Bigg Boss Kannada 11: ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಹೊರ ಬಂದಿದ್ಯಾಕೆ? ಇಲ್ಲಿದೆ ಅಧಿಕೃತ ಕಾರಣ
Bigg Boss Kannada 11: ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಯಾಕೆ ಹೊರಬಂದಿದ್ದಾರೆ ಎಂದು ಸಾಕಷ್ಟು ಜನರು ಪ್ರಶ್ನಿಸುತ್ತಿದ್ದರು. ಆ ಪ್ರಶ್ನೆಗೆ ಇದೀಗ ಸ್ವತಃ ಗೋಲ್ಡ್ ಸುರೇಶ್ ಅವರು ಉತ್ತರ ನೀಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗದೇ ಗೋಲ್ಡ್ ಸುರೇಶ್ ಅವರು ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಅವರು ಮನೆಯಿಂದ ಹೊರ ಹೋಗಲು ಕಾರಣ ಏನು ಎಂದು ಅಧಿಕೃತವಾಗಿ ತಿಳಿದು ಬಂದಿರಲಿಲ್ಲ. ಆದರೆ ಕಲರ್ಸ್ ಕನ್ನಡ ವಾಹಿನಿಯ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಅವರು ಸ್ವತಃ ಯಾಕೆ ಮನೆಯಿಂದ ಹೊರ ಬಂದಿದ್ದಾರೆ ಎಂಬ ಕಾರಣವನ್ನು ನೀಡಿದ್ದಾರೆ. ಮತ್ತೆ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ ಸಿಕ್ಕರೆ ತಾನು ಹೋಗುತ್ತೇನೆ ಎಂದು ಹೇಳಿದ್ದಾರೆ.
ಕಾರಣ ಏನು?
ಈ ಹಿಂದೆ ಅವರ ಕುಟುಂಬಕ್ಕೆ ಅವರ ಅಗತ್ಯತೆ ಹೆಚ್ಚಾಗಿದೆ. ಈ ಮನೆಗಿಂತ ಹೆಚ್ಚಾಗಿ ಅವರು ತಮ್ಮ ಕುಟುಂಬದವರ ಜೊತೆಗೆ ಇರಬೇಕಾಗಿ ಬಂದಿದೆ. ಆ ಕಾರಣಕ್ಕಾಗಿ ಈ ಕೂಡಲೇ ಗೋಲ್ಡ್ ಸುರೇಶ್ ಅವರು ಮನೆಯಿಂದ ಹೊರಬರಬೇಕು ಎಂದು ಬಿಗ್ ಬಾಸ್ ತಿಳಿಸಿದ್ದರು. ಈ ಕಾರಣ ಕೇಳಿ ಸಾಕಷ್ಟು ಜನರು ಏನಾಯ್ತು ಎಂದು ಗಾಬರಿಯಾಗಿದ್ದರು. ಕುಟುಂಬಕ್ಕೆ ಹೆಚ್ಚು ಅಗತ್ಯತೆ ಇದೆ ಎಂದ ತಕ್ಷಣ ಅವರ ಮನೆಯಲ್ಲಿ ಸಮಸ್ಯೆಯಾಗಿರಬಹುದು ಎಂದುಕೊಂಡಿದ್ದರು.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಗೋಲ್ಡ್ ಸುರೇಶ್ ಅವರ ತಂದೆಯನ್ನು ಮಾತನಾಡಿಸಿದ ವಿಡಿಯೋಗಳು ಹರಿದಾಡುತ್ತಿದ್ದವು. ಅದರಲ್ಲಿ ತಾನು ಹುಷಾರಾಗಿದ್ದೇನೆ ಮನೆಯಲ್ಲಿ ಯಾವುದೇ ತೊಂದರೆ ಆಗಿಲ್ಲ ಎಂದು ಅವರು ಹೇಳಿದ್ದರು.
ಅದಾದ ನಂತರದಲ್ಲಿ ಅಧಿಕೃತವಾಗಿ ತಾವೇ ಕಾರಣ ತಿಳಿಸಿದ್ದಾರೆ ಗೋಲ್ಡ್ ಸುರೇಶ್. ತನ್ನ ಬ್ಯುಸಿನೆಸ್ ಸಲುವಾಗಿ ತಾನು ಮತ್ತೆ ಮರಳಿ ಬರಬೇಕಾಯ್ತು. ನನ್ನ ಗೆಳೆಯರೇ ಅದನ್ನು ನೋಡಿಕೊಳ್ಳುತ್ತಿದ್ದರು. ಆದರೆ ಮುಖ್ಯ ಜವಾಬ್ಧಾರಿಯನ್ನು ನಾನು ನನ್ನ ಹೆಂಡತಿಗೆ ವಹಿಸಿದ್ದೆ. ಆದರೆ ಅವರಿಗೆ ಕೆಲಸ ಒತ್ತಡವಾಗಿತ್ತು. ಆ ಕಾರಣದಿಂದ ನಾನು ಮತ್ತೆ ಮನೆಗೆ ಮರಳಿ ಬರಬೇಕಾಯ್ತು. ಇದಿಷ್ಟೇ ಕಾರಣ ಇದರ ಹೊರತಾಗಿ ಇನ್ನೇನೂ ಇಲ್ಲ ಎಂದು ಹೇಳಿದ್ದಾರೆ. ಇಷ್ಟು ದಿನ ಕೊಟ್ಟ ಪ್ರೀತಿಗಾಗಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿನ ಕೆಲ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿರುವ ಕೆಲವರ ಹೆಸರುಗಳನ್ನು ಹೇಳಿ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀವೆಲ್ಲ ಕೊಟ್ಟ ಪ್ರೀತಿಗೆ ಚಿರರುಣಿ ಎಂದಿದ್ದಾರೆ. ಇನ್ನು ತಾನು ಹೊರಗಡೆ ಬಂದ ಕಾರಣಕ್ಕಾಗಿ ಯಾರಿಗಾದರೂ ನಿರಾಸೆಯಾಗಿದ್ದರೆ ಅಥವಾ ಬೇಸರ ಉಂಟಾಗಿದ್ದರೆ ಕ್ಷಮೆ ಯಾಚಿಸಿದ್ದಾರೆ.