Vastu Tips: ಮೀನಿನ ಅಕ್ವೇರಿಯಂನಿಂದ ಮನೆಗೆ ಶೋಭೆ, ಫಿಶ್‌ ಅಕ್ವೇರಿಯಂ ಎಲ್ಲಿಡಬೇಕು, ಪ್ರಯೋಜನಗಳೇನು, ವಾಸ್ತು ಪ್ರಕಾರ ಈ ಅಂಶಗಳನ್ನು ಗಮನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  Vastu Tips: ಮೀನಿನ ಅಕ್ವೇರಿಯಂನಿಂದ ಮನೆಗೆ ಶೋಭೆ, ಫಿಶ್‌ ಅಕ್ವೇರಿಯಂ ಎಲ್ಲಿಡಬೇಕು, ಪ್ರಯೋಜನಗಳೇನು, ವಾಸ್ತು ಪ್ರಕಾರ ಈ ಅಂಶಗಳನ್ನು ಗಮನಿಸಿ

Vastu Tips: ಮೀನಿನ ಅಕ್ವೇರಿಯಂನಿಂದ ಮನೆಗೆ ಶೋಭೆ, ಫಿಶ್‌ ಅಕ್ವೇರಿಯಂ ಎಲ್ಲಿಡಬೇಕು, ಪ್ರಯೋಜನಗಳೇನು, ವಾಸ್ತು ಪ್ರಕಾರ ಈ ಅಂಶಗಳನ್ನು ಗಮನಿಸಿ

Fish aquarium: ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿಡುವ ಮೀನಿನ ಅಕ್ವೇರಿಯಂನಲ್ಲಿ ಸರಿಯಾದ ಬಣ್ಣದ ಮೀನುಗಳಿರಬೇಕು, ಜತೆಗೆ ಅಕ್ವೇರಿಯಂ ಅನ್ನು ಸರಿಯಾದ ಸ್ಥಳದಲ್ಲಿಡುವುದು ಮುಖ್ಯ. ಮನೆಯಲ್ಲಿ ಅಕ್ವೇರಿಯಂ ಇಡಲು ವಾಸ್ತು ಸಲಹೆಗಳು ಇಲ್ಲಿವೆ.

ಮೀನಿನ ಅಕ್ವೇರಿಯಂನಿಂದ ಮನೆಗೆ ಶೋಭೆ, ಫಿಶ್‌ ಅಕ್ವೇರಿಯಂ ಎಲ್ಲಿಡಬೇಕು, ಪ್ರಯೋಜನಗಳೇನು,  ವಾಸ್ತು ಪ್ರಕಾರ ಈ ಅಂಶಗಳನ್ನು ಗಮನಿಸಿ
ಮೀನಿನ ಅಕ್ವೇರಿಯಂನಿಂದ ಮನೆಗೆ ಶೋಭೆ, ಫಿಶ್‌ ಅಕ್ವೇರಿಯಂ ಎಲ್ಲಿಡಬೇಕು, ಪ್ರಯೋಜನಗಳೇನು, ವಾಸ್ತು ಪ್ರಕಾರ ಈ ಅಂಶಗಳನ್ನು ಗಮನಿಸಿ

ಬಹುತೇಕರಿಗೆ ಮನೆಯಲ್ಲಿ ಮೀನಿನ ಅಕ್ವೇರಿಯಂ ಇಡಲು ಬಯಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮೀನಿನ ಅಕ್ವೇರಿಯಂ ಇದ್ದರೆ ಶಾಂತಿ ಮತ್ತು ಸಮೃದ್ಧಿ ಉಂಟಾಗುತ್ತದೆ. ಮನೆಯಲ್ಲಿ ಎಲ್ಲಿ ಅಕ್ವೇರಿಯಂ ಇಡಬೇಕು, ಯಾವ ದಿಕ್ಕಿನಲ್ಲಿ ಇಡಬೇಕು, ಅಕ್ವೇರಿಯಂ ಇಡುವಾಗ ವಾಸ್ತುವನ್ನು ಗಮನದಲ್ಲಿಟ್ಟುಕೊಳ್ಳಬೇಕೆ ಇತ್ಯಾದಿಗಳು ಪ್ರಮುಖವಾಗಿದೆ.

ಮೀನಿನ ಅಕ್ವೇರಿಯಂನಿಂದ ಪ್ರಯೋಜನಗಳು

ಫಿಶ್‌ ಅಕ್ವೇರಿಯಂನಿಂದ ಹಲವು ಪ್ರಯೋಜನಗಳು ಇವೆ.

  1. ಮನೆಯಲ್ಲಿ ನೆಗೆಟಿವ್‌ ಎನರ್ಜಿ ಹೋಗಲಾಡಿಸಲು ಫಿಶ್‌ ಅಕ್ವೇರಿಯಂ ಸಹಕಾರಿ. ಮನೆಯಲ್ಲಿ ಪಾಸಿಟೀವ್‌ ಎನರ್ಜಿ ಉಂಟಾಗಲು ಮೀನಿನ ಅಕ್ವೇರಿಯಂ ನೆರವಾಗುತ್ತದೆ.
  2. ಅಕ್ವೇರಿಯಂನಲ್ಲಿರುವ ಮೀನನ್ನು ನೋಡುತ್ತ ಖುಷಿ ಪಡುವವರಿದ್ದಾರೆ. ಇದು ಮನಸ್ಸಿನ ಒತ್ತಡ ಕಡಿಮೆ ಮಾಡುತ್ತದೆ. ಮನಸ್ಸನ್ನು ನಿರಾಳವಾಗಿಸುತ್ತದೆ.
  3. ಅಕ್ವೇರಿಯಂನಲ್ಲಿ ಮೀನು ಇದ್ದರೆ ಮನೆಗೆ ಸಂಪತ್ತು ಮತ್ತು ಸಮೃದ್ಧಿ ದೊರಕುತ್ತದೆ.
  4. ಮನೆಯಲ್ಲಿ ಸಂತೋಷ ಉಂಟು ಮಾಡುತ್ತದೆ. ಕೆಲಸಕ್ಕೆ ಸಂಬಂಧಪಟ್ಟ ಒತ್ತಡಗಳನ್ನು, ಬಿಸ್ನೆಸ್‌ ಉತ್ತಮಗೊಳ್ಳುತ್ತದೆ.

ಮನೆಯಲ್ಲಿ ಫಿಶ್‌ ಅಕ್ವೇರಿಯಂ ಎಲ್ಲಿಡಬೇಕು?

ವಾಸ್ತುಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಮೀನಿನ ಅಕ್ವೇರಿಯಂ ಇಡಬೇಕು. ಇದರಿಂದ ಹೆಚ್ಚಿನ ಸಂಪತ್ತು, ಸಕಾರಾತ್ಮಕತೆ, ಸಮೃದ್ಧಿ ದೊರಕುತ್ತದೆ. ಇದೇ ರೀತಿ ಮನೆಯ ಉತ್ತರ ಮತ್ತು ಪೂರ್ವದಲ್ಲಿಯೂ ಇಡಬಹುದು. ಮನೆಯಲ್ಲಿ ಸಂಬಂಧದಲ್ಲಿ ಪ್ರೀತಿ, ಅನುರಾಗ ಬಯಸಿದರೆ ಮನೆಯ ಮುಖ್ಯ ದ್ವಾರದ ಎಡಭಾಗದಲ್ಲಿ ಇರಿಸಿ. ಅಕ್ವೇರಿಯಂನಲ್ಲಿರುವ ಪ್ರಕಾಶಮಾನವಾದ ಹೂವುಗಳು ಮನೆಗೆ ಧನಾತ್ಮಕ ವೈಭವ ತರುತ್ತದೆ. ಅಡುಗೆಮನೆಯಲ್ಲಿ ಅಕ್ವೇರಿಯಂ ಇಡಬೇಡಿ.

ಫಿಶ್‌ ಅಕ್ವೇರಿಯಂಗೆ ವಾಸ್ತು ಸಲಹೆಗಳು

ಮನೆಯಲ್ಲಿ ಮೀನಿನ ಅಕ್ವೇರಿಯಂ ಇಡುವಾಗ ಈ ಮುಂದಿನ ವಾಸ್ತು ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ.

  1. ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಉತ್ತೇಜಿಸಲು ನೀವು ಆಗಾಗ್ಗೆ ನೀರನ್ನು ಬದಲಾಯಿಸಬೇಕು. ನಿಂತ ನೀರು, ಅಶುದ್ಧ ನೀರು ಆರ್ಥಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕೆಟ್ಟದ್ದಾಗಿದೆ.
  2. ಅಕ್ವೇರಿಯಂನಲ್ಲಿ ಪಾಚಿ ಬೆಳೆಯಲು ಅವಕಾಶ ನೀಡಬೇಡಿ.
  3. ಯಾವಾಗಲೂ ಬೆಸ ಸಂಖ್ಯೆಯ ಮೀನುಗಳು ಅಕ್ವೇರಿಯಂನಲ್ಲಿ ಇರಬೇಡಿ. ಒಂಬತ್ತು ಮ್ಯಾಜಿಕ್‌ ಸಂಖ್ಯೆಯನ್ನೂ ಹೊಂದಬಹುದು. ಎಂಟು ಗೋಲ್ಡ್‌ ಫಿಶ್‌ ಮತ್ತು ಒಂದು ಬ್ಲಾಕ್‌ ಫಿಶ್‌ ಹೊಂದಬಹುದು.
  4. ಡ್ರ್ಯಾಗನ್‌ ಮತ್ತು ಗೋಲ್ಡನ್‌ ಮೀನುಗಳು ಮನೆಗೆ ಮಂಗಳಕರ.
  5. ಮೀನುಗಳು ಆರೋಗ್ಯಕರವಾಗಿರಲಿ. ಉತ್ತಮ ಪೋಷಣೆ ನೀಡಿ.

ಅಕ್ವೇರಿಯಂನಲ್ಲಿ ಯಾವ ಬಗೆಯ ಮೀನುಗಳನ್ನು ಸಾಕಬಹುದು?

ಗೋಲ್ಡ್‌ಫಿಶ್‌, ಬಟರ್‌ಫ್ಲೈ ಕೊಯಿ, ಡ್ರಾಗನ್‌ ಫಿಶ್‌ ಅಥವಾ ಅರೊವನ, ಗುಪ್ಪಿ ಫಿಶ್‌, ಫ್ಲವರ್‌ಹಾರ್ನ್‌ ಫಿಶ್‌, ಏಂಜೆಲ್‌ ಫಿಶ್‌, ಕೊರಿ ಕ್ಯಾಟ್‌ಫಿಶ್‌, ಬ್ಲಾಕ್‌ಮೂರ್‌ ಇತ್ಯಾದಿ ಜಾತಿಯ ಮೀನುಗಳನ್ನು ಅಕ್ವೇರಿಯಂನಲ್ಲಿ ಸಾಕಬಹುದು.

Whats_app_banner