IND vs AFG Highlights: ಇಂಡೋ-ಅಫ್ಘನ್ 3ನೇ ಟಿ20 ಪಂದ್ಯ ಟೈ; ಸೂಪರ್ ಓವರ್ ಗೆದ್ದ ಭಾರತ
India vs Afghanistan 3rd T20I Highlights: ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ 3ನೇ ಟಿ20 ಪಂದ್ಯ ನಡೆಯುತ್ತಿದೆ. ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಭಾರತ ಕ್ಲೀನ್‌ಸ್ವೀಪ್ ಗುರಿ ಹಾಕಿಕೊಂಡಿದೆ. ಪಂದ್ಯದ ಲೈವ್ ಅಪ್ಡೇಟ್ಸ್ ಇಲ್ಲಿದೆ.
India vs Afghanistan 3rd T20I Highlights: ಮೂರನೇ ಟಿ20 ಪಂದ್ಯದಲ್ಲಿ ಕೊನೆಗೂ ಎರಡನೇ ಸೂಪರ್ ಓವರ್‌ನಲ್ಲಿ ಭಾರತವು 10 ರನ್‌ಗಳಿಂದ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿತು. ಸತತ ಎರಡು ಬಾರಿ ಟೈ ಆದ ಪಂದ್ಯದಲ್ಲಿ ಕೊನೆಗೂ ಭಾರತ ಗೆದ್ದು ಬೀಗಿದೆ. ಆ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಶಿವಂ ದುಬೆ ಸರಣಿ ಶ್ರೇಷ್ಠರಾದರು.
11.20 PM, IND vs AFG 3rd T20I Live Updates: ಎರಡನೇ ಸೂಪರ್ ಓವರ್‌ನಲ್ಲಿ ಭಾರತವು 10 ರನ್‌ಗಳಿಂದ ಜಯ ಸಾಧಿಸಿದೆ. ಎರಡನೇ ಸೂಪರ್ ಓವರ್‌ನಲ್ಲಿ ಭಾರತವು ಕೇವಲ 11 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡು ಆಲೌಟ್ ಆಯ್ತು. ಇದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನ ಕೇವಲ 1 ರನ್ ಗಳಿಸಿ ಆಲೌಟ್ ಆಯ್ತು.
11.00 PM, IND vs AFG 3rd T20I Live Updates: ಸೂಪರ್ ಓವರ್ ಕೂಡಾ ಟೈನಲ್ಲಿ ಅಂತ್ಯವಾಗಿದೆ. ಉಭಯ ತಂಡಗಳು ಎರಡನೇ ಸೂಪರ್ ಓವರ್ ಆಡಲಿದೆ.
10.25 PM, IND vs AFG 3rd T20I Live Updates, AFG 212/6 (20): ಪಂದ್ಯವು ಸಮಬಲಗೊಂಡಿದೆ. ಸೂಪರ್ ಓವರ್ ಮೂಲಕ ವಿಜೇತರ ನಿರ್ಧಾರವಾಗಲಿದೆ.
10.25 PM, IND vs AFG 3rd T20I Live Updates, AFG 187/6 (18.4): ಅಫ್ಘಾನಿಸ್ತಾನವು 6ನೇ ವಿಕೆಟ್ ಕಳೆದುಕೊಂಡಿದೆ. 5 ರನ್ ಗಳಿಸಿ ನಜೀಬುಲ್ಲಾ ಜದ್ರಾನ್ ಔಟಾಗಿದ್ದಾರೆ.
10.15 PM, IND vs AFG 3rd T20I Live Updates, AFG 166/4 (16.5): ಕೇವಲ 16 ಎಸೆತಗಳಿಂದ 34 ರನ್ ಸಿಡಿಸಿ ಮೊಹಮ್ಮದ್ ನಬಿ ಔಟಾಗಿದ್ದಾರೆ. ಬೌಂಡರಿ ಲೈನ್ ಬಳಿ ವಾಷಿಂಗ್ಟನ್ ಸುಂದರ್ ಅದ್ಭುತ ಕ್ಯಾಚ್ ಹಿಡಿದರು.
10.00 PM, IND vs AFG 3rd T20I Live Updates, AFG 108/3 (13.1): ರಕ್ಷಣಾತ್ಮಕ ಆಟದ ಬಳಿಕ ಅಫ್ಘಾನಿಸ್ತಾನ ಮೇಲಿಂದ ಮೇಲೇ ಮೂರು ವಿಕೆಟ್ ಕಳೆದುಕೊಂಡಿದೆ. ನಾಯಕ ಜದ್ರಾನ್ ಮತ್ತು ಒಮರ್ಜಾಯ್ ಔಟ್ ಆಗಿದ್ದಾರೆ.
9.45 PM, IND vs AFG 3rd T20I Live Updates, AFG 93/1 (11): ಅಫ್ಘಾನಿಸ್ತಾನ ಕೊನೆಗೂ ಮೊದಲ ವಿಕೆಟ್ ಕಳೆದುಕೊಂಡಿದೆ. ಕುಲ್ದೀಪ್ ಯಾದವ್ ಮೊದಲ ವಿಕೆಟ್ ಪಡೆದಿದ್ದಾರೆ. ಅರ್ಧಶತಕ ಸಿಡಿಸಿದ್ದ ಗುರ್ಬಾಜ್ ಹೊಡೆತವನ್ನು ಸುಂದರ್ ಅದ್ಭುತ್ ಕ್ಯಾಚ್ ಹಿಡಿದರು.
9.25 PM, IND vs AFG 3rd T20I Live Updates, AFG 51/0 (6): ಅಫ್ಘಾನಿಸ್ತಾನ ತಂಡವು ಉತ್ತಮ ಆರಂಭ ಪಡೆದಿದೆ. ಗುರ್ಬಾಜ್ ಮತ್ತು ಜದ್ರಾನ್ ಪವರ್‌ಪ್ಲೇನಲ್ಲಿ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದ್ದಾರೆ.
9.00 PM, IND vs AFG 3rd T20I Live Updates, AFG 4/0 (1): ಅಫ್ಘಾನಿಸ್ತಾನ ಚೇಸಿಂಗ್ ಆರಂಭಿಸಿದೆ. ಗುರ್ಬಾಜ್ ಮತ್ತು ನಾಯಕ ಜದ್ರಾನ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
8.48 PM, IND vs AFG 3rd T20I Live Updates, IND 212/4 (20): ರೋಹಿತ್ ಹಾಗೂ ರಿಂಕು ಅವರ 190 ರನ್‌ಗಳ ಜೊತೆಯಾಟದ ನೆರವಿಂದ ಭಾರತವು 212 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ. ರೋಹಿತ್ ದಾಖಲೆಯ ಶತಕ ಸಿಡಿಸಿದರೆ, ರಿಂಕು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಮಿಂಚಿದರು.
8.40 PM, IND vs AFG 3rd T20I Live Updates, IND 176/4 (19): ರೋಹಿತ್ ಶರ್ಮಾ ಆಕರ್ಷಕ ಶತಕ ಸಿಡಿಸಿದ್ದಾರೆ. ಚುಟುಕು ಸ್ವರೂಪದಲ್ಲಿ ಇದು ಅವರ 5ನೇ ಶತಕ. ಆ ಮೂಲಕ ಟಿ20 ಸ್ವರೂಪದಲ್ಲಿ ಅಧಿಕ ಸಿಕ್ಸರ್ ಸಿಡಿಸಿದ ದಾಖಲೆ ನಿರ್ಮಿಸಿದ್ದಾರೆ.
8.20 PM, IND vs AFG 3rd T20I Live Updates, IND 126/4 (15.5): ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ 100 ರನ್ ಜೊತೆಯಾಟವಾಡಿದ್ದಾರೆ. ಭಾರತ ಮೊತ್ತ ಹಿಗ್ಗುತ್ತಿದೆ.
8.10 PM, IND vs AFG 3rd T20I Live Updates, IND 103/4 (13.5): ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಭಾರತದ ಮೊತ್ತವನ್ನು 100ರ ಗಡಿ ದಾಟಿಸಿದ್ದಾರೆ. ಇಬ್ಬರೂ ಕ್ರೀಸ್‌ಕಚ್ಚಿ ಬ್ಯಾಟ್ ಬೀಸುತ್ತಿದ್ದಾರೆ.
8.00 PM, IND vs AFG 3rd T20I Live Updates, IND 81/4 (12): ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಅರ್ಧಶತಕದ ಜೊತೆಯಾಟವಾಡಿದ್ದಾರೆ. 12ನೇ ಓವರ್‌ನಲ್ಲಿ ಹಿಟ್‌ಮ್ಯಾನ್ ಸತತ ಎರಡು ಸಿಕ್ಸರ್ ಚಚ್ಚಿದ್ದಾರೆ. ರಿಂಕು ಸಿಂಗ್ ಉತ್ತಮ ಸಾಥ್ ನೀಡುತ್ತಿದ್ದಾರೆ.
7.48 PM, IND vs AFG 3rd T20I Live Updates, IND 52/4 (9): ರಿಂಕು ಸಿಂಗ್ ಮತ್ತು ರೋಹಿತ್ ಶರ್ಮಾ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುತ್ತಿದ್ದಾರೆ. 9 ಓವರ್ ಬಳಿಕ ಭಾರತ 52 ರನ್ ಗಳಿಸಿದೆ.
7.28 PM, IND vs AFG 3rd T20I Live Updates, IND 22/4 (4.3): ಅರೇ… ಭಾರತದ ನಾಲ್ಕನೇ ವಿಕೆಟ್ ಪತನಗೊಂಡಿದೆ. ಅಪರೂಪಕ್ಕೆ ಅವಕಾಶ ಪಡೆದ ಸಂಜು ಸ್ಯಾಮ್ಸನ್ ಕೂಡಾ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದಾರೆ. ಪಂದ್ಯದಲ್ಲಿ ಅಫ್ಘಾನಿಸ್ತಾನ ಸಂಪೂರ್ಣ ಹಿಡಿತ ಸಾಧಿಸಿದೆ.
7.25 PM, IND vs AFG 3rd T20I Live Updates, IND 21/3 (4): ಭಾರತ ಬಲು ಬೇಗನೆ ಮೂರನೇ ವಿಕೆಟ್ ಕಳೆದುಕೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಅಜೇಯ ಅರ್ಧಶತಕ ಸಿಡಿಸಿದ್ದ ಶಿವಂ ದುಬೆ ಕೇವಲ 1 ರನ್ ಗಳಿಸಿ ಔಟಾಗಿದ್ದಾರೆ.
7.17 PM, IND vs AFG 3rd T20I Live Updates, IND 18/2 (2.5): ಭಾರತ ಸತತ ಎರಡು ವಿಕೆಟ್ ಕಳೆದುಕೊಂಡಿದೆ. ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿ ಔಟಾಗಿದ್ದಾರೆ. ಫರೀದ್ ಅಹ್ಮದ್ ಸತತ ಎರಡು ವಿಕೆಟ್ ಪಡೆದು ಉತ್ತಮ ಫಾರ್ಮ್‌ನಲ್ಲಿದ್ದಾರೆ. ತಮ್ಮ ಫೇವರೆಟ್ ಮೈದಾನದಲ್ಲಿ ಗೋಲ್ಡನ್ ಡಕ್‌ಗೆ ಬಲಿಯಾಗಿ ವಿರಾಟ್ ನಿರಾಶೆ ಮೂಡಿಸಿದ್ದಾರೆ.
7.15 PM, IND vs AFG 3rd T20I Live Updates, IND 18/1 (2.3): ಭಾರತ ಮೊದಲ ವಿಕೆಟ್ ಕಳೆದುಕೊಂಡಿದೆ. ಫರೀದ್ ಅಹ್ಮದ್ ಎಸೆತವನ್ನು ಸಿಕ್ಸರ್‌ಗಟ್ಟಲು ಪ್ರಯತ್ನಿಸಿದ ಯಶಸ್ವಿ ಜೈಸ್ವಾಲ್ 4(6) ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
7.00 PM, IND vs AFG 3rd T20I Live Updates, IND 13/0 (2): ಭಾರತ ತಂಡ ಇನ್ನಿಂಗ್ಸ್ ಆರಂಭಿಸಿದೆ. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದು, 2 ಓವರ್ ಬಳಿಕ ಭಾರತ 13 ರನ್ ಗಳಿಸಿದೆ.
6.35 PM, IND vs AFG 3rd T20I Live Updates, ಅಫ್ಘಾನಿಸ್ತಾನ ಆಡುವ ಬಳಗ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್ (ನಾಯಕ), ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜೀಬುಲ್ಲಾ ಜದ್ರಾನ್, ಕರೀಂ ಜನತ್, ಶರಫುದ್ದೀನ್ ಅಶ್ರಫ್, ಖೈಸ್ ಅಹ್ಮದ್, ಮೊಹಮ್ಮದ್ ಸಲೀಮ್ ಸಫಿ, ಫರೀದ್ ಅಹ್ಮದ್ ಮಲಿಕ್
6.30 PM, IND vs AFG 3rd T20I Live Updates, ಭಾರತ ಆಡುವ ಬಳಗ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಮುಖೇಶ್ ಕುಮಾರ್, ಕುಲ್ದೀಪ್ ಯಾದವ್, ಆವೇಶ್ ಖಾನ್.
6.30 PM, IND vs AFG 3rd T20I Live Updates: ಭಾರತ ತಂಡದಲ್ಲಿ ಇಂದು ಮೂರು ಬದಲಾವಣೆ ಮಾಡಲಾಗಿದೆ. ಸಂಜು, ಆವೇಶ್ ಮತ್ತು ಕುಲ್ದೀಪ್ ಯಾದವ್ ತಂಡ ಸೇರಿಕೊಂಡರೆ; ಅಕ್ಷರ್, ಜಿತೇಶ್ ಮತ್ತು ಅರ್ಷದೀಪ್ ತಂಡದಿಂದ ಹೊರಗುಳಿದಿದ್ದಾರೆ.
6.30 PM, IND vs AFG 3rd T20I Live Updates: ಟಾಸ್ ಗೆದ್ದ ಭಾರತ ಬ್ಯಾಟಿಂಗ್
ಅಫ್ಘಾನಿಸ್ತಾನ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ನಿರೀಕ್ಷೆಯಂತೆಯೇ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸತತ ಮೂರು ಪಂದ್ಯಗಳಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ, ಈ ಬಾರಿ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ವರದಿ
ಫ್ಲಾಟ್ ವಿಕೆಟ್ ಹಾಗೂ ಸಣ್ಣ ಬೌಂಡರಿಗಳನ್ನು ಹೊಂದಿರುವ ಬೆಂಗಳೂರು ಕ್ರೀಡಾಂಗಣವು ಬ್ಯಾಟರ್‌ಗಳ ಸ್ವರ್ಗ ಎಂಬುದು ಹಳೆ ವಿಚಾರ. ಮೈದಾನದಲ್ಲಿ ರನ್ ಮಳೆ ಹರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಬೌಲರ್‌ಗಳು ಮೇಲುಗೈ ಸಾಧಿಸುವುದನ್ನು ತಳ್ಳಿಹಾಕುವಂತಿಲ್ಲ. ಇದೇ ಮೈದಾನದಲ್ಲಿ ನಡೆದ ಕೊನೆಯ ಚುಟುಕು ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ 160 ರನ್‌ಗಳ ಸಾಧಾರಣ ಮೊತ್ತವನ್ನು ಯಶಸ್ವಿಯಾಗಿ ರಕ್ಷಿಸಿಕೊಂಡಿತ್ತು. ಅಲ್ಲದೆ 6 ರನ್‌ಗಳಿಂದ ಗೆದ್ದು ಬೀಗಿತ್ತು.
ಭಾರತ vs ಅಫ್ಘಾನಿಸ್ತಾನ 3ನೇ ಪಂದ್ಯದ ಲೈವ್ ಸ್ಟ್ರೀಮಿಂಗ್ ವಿವರ
ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಮೂರನೇ ಟಿ20 ಪಂದ್ಯವನ್ನು ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಮೊಬೈಲ್ ಮೂಲಕ ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪಂದ್ಯ ವೀಕ್ಷಿಸಬಹುದು.
ಚಿನ್ನಸ್ವಾಮಿ ಮೈದಾನದಲ್ಲಿ ಭಾರತದ ದಾಖಲೆ ಹೀಗಿವೆ
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆಡಿದ 7 ಟಿ20 ಪಂದ್ಯಗಳಲ್ಲಿ ಭಾರತವು 3ರಲ್ಲಿ ಗೆಲುವು ಸಾಧಿಸಿದರೆ, 3 ಪಂದ್ಯಗಳಲ್ಲಿ ಮುಗ್ಗರಿಸಿದೆ. ಕೊನೆಯದಾಗಿ ಇತ್ತೀಚೆಗೆ ಏಕದಿನ ವಿಶ್ವಕಪ್ ಬಳಿಕ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯವು ಬೆಂಗಳೂರಿನಲ್ಲಿ ನಡೆದಿತ್ತು. 2023ರ ಡಿಸೆಂಬರ್ 3ರಂದು ನಡೆದ ಪಂದ್ಯದಲ್ಲಿ ಭಾರತವು 6 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು.
ಪಂದ್ಯಕ್ಕೆ ಮಳೆ ಆತಂಕ ಇಲ್ಲ
ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇಲ್ಲ. ಹೀಗಾಗಿ ಸಂಪೂರ್ಣ ಪಂದ್ಯವನ್ನು ಅಭಿಮಾನಿಗಳು ಎಂಜಾಯ್ ಮಾಡಬಹುದು. ಪಂದ್ಯದ ದ್ವಿತಿಯಾರ್ಧದ ವೇಳೆಗೆ ಇಬ್ಬನಿ ಇರಬಹುದು.