LPG Price: ದೆಹಲಿಯಿಂದ ಚೆನ್ನೈ ತನಕ ಎಲ್‌ಪಿಜಿ ದರ ಪರಿಷ್ಕರಣೆ, ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lpg Price: ದೆಹಲಿಯಿಂದ ಚೆನ್ನೈ ತನಕ ಎಲ್‌ಪಿಜಿ ದರ ಪರಿಷ್ಕರಣೆ, ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ

LPG Price: ದೆಹಲಿಯಿಂದ ಚೆನ್ನೈ ತನಕ ಎಲ್‌ಪಿಜಿ ದರ ಪರಿಷ್ಕರಣೆ, ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ

LPG Gas Price Bengaluru: ಇಂದು ಡಿಸೆಂಬರ್ 1. ವಾಡಿಕೆಯಂತೆ ತೈಲೋತ್ಪನ್ನ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆ ಮಾಡಿವೆ. ದೆಹಲಿಯಿಂದ ಚೆನ್ನೈ ತನಕ ಎಲ್‌ಪಿಜಿ ದರ ಪರಿಷ್ಕರಣೆಯಾಗಿದೆ. ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಆಗಿದ್ದು, ಅದರ ವಿವರ ಇಲ್ಲಿದೆ.

ದೆಹಲಿಯಿಂದ ಚೆನ್ನೈ ತನಕ ಎಲ್‌ಪಿಜಿ ದರ ಪರಿಷ್ಕರಣೆ, ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಾಗಿದೆ.(ಸಾಂಕೇತಿಕ ಚಿತ್ರ)
ದೆಹಲಿಯಿಂದ ಚೆನ್ನೈ ತನಕ ಎಲ್‌ಪಿಜಿ ದರ ಪರಿಷ್ಕರಣೆ, ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಾಗಿದೆ.(ಸಾಂಕೇತಿಕ ಚಿತ್ರ)

LPG Gas Price Bengaluru: ಬೆಳ್ಳಂಬೆಳಗ್ಗೆ ಎಲ್‌ಪಿಜಿ ಬಳಕೆದಾರರಿಗೆ ಸ್ವಲ್ಪ ಸಿಹಿ ಮತ್ತು ಸ್ವಲ್ಪ ಕಹಿ ಸುದ್ದಿ. ಮನೆ ಬಳಕೆಯ 14 ಕಿಲೋ ತೂಕದ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಬದಲಾವಣೆ ಇಲ್ಲ. ಆದರೆ, ವಾಣಿಜ್ಯ ಬಳಕೆಯ 19 ಕಿಲೋ ತೂಕದ ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗಿದ್ದು, 18.50 ರೂಪಾಯಿ ಹೆಚ್ಚಳವಾಗಿದೆ. ದೆಹಲಿಯಿಂದ ಚೆನ್ನೈ ತನಕ ಎಲ್‌ಪಿಜಿ ದರ ಪರಿಷ್ಕರಣೆಯಾಗಿದ್ದು, ಇಡೀ ದೇಶದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಕೆಯಾಗಿದೆ.

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಳ

ಭಾರತದ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ (ಡಿಸೆಂಬರ್ 1) 19 ಕಿಲೋ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 1818.50 ರೂಪಾಯಿ ಆಗಿದೆ. ಕಳೆದ ತಿಂಗಳು ಇದೇ ಸಿಲಿಂಡರ್ ದರ 1802 ರೂಪಾಯಿ ಇತ್ತು. ಕೋಲ್ಕತ್ತದಲ್ಲಿ ಇದೇ ವಾಣಿಜ್ಯ ಬಳಕೆಯ 19 ಕಿಲೋ ತೂಕದ ಎಲ್‌ಪಿಜಿ ಸಿಲಿಂಡರ್ ದರ ಈಗ 1927 ರೂಪಾಯಿ ಆಗಿದೆ. ಕಳೆದ ತಿಂಗಳು ಅಲ್ಲಿ ಈ ಸಿಲಿಂಡರ್ ದರ 1911.50 ರೂಪಾಯಿ ಇತ್ತು. ಮುಂಬಯಿಯಲ್ಲಿ ವಾಣಿಜ್ಯ ಬಳಕೆಯ 19 ಕಿಲೋ ತೂಕದ ಎಲ್‌ಪಿಜಿ ಸಿಲಿಂಡರ್ ದರ 16.50 ರೂಪಾಯಿ ಹೆಚ್ಚಳವಾಗಿದ್ದು, ಕಳೆದ ತಿಂಗಳು 1754.50 ರೂಪಾಯಿ ಇದ್ದ ದರ ಈಗ 1771 ರೂಪಾಯಿ ಆಗಿದೆ. ಚೆನ್ನೈನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ದರ 1980.50 ರೂಪಾಯಿ ಆಗಿದೆ. ನವೆಂಬರ್‌ನಲ್ಲಿ ಇದು 1964.50 ರೂಪಾಯಿ ಇತ್ತು. ಪಟನಾದಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ದರ 2072.50 ರೂಪಾಯಿ ಆಗಿದೆ.

ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಪರಿಷ್ಕರಿಸುತ್ತವೆ. ಇಂದು (ಡಿಸೆಂಬರ್ 1) ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 16.50 ರೂ. ಈ ಹಿಂದೆ ನವೆಂಬರ್ 1 ರಂದು ಇದರ ಬೆಲೆ 62 ರೂ. ಅಕ್ಟೋಬರ್ 1 ರಂದು ಇದರ ಬೆಲೆ 48.50 ರೂ., ಸೆಪ್ಟೆಂಬರ್ 1 ರಂದು 39 ರೂ. ಮತ್ತು ಆಗಸ್ಟ್ 1 ರಂದು ಪ್ರತಿ ಸಿಲಿಂಡರ್ ಬೆಲೆ 6.50 ರೂಪಾಯಿ ಏರಿಸಿದ್ದವು.

ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಸ್ಥಿರ

ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. 2024ರ ಮಾರ್ಚ್‌ ತಿಂಗಳಲ್ಲಿ ಕೇಂದ್ರ ಸರ್ಕಾರ 100 ರೂಪಾಯಿ ಇಳಿಕೆ ಮಾಡಿತ್ತು. ಅಂದಿನಿಂದ ಇಂದಿನ ತನಕ ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಸ್ಥಿರವಾಗಿ ಇದೆ. ಮನೆ ಬಳಕೆಯ 14 ಕಿಲೋ ತೂಕದ ಎಲ್‌ಪಿಜಿ ಸಿಲಿಂಡರ್ ಪಾಟ್ನಾದಲ್ಲಿ 892.50 ರೂಪಾಯಿ, ದೆಹಲಿಯಲ್ಲಿ 803 ರೂಪಾಯಿ, ಕೋಲ್ಕತದಲ್ಲಿ 829 ರೂಪಾಯಿ, ಮುಂಬಯಿನಲ್ಲಿ 802.50 ರೂಪಾಯಿ, ಚೆನ್ನೈನಲ್ಲಿ 818.50 ರೂಪಾಯಿಗೆ ಲಭ್ಯವಿದೆ.

ಬೆಂಗಳೂರಿನಲ್ಲಿ ಎಲ್‌ಪಿಜಿ ಸಿಲಿಂಡರ್ ದರ

ಬೆಂಗಳೂರಿನಲ್ಲಿ ಕೂಡ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಾಗಿದೆ. ಮನೆ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಸ್ಥಿರವಾಗಿದೆ. ಮಾರ್ಚ್ ತಿಂಗಳಲ್ಲಿ 100 ರೂಪಾಯಿ ಇಳಿಕೆಯಾದ ಬಳಿಕ ಮನೆ ಬಳಕೆಯ 14 ಕಿಲೋ ತೂಕದ ಎಲ್‌ಪಿಜಿ ಸಿಲಿಂಡರ್‌ ದರ 805.50 ರೂಪಾಯಿಯಲ್ಲೇ ಇದೆ. ವಾಣಿಜ್ಯ ಬಳಕೆಯ 19 ಕಿಲೋ ತೂಕದ ಸಿಲಿಂಡರ್ ದರ ಕಳೆದ ತಿಂಗಳು 61 ರೂಪಾಯಿ ಏರಿಕೆಯಾಗಿ 1879 ರೂಪಾಯಿ ತಲುಪಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.