್ರಾಡಾಮಸ್ ಭವಿಷ್ಯ ಕೂಡಾ ಬಹಳ ಚರ್ಚೆಯಾಗುತ್ತಿದೆ. ಈತ ಅಡಾಲ್ಫ್ ಹಿಟ್ಲರ್, ಕೋವಿಡ್ 18 ಸೇರಿದಂತೆ ಅನೇಕ ಭವಿಷ್ಯ ನಿಜವಾಗಿದೆ. 2025ರಲ್ಲಿ ಈತ ಹೇಳಿರುವ ಭವಿಷ್ಯವಾಣಿ ಈ ರೀತಿ ಇದೆ.
ನಾಸ್ಟ್ರಾಡಾಮಸ್ ಭವಿಷ್ಯ ವಾಣಿ 2025: ಹೊಸ ವರ್ಷ ಆಗಮಿಸುತ್ತಿದೆ. ಈ ಸಮಯದಲ್ಲಿ 2025ರ ಭವಿಷ್ಯದ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. 2025 ರಲ್ಲಿ ಮನುಷ್ಯ ಏಲಿಯನ್‌ಗಳ ಜೊತೆ ಸಂಪರ್ಕ ಸಾಧಿಸುತ್ತಾನೆ, ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ, 3ನೇ ಮಹಾಯುದ್ಧದ ಮುನ್ಸೂಚನೆ, ಟೆಲಿಪತಿ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಇವರ ಭವಿಷ್ಯದ ಜೊತೆ ನಾಸ್ಟ್ರಾಡಾಮಸ್ ಹೇಳಿರುವ ಭವಿಷ್ಯ ಕೂಡಾ ವೈರಲ್ ಆಗುತ್ತಿದೆ.
ನಾಸ್ಟ್ರಾಡಾಮಸ್, ಫ್ರೆಂಚ್ ಜ್ಯೋತಿಷಿ ಹಾಗೂ ವೈದ್ಯ. ಈತನ ಪೂರ್ತಿ ಹೆಸರು ಮೈಕೆಲ್ ನಾಸ್ಟ್ರಾಡಾಮ್, 1500 ರ ದಶಕಕ್ಕೆ ಸೇರಿದ ಈತ ಅಡಾಲ್ಫ್ ಹಿಟ್ಲರ್, ಯುದ್ಧ, ಯುಕೆಯಲ್ಲಿ ಪ್ಲೇಗ್, ಕ್ಷಾಮ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. 1555 ರಲ್ಲಿ ಈತ ಬರೆದ ಲೆಸ್ ಪ್ರೊಫೆಟಿಸ್ (ದಿ ಪ್ರೊಫೆಸೀಸ್) ಪುಸ್ತಕದಲ್ಲಿ ಜಗತ್ತಿನ ಪ್ರಮುಖ ವಿದ್ಯಮಾನಗಳ ಬಗ್ಗೆ ಉಲ್ಲೇಖಿಸಿದ್ದಾರೆ.
2025 ಕುರಿತಂತೆ ನಾಸ್ಟ್ರಾಡಾಮಸ್ ಹೇಳಿರುವ ಭವಿಷ್ಯವೇನು?
ರಷ್ಯಾ-ಉಕ್ರೇನ್ ಯುದ್ಧದ ಅಂತ್ಯ
2022 ರಲ್ಲಿ ಪ್ರಾರಂಭವಾದ ರಷ್ಯಾ-ಉಕ್ರೇನ್ ಯುದ್ಧವನ್ನು ಉಲ್ಲೇಖಿಸಿರುವ ನಾಸ್ಟ್ರಾಡಾಮಸ್ 2025ರಲ್ಲಿ ರಷ್ಯಾ, ಉಕ್ರೇನ್ ದೀರ್ಘಾವಧಿಯ ಸಂಘರ್ಷಗಳ ಅಂತ್ಯವನ್ನು ಸೂಚಿಸಬಹುದು ಎಂದು ಸೂಚಿಸುತ್ತವೆ. ದೀರ್ಘ ಯುದ್ಧದಿಂದಾಗಿ ಎರಡೂ ಕಡೆಯವರು ಶಾಂತಿಯನ್ನು ಬಯಸಿ ಯುದ್ಧವನ್ನು ಅಂತ್ಯಗೊಳಿಸುತ್ತಾರೆ ಎಂದು ನಾಸ್ಟ್ರಾಡಾಮಸ್ ಹೇಳಿದ್ದಾರೆ.
ಪ್ಲೇಗ್, ಇಂಗ್ಲೆಂಡ್‌ನ ಯುದ್ಧ
2025 ರಲ್ಲಿ ಇಂಗ್ಲೆಂಡ್‌ನಲ್ಲಿ ತೊಂದರೆ ಉಂಟಾಗುತ್ತದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. ಯುದ್ಧಗಳು ಹಾಗೂ ಕೆಲವೆಡೆ ಮಾರಣಾಂತಿಕ ಪ್ಲೇಗ್ ರೋಗಗಳು ಹರಡಬಹುದು ಎಂದು ಕೂಡಾ ಹೇಳಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಬಗ್ಗೆ ಅವರ ಹಿಂದಿನ ಭವಿಷ್ಯವಾಣಿಗಳನ್ನು ಗಮನಿಸಿದರೆ, ಈ ಭವಿಷ್ಯವಾಣಿಯು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ಭೂಮಿಗೆ ಅಪ್ಪಳಿಸುತ್ತಿರುವ ಕ್ಷುದ್ರಗ್ರಹ
ಒಂದು ಬೃಹತ್ ಕ್ಷುದ್ರಗ್ರಹವು 2025 ರಲ್ಲಿ ಭೂಮಿಗೆ ಅಪ್ಪಳಿಸುತ್ತದೆ ಅಥವಾ ಅಪಾಯಕಾರಿಯಾಗಿ ಹತ್ತಿರ ಬರುತ್ತದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. ನಾಸ್ಟ್ರಾಡಾಮಸ್‌ನ ಭವಿಷ್ಯ ಮಾನವೀಯತೆಯ ಮೇಲೆ ಸಂಭಾವ್ಯ ದುರಂತದ ಪರಿಣಾಮವನ್ನು ಸೂಚಿಸುತ್ತವೆಯಾದರೂ ಪ್ರತಿ ವರ್ಷ ಅನೇಕ ಕ್ಷುದ್ರಗ್ರಹಗಳು ಭೂಮಿಯನ್ನು ಹಾದುಹೋಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಬ್ರೆಜಿಲ್‌ನಲ್ಲಿ ನೈಸರ್ಗಿಕ ವಿಪತ್ತು
ನಾಸ್ಟ್ರಾಡಾಮಸ್‌ನ ಬರಹದ ಪ್ರಕಾರ 2025ರಲ್ಲಿ ಗಾರ್ಡನ್ ಆಫ್ ದಿ ವರ್ಲ್ಡ್ ಎಂದು ಕರೆಯಲ್ಪಡುವ ಬ್ರೆಜಿಲ್‌ನಲ್ಲಿ ನೈಸರ್ಗಿಕ ವಿಕೋಪಗಳು ಸಂಭವಿಸುತ್ತವೆ, ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಬಾಬಾ ವಂಗಾ ಹಾಗೂ ನಾಸ್ಟ್ರಾಡಮಸ್ ನುಡಿದಿರುವ ಭವಿಷ್ಯವಾಣಿ ಆತಂಕ ಸೃಷ್ಟಿಸಿರುವುದಂತೂ ನಿಜ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.