RTM ಕಾರ್ಡ್ ಬಳಸಿ ಅರ್ಷದೀಪ್‌ ಸಿಂಗ್ ಉಳಿಸಿಕೊಂಡ ಪಂಜಾಬ್‌ ಕಿಂಗ್ಸ್; ಭಾರತೀಯ ವೇಗಿ ಪಡೆದಿದ್ದು ಇಷ್ಟು ಕೋಟಿ!
ಕನ್ನಡ ಸುದ್ದಿ  /  ಕ್ರಿಕೆಟ್  /  Rtm ಕಾರ್ಡ್ ಬಳಸಿ ಅರ್ಷದೀಪ್‌ ಸಿಂಗ್ ಉಳಿಸಿಕೊಂಡ ಪಂಜಾಬ್‌ ಕಿಂಗ್ಸ್; ಭಾರತೀಯ ವೇಗಿ ಪಡೆದಿದ್ದು ಇಷ್ಟು ಕೋಟಿ!

RTM ಕಾರ್ಡ್ ಬಳಸಿ ಅರ್ಷದೀಪ್‌ ಸಿಂಗ್ ಉಳಿಸಿಕೊಂಡ ಪಂಜಾಬ್‌ ಕಿಂಗ್ಸ್; ಭಾರತೀಯ ವೇಗಿ ಪಡೆದಿದ್ದು ಇಷ್ಟು ಕೋಟಿ!

ಅರ್ಷದೀಪ್ ಸಿಂಗ್ ಐಪಿಎಲ್‌ನಲ್ಲಿ 2024ರ ಆವೃತ್ತಿಯಲ್ಲಿ 14 ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ 19 ವಿಕೆಟ್ ಕಬಳಿಸಿದ್ದಾರೆ. 4/29 ಇವರ ಅತ್ಯುತ್ತಮ ಪ್ರದರ್ಶನ. ಐಪಿಎಲ್​ ಇತಿಇಹಾಸದಲ್ಲಿ ಒಟ್ಟಾರೆ 65 ಪಂದ್ಯ ಆಡಿರುವ ವೇಗಿ 76 ವಿಕೆಟ್ ಕಬಳಿಸಿದ್ದಾರೆ.

RTM ಕಾರ್ಡ್ ಬಳಸಿ ಅರ್ಷದೀಪ್‌ ಸಿಂಗ್ ಉಳಿಸಿಕೊಂಡ ಪಂಜಾಬ್‌ ಕಿಂಗ್ಸ್
RTM ಕಾರ್ಡ್ ಬಳಸಿ ಅರ್ಷದೀಪ್‌ ಸಿಂಗ್ ಉಳಿಸಿಕೊಂಡ ಪಂಜಾಬ್‌ ಕಿಂಗ್ಸ್

ಪಂಜಾಬ್‌ ಕಿಂಗ್ಸ್‌ ತಂಡದಿಂದ ರಿಲೀಸ್‌ ಆಗಿದ್ದ ವೇಗದ ಬೌಲರ್‌ ಅರ್ಷದೀಪ್‌ ಸಿಂಗ್‌ 18 ಕೋಟಿ ರೂ ಮೊತ್ತಕ್ಕೆ ಪಂಜಾಬ್‌ ಕಿಂಗ್ಸ್‌ ಪಾಲಾಗಿದ್ದಾರೆ. ಪಂಜಾಬ್‌ ತಂಡ ಕಳೆದ ಆವೃತ್ತಿಯಲ್ಲಿ ತಂಡದಲ್ಲಿದ್ದ ಆಟಗಾರನನ್ನು ಆರ್‌ಟಿಎಂ ಕಾರ್ಡ್‌ ಬಳಸಿ ಉಳಿಸಿಕೊಂಡಿದೆ. ಐಪಿಎಲ್‌ 2025ರ ಆವೃತ್ತಿಯಲ್ಲಿ ಹರಾಜಿಗೆ ಬಂದ ಮೊದಲ ಆಟಗಾರ ಅರ್ಷದೀಪ್‌. ಮೂಲ ಬೆಲೆ 2 ಕೋಟಿ ರೂಪಾಯಿಗೆ ಅರ್ಷರ್ದೀಪ್‌ ಖರೀದಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಬಿಡ್‌ ಆರಂಭಿಸಿತು. ಇದಕ್ಕೆ ಡೆಲ್ಲಿ ಕ್ಯಾಪಿಟಲ್ಸ್‌ ಪೈಪೋಟಿ ಆರಂಭಿಸಿತು. ಆ ಬಳಿಕ ಗುಜರಾತ್‌ ಟೈಟಾನ್ಸ್‌ ಕೂಡಾ ಬಿಡ್‌ಗೆ ಇಳಿಯಿತು. ಬಿಡ್‌ ಮೊತ್ತ 10 ಕೋಟಿ ದಾಟುತ್ತಿದ್ದಂತೆಯೇ ಆರ್‌ಸಿಬಿ ತಂಡ ಕೂಡಾ ಬಿಡ್‌ ಮಾಡಲು ಆರಂಭಿಸಿತು. ಈ ವೇಳೆ ಮತ್ತೆ ಗುಜರಾತ್‌ ಮತ್ತು ರಾಜಸ್ಥಾನ ರಾಯಲ್ಸ್‌ ನಡುವೆ ಪೈಪೋಟಿ ಆರಂಭವಾಯ್ತು.

ಹರಾಜು 12 ಕೋಟಿ ದಾಟುತ್ತಿದ್ದಂತೆಯೇ ಸನ್‌ರೈಸರ್ಸ್‌ ಹೈದರಾಬಾದ್‌ ಕೂಡಾ ಪೈಪೋಟಿ ನೀಡಲು ಶುರು ಮಾಡಿತು. ಒಂದು ಹಂತದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ 15.75 ಕೋಟಿಗೆ ಬಿಡ್‌ ಮುಗಿಸಿತು. ಈ ವೇಳೇ RTM ಕಾರ್ಡ್‌ ಬಳಸಿದ ಪಂಜಾಬ್‌ ಕಿಂಗ್ಸ್‌, 18 ಕೋಟಿ ರೂಪಾಯಿಗೆ ಆಟಗಾರನ್ನು ತನ್ನಲ್ಲೇ ಉಳಿಸಿಕೊಂಡಿತು.

ಐಪಿಎಲ್​ನಲ್ಲಿ ಅರ್ಷದೀಪ್ ಸಿಂಗ್ ಪ್ರದರ್ಶನ

ಪಂದ್ಯ - 65

ವಿಕೆಟ್ - 76

ಬೆಸ್ಟ್ - 5/32

ಎಕಾನಮಿ - 9.03

2019ರಲ್ಲಿ ಐಪಿಎಲ್‌ ಪದಾರ್ಪಣೆ ಮಾಡಿದ ಅರ್ಷದೀಪ್‌ ಈವರೆಗೆ 6 ಆವೃತ್ತಿಗಳಲ್ಲಿ ಆಡಿದ್ದಾರೆ. ಭಾರತ ಸೀಮಿತ ಓವರ್‌ಗಳ ತಂಡದಲ್ಲಿ ನಿಯಮಿತವಾಗಿ ಆಡುವ ಆಟಗಾರ, ದೊಡ್ಡ ಮೊತ್ತ ಪಡೆದಿರುವುದರಲ್ಲಿ ಅಚ್ಚರಿಯಿಲ್ಲ.  ಐಪಿಎಲ್‌ನಲ್ಲಿ 2024ರಲ್ಲ ಅರ್ಷದೀಪ್ ಸಿಂಗ್ 14 ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ 19 ವಿಕೆಟ್ ಕಬಳಿಸಿದ್ದಾರೆ. 4/29 ಇವರ ಅತ್ಯುತ್ತಮ ಪ್ರದರ್ಶನ. ಐಪಿಎಲ್​ನಲ್ಲಿ ಒಟ್ಟು 65 ಪಂದ್ಯ ಆಡಿರುವ ವೇಗಿ 76 ವಿಕೆಟ್ ಕಬಳಿಸಿದ್ದಾರೆ.

ಮೊದಲ ದಿನದ ಪ್ರಕ್ರಿಯೆಯು ಮಧ್ಯಾಹ್ನ 3:30ಕ್ಕೆ ಆರಂಭವಾಗಿದೆ. ಮೊದಲ ದಿನದಂದು, ಒಟ್ಟು 84 ಆಟಗಾರರು ಹರಾಜಿಗೆ ಒಳಗಾಗಲಿದ್ದಾರೆ. ಅಂದರೆ, ಹರಾಜು ಕಣದಲ್ಲಿದರುವ ಒಟ್ಟು 577 ಆಟಗಾರರ ಪೈಕಿ ಮೊದಲ ದಿನ 84 ಆಟಗಾರರನ್ನು ಹರಾಜು ಕೂಗಲಾಗುತ್ತದೆ. ಇವರಲ್ಲಿ ಬಹುತೇಕ ಹೆಚ್ಚು ನಿರೀಕ್ಷೆ ಮೂಡಿಸಿರುವ ಆಟಗಾರರೇ ಇದ್ದು, ಹೆಚ್ಚಿನ ಆಟಗಾರರು ಖರೀದಿಯಾಗುವ ಸಾಧ್ಯತೆ ಇದೆ.

Whats_app_banner