ಕನ್ನಡ ಸುದ್ದಿ  /  Cricket  /  Ipl 2024 Gt Vs Srh Pitch Report Gujarat Titans Vs Sunrisers Hyderabad Weather Forecast Predicted Playing Eleven Jra

IPL 2024: ಗುಜರಾತ್ vs ಎಸ್ಆರ್‌ಎಚ್; ಸಂಭಾವ್ಯ ತಂಡ, ಅಹಮದಾಬಾದ್ ಪಿಚ್ ಹಾಗೂ ಹವಾಮಾನ ವರದಿ ಹೀಗಿದೆ

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾರ್ಚ್ 31ರಂದು ಐಪಿಎಲ್ ಪಂದ್ಯದಲ್ಲಿ ಆತಿಥೇಯ ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳು ಟೂರ್ನಿಯಲ್ಲಿ ಎರಡನೇ ಗೆಲುವಿಗೆ ಎದುರು ನೋಡುತ್ತಿವೆ.

ಗುಜರಾತ್ vs ಎಸ್ಆರ್‌ಎಚ್ ಸಂಭಾವ್ಯ ತಂಡ, ಅಹಮದಾಬಾದ್ ಪಿಚ್ ಹಾಗೂ ಹವಮಾನ ವರದಿ
ಗುಜರಾತ್ vs ಎಸ್ಆರ್‌ಎಚ್ ಸಂಭಾವ್ಯ ತಂಡ, ಅಹಮದಾಬಾದ್ ಪಿಚ್ ಹಾಗೂ ಹವಮಾನ ವರದಿ

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾರ್ಚ್ 31ರಂದು ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (Gujarat Titans vs Sunrisers Hyderabad) ತಂಡಗಳು ಮುಖಾಮುಖಿಯಾಗಲಿವೆ. ಐಪಿಎಲ್ 2024ರ ಆವೃತ್ತಿಯಲ್ಲಿ ಉಭಯ ತಂಡಗಳು ಈವರೆಗೆ ತಲಾ ಎರಡು ಪಂದ್ಯಗಳನ್ನಾಡಿವೆ. ಆಡಿದ ಎರಡು ಪಂದ್ಯಗಳಿಂದ ಎರಡೂ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಗೆದ್ದು 2 ಅಂಕ ಗಳಿಸಿವೆ. ಅಂಕಪಟ್ಟಿಯಲ್ಲಿ ಗುಜರಾತ್ ತಂಡವು 7ನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ ಹೆಚ್ಚು ನೆಟ್ ರನ್ ರೇಟ್‌ಗಳೊಂದಿಗೆ 4 ನೇ ಸ್ಥಾನದಲ್ಲಿದೆ.

ಕೊನೆಯ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಗುಜರಾತ್‌ ಸೋಲು ಕಂಡರೆ, ಮುಂಬೈ ವಿರುದ್ಧ ಹೈದರಾಬಾದ್‌ ತಂಡ ಭರ್ಜರಿ ಜಯ ಸಾಧಿಸಿತು. ಇದೀಗ ಈ ಎರಡು ತಂಡಗಳ ನಡುವಿನ ಪಂದ್ಯವು ಭಾನುವಾರ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

2022ರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಗುಜರಾತ್‌ ಟೈಟಾನ್ಸ್ ತಂಡವು, ಈವರೆಗೆ ಹೈದರಾಬಾದ್ ವಿರುದ್ಧ ಕೇವಲ 3 ಐಪಿಎಲ್ ಪಂದ್ಯಗಳನ್ನು ಆಡಿದೆ. ಅದರಲ್ಲಿ ಟೈಟಾನ್ಸ್‌ ತಂಡವು 2 ಪಂದ್ಯಗಳಲ್ಲಿ ಗೆದ್ದರೆ, ಹೈದರಾಬಾದ್ 1ರಲ್ಲಿ ಜಯಭೇರಿ ಬಾರಿಸಿದೆ.

ಇದನ್ನೂ ಓದಿ | ಒಂದೇ ಪಂದ್ಯದಲ್ಲಿ ವಿಶೇಷ ಮೈಲಿಗಲ್ಲು ತಲುಪಿದ ನಾಲ್ವರು ಕೆಕೆಆರ್ ಆಟಗಾರರು; ದಾಖಲೆಯೊಂದಿಗೆ ಗೆಲುವಿನ ಖುಷಿ

ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ವರದಿ

ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕೆಂಪು ಮಣ್ಣು ಮತ್ತು ಕಪ್ಪು ಮಣ್ಣಿನ ಪಿಚ್‌ಗಳಿವೆ. ಕಪ್ಪು ಮಣ್ಣಿನ ಪಿಚ್‌ ಹೆಚ್ಚು ಬೌನ್ಸ್‌ಗೆ ನೆರವಾಗುವುದರಿಂದ ವೇಗಿಗಳಿಗೆ ಸಹಾಯ ಮಾಡುತ್ತದೆ. ಇದೇ ವೇಳೆ ಕೆಂಪು ಮಣ್ಣಿನ ಪಿಚ್‌ ಶೀಘ್ರದಲ್ಲೇ ಒಣಗುವ ಸ್ವಭವದ್ದಾಗಿದ್ದು, ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುತ್ತದೆ. ಅದರೂ, ಮೈದಾನವು ಬೌಲರ್‌ಗಳಿಗಿಂತ ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲ ಕಲ್ಪಿಸುತ್ತದೆ.

ಅಹಮದಾಬಾದ್‌ ಹವಾಮಾನ ವರದಿ

ಪಂದ್ಯ ಆರಂಭದ ಸಮಯದಲ್ಲಿ ಅಹಮದಾಬಾದ್‌ನಲ್ಲಿ ತಾಪಮಾನವು ಸುಮಾರು 37 ಡಿಗ್ರಿಗಳಷ್ಟಿರುತ್ತದೆ. ಪಂದ್ಯದುದ್ದಕ್ಕೂ ಬಹುತೇಕ ಇದೇ ಪ್ರಮಾಣದ ತಾಪಮಾನ ಮುಂದುವರೆಯುವ ಸಾಧ್ಯತೆ ಇದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ.

ಲೈವ್‌ ಸ್ಟ್ರೀಮಿಂಗ್‌ ವಿವರ

ಗುಜರಾತ್‌ ಮತ್ತು ಹೈದರಾಬಾದ್‌ ತಂಡಗಳ ನಡುವಿನ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಗಳಲ್ಲಿ ಟಿವಿ ಮೂಲಕ ನೇರಪ್ರಸಾರ ವೀಕ್ಷಿಸಬಹುದು. ಇದೇ ವೇಳೆ ಜಿಯೋ ಸಿನಿಮಾ ಮೊಬೈಲ್‌ ಅಪ್ಲಿಕೇಶನ್‌ ಹಾಗೂ ವೆನ್‌ಸೈಟ್‌ ಮೂಲಕ ಪಂದ್ಯವನ್ನು ಲೈವ್‌ ಸ್ಟ್ರೀಮ್‌ ಮಾಡಲಾಗುತ್ತದೆ. ಇಲ್ಲಿ ಈ ಪಂದ್ಯ ಮಾತ್ರವಲ್ಲದೆ ಪಂದ್ಯಾವಳಿಯ ಎಲ್ಲಾ ಪಂದ್ಯಗಳನ್ನು ಇಚಿತವಾಗಿ ವೀಕ್ಷಿಸಬಹುದು.‌

ಸಂಭಾವ್ಯ ಆಡುವ ಬಳಗ

ಗುಜರಾತ್ ಟೈಟಾನ್ಸ್ : ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್‌ ಕೀಪರ್), ಸಾಯಿ ಸುದರ್ಶನ್, ವಿಜಯ್ ಶಂಕರ್, ಅಜ್ಮತುಲ್ಲಾ ಒಮರ್ಜಾಯ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಸಾಯಿ ಕಿಶೋರ್, ಉಮೇಶ್ ಯಾದವ್, ಸ್ಪೆನ್ಸರ್ ಜಾನ್ಸನ್.

ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರ್ವಾಲ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಶಹಬಾಜ್ ಅಹ್ಮದ್, ಅಬ್ದುಲ್ ಸಮದ್, ಪ್ಯಾಟ್ ಕಮಿನ್ಸ್ (ನಾಯಕ), ಮಯಾಂಕ್ ಮಾರ್ಕಾಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್.

IPL_Entry_Point