ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಗುರಿ ನಿಶ್ಚಯ ಮಾಡಿಕೊಂಡ ಮೇಲೆ ಅದೇ ಮಾರ್ಗದಲ್ಲಿ ನಿಧಾನವಾಗಿ ಸಾಗಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಗುರಿ ನಿಶ್ಚಯ ಮಾಡಿಕೊಂಡ ಮೇಲೆ ಅದೇ ಮಾರ್ಗದಲ್ಲಿ ನಿಧಾನವಾಗಿ ಸಾಗಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಗುರಿ ನಿಶ್ಚಯ ಮಾಡಿಕೊಂಡ ಮೇಲೆ ಅದೇ ಮಾರ್ಗದಲ್ಲಿ ನಿಧಾನವಾಗಿ ಸಾಗಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ ಶ್ಲೋಕ 10 ರಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

10ನೇ ಅಧ್ಯಾಯ ರಹಸ್ಯತಮ ಜ್ಞಾನ ಶ್ಲೋಕ - 10

ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್ |

ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾನ್ತಿ ತೇ ||10||

ಅನುವಾದ: ನನ್ನ ಪ್ರೀತಿಪೂರ್ವಕ ಸೇವೆಗೆ ಸದಾ ಮುಡಿಪಾಗಿರುವವರಿಗೆ, ಅವರು ನನ್ನ ಬಳಿಗೆ ಬರುವುದಕ್ಕೆ ಅಗತ್ಯವಾದ ಬುದ್ಧಿಯೋಗವನ್ನು ನಾನು ಕೊಡುತ್ತೇನೆ.

ಭಾವಾರ್ಥ: ಈ ಶ್ಲೋಕದಲ್ಲಿ ಬುದ್ಧಿಯೋಗಮ್ ಎನ್ನುವ ಪದ ಅರ್ಥವತ್ತಾದದ್ದು. ಎರಡನೆಯ ಅಧ್ಯಾಯದಲ್ಲಿ ಪ್ರಭುವು ಅರ್ಜುನನಿಗೆ ಉಪದೇಶ ಮಾಡುತ್ತ, ತಾನು ಅವನಿಗೆ ಅನೇಕ ವಿಷಯಗಳನ್ನು ಕುರಿತು ಮಾತನಾಡಿದ್ದೇನೆ, ಬುದ್ಧಿಯೋಗವನ್ನು ಉಪದೇಶಿಸುತ್ತೇನೆ ಎಂದು ಹೇಳಿದುದ್ದನ್ನು ಸ್ಮರಿಸಬಹುದು. ಈಗ ಬುದ್ಧಿಯೋಗವನ್ನು ವಿವರಿಸಿದೆ. ಬುದ್ಧಿಯೋಗ ಎಂದರೆ ಕೃಷ್ಣಪ್ರಜ್ಞೆಯಲ್ಲಿ ಕಾರ್ಯಮಾಡುವುದು. ಅದೇ ಅತ್ಯುನ್ನತ ಬುದ್ಧಿವಂತಿಕೆ. ಬುದ್ಧಿ ಎಂದರೆ ಯೋಚನಾಶಕ್ತಿ, ಯೋಗ ಎಂದರೆ ಅಧ್ಯಾತ್ಮಿಕ ಕ್ರಿಯೆಗಳು ಅಥವಾ ಯೋಗದಿಂದ ಉತ್ಥಾನ. ಮನುಷ್ಯನು ಭಗವದ್ಧಾಮಕ್ಕೆ ಹಿಂದಿರುಗಲು ಪ್ರಯತ್ನಿಸಿದಾಗ, ಭಕ್ತಿಸೇವೆಯಲ್ಲಿ ಕೃಷ್ಣಪ್ರಜ್ಞೆಯನ್ನು ಕೈಗೊಂಡಾಗ ಅವನ ಕ್ರಿಯೆಗೆ ಬುದ್ಧಿಯೋಗ ಎಂದು ಹೆಸರು (Bhagavad Gita Updesh in Kannada).

ಬೇರೆ ಮಾತುಗಳಲ್ಲಿ ಹೇಳುವುದಾದರೆ, ಬುದ್ಧಿಯೋಗವು ಮನುಷ್ಯನು ಈ ಜಗತ್ತಿನ ಗೋಜಿನಿಂದ ಪಾರಾಗುವ ಪ್ರಕ್ರಿಯೆ. ಪ್ರಗತಿಯ ಕಟ್ಟಕಡೆಯ ಗುರಿ ಕೃಷ್ಣನೇ. ಜನಕ್ಕೆ ಇದು ತಿಳಿಯದು. ಆದುದರಿಂದ ಭಕ್ತರ ಮತ್ತು ಪ್ರಗತಿಯ ಕಟ್ಟಕಡೆಯ ಗುರಿ ಕೃಷ್ಣನೇ. ಜನಕ್ಕೆ ಇದು ತಿಳಿಯದು. ಆದುದರಿಂದ ಭಕ್ತರ ಮತ್ತು ಅಧಿಕಾರಯುತ ಗುರು ಸಹವಾಸವು ಮುಖ್ಯ. ಕೃಷ್ಣನೇ ಗುರಿ ಎಂದು ತಿಳಿದುಕೊಳ್ಳಬೇಕು. ಗುರಿಯನ್ನು ನಿಶ್ಚಯ ಮಾಡಿಕೊಂಡ ಮೇಲೆ ದಾರಿಯನ್ನು ನಿಧಾನವಾಗಿ ಆದರೆ ಮುಂದು ಮುಂದಕ್ಕೆ ಸಾಗುತ್ತ ಕ್ರಮಿಸಲಾಗುವುದು.

ಮನುಷ್ಯನಿಗೆ ಬದುಕಿನ ಗುರಿಯು ತಿಳಿದಿದ್ದೂ ಕರ್ಮಫಲಗಳಿಗೆ ಅಂಟಿಕೊಂಡಿದ್ದರೆ ಆತನು ಕರ್ಮಯೋಗದಲ್ಲಿ ಕೆಲಸ ಮಾಡುತ್ತಾನೆ. ಗುರಿಯು ಕೃಷ್ಣ ಎಂದು ತಿಳಿದಿದ್ದರೂ ಕೃಷ್ಣನನ್ನು ತಿಳಿಯಲು ಊಹಾತ್ಮಕ ಚಿಂತನೆಗಳಲ್ಲಿ ತೊಡಗಿದ್ದರೆ ಆತನು ಜ್ಞಾನಯೋಗದಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನಿಗೆ ಗುರಿಯು ತಿಳಿದಿದ್ದು, ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಲ್ಲಿ ಮತ್ತು ಭಕ್ತಿಸೇವೆಯಲ್ಲಿ ಕೃಷ್ಣನನ್ನು ಅರಸುತ್ತಿದ್ದರೆ ಆತನು ಭಕ್ತಿಯೋಗದಲ್ಲಿ ಅಥವಾ ಬುದ್ಧಿಯೋಗದಲ್ಲಿ ಕೆಲಸ ಮಾಡುತ್ತಿದ್ದಾನೆ. ಇದೇ ಪೂರ್ಣಯೋಗ. ಈ ಪೂರ್ಣಯೋಗವು ಬದುಕಿನ ಅತ್ಯುನ್ನತ ಪರಿಪೂರ್ಣತೆಯ ಹಂತ.

ಮನುಷ್ಯನಿಗೆ ಸದ್ಗುರುವು ಇಬರಬಹುದು. ಆತನು ಒಂದು ಅಧ್ಯಾತ್ಮಿಕ ಸಂಘಕ್ಕೆ ಸೇರಿರಬಹುದು. ಆದರೂ, ಆತನು ಮುನ್ನಡೆಯುವಷ್ಟು ಬುದ್ಧಿವಂತನಲ್ಲದಿದ್ದರೆ, ಒಳಗಿನಿಂದ ಕೃಷ್ಣನು, ಆತನು ಕಷ್ಟವಿಲ್ಲದೆ ಕಡೆಗೆ ಹೇಗೆ ತನ್ನ ಬಳಿಗೆ ಬರಬಹುದು ಎಂದು ದಾರಿಯನ್ನು ತೋರಿಸುತ್ತಾನೆ. ಇದಕ್ಕೆ ಬೇಕಾದ ಅರ್ಹತೆ ಎಂದರೆ, ಮನುಷ್ಯನು ಸದಾ ಕೃಷ್ಣಪ್ರಜ್ಞೆಯಲ್ಲಿ ನಿರತನಾಗಿದ್ದು, ಪ್ರೀತಿ ಮತ್ತು ಭಕ್ತಿಯಿಂದ ಎಲ್ಲ ಬಗೆಯ ಸೇವೆಗಳನ್ನೂ ನಿಲ್ಲಿಸಬೇಕು. ಆತನು ಕೃಷ್ಣನಿಗಾಗಿ ಏನಾದರೂ ಕೆಲಸವನ್ನು ಮಾಡಬೇಕು. ಆ ಕೆಲಸವನ್ನು ಪ್ರೀತಿಯಿಂದ ಮಾಡಬೇಕು. ಭಕ್ತನು ಆತ್ಮಸಾಕ್ಷಾತ್ಕಾರದ ಹಾದಿಯಲ್ಲಿ ಮುನ್ನಡೆಯುವಷ್ಟು ಬುದ್ಧಿವಂತನಲ್ಲದಿದ್ದರೂ ಪ್ರಾಮಾಣಿಕನಾಗಿದ್ದು ಭಕ್ತಿಸೇವೆಗೆ ನಿಷ್ಠನಾಗಿದ್ದರೆ, ಪ್ರಭುವು ಪ್ರಗತಿಯನ್ನು ಸಾಧಿಸಲು ಮತ್ತು ಕಟ್ಟಕಡೆಗೆ ತನ್ನ ಬಳಿಗೆ ಬರಲು ಅವನಿಗೆ ಅವಕಾಶವನ್ನು ನೀಡುತ್ತಾನೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)