ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಮಾಡಿಕೊಡಿ ಟೇಸ್ಟಿ ಕಡಲೆಬೇಳೆ ಪಕೋಡ: ತಯಾರಿಸುವುದು ತುಂಬಾನೇ ಸಿಂಪಲ್, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಮಾಡಿಕೊಡಿ ಟೇಸ್ಟಿ ಕಡಲೆಬೇಳೆ ಪಕೋಡ: ತಯಾರಿಸುವುದು ತುಂಬಾನೇ ಸಿಂಪಲ್, ಇಲ್ಲಿದೆ ರೆಸಿಪಿ

ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಮಾಡಿಕೊಡಿ ಟೇಸ್ಟಿ ಕಡಲೆಬೇಳೆ ಪಕೋಡ: ತಯಾರಿಸುವುದು ತುಂಬಾನೇ ಸಿಂಪಲ್, ಇಲ್ಲಿದೆ ರೆಸಿಪಿ

ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಏನು ಮಾಡುವುದು ಎಂದು ಚಿಂತಿಸುತ್ತಿದ್ದರೆ, ರುಚಿಕರವಾದ ಹಾಗೂ ಗರಿಗರಿಯಾದ ಟೇಸ್ಟಿ ಕಡಲೆಬೇಳೆ ಪಕೋಡ ಮಾಡಿಕೊಡಿ. ಖಂಡಿತ ಮಕ್ಕಳು ಇದನ್ನು ಇಷ್ಟಪಟ್ಟು ತಿಂತಾರೆ.ಆಂಧ್ರ ಶೈಲಿಯ ಈ ಕರಿದ ತಿಂಡಿಗೆಪಪ್ಪು ಚೇಗೋಡಿ ಎಂದು ಹೇಳುತ್ತಾರೆ. ಇದನ್ನು ಮಾಡುವುದು ತುಂಬಾನೇ ಸಿಂಪಲ್, ಇಲ್ಲಿದೆ ರೆಸಿಪಿ.

ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಮಾಡಿಕೊಡಿ ಟೇಸ್ಟಿ ಕಡಲೆಬೇಳೆ ಪಕೋಡ
ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಮಾಡಿಕೊಡಿ ಟೇಸ್ಟಿ ಕಡಲೆಬೇಳೆ ಪಕೋಡ (PC: Youtube)

ಮಕ್ಕಳಿಗೆ ಸಂಜೆ ಸ್ನಾಕ್ಸ್‌ಗೆ ಮಾಡಿಕೊಡಿ ಟೇಸ್ಟಿ ಕಡಲೆಬೇಳೆ ಪಕೋಡ. ಖಂಡಿತ ಮಕ್ಕಳು ಇದನ್ನು ಇಷ್ಟಪಟ್ಟು ತಿಂತಾರೆ. ಆಂಧ್ರ ಶೈಲಿಯ ಈ ಕರಿದ ತಿಂಡಿಗೆ ಪಪ್ಪು ಚೇಗೋಡಿ ಎಂದು ಹೇಳುತ್ತಾರೆ. ಸಂಜೆ ಸ್ನಾಕ್ಸ್ ಆಗಿ ಮಾತ್ರವಲ್ಲ ಬೆಳಗಿನ ಉಪಾಹಾರ ಚಿತ್ರಾನ್ನದ ಜತೆಗೂ ಸೇವಿಸಬಹುದು. ಒಂದು ಕಾಲದಲ್ಲಿ ಬಹಳ ಪ್ರಸಿದ್ಧಿ ಪಡೆದಿದ್ದ ಈ ಕರಿದ ತಿಂಡಿಯನ್ನು ಇಂದು ಮಾಡುವವರು ಬಹಳ ಕಡಿಮೆ. ಈ ಕರಿದ ತಿಂಡಿಯನ್ನು ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡುವಿರಿ. ಇದನ್ನು ಮನೆಯಲ್ಲಿಯೇ ಬಹಳ ಸುಲಭವಾಗಿ ತಯಾರಿಸಬಹುದು. ಮಕ್ಕಳು ಕೂಡ ಬಹಳ ಇಷ್ಟಪಟ್ಟು ತಿಂತಾರೆ. ಇಲ್ಲಿದೆ ಪಾಕವಿಧಾನ.

ಕಡಲೆಬೇಳೆ ಪಕೋಡ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಕಡಲೆಬೇಳೆ- ಅರ್ಧ ಕಪ್, ಅಕ್ಕಿ ಹಿಟ್ಟು- ಒಂದು ಕಪ್, ಮೈದಾ- ಅರ್ಧ ಕಪ್, ನೀರು- ಒಂದೂವರೆ ಕಪ್, ಉಪ್ಪು ರುಚಿಗೆ ತಕ್ಕಷ್ಟು, ಮೆಣಸಿನಪುಡಿ- ಅರ್ಧ ಟೀ ಚಮಚ, ಆಹಾರ ಬಣ್ಣ- ಪಿಂಚ್ (ಬೇಕಿದ್ದರೆ), ಎಣ್ಣೆ- ಕರಿಯಲು.

ಮಾಡುವ ವಿಧಾನ: ಮೊದಲಿಗೆ ಕಡಲೆಬೇಳೆಯನ್ನು ನೀರಿನಲ್ಲಿ ಹಾಕಿ ಮೂರು ಗಂಟೆಗಳ ಕಾಲ ನೆನೆಸಿಡಿ.

- ನಂತರ ಒಣ ಬಟ್ಟೆಯ ಮೇಲೆ ಕಡಲೆಬೇಳೆಯನ್ನು ಹಾಕಿ ಪುಡಿಯಾಗದಂತೆ ಒಮ್ಮೆ ಒತ್ತಿ ಪಕ್ಕಕ್ಕೆ ಇಡಿ. ಅದರ ನೀರು ಹೋಗಬೇಕು.

- ಈಗ ಒಂದು ಪಾತ್ರೆಯಲ್ಲಿ ಅಕ್ಕಿ ಹಿಟ್ಟು ಮತ್ತು ಮೈದಾ ಹಿಟ್ಟು ಹಾಕಿ ಚೆನ್ನಾಗಿ ಕಲಸಿ.

- ಸ್ಟೌವ್ ಮೇಲೆ ಪಾತ್ರೆಯನ್ನು ಇರಿಸಿ, ನೀರನ್ನು ಸೇರಿಸಿ. ನೀರು ಬಿಸಿಯಾದ ನಂತರ, ಮೆಣಸಿನಪುಡಿ ಮತ್ತು ಉಪ್ಪು ಸೇರಿಸಿ, ಕುದಿಸಿ.

- ಜೊತೆಗೆ ಒಂದು ಪಿಂಚ್ ಕೆಂಪು ಆಹಾರ ಬಣ್ಣವನ್ನು ಸೇರಿಸಿ. ನಿಮಗೆ ಇಷ್ಟವಿಲ್ಲದಿದ್ದರೆ, ಅದರ ಅಗತ್ಯವಿಲ್ಲ.

- ಈಗ ಕುದಿಸಿದ ನೀರಿಗೆ ಮೈದಾ ಹಿಟ್ಟು ಮತ್ತು ಅಕ್ಕಿ ಹಿಟ್ಟಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

- ಈ ಸಂಪೂರ್ಣ ಮಿಶ್ರಣವನ್ನು ಕಡಿಮೆ ಉರಿಯಲ್ಲಿ ದಪ್ಪ ಪೇಸ್ಟ್ ಆಗುವವರೆಗೆ ಮಿಶ್ರಣ ಮಾಡಿ. ಅದರ ಮೇಲೆ ಮುಚ್ಚಳವನ್ನು ಹಾಕಿ, ಸ್ಟೌವ್ ಆಫ್ ಮಾಡಿ.

- ಸ್ವಲ್ಪ ಸಮಯದ ನಂತರ ಮುಚ್ಚಳವನ್ನು ತೆಗೆದು ಎರಡು ಚಮಚ ಎಣ್ಣೆಯನ್ನು ಸೇರಿಸಿ. ಸಂಪೂರ್ಣ ಮಿಶ್ರಣವನ್ನು ಚಪಾತಿ ಹಿಟ್ಟಿನಂತೆ ಬೆರೆಸಿಕೊಳ್ಳಿ.

- ಸ್ಟೌವ್ ಮೇಲೆ ಬಾಣಲೆಯಿಟ್ಟು ಇಟ್ಟು ಡೀಪ್ ಫ್ರೈಗೆ ಬೇಕಾದಷ್ಟು ಎಣ್ಣೆ ಹಾಕಿ.

- ಈಗ ಹಿಟ್ಟಿನ ಮಿಶ್ರಣದಿಂದ ಸಣ್ಣ ಉಂಡೆಯನ್ನು ತೆಗೆದುಕೊಂಡು ಅದನ್ನು ಕೈಗಳಿಂದ ಸಣ್ಣ ಉಂಡೆಗಳಾಗಿ ತೆಗೆದುಕೊಳ್ಳಿ.

- ಈ ಉಂಡೆಗಳನ್ನು ಸ್ವಲ್ಪ ಉದ್ದಕ್ಕೆ ಒತ್ತಿ, ಇದಕ್ಕೆ ಕಡಲೆಬೇಳೆಗಳನ್ನು ಅದ್ದಿ. ಇವು ಹಿಟ್ಟಿಗೆ ಅಂಟಿಕೊಳ್ಳುತ್ತದೆ. ನಂತರ ಚಕ್ರ ಅಥವಾ ಕೋಡುಬಳೆ ರೀತಿ ಸುತ್ತಿ.

- ನಂತರ ಇದನ್ನು ಕಾದ ಬಿಸಿ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿ. ಎಲ್ಲಾ ಮಿಶ್ರಣವನ್ನು ಇದೇ ರೀತಿ ಮಾಡಿ ಚೆನ್ನಾಗಿ ಫ್ರೈ ಮಾಡಿದರೆ ರುಚಿಕರವಾದ, ಗರಿಗರಿಯಾದ ಪಕೋಡ ಸವಿಯಲು ಸಿದ್ಧ.

ಈ ಕಡಲೆಬೇಳೆಯ ಪಕೋಡಗಳು ಕುರುಕಲು ಮತ್ತು ಗರಿಗರಿಯಾಗಿರುತ್ತವೆ. ಇದನ್ನು ಮನೆಯಲ್ಲೇ ತಯಾರಿಸುವುದರಿಂದ ಖಂಡಿತಾ ಸೇವಿಸಬಹುದು. ಸಂಜೆ ಟೀ ಹೀರುತ್ತಾ ಇದನ್ನು ತಿನ್ನಲು ರುಚಿಕರವಾಗಿರುತ್ತದೆ. ನಿಮಗೆ ಆಹಾರ ಬಣ್ಣ ಇಷ್ಟವಾಗದಿದ್ದರೆ, ಅದನ್ನು ಸೇರಿಸಬೇಡಿ. ಆಹಾರದ ಬಣ್ಣವನ್ನು ಸೇರಿಸದಿರುವುದರಿಂದ, ಬಣ್ಣವು ಕೆಂಪು ಬಣ್ಣಕ್ಕಿಂತ ಸ್ವಲ್ಪ ಹಳದಿಯಾಗಿ ಬರುತ್ತದೆ. ಇವುಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಖಂಡಿತ ನಿಮಗೆ ಇಷ್ಟವಾಗಬಹುದು. ಮತ್ತೆ ಮತ್ತೆ ಮಾಡಿ ತಿನ್ನುವಿರಿ.

Whats_app_banner