Vastu Tips: ವಿದ್ಯೆ, ಸಂಪತ್ತು, ವ್ಯಾಪಾರ ವೃದ್ಧಿಗೆ ವಾಸ್ತು ಪ್ರಕಾರ ಮನೆ ಯಾವ ದಿಕ್ಕಿನಲ್ಲಿದ್ದರೆ ಉತ್ತಮ; ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ವಿದ್ಯೆ, ಸಂಪತ್ತು, ವ್ಯಾಪಾರ ವೃದ್ಧಿಗೆ ವಾಸ್ತು ಪ್ರಕಾರ ಮನೆ ಯಾವ ದಿಕ್ಕಿನಲ್ಲಿದ್ದರೆ ಉತ್ತಮ; ಮಾಹಿತಿ

Vastu Tips: ವಿದ್ಯೆ, ಸಂಪತ್ತು, ವ್ಯಾಪಾರ ವೃದ್ಧಿಗೆ ವಾಸ್ತು ಪ್ರಕಾರ ಮನೆ ಯಾವ ದಿಕ್ಕಿನಲ್ಲಿದ್ದರೆ ಉತ್ತಮ; ಮಾಹಿತಿ

ʼವಾಸ್ತುಶಾಸ್ತ್ರವು ಸ್ವಂತ ಮನೆಗಿಂತ ಹೆಚ್ಚಾಗಿ ಅಪಾರ್ಟ್‌ಮೆಂಟ್‌ನಂತಹ ವಸತಿ ಸಂಕೀರ್ಣದಲ್ಲಿ ವಾಸಿಸುವವರಿಗೆ ಕೆಲವು ನಿರ್ದೇಶನಗಳನ್ನು ಸೂಚಿಸಿದೆ. ರಾಜ್ಯಾಧಿಕಾರ, ಹಣ ಮತ್ತು ಆನಂದವನ್ನು ಬಯಸುವವರಿಗೆ ಉತ್ತರ ಮುಖವು ಒಳ್ಳೆಯದು ಎಂದು ವಾಸ್ತುಶಾಸ್ತ್ರ ಹೇಳುತ್ತದೆʼ ಎನ್ನುತ್ತಾರೆ ಪಂಚಾಂಗಕರ್ತ ಚಿಲಕಮರ್ತಿ ಪ್ರಭಾಕರ ಶರ್ಮಾ

ವಾಸ್ತು ಪ್ರಕಾರ ಮನೆ ಯಾವ ದಿಕ್ಕಿನಲ್ಲಿದ್ದರೆ ಉತ್ತಮ
ವಾಸ್ತು ಪ್ರಕಾರ ಮನೆ ಯಾವ ದಿಕ್ಕಿನಲ್ಲಿದ್ದರೆ ಉತ್ತಮ

ವಾಸ್ತುಶಾಸ್ತ್ರದ ಪ್ರಕಾರ, ನಿಮ್ಮ ನಕ್ಷತ್ರ ಹಾಗೂ ರಾಶಿಗೆ ಅನುಗುಣವಾಗಿ ನಿಮಗೆ ಯಾವ ದಿಕ್ಕಿನ ಮನೆ ಹೊಂದುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಆದರೆ ನಿಮ್ಮ ರಾಶಿ, ನಕ್ಷತ್ರಗಳ ಬಗ್ಗೆ ಸ್ಪಷ್ಟವಾಗಿ ತಿಳಿದಿರಬೇಕು. ಅದರ ಆಧಾರದ ಮೇಲೆ ಉತ್ತರ ಮುಖ, ಪೂರ್ವ ಮುಖ, ದಕ್ಷಿಣ ಮುಖ, ಪಶ್ಚಿಮ ಮುಖ, ಆಗ್ನೇಯ ಮುಖ, ಈಶಾನ್ಯ ಎಂಬುದನ್ನು ತಿಳಿಸಲಾಗುತ್ತದೆ. ಅವುಗಳ ಪ್ರಕಾರ ನಿಮ್ಮ ರಾಶಿ, ನಕ್ಷತ್ರಕ್ಕೆ ಹೊಂದುವ ದಿಕ್ಕಿನ ಮನೆಯಲ್ಲಿ ಇರುವುದು ಉತ್ತಮ ಎನ್ನುತ್ತಾರೆ ಖ್ಯಾತ ಅಧ್ಯಾತ್ಮಿಕ ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಶರ್ಮಾ.

ವಾಸ್ತುಶಾಸ್ತ್ರವು ನಿಮ್ಮ ಸ್ವಂತ ಮನೆಗಿಂತ ಹೆಚ್ಚಾಗಿ ಅಪಾರ್ಟ್‌ಮೆಂಟ್‌ನಂತಹ ವಸತಿ ಸಂಕೀರ್ಣದಲ್ಲಿ ವಾಸಿಸುವವರಿಗೆ ಕೆಲವು ನಿರ್ದೇಶನಗಳನ್ನು ಸೂಚಿಸಿದೆ. ರಾಜ್ಯಾಧಿಕಾರ, ಹಣ ಮತ್ತು ಆನಂದವನ್ನು ಬಯಸುವವರಿಗೆ ಉತ್ತರ ಮುಖವು ಒಳ್ಳೆಯದು ಎನ್ನುತ್ತದೆ ವಾಸ್ತುಶಾಸ್ತ್ರ.

ಸಂಪತ್ತು, ವಿದ್ಯೆ, ಜ್ಞಾನ ಇತ್ಯಾದಿಗಳನ್ನು ಬಯಸುವವರಿಗೆ ಪೂರ್ವ ಮುಖವು ಉತ್ತಮವಾಗಿದೆ. ವ್ಯಾಪಾರದಂತಹ ಅಭಿವೃದ್ಧಿಯನ್ನು ಬಯಸುವವರಿಗೆ ಪಶ್ಚಿಮ ಮುಖವು ಒಳ್ಳೆಯದು.

ಯಾವುದೇ ರಾಶಿ ಅಥವಾ ನಕ್ಷತ್ರವನ್ನು ಪರಿಗಣಿಸದೇ ಇರುವವರು ಪೂರ್ವ ಮತ್ತು ಉತ್ತರಕ್ಕೆ ಎದುರಾಗಿರುವ ಮನೆಯನ್ನು ತೆಗೆದುಕೊಳ್ಳುವುದು ಉತ್ತಮ ಎನ್ನುತ್ತಾರೆ ಚಿಲಕಮರ್ತಿ ಶರ್ಮಾ ಅವರು.

ಮನೆಯಲ್ಲಿರುವ ಕುಟುಂಬ ಸದಸ್ಯರು ವಿವಿಧ ರಾಶಿಚಕ್ರ ಚಿಹ್ನೆಗಳ ಸಂಕೇತವಾಗಿದ್ದಾರೆ. ಉತ್ತರ ಅಥವಾ ಪೂರ್ವಕ್ಕೆ ಎದುರಾಗಿರುವ ಮನೆಗಳಲ್ಲಿ ಎಲ್ಲರೂ ಒಟ್ಟಾಗಿ ವಾಸಿಸಬಹುದು ಎನ್ನುತ್ತಾರೆ ವಾಸ್ತುಶಾಸ್ತ್ರ.

ಇದಲ್ಲದೆ, ಆಗ್ನೇಯ, ಈಶಾನ್ಯ ದಿಕ್ಕಿನಲ್ಲಿ ಮನೆ ಬಾಗಿಲು ಇದ್ದರೆ, ವಿಶೇಷವಾಗಿ ಆ ಮನೆಯಲ್ಲಿ ನೆರೆಹೊರೆಯನ್ನು ಪರೀಕ್ಷಿಸಬೇಕು. ಸಂಪೂರ್ಣ ಮನೆ ವಾಸ್ತು ಸರಿಯಾಗಿದ್ದರೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿರುವ ಮನೆ ಖರೀದಿ, ವಾಸ ಅಥವಾ ಬಾಡಿಗೆಗೆ ಯಾವುದೇ ತೊಂದರೆ ಇಲ್ಲ ಎಂದು ಚಿಲಕಮರ್ತಿ ಪ್ರಭಾಕರ ಶರ್ಮಾ.

ಈ ವಾಸ್ತುವನ್ನು ನೋಡುವಾಗ, ವ್ಯಕ್ತಿಯು ದಿಕ್ಸೂಚಿಯಿಂದ ನೋಡಬೇಕು. ಮನೆಯ ಹೊರಗಿನಿಂದ ನೋಡುವುದಲ್ಲ. ಮನೆಯ ಮಧ್ಯ ಭಾಗದಿಂದ ಉತ್ತರ ಮತ್ತು ಪೂರ್ವ ಸರಿಯಾದ ದಿಕ್ಕುಗಳು. ಅವನ್ನು ಪರೀಕ್ಷಿಸಿಬೇಕು.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.