ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್‌ಗೆ ಭಾರತ ತಂಡ ಪ್ರಕಟ; ಧ್ರುವ್ ಜುರೆಲ್‌ಗೆ ಚೊಚ್ಚಲ ಅವಕಾಶ; ಶಮಿ ಇಲ್ಲ-bcci name 16 member squad for first two tests against england dhruv jurel maiden call up mohammed shami ind vs eng jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್‌ಗೆ ಭಾರತ ತಂಡ ಪ್ರಕಟ; ಧ್ರುವ್ ಜುರೆಲ್‌ಗೆ ಚೊಚ್ಚಲ ಅವಕಾಶ; ಶಮಿ ಇಲ್ಲ

ಇಂಗ್ಲೆಂಡ್ ವಿರುದ್ಧದ ಮೊದಲ 2 ಟೆಸ್ಟ್‌ಗೆ ಭಾರತ ತಂಡ ಪ್ರಕಟ; ಧ್ರುವ್ ಜುರೆಲ್‌ಗೆ ಚೊಚ್ಚಲ ಅವಕಾಶ; ಶಮಿ ಇಲ್ಲ

India vs England Test: 22 ವರ್ಷದ ಧ್ರುವ್ ಜುರೆಲ್ ಮೂರನೇ ಬ್ಯಾಕ್ ಅಪ್ ವಿಕೆಟ್ ಕೀಪಿಂಗ್ ಆಯ್ಕೆಯಾಗಿ ಭಾರತ ಟೆಸ್ಟ್‌ ತಂಡಕ್ಕೆ ಇದೇ ಮೊದಲ ಬಾರಿ ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಮೊದಲ ಎರಡು ಟೆಸ್ಟ್‌ ಪಂದ್ಯಗಳಿಗೆ ಭಾರತ ತಂಡ ಪ್ರಕಟಗೊಂಡಿದೆ
ಇಂಗ್ಲೆಂಡ್‌ ವಿರುದ್ಧದ ಮೊದಲ ಎರಡು ಟೆಸ್ಟ್‌ ಪಂದ್ಯಗಳಿಗೆ ಭಾರತ ತಂಡ ಪ್ರಕಟಗೊಂಡಿದೆ

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ 16 ಆಟಗಾರರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. 22 ವರ್ಷದ ಯುವ ಆಟಗಾರ ಧ್ರುವ್ ಜುರೆಲ್‌ಗೆ ಚೊಚ್ಚಲ ಅವಕಾಶ ನೀಡಲಾಗಿದೆ. ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ವೇಳೆ ಆದ ಪಾದದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ, ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿಲ್ಲ.

ಜನವರಿ 25ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿ ಆರಂಭವಾಗಲಿದ್ದು, ಸದ್ಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಜನವರಿ 12ರ ಶುಕ್ರವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಂಡವನ್ನು ಹೆಸರಿಸಿದೆ.

ಇದನ್ನೂ ಓದಿ | ತಿಲಕ್ ವರ್ಮಾ ಸಿಕ್ಕ ಅವಕಾಶ ಕೈಚೆಲ್ಲಿದ್ರು, 2ನೇ ಪಂದ್ಯಕ್ಕೆ ಕೈಬಿಡಿ; ಆಕಾಶ್ ಚೋಪ್ರಾ ಸಲಹೆ

ಬ್ಯಾಕ್‌ಅಪ್ ವಿಕೆಟ್‌ ಕೀಪರ್‌ ಆಗಿ ಜುರೆಲ್‌ ಆಯ್ಕೆಯಾಗಿದ್ದು, ಇಶಾನ್ ಕಿಶನ್ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿಲ್ಲ. ಮಾನಸಿಕ ಆಯಾಸವನ್ನು ಉಲ್ಲೇಖಿಸಿ ವಿಕೆಟ್‌ ಕೀಪರ್‌ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯ ಎರಡೂ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿದ್ದ ಕೆಎಲ್ ರಾಹುಲ್ ಇದೀಗ ಟೆಸ್ಟ್‌ ಸರಣಿಗೂ ಆಯ್ಕೆಯಾಗಿದ್ದಾರೆ. ಇಶಾನ್‌ ಕಿಶನ್‌ಗೆ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಉತ್ತರ ಪ್ರದೇಶದ ಕ್ರಿಕೆಟಿಗ ಜುರೆಲ್ ತಂಡಕ್ಕೆ ಸೇರ್ಪಡೆಗೊಂಡಿರುವುದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ | ಕೊಹ್ಲಿಗೆ ಅಸಾಧ್ಯ ಯಾವುದೂ ಇಲ್ಲ, ಆತ ಏನಾದರೂ ಸಾಧಿಸಬಲ್ಲ; ಶತಕಗಳ ಶತಕದ ಬಗ್ಗೆ ವಿಂಡೀಸ್ ದಿಗ್ಗಜ ವಿಶ್ವಾಸ

ಪ್ರಸ್ತುತ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಇದು ಭಾರತದ ಮೂರನೇ ಸರಣಿಯಾಗಿದೆ. ತವರಿನಲ್ಲಿ ಮೊದಲನೆಯ ನಿಯೋಜನೆಯಾಗಿದೆ. ಈಗಾಗಲೇ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಎರಡು ಪಂದ್ಯಗಳ ಸರಣಿಯಲ್ಲಿ ಎರಡನೇ ಪಂದ್ಯ ಡ್ರಾಗೊಳಿಸಿದ ನಂತರ ಸರಣಿಯನ್ನು ಭಾರತವು 1-0 ಅಂತರದಲ್ಲಿ ಗೆದ್ದಿತ್ತು. ಆ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡು ಪಂದ್ಯಗಳ ಸರಣಿಯು 1-1 ಅಂತರದಲ್ಲಿ ಸಮಬಲಗೊಂಡಿತ್ತು.

ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್‌ ಪಂದ್ಯಗಳಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಕೆಎಸ್ ಭರತ್ (ವಿಕೆಟ್‌ ಕೀಪರ್), ಧ್ರುವ್ ಜುರೆಲ್ (ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಆವೇಶ್ ಖಾನ್.

mysore-dasara_Entry_Point